ಸಡಿಲವಾದ ತ್ವಚೆಯ ಚರ್ಮಗಳನ್ನು ಬಿಗಿಗೊಳಿಸುವ ಮನೆ ಮದ್ದುಗಳು

By: Divya Pandith
Subscribe to Boldsky

ಸ್ಥೂಲಕಾಯವನ್ನು ಕರಗಿಸಿಕೊಂಡಮೇಲೆ ಚರ್ಮವು ಬಹಳ ಸಡಿಲವಾಗುವುದು. ಆಗ ಚರ್ಮದ ಒಟ್ಟಾರೆ ನೋಟದಲ್ಲಿ ಹಾನಿಗೊಳಗಾಗುವುದನ್ನು ನಾವು ಗಮನಿಸಬಹುದು. ಜೋತು ಬಿದ್ದಂತೆ ಕಾಣುವ ಚರ್ಮವು ವಯಸ್ಸಾದ ಅಥವಾ ಚರ್ಮದ ಸಮಸ್ಯೆ ಇರುವಂತೆ ತೋರುವುದು. ಆ ಸಮಯದಲ್ಲಿ ಚರ್ಮದ ಬಿಗಿತವುಂಟಾಗುವಂತೆ ಕೆಲವು ಆರೈಕೆ ಮಾಡಬೇಕಾಗುವ ಅನಿವಾರ್ಯತೆ ಇರುತ್ತದೆ. ತೂಕ ನಷ್ಟವು ನಿಮ್ಮ ಚರ್ಮದ ಸ್ಥಿತಿಸ್ಥಾಪಕತ್ವದ ಮೇಲೆ ಪ್ರತಿಕೂಲವಾಗಿ ಪರಿಣಾಮ ಬೀರುತ್ತದೆ. ಜೊತೆಗೆ ಕಾಲಜನ್ ಉತ್ಪಾದನೆಯನ್ನು ಕಡಿಮೆಮಾಡುತ್ತದೆ.

ಈ ಎರಡು ಸಮಸ್ಯೆಯಿಂದ ಚರ್ಮವು ತನ್ನ ಗೋಚರತೆಯಲ್ಲಿ ವಿಭಿನ್ನತೆ ಹೊಂದುವುದು. ಅಲ್ಲದೆ ಬಹು ಬೇಗ ವಯಸ್ಸಾದವರಂತೆ ಕಾಣುವುದು, ಚರ್ಮವು ಸುಕ್ಕು ಗಟ್ಟುವುದು ಹಾಗೂ ಜೀವಕಳೆದುಕೊಂಡಂತೆ ತೋರ್ಪಡುತ್ತದೆ. ಸಾಮಾನ್ಯವಾಗಿ ಕಾಡುವ ಈ ಸಮಸ್ಯೆಗೆ ನಮ್ಮ ಬೋಲ್ಡ್‍ಸ್ಕೈ ಪರಿಹಾರೋಪಾಯವನ್ನು ನಿಮ್ಮ ಮುಂದೆ ಇಡುತ್ತಿದೆ.

ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿರುವ ಆಯುರ್ವೇದದ ಈ ಆರೈಕೆಗಳು ತ್ವಚೆಯ ಆರೋಗ್ಯವನ್ನು ಸುಲಭವಾಗಿ ಸುಧಾರಿಸುತ್ತವೆ. ಅಲ್ಲದೆ ಉತ್ಕರ್ಷಣ ನಿರೋಧಕಗಳು ಮತ್ತು ಇತರ ಸಂಯುಕ್ತಗಳು ನಿಮ್ಮ ಚರ್ಮವನ್ನು ಪರಿಣಾಮಕಾರಿಯಾಗಿ ಬಿಗಿಗೊಳಿಸುತ್ತದೆ. ಈ ಅಮೂಲ್ಯವಾದ ಪರಿಹಾರಗಳನ್ನು ಪಾಲಿಸುವ ಸುಲಭ ಮಾರ್ಗಗಳ ಬಗ್ಗೆ ನೀವು ತಿಳಿಯಲು ಲೇಖನದ ಮುಂದಿನ ಭಾಗವನ್ನು ಓದಿ...  

ವಿಟಮಿನ್ ಇ ಎಣ್ಣೆ

ವಿಟಮಿನ್ ಇ ಎಣ್ಣೆ

ತ್ವಚೆಯ ಆರೈಕೆಯಲ್ಲಿ ವಿಟಮಿನ್ ಇ ಎಣ್ಣೆ ಪವಾಡದ ರೂಪದಲ್ಲಿ ಆರೈಕೆ ಮಾಡುತ್ತದೆ. ಇದು ತೂಕ ನಷ್ಟದ ನಂತರ ನಿಮ್ಮ ಚರ್ಮವನ್ನು ಬಿಗಿಗೊಳಿಸುತ್ತದೆ. ಪ್ರಾಚೀನ ಕಾಲದಿಂದಲೂ ಉಪಯೋಗಿಸಿಕೊಂಡು ಬರುತ್ತಿರುವ ಈ ಔಷಧ ವಿಧಾನವನ್ನು ಉತ್ತಮ ಪರಿಹಾರ ಆಯ್ಕೆ ಎಂದು ಕರೆಯಲಾಗುತ್ತದೆ.

ಬಳಸುವ ವಿಧಾನ:

ವಿಟಮಿನ್ ಎಣ್ಣೆಯ ಮಾತ್ರೆಯಿಂದ ಎಣ್ಣೆಯನ್ನು ತೆಗೆಯಿರಿ.

ತೊಂದರೆಗೆ ಒಳಗಾದ ಎಲ್ಲಾ ಭಾಗದಲ್ಲೂ ಎಣ್ಣೆಯನ್ನು ಅನ್ವಯಿಸಿ, ವೃತ್ತಾಕಾರದಲ್ಲಿ ಮಸಾಜ್ ಮಾಡಿ.

ರಾತ್ರಿಯಲ್ಲಿ ಇದನ್ನು ಬಿಡಿ. ಹೀಗೆ ನಿತ್ಯವೂ ಪುನರಾವರ್ತಿಸಿ. ಉತ್ತಮ ಫಲಿತಾಂಶವನ್ನು ಪಡೆಯಿರಿ.

ಮೊಟ್ಟೆಯ ಬಿಳಿ ಭಾಗ

ಮೊಟ್ಟೆಯ ಬಿಳಿ ಭಾಗ

ಸಡಿಲವಾದ ಚರ್ಮವನ್ನು ಬಹು ಬೇಗ ಆರೈಕೆಗೆ ಒಳಪಡಿಸಿ, ಉತ್ತಮ ಪಡಿಸಲು ಅಥವಾ ಬಿಗಿಗೊಳಿಸಲು ಇರುವ ಅತ್ಯುತ್ತಮ ಮಾರ್ಗ ಮೊಟ್ಟೆಯ ಬಿಳಿಭಾಗವನ್ನ ಬಳಸುವುದು. ಇದೊಂದು ಅದ್ಭುತ ಪರಿಹಾರ ಎಂದು ಹೇಳಬಹುದು.

ಬಳಸುವ ವಿಧಾನ

ಸಮಸ್ಯೆ ಇರುವ ಸ್ಥಳಕ್ಕೆ ಸರಿಯಾಗಿ ಅನ್ವಯಿಸಬೇಕು.

ನಂತರ 15 ರಿಂದ 20 ನಿಮಿಷಗಳಕಾಲ ಬಿಡಬೇಕು.

ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಹೀಗೆ ನಿತ್ಯವೂ ಮಾಡುವುದರಿಂದ ಚರ್ಮವು ಬಹು ಬೇಗ ಬಿಗಿತವನ್ನು ಕಾಣುವುದು.

ಜೋಜೋಬಾ ಎಣ್ಣೆ

ಜೋಜೋಬಾ ಎಣ್ಣೆ

ಸಡಿಲವಾದ ಚರ್ಮವು ಬಿಗಿ ಹಾಗೂ ಗಟ್ಟಿಯಾಗುವಂತೆ ಮಾಡಲು ನಿಮಗೆ ಸಹಾಯವಾಗುವ ಒಂದು ಉತ್ತಮ ಎಣ್ಣೆ ಜೋಜೋಬಾ ಎಣ್ಣೆ. ತ್ವಚೆಯು ಸಡಿಲತೆಯಿಂದ ಬಿಗಿತಕ್ಕೆ ಪರಿವರ್ತನೆಗೊಂಡು, ಆರೋಗ್ಯಕರವಾಗಿರುವಂತೆ ಮಾಡಲು ಜೋಜೋಬಾ ಎಣ್ಣೆ ಅನುವು ಮಾಡಿಕೊಡುತ್ತದೆ.

ಬಳಸುವ ವಿಧಾನ:

ಜೋಜೊಬಾ ಎಣ್ಣೆಗೆ ಸ್ವಲ್ಪ ತೆಂಗಿನ ಎಣ್ಣೆಯನ್ನು ಸೇರಿಸಿ ಮಿಶ್ರಗೊಳಿಸಿ.

ತೊಂದರೆಗೆ ಒಳಗಾದ ಭಾಗದಲ್ಲಿ ಅನ್ವಯಿಸಿ, 10-15 ನಿಮಿಷಗಳ ಕಾಲ ಮಸಾಜ್ ಮಾಡಿ.

ನಂತರ 1 ಗಂಟೆಗಳ ಕಾಲ ಆರಲು ಬಿಡಿ.

ನಂತರ ಸಾಮಾನ್ಯ ನೀರಿನಲ್ಲಿ ತೊಳೆಯಿರಿ.

ಹೀಗೆ ದಿನಕ್ಕೊಮ್ಮೆ ಮಾಡುವುದರಿಂದ ಉತ್ತಮ ಫಲಿತಾಂಶ ದೊರೆಯುವುದು.

ದಾಲ್ಚಿನ್ನಿ ಪೌಡರ್

ದಾಲ್ಚಿನ್ನಿ ಪೌಡರ್

ದಾಲ್ಚಿನ್ನಿ ಪುಡಿಯು ನಿಮ್ಮ ತ್ವಚೆಯ ಕಾಲಜನ್ ಉತ್ಪಾದನೆಯನ್ನು ಪರಿಣಾಮಕಾರಿಯಾಗಿ ಉತ್ತೇಜಿಸುತ್ತದೆ. ತೂಕದ ಇಳಿಕೆಯಿಂದ ಉಂಟಾಗುವ ಸಡಿಲತೆಯನ್ನು ಬಿಗಿ ಗೊಳಿಸುತ್ತದೆ. ಇದನ್ನು ಬಹು ಸುಲಭವಾಗಿ ಅನ್ವಯಿಸಬಹುದು.

ಮಾಡುವ ವಿಧಾನ

1/2 ಚಮಚ ದಾಲ್ಚಿನ್ನಿ ಪುಡಿ ಮತ್ತು 2 ಟೀ ಚಮಚ ಜೇನುತುಪ್ಪವನ್ನು ಸೇರಿಸಿ, ಮಿಶ್ರಗೊಳಿಸಿ.

ಮಿಶ್ರಣವನ್ನು ಪೀಡಿತ ಪ್ರದೇಶಗಳಿಗೆ ಅನ್ವಯಿಸಿ.

ನಂತರ 3 ನಿಮಿಷಗಳಕಾಲ ಆರಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆಯಿರಿ.

ಹೀಗೆ ವಾರದಲ್ಲಿ 2-3 ಬಾರಿ ಅನ್ವಯಿಸಿದರೆ ಸಡಿಲವಾದ ಚರ್ಮ ಬಹು ಬೇಗ ಬಿಗಿತಕ್ಕೆ ಒಳಗಾಗುವುದು.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಅಡುಗೆ ಮನೆಯಲ್ಲಿ ಬಳಸುವ ಅದ್ಭುತ ಗುಣದ ಎಣ್ಣೆ ಆಲಿವ್ ಎಣ್ಣೆ. ಆರೋಗ್ಯ ದೃಷ್ಟಿಯಿಂದ ಉತ್ತಮ ಫಲಿತಾಂಶ ನೀಡುವ ಈ ಎಣ್ಣೆ ತ್ವಚೆಗೆ ಸಂಬಂಧಿಸಿದ ಬಹುತೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದರ ಫಲಿತಾಂಶವು ನಿಮಗೆ ಅದ್ಭುತ ಅನುಭವವನ್ನು ನೀಡುವುದು.

ಶಿಯಾ ಬಟರ್

ಶಿಯಾ ಬಟರ್

ದೇಹದ ಚರ್ಮದ ಬಿಗಿತವನ್ನು ಸುಧಾರಿಸಲು ಶಿಯಾ ಬಟರ್‍ಅನ್ನು ಬಳಸಬಹುದು. ಇದರಲ್ಲಿ ಕೊಬ್ಬಿನ ಆಮ್ಲ ಹೆಚ್ಚಾಗಿರುವುದರಿಂದ ತ್ವಚೆಗೆ ಒಳ್ಳೆಯ ಆರೈಕೆ ನೀಡುವುದು.

ಬಳಸುವ ವಿಧಾನ

ಶಿಯಾ ಬೆಣ್ಣೆಯನ್ನು ಕರಗಿಸಿ, ಪೀಡಿತ ಪ್ರದೇಶಕ್ಕೆ ಅನ್ವಯಿಸಿ.

ನಂತರ 15-20 ನಿಮಿಷಗಳ ಕಾಲ ಆರಲು ಬಿಡಿ.

ಬಳಿಕ ಶುಷ್ಕ ನೀರಿನಿಂದ ತೊಳೆಯಿರಿ

ದಿನಕ್ಕೊಮ್ಮೆ ಹೀಗೆ ಮಾಡುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.

ಮುಲ್ತಾನಿ ಮಣ್ಣು

ಮುಲ್ತಾನಿ ಮಣ್ಣು

ಮುಲ್ತಾನಿ ಮಣ್ಣು ಚರ್ಮದ ಸ್ಥಿತಿ ಸ್ಥಾಪಕತ್ವವನ್ನು ಕಾಪಾಡಲು ಹಾಗೂ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸಲು ಅತ್ಯಂತ ಪರಿಣಾಮಕಾರಿಯಾಗಿ ವರ್ತಿಸುವುದು.

ಬಳಸುವ ವಿಧಾನ

ಒಂದು ಟೀ ಚಮಚ ಮುಲ್ತಾನಿ ಮಣ್ಣಿಗೆ 2 ಟೀ ಚಮಚ ಗುಲಾಬಿ ನೀರನ್ನು ಬೆರೆಸಿ.

ಚೆನ್ನಾಗಿ ಮಿಶ್ರಗೊಳಿಸಿ, ಪೀಡಿತ ಪ್ರದೇಶಗಳಿಗೆ ಅನ್ವಯಿಸಿ.

ನಂತರ ಇದನ್ನು 20-15 ನಿಮಿಷಗಳ ಕಾಲ ಆರಲು ಬಿಟ್ಟು, ಶುಷ್ಕ ನೀರಿನಿಂದ ತೊಳೆಯಿರಿ.

ವಾರದಲ್ಲಿ ಕಡಿಮೆ ಎಂದರೂ 3-4 ನಿಮಿಷಗಳ ಕಾಲ ಅನ್ವಯಿಸಿದರೆ ಉತ್ತಮ ಫಲಿತಾಂಶ ದೊರೆಯುವುದು.

ಅಲೋವೆರಾ ಜೆಲ್

ಅಲೋವೆರಾ ಜೆಲ್

ಪ್ರಾಚೀನ ಕಾಲದಿಂದಲೂ ಚರ್ಮದ ಆರೈಕೆಯಲ್ಲಿ ಉತ್ತಮ ಸಾಥ್ ನೀಡುತ್ತಾ ಬಂದಿರುವ ನೈಸರ್ಗಿಕ ಉತ್ಪನ್ನವೆಂದರೆ ಅಲೋವೆರಾ. ಆಂಟಿಆಕ್ಸಿಡೆಂಟ್‍ಗಳನ್ನು ಹೊಂದಿರುವ ಆಲೋವೆರಾ ತ್ವಚೆಯ ಆರೋಗ್ಯವನ್ನು ಉತ್ತಮವಾಗಿ ಕಾಯ್ದುಕೊಳ್ಳುತ್ತದೆ.

ಬಳಸುವ ವಿಧಾನ

2-3 ಟೇಬಲ್ ಚಮಚ ಜೆಲ್‍ಅನ್ನು ತೆಗೆದುಕೊಳ್ಳಿ.

ನಂತರ ಪೀಡಿತ ಪ್ರದೇಶಗಳಿಗೆ ಅನ್ವಯಿಸಿ, ಒಂದು ರಾತ್ರಿ ಬಿಡಿ.

ಬೆಳಗ್ಗೆ ಶುಷ್ಕ ನೀರಿನಿಂದ ತೊಳೆಯಿರಿ.

ಈ ವಿಧಾನವನ್ನು ನಿತ್ಯವೂ ಅನ್ವಯಿಸಿದರೆ ಉತ್ತಮ ಫಲಿತಾಂಶ ದೊರೆಯುವುದು.

English summary

Home Remedies To Tighten Your Skin After Weight Loss

As today at Boldsky, we've brought together a list of miraculous home remedies that can promote collagen production in your skin and also improve its elasticity. These remedies have been around since ancient times and are loaded with skin-firming antioxidants and other compounds that can effectively tighten up your skin. Read on to know more about these valuable remedies and the right way to use them:
Subscribe Newsletter