ತುಟಿ ಹಾಗೂ ಗಲ್ಲದ ಸುತ್ತಿನ ಕಪ್ಪು ಚರ್ಮ ಬಿಳಿಯಾಗಿಸುವ ಮನೆಮದ್ದುಗಳು

Posted By: Lekhaka
Subscribe to Boldsky

ಗಲ್ಲ ಮತ್ತು ತುಟಿಯ ಭಾಗದ ಚರ್ಮವು ಕಪ್ಪಾಗುವುದು ಇಂದಿನ ದಿನಗಳಲ್ಲಿ ವಿಶ್ವದಲ್ಲಿ ತುಂಬಾ ಜನರನ್ನು ಕಾಡುತ್ತಿರುವಂತಹ ಸಮಸ್ಯೆಯಾಗಿದೆ. ಇದಕ್ಕೆ ಹಲವಾರು ರೀತಿಯ ಕಾರಣಗಳು ಇರಬಹುದು. ಕಲ್ಮಷ ಮತ್ತು ವಿಷಕಾರಿ ಅಂಶ, ವ್ಯಾಕ್ಸಿಂಗ್ ಇತ್ಯಾದಿಗಳು ತುಟಿ ಹಾಗೂ ಗಲ್ಲದ ಭಾಗದ ಚರ್ಮವನ್ನು ಕಪ್ಪಗೆ ಮಾಡುವುದು. ಇದರಿಂದ ಸೌಂದರ್ಯದ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುವುದು. ಇದರ ನಿವಾರಣೆಗೆ ಹಲವು ರೀತಿಯ ಕ್ರೀಮ್ ಗಳನ್ನು ಕೂಡ ಬಳಸಿರಬಹುದು.

ಆದರೆ ಯಾವುದೇ ಸಮಸ್ಯೆಯಿಲ್ಲದ, ನೈಸರ್ಗಿಕ ಮತ್ತು ಸುರಕ್ಷಿತ ವಿಧಾನದಿಂದ ತುಟಿ ಹಾಗೂ ಗಲ್ಲದ ಭಾಗದ ಚರ್ಮವನ್ನು ಬಿಳಿ ಮಾಡಬೇಕೆಂದರೆ ಬೋಲ್ಡ್ ಸ್ಕೈ ಕೆಲವೊಂದು ಮನೆಮದ್ದುಗಳನ್ನು ನಿಮಗೆ ಹೇಳಿಕೊಡಲಿದೆ. ಇದು ಇಂತಹ ಸಮಸ್ಯೆಯಿಂದ ತುಂಬಾ ಸುಲಭವಾಗಿ ನಿವಾರಣೆ ಮಾಡುವುದು. ತುಟಿ ಹಾಗೂ ಗಲ್ಲದ ಚರ್ಮವನ್ನು ಬಿಳಿ ಮಾಡುವಂತಹ ಮನೆಮದ್ದುಗಳು ಯಾವುದು ಎಂದು ಈ ಲೇಖನದ ಮೂಲಕ ನೀವು ಓದಿಕೊಳ್ಳಿ....

ಆಲೂಗಡ್ಡೆ

ಆಲೂಗಡ್ಡೆ

ನೈಸರ್ಗಿಕವಾಗಿ ಬ್ಲೀಚಿಂಗ್ ಗುಣಗಳನ್ನು ಹೊಂದಿರುವಂತಹ ಆಲೂಗಡ್ಡೆ ತುಟಿ ಹಾಗೂ ಗಲ್ಲದ ಸುತ್ತಲಿನ ಕಪ್ಪು ಬಣ್ಣವನ್ನು ನಿವಾರಣೆ ಮಾಡುವುದು. ಕೆಲವು ತುಂಬಾ ತಾಜಾ ಆಲೂಗಡ್ಡೆಯನ್ನು ಕತ್ತರಿಸಿಕೊಂಡು ಅದನ್ನು ಬಾಧಿತ ಚರ್ಮದ ಮೇಲಿಡಿ. 15-20 ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ನೀರಿನಿಂದ ತೊಳೆಯಿರಿ. ಈ ವಿಧಾನವನ್ನು ದಿನನಿತ್ಯ ಬಳಸಿಕೊಂಡರೆ ಒಳ್ಳೆಯ ಫಲಿತಾಂಶ ಪಡೆಯಬಹುದು.

 ಲಿಂಬೆ ರಸ

ಲಿಂಬೆ ರಸ

ಲಿಂಬೆರಸದಲ್ಲಿ ಹೆಚ್ಚಿನ ಮಟ್ಟದ ಸಿಟ್ರಿಕ್ ಆಮ್ಲವಿದೆ. ಇದು ತುಟಿ ಹಾಗೂ ಗಲ್ಲದ ಸುತ್ತಿನ ಕಪ್ಪು ಚರ್ಮವನ್ನು ಬಿಳಿ ಮಾಡುವಲ್ಲಿ ಮತ್ತೊಂದು ಪರಿಣಾಮಕಾರಿ ಮನೆಮದ್ದು. ಎರಡು ಚಮಚ ಲಿಂಬೆರಸ ಮತ್ತು ಒಂದು ಚಮಚ ರೋಸ್ ವಾಟರ್ ಬೆರೆಸಿಕೊಳ್ಳಿ. ಇದರಲ್ಲಿ ಒಂದು ಹತ್ತಿ ಉಂಡೆ ಅದ್ದಿಕೊಂಡು ಬಾಧಿತ ಚರ್ಮಕ್ಕೆ ಅದನ್ನು ಉಜ್ಜಿಕೊಳ್ಳಿ. 10-15 ನಿಮಿಷ ಬಳಿಕ ನೀರಿನಿಂದ ತೊಳೆಯಿರಿ. ವಾರದಲ್ಲಿ 4-5 ಸಲ ಈ ವಿಧಾನ ಬಳಸಿದರೆ ಒಳ್ಳೆಯ ಫಲಿತಾಂಶ ಸಿಗುವುದು.

ಅಲೋವೆರಾ ಜೆಲ್

ಅಲೋವೆರಾ ಜೆಲ್

ಪೋಷಣೆಯನ್ನು ನೀಡುವ ಗುಣವನ್ನು ಹೊಂದಿರುವ ಅಲೋವೆರಾ ಜೆಲ್ ಚರ್ಮದ ಸಮಸ್ಯೆಗೆ ತುಂಬಾ ಪರಿಣಾಮಕಾರಿ ಔಷಧಿಯಾಗಿದೆ. ಅಲೋವೆರಾ ಜೆಲ್ ಆನ್ನು ಬಾಧಿತ ಚರ್ಮಕ್ಕೆ ಹಚ್ಚಿಕೊಂಡು ಒಂದು ಗಂಟೆ ಹಾಗೆ ಬಿಟ್ಟುಬಿಡಿ. ಬಳಿಕ ನೀರಿನಿಂದ ತೊಳೆಯಿರಿ. ಒಳ್ಳೆಯ ಫಲಿತಾಂಶ ಸಿಗಬೇಕಾದರೆ ದಿನದಲ್ಲಿ ಹಲವಾರು ಸಲ ಹೀಗೆ ಮಾಡಿ.

ಶ್ರೀಗಂಧ ಹುಡಿ

ಶ್ರೀಗಂಧ ಹುಡಿ

ಶ್ರೀಗಂಧದ ಹುಡಿಯಲ್ಲಿ ಇರುವಂತಹ ಚರ್ಮ ಬಿಳಿ ಮಾಡುವ ಗುಣಗಳು ತುಟಿ ಹಾಗೂ ಗಲ್ಲದ ಸುತ್ತಿನ ಕಪ್ಪಾಗಿರುವ ಚರ್ಮವನ್ನು ಬಿಳಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಒಂದು ಚಮಚ ಶ್ರೀಗಂಧದ ಹುಡಿ ಮತ್ತು ಎರಡು ಚಮಚ ರೋಸ್ ವಾಟರ್ ಮಿಶ್ರಣ ಮಾಡಿ ಮತ್ತು ಇದನ್ನು ಪೇಸ್ಟ್ ಮಾಡಿಕೊಂಡು ಬಾಧಿತ ಚರ್ಮಕ್ಕೆ ಹಚ್ಚಿ. 20 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಇದನ್ನು ತೊಳೆಯಿರಿ. ವೇಗದ ಫಲಿತಾಂಶ ಪಡೆಯಬೇಕೆಂದರೆ ವಾರದಲ್ಲಿ 3-4 ದಿನ ಇದನ್ನು ಬಳಸಿ.

ಜೇನುತುಪ್ಪ

ಜೇನುತುಪ್ಪ

ಪ್ರಬಲ ಆ್ಯಂಟಿಆಕ್ಸಿಡೆಂಟ್ ಗಳನ್ನು ಒಳಗೊಂಡಿರುವ ಜೇನುತುಪ್ಪವನ್ನು ಯಾವಾಗಲೂ ಚರ್ಮವನ್ನು ಬಿಳಿಯಾಗಿಸುವ ವಸ್ತುವನ್ನಾಗಿ ಬಳಸಲಾಗುತ್ತಾ ಇದೆ. ತುಟಿ ಹಾಗೂ ಗಲ್ಲದ ಸುತ್ತಲು ಇರುವಂತಹ ಚರ್ಮದ ಬಣ್ಣವನ್ನು ಬಿಳಿಯಾಗಿಸುವಲ್ಲಿ ಇದು ಪ್ರಮುಖ ಪಾತ್ರ ನಿರ್ವಹಿಸುವುದು. ಬಾಧಿತ ಪ್ರದೇಶಕ್ಕೆ ಜೇನುತುಪ್ಪ ಹಚ್ಚಿಕೊಳ್ಳಿ ಮತ್ತು 15-20 ನಿಮಿಷ ತನಕ ಹಾಗೆ ಬಿಟ್ಟುಬಿಡಿ. ಇದರ ಬಳಿಕ ಹಗುರ ಬಿಸಿನೀರಿನಿಂದ ಮುಖ ತೊಳೆಯಿರಿ. ಒಳ್ಳೆಯ ಫಲಿತಾಂಶಕ್ಕಾಗಿ ದಿನದಲ್ಲಿ ಒಂದು ಸಲ ಇದನ್ನು ಬಳಸಿ.

ಅರಿಶಿನ ಹುಡಿ

ಅರಿಶಿನ ಹುಡಿ

ಅರಿಶಿನ ಹುಡಿಯಲ್ಲಿ ಇರುವಂತಹ ಚರ್ಮಕ್ಕೆ ನೆರವಾಗುವಂತಹ ಆ್ಯಂಟಿಆಕ್ಸಿಡೆಂಟ್ ತುಟಿ ಹಾಗೂ ಗಲ್ಲದತ್ತ ಇರುವಂತಹ ಕಪ್ಪು ಬಣ್ಣವನ್ನು ಬಿಳಿ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು. ಒಂದು ಚಿಟಿಕೆ ಅರಶಿನ ಹುಡಿಯನ್ನು ಒಂದು ಚಮಚ ಮೊಸರಿನೊಂದಿಗೆ ಬೆರೆಸಿ. ಇದನ್ನು ಬಾಧಿತ ಚರ್ಮಕ್ಕೆ ಹಚ್ಚಿಕೊಳ್ಳಿ ಮತ್ತು 10-15 ನಿಮಿಷ ಕಾಲ ಹಾಗೆ ಬಿಡಿ. ಹಗುರ ಬಿಸಿ ನೀರಿನಿಂದ ಮುಖ ತೊಳೆಯರಿ. ಮನೆಯಲ್ಲೇ ತಯಾರಿಸಿರುವ ಪೇಸ್ಟ್ ಅನ್ನು ವಾರದಲ್ಲಿ ಒಂದು ಸಲ ಬಳಸಿ.

ಓಟ್ ಮೀಲ್ಸ್

ಓಟ್ ಮೀಲ್ಸ್

ಓಟ್ ಮೀಲ್ಸ್‌ನಲ್ಲಿ ಇರುವಂತಹ ಕಿತ್ತುಹಾಕುವಂತಹ ಗುಣವು ಚರ್ಮದಲ್ಲಿನ ಕಲ್ಮಷವನ್ನು ತೆಗೆದುಹಾಕುವುದು ಮತ್ತು ಚರ್ಮವನ್ನು ಬಿಳಿ ಮಾಡುವುದು. ಒಂದು ಚಮಚ ಓಟ್ ಮೀಲ್ ಮತ್ತು ಇದನ್ನು ½ ಚಮಚ ರೋಸ್ ವಾಟರ್ ಮತ್ತು ತೆಂಗಿನೆಣ್ಣೆಯೊಂದಿಗೆ ಬೆರೆಸಿಕೊಳ್ಳಿ. ಬಾಧಿತ ಪ್ರದೇಶಕ್ಕೆ ಇದನ್ನು ಹಚ್ಚಿಕೊಂಡು ಉಜ್ಜಿಕೊಳ್ಳಿ. ಇದರ ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಮನೆಯಲ್ಲಿ ತಯಾರಿಸಿರುವ ಈ ಪೇಸ್ಟ್‌ ಅನ್ನು ವಾರದಲ್ಲಿ 2-3 ಸಲ ಬಳಸಿಕೊಂಡು ಒಳ್ಳೆಯ ಫಲಿತಾಂಶ ಪಡೆಯಿರಿ.

ಆಲಿವ್ ತೈಲ

ಆಲಿವ್ ತೈಲ

ಚರ್ಮಕ್ಕೆ ಸಂಬಂಧಿಸಿದಂತಹ ಎಲ್ಲಾ ರೀತಿಯ ಸಮಸ್ಯೆಗಳಿಗೆ ಆಲಿವ್ ತೈಲವು ತುಂಬಾ ಪರಿಣಾಮಕಾರಿಯಾಗಿದೆ. ತುಟಿ ಹಾಗೂ ಗಲ್ಲದ ಸುತ್ತಲಿನ ಕಪ್ಪು ಚರ್ಮವನ್ನು ಬಿಳಿಯಾಗಿಸುವಲ್ಲಿ ಆಲಿವ್ ತೈಲವು ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಬಾಧಿತ ಚರ್ಮಕ್ಕೆ ಆಲಿವ್ ತೈಲವನ್ನು ಹಚ್ಚಿಕೊಳ್ಳಿ ಮತ್ತು ಇದನ್ನು ರಾತ್ರಿಯಿಡಿ ಹಾಗೆ ಬಿಡಿ. ಬೆಳಗ್ಗೆ ಇದನ್ನು ನೀರಿನಿಂದ ತೊಳೆಯಿರಿ. ತುಟಿ ಮತ್ತು ಗಲ್ಲದ ಸುತ್ತಿನ ಕಪ್ಪು ಚರ್ಮ ನಿವಾರಣೆ ಮಾಡಲು ದಿನಲೂ ಇದನ್ನು ಬಳಸಿದರೆ ತುಂಬಾ ಒಳ್ಳೆಯದು.

English summary

home-remedies-to-get-rid-of-dark-skin-around-lips-and-chin

Dark skin around the lips and chin area can make your skin tone appear uneven. This is a highly common skin-related concern for several men and women around the world. if you're looking for a hassle-free, natural and safe way to lighten the dark skin around your lips and chin, then we've got you covered. As today at Boldsky, we're letting you know about the potent home remedies that can be used for treating this common and unsightly skin problem.