For Quick Alerts
ALLOW NOTIFICATIONS  
For Daily Alerts

  ಬ್ಯೂಟಿ ಟಿಪ್ಸ್: ಮುಖದ ಸೌಂದರ್ಯ ಹೆಚ್ಚಿಸಲು ಕ್ಯಾರೆಟ್ ಫೇಸ್ ಪ್ಯಾಕ್

  By Manu
  |

  ಕಾಲವನ್ನು ತಡೆಯೋರು ಯಾರೂ ಇಲ್ಲ, ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲ...." ಈ ಜನಪ್ರಿಯ ಸಿನಿಮಾ ಗೀತೆಯನ್ನು ನಾವೆಲ್ಲರೂ ಕೇಳಿದ್ದೇವೆ. ಇದ೦ತೂ ಖ೦ಡಿತವಾಗಿಯೂ ಸತ್ಯ. ಕಾಲಚಕ್ರವು ಒ೦ದು ಕ್ಷಣವೂ ನಿಲ್ಲದೇ ಮು೦ದೆ ಸಾಗುತ್ತಲೇ ಇರುತ್ತದೆ. ಈ ಅಖ೦ಡವಾದ ಕಾಲಚಕ್ರದ ಭಾಗಗಳೇ ಆಗಿರುವ ನಮಗೂ ಕೂಡ ದಿನಗಳೆದ೦ತೆಲ್ಲಾ ವಯಸ್ಸು ಹೆಚ್ಚುತ್ತಲೇ ಸಾಗುತ್ತದೆ, ಅ೦ತೆಯೇ ನಮ್ಮ ದೇಹದ ಸೌಂದರ್ಯದಲ್ಲೂ ಏರುಪೇರು ಆಗುವುದರ ಜೊತೆಗೆ ತಾರುಣ್ಯ ಕೂಡ ಕ್ಷೀಣಿಸುತ್ತಾ ಸಾಗುತ್ತದೆ.

  ಅದರಲ್ಲೂ ವಯಸ್ಸಾದಂತೆ ಮುಖದ ಲಾವಣ್ಯವು ದಿನಕಳೆದಂತೆ ಇಳಿಕೆಯಾವುದು ಸರ್ವೇ ಸಾಮಾನ್ಯ. ಇದು ಎಲ್ಲರಲ್ಲಿಯೂ ಸಹಜ ಬದಲಾವಣೆಯಾಗಿದ್ದು, ತ್ವಚೆಯ ಮೇಲೆ ಸುಕ್ಕುಗಳು ಮತ್ತು ಸಣ್ಣ ರೇಖೆಗಳು ಕಾಣಲು ಪ್ರಾರಂಭಿಸುತ್ತವೆ. ಇದನ್ನು ಹೋಗಲಾಡಿಸುವುದು ಅನಿವಾರ್ಯವೆಂಬಂತೆ ಅನೇಕ ರೀತಿಯ ರಾಸಾಯನಿಕಯುಕ್ತ ವಿಧಾನಗಳನ್ನು ಅನುಸರಿಸಲಾಗುತ್ತದೆ. 

  ಸಮೃದ್ಧ ಪೋಷಕಾಂಶಗಳ ಆಗರ- ಕ್ಯಾರೆಟ್ ಜ್ಯೂಸ್

  ತಾರುಣ್ಯ ಹೆಚ್ಚಿಸಲು ಔಷಧದಂಗಡಿಗಳಿಂದ ಕೇಳಿದಷ್ಟು ಹಣ ನೀಡಿ ತರಹೇವಾರಿ ಉತ್ಪನ್ನಗಳನ್ನು ಕೊಂಡುಕೊಂಡು ಅದರ ನಿಜವಾದ ಗುಣ ಲಕ್ಷಣ ಅರಿಯದೆ ತ್ವಚೆಯ ಸೌಂದರ್ಯವನ್ನು ಶಾಶ್ವತವಾಗಿ ಅಂದಗೆಡಿಸಿಕೊಳ್ಳುವ ಅನೇಕ ಪ್ರಕರಣಗಳು ನಮ್ಮ ಕಣ್ಣ ಮುಂದಿದೆ. ಈಗಾಗಲೇ ಈ ಸಂಬಂಧವಾಗಿ ತ್ವಚೆಯ ಸುಕ್ಕು ಮತ್ತು ನೆರಿಗೆಯ ಕಲೆಗಳನ್ನು ಪ್ರಾಕೃತಿಕವಾಗಿ ನಿವಾರಿಸಲು ಬೋಲ್ಡ್ ಸ್ಕೈ ತಾಣದಲ್ಲಿ ಅನೇಕ ಬಾರಿ ವಿಶಿಷ್ಟ ಸಂಗತಿಗಳನ್ನು ನಿಮಗಾಗಿ ಈ ಹಿಂದೆ ನೀಡಲಾಗಿದೆ. ಈ ಲೇಖನದಲ್ಲಿಯೂ ಕೂಡ ನೈಸರ್ಗಿಕವಾಗಿ ನಿಮ್ಮ ತ್ವಚೆಯಲ್ಲಿನ ಸುಕ್ಕುಗಳು ಹಾಗೂ ಗೆರೆಯ ಗುರುತುಗಳನ್ನು ಉಪಶಮನ ಮಾಡಲು ಕೆಲ ಸಂಗತಿಗಳನ್ನು ನಿಮಗಾಗಿ ನೀಡಲಾಗಿದೆ...

  ಕ್ಯಾರೆಟ್ ನಲ್ಲಿ ಅಡಗಿದೆ ಬ್ಯೂಟಿ ಸೀಕ್ರೇಟ್

  ಕ್ಯಾರೆಟ್ ನಲ್ಲಿ ಅಡಗಿದೆ ಬ್ಯೂಟಿ ಸೀಕ್ರೇಟ್

  ನೀವು ಅನೇಕ ಉತ್ಪನ್ನಗಳನ್ನು ಕೊಳ್ಳುವ ಮುನ್ನ ನಿಮ್ಮ ಮನೆಯ ರೆಫ್ರಿಜರೇಟರ್‌ನ ಬಾಗಿಲನ್ನು ಅನ್ನು ಒಮ್ಮೆ ತೆರೆದು ನೋಡಿ. ಹೆಚ್ಚು ಪೌಷ್ಟಿಕಾಂಶಯುಕ್ತ ಮತ್ತು ಉತ್ಕರ್ಷಣ ನಿರೋಧಕ ಅಂಶಗಳಿಂದ ನಿಮ್ಮ ಚರ್ಮವನ್ನು ಮೃದುಗೊಳಿಸಿ ನಿಮ್ಮ ತಾರುಣ್ಯವನ್ನು ಕಾಪಾಡಲು ನೆರವಾಗುವ ಅನೇಕ ಬಗೆಬಗೆಯ ಪದಾರ್ಥಗಳು ನಿಮಗೆ ಕಾಣಿಸುತ್ತವೆ. ಇವುಗಳಲ್ಲಿ ಕ್ಯಾರೆಟ್ ತರಕಾರಿಯೂ ಸಹ ಹೆಚ್ಚು ಪ್ರಾಮುಖ್ಯತೆ ಹೊಂದಿದ್ದು, ಇದರಲ್ಲಿರುವ ಸತ್ವದಿಂದ ನಿಮ್ಮ ತ್ವಚೆಯ ತಾರುಣ್ಯವನ್ನು ಹೆಚ್ಚಿಸಲು ನೆರವಾಗುತ್ತದೆ.

  ಕ್ಯಾರೆಟ್ ಫೇಸ್ ಪ್ಯಾಕ್ ನಿಂದ ಇನ್ನಷ್ಟು ಯೌವನಯುತವಾಗಿ ಕಾಣುವಿರಿ

  ಕ್ಯಾರೆಟ್ ಫೇಸ್ ಪ್ಯಾಕ್ ನಿಂದ ಇನ್ನಷ್ಟು ಯೌವನಯುತವಾಗಿ ಕಾಣುವಿರಿ

  ಹೌದು, ಕ್ಯಾರೆಟ್‌ನಲ್ಲಿ ವಿಟಮಿನ್ ಸಿ, ಎ ಮತ್ತು ಇ ಇದ್ದು, ತ್ವಚೆಯಲ್ಲಿ ಉಂಟಾಗುವ ವಯಸ್ಸಾಗುವ ಲಕ್ಷಣಗಳನ್ನು ಇದು ದೂರಗೊಳಿಸುವುದು ಮತ್ತು ಮುಖದಲ್ಲಿನ ರಕ್ತಸಂಚಾರ ಹೆಚ್ಚಿಸುವುದು. ಇದರಿಂದಾಗಿ ಮುಖದ ಚರ್ಮಕ್ಕೆ ಹೆಚ್ಚಿನ ಆಮ್ಲಜನಕ ಮತ್ತು ಪೋಷಕಾಂಶಗಳು ಸಿಗುವುದು. ಈ ವೇಳೆ ತ್ವಚೆಯು ಕಾಂತಿಯುತ ಹಾಗೂ ಯೌವನಯುತವಾಗಿ ಕಾಣಿಸುವುದು. ಕ್ಯಾರೆಟ್ ಮಾಸ್ಕ್ ಚರ್ಮದ ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಿಸಲಿದೆ. ನಿಸ್ತೇಜ ಚರ್ಮ, ಕಪ್ಪು ಚರ್ಮ, ಮೊಡವೆ, ಕಲೆ, ನೆರಿಗೆಯಂತಹ ಸಮಸ್ಯೆಗಳನ್ನು ನಿವಾರಣೆ ಮಾಡುವುದು. ಈ ಲೇಖನದಲ್ಲಿ ಬೋಲ್ಡ್ ಸ್ಕೈ ನಿಮಗೆ ಕ್ಯಾರೆಟ್ ನಿಂದ ಮಾಡಬಹುದಾದ ಹಲವಾರು ರೀತಿಯ ಫೇಸ್ ಮಾಸ್ಕ್ ಗಳ ಬಗ್ಗೆ ತಿಳಿಸಿಕೊಡಲಿದೆ. ಇದು ಹಲವಾರು ರೀತಿಯ ಸಮಸ್ಯೆಗಳನ್ನು ನಿವಾರಿಸುವುದು. ಇದು ಹೇಗೆಂದು ಮುಂದಕ್ಕೆ ಓದುತ್ತಾ ತಿಳಿಯಿರಿ.....

  ಕ್ಯಾರೆಟ್ ಫೇಸ್ ಪ್ಯಾಕ್ ಮಾಡುವ ವಿಧಾನ

  ಕ್ಯಾರೆಟ್ ಫೇಸ್ ಪ್ಯಾಕ್ ಮಾಡುವ ವಿಧಾನ

  *ಎರಡು ಹೋಳು ಕ್ಯಾರೆಟ್ ಅನ್ನು ನೀರಿನಲ್ಲಿ, ಹಾಕಿ ಚೆನ್ನಾಗಿ ಬೇಯಿಸಿಕೊಂಡು, ನಂತರ ಜಜ್ಜಿಕೊಳ್ಳಿ.

  *ಇನ್ನು ಇದಕ್ಕೆ ಒಂದು ಚಮಚ ಬಾದಾಮಿ ತೈಲವನ್ನು ಬೆರೆಸಿ ಚೆನ್ನಾಗಿ ಕಲಸಿಕೊಳ್ಳಿ.

  *ತದನಂತರ ಈ ಮಿಶ್ರಣವನ್ನು ಒಂದು ಗಂಟೆಯ ಕಾಲ ರೆಫ್ರಿಜರೇಟರ್‌ನಲ್ಲಿ ಇರಿಸಿ, ತಂಪಾಗಲು ಬಿಡಿ.

  *ಇನ್ನು ಈ ಮಿಶ್ರಣವನ್ನು ಕಣ್ಣುಗಳ ಸುತ್ತ, ಕೆನ್ನೆ, ಗಲ್ಲದ ಭಾಗಗಳಿಗೆ ನಯವಾಗಿ ಹಚ್ಚಿಕೊಳ್ಳಿ.

  *ಇಷ್ಟೆಲ್ಲಾ ಆದ ನಂತರ, ಹಚ್ಚಿಕೊಂಡಿರುವ ಮಿಶ್ರಣವನ್ನು ಗಂಟೆಯ ಕಾಲ ಹಾಗೆಯೇ ಬಿಡಿ. ನಂತರ ಬೆಚ್ಚನೆಯ ನೀರಿನಿಂದ ಸ್ವಚ್ಛಗೊಳಿಸಿ. ಸುಕ್ಕು ರಹಿತ ಮತ್ತು ಕಾಂತಿಯುತ ತ್ವಚೆ ಹೊಂದಲು ಈ ಪ್ರಕ್ರಿಯೆಯನ್ನು ವಾರಕ್ಕೆ ಮೂರು ಬಾರಿ ಅನುಸರಿಸಿ ನೋಡಿ. ನಿಮಗೆ ಉತ್ತಮ ಫಲಿತಾಂಶ ದೊರಕಲಿದೆ.

  ಕ್ಯಾರೆಟ್‍ನ ಮಹತ್ವ ಮತ್ತು ಆರೋಗ್ಯದ ಮಹಾತ್ಮೆ

  ಬಿಳಿ ತ್ವಚೆ ಪಡೆಯಲು ಕ್ಯಾರೆಟ್ ಮಾಸ್ಕ್

  ಬಿಳಿ ತ್ವಚೆ ಪಡೆಯಲು ಕ್ಯಾರೆಟ್ ಮಾಸ್ಕ್

  ಕೇವಲ 15 ದಿನಗಳಲ್ಲಿ ಬಿಳಿ ಹಾಗೂ ಕಾಂತಿಯುತ ತ್ವಚೆ ಪಡೆಯಲು ಕ್ಯಾರೆಟ್ ಮಾಸ್ಕ್ ನ್ನು ಪ್ರತೀ ಎರಡು ದಿನಕ್ಕೊಮ್ಮೆ 15-16 ದಿನಗಳ ಕಾಲ ಬಳಸಿಕೊಳ್ಳಿ. ಒಂದು ಚಮಚ ತುರಿದಿರುವ ಕ್ಯಾರೆಟ್, ಒಂದು ಚಮಚ ಕಡಲೆಹಿಟ್ಟು, ಒಂದು ಚಮಚ ರೋಸ್ ವಾಟರ್, ಒಂದು ಚಮಚ ಸೌತೆಕಾಯಿ ಪೇಸ್ಟ್ ನ್ನು ಜತೆ ಸೇರಿಸಿ ಮುಖದ ಮೇಲೆ ಹಚ್ಚಿಕೊಳ್ಳಿ. ಇದನ್ನು 15 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ತಣ್ಣೀರಿನಿಂದ ತೊಳೆಯಿರಿ.

  ಬಿಳಿ ತ್ವಚೆ ಪಡೆಯಲು ಕ್ಯಾರೆಟ್ ಮಾಸ್ಕ್

  ಬಿಳಿ ತ್ವಚೆ ಪಡೆಯಲು ಕ್ಯಾರೆಟ್ ಮಾಸ್ಕ್

  ಒಂದು ಚಮಚ ತುರಿದ ಕ್ಯಾರೆಟ್, ಒಂದು ಚಮಚ ಹಾಲು, ಒಂದು ಚಮಚ ಅಕ್ಕಿ ಹಿಟ್ಟು, ಒಂದು ಚಮಚ ಹಾಲು, ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಿಟಿಕೆ ಅರಶಿನ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಂಡು ಮುಖದ ಮೇಲೆ ಹಚ್ಚಿ. ಇದನ್ನು 15 ನಿಮಿಷ ಕಾಲ ಹಾಗೆ ಬಿಡಿ. ಒಂದು ತಿಂಗಳ ಕಾಲ ಎರಡು ದಿನಕ್ಕೊಮ್ಮೆ ಹೀಗೆ ಮಾಡಿ. ಮುಖದಲ್ಲಿನ ನೆರಿಗೆ ನಿವಾರಣೆಯಾಗುವುದು.

  ಆರೋಗ್ಯಕರವಾದ ತ್ವಚೆಗಾಗಿ ಕ್ಯಾರೆಟ್ ಜ್ಯೂಸ್ ಕುಡಿಯಿರಿ!

  ವರ್ಣದ್ರವ್ಯ ಮತ್ತು ನಸುಕಂದು ಬಣ್ಣಕ್ಕೆ ಕ್ಯಾರೆಟ್ ಮಾಸ್ಕ್

  ವರ್ಣದ್ರವ್ಯ ಮತ್ತು ನಸುಕಂದು ಬಣ್ಣಕ್ಕೆ ಕ್ಯಾರೆಟ್ ಮಾಸ್ಕ್

  ಒಂದು ಚಮಚ ತುರಿದಿರುವ ಕ್ಯಾರೆಟ್ ಗೆ ಒಂದು ಚಮಚ ಲಿಂಬೆ ಮತ್ತು ಒಂದು ಚಮಚ ಜೇನುತುಪ್ಪ ಸೇರಿಸಿಕೊಂಡು ಪೇಸ್ಟ್ ಮಾಡಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ಸುಮಾರು 15 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ಬಿಸಿ ನೀರಿನಿಂದ ತೊಳೆಯಿರಿ. ಚರ್ಮದ ಮೇಲಿನ ನಸುಕಂದು ಬಣ್ಣ ನಿವಾರಣ ಮಾಡಲು ಮಾರದಲ್ಲಿ ಎರಡು ಬಾರಿ ಇದನ್ನು ಪುನರಾವರ್ತಿಸಿ.

  ಹೊಳೆಯು ತ್ವಚೆಗೆ ಕ್ಯಾರೆಟ್ ಮಾಸ್ಕ್

  ಹೊಳೆಯು ತ್ವಚೆಗೆ ಕ್ಯಾರೆಟ್ ಮಾಸ್ಕ್

  ಒಂದು ಚಮಚ ತುರಿದಿರುವ ಕ್ಯಾರೆಟ್ ಗೆ ಒಂದು ಚಮಚ ಓಟ್ಸ್ ಮತ್ತು ಒಂದು ಚಮಚ ತುರಿದ ಆ್ಯಪಲ್ ಹಾಕಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ಚೆನ್ನಾಗಿ ಉಜ್ಜಿಕೊಳ್ಳಿ. ಹತ್ತು ನಿಮಿಷ ಹಾಗೆ ಬಿಟ್ಟು ನೀರಿನಿಂದ ತೊಳೆಯಿರಿ.

  ಮುಖದ ಊತ ನಿವಾರಣೆಗೆ

  ಮುಖದ ಊತ ನಿವಾರಣೆಗೆ

  ಮುಖವು ಸಾಮಾನ್ಯವಾಗಿ ಬೆಳಿಗ್ಗೆ ಊದಿಕೊಂಡಿರುವುದು. ಊತ ನಿವಾರಣೆ ಮಾಡಲು ಬೆಳಿಗ್ಗೆ ಕ್ಯಾರೆಟ್ ಮಾಸ್ಕ್ ಬಳಸಿ. ಒಂದು ಚಮಚ ತುರಿದ ಕ್ಯಾರೆಟ್, ಒಂದು ಚಮಚ ತುರಿದ ಬೀಟ್ ರೂಟ್, ಒಂದು ಚಮಚ ತುರಿದ ಬಟಾಟೆ ಮತ್ತು ಒಂದು ಚಮಚ ಮೊಸರು ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ 15 ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ತೊಳೆಯಿರಿ.

  ಎಣ್ಣೆಯುಕ್ತ ಚರ್ಮಕ್ಕೆ

  ಎಣ್ಣೆಯುಕ್ತ ಚರ್ಮಕ್ಕೆ

  ಚರ್ಮದಲ್ಲಿರುವ ಅತಿಯಾದ ಎಣ್ಣೆಯಂಶ ತೆಗೆದುಹಾಕಲು ಮೂರು ಚಮಚ ಕ್ಯಾರೆಟ್ ಜ್ಯೂಸ್, ಒಂದು ಚಮಚ ಆ್ಯಪಲ್ ಸೀಡರ್ ವಿನೇಗರ್ ಮಿಶ್ರಣ ಮಾಡಿ. ಇದಕ್ಕೆ ಹತ್ತಿ ಉಂಡೆಯನ್ನು ಅದ್ದಿಡಿ. ಬೆಳಿಗ್ಗೆ ಹಾಗೂ ಸಂಜೆ ವೇಳೆ ಮುಖವನ್ನು ಇದರಿಂದ ಒರೆಸಿಕೊಳ್ಳಿ. ಹತ್ತು ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ತೊಳೆಯಿರಿ.

   ಒಣಚರ್ಮಕ್ಕೆ ಕ್ಯಾರೆಟ್ ಮಾಸ್ಕ್

  ಒಣಚರ್ಮಕ್ಕೆ ಕ್ಯಾರೆಟ್ ಮಾಸ್ಕ್

  ಒಣಚರ್ಮವು ಮಾಯಿಶ್ಚರೈಸ್ ಆಗಿರುವಂತೆ ಮಾಡಲು ಒಂದು ಚಮಚ ತುರಿದ ಕ್ಯಾರೆಟ್, ಒಂದು ಚಮಚ ಹಾಲಿನ ಕೆನೆ ಮತ್ತು ಒಂದು ಮೊಟ್ಟೆಯ ಬಿಳಿಲೋಳೆ ಬಳಸಿ. ಇದನ್ನು ಮುಖಕ್ಕೆ ಹಚ್ಚಿಕೊಂಡು 15 ನಿಮಿಷ ಕಾಲ ಹಾಗೆ ಬಿಡಿ. ತಣ್ಣೀರಿನಿಂದ ಮುಖ ತೊಳೆದುಕೊಂಡರೆ ನಯ ಹಾಗೂ ಸುಂದರ ಚರ್ಮವು ನಿಮ್ಮದಾಗುವುದು.

   ಚರ್ಮದ ಕಾಂತಿ ಹೆಚ್ಚಿಸುವ ಕ್ಯಾರೆಟ್ ಮುಖಲೇಪ

  ಚರ್ಮದ ಕಾಂತಿ ಹೆಚ್ಚಿಸುವ ಕ್ಯಾರೆಟ್ ಮುಖಲೇಪ

  ಒಂದು ದೊಡ್ಡಚಮಚ ಕ್ಯಾರೆಟ್ ತುರಿ, ಒಂದು ಚಿಕ್ಕ ಚಮಚ ಓಟ್ಸ್ ರವೆ, ಒಂದು ದೊಡ್ಡಚಮಚ ಸೇಬುಹಣ್ಣಿನ ತಿರುಳಿನ ತುರಿಯನ್ನು ಬೆರೆಸಿ ಮಿಶ್ರಣ ಮಾಡಿ. ಈ ಲೇಪವನ್ನು ಮುಖಕ್ಕೆ ನಯವಾದ ಮಸಾಜ್ ಮೂಲಕ ಹಚ್ಚಿಕೊಂಡು ಸುಮಾರು ಹತ್ತು ನಿಮಿಷ ಹಾಗೇ ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

  English summary

  Homemade Carrot Face Packs Will Solve All Your Beauty Problems

  In this article, we have mentioned different carrot face masks that can solve all your beauty problems. Read on to know how to use carrot in your beauty regimen.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more