For Quick Alerts
ALLOW NOTIFICATIONS  
For Daily Alerts

ಸಾಮಾನ್ಯ ಚರ್ಮದ ಸಮಸ್ಯೆಗೆ ಇಲ್ಲಿದೆ ನೋಡಿ ನೈಸರ್ಗಿಕ ಚಿಕಿತ್ಸೆ

By Divya
|

ತಲೆನೋವು, ಕೆಮ್ಮು, ಶೀತ, ಜ್ವರ ಹೀಗೆ ಸಣ್ಣ ಪುಟ್ಟ ಸಮಸ್ಯೆಗಳನ್ನು ಮನೆ ಔಷಧಿಯಿಂದ ಕಡಿಮೆಮಾಡುತ್ತೇವೆ. ಅಂತೆಯೇ ತ್ವಚೆಯ ಸಮಸ್ಯೆಗೂ ಸಹ ಸೂಕ್ತವಾದ ಮನೆ ಔಷಧಿಯಿಂದ ಆರೈಕೆ ಮಡಿಕೊಳ್ಳಬಹುದು. ಪ್ರತಿಯೊಬ್ಬರಲ್ಲೂ ವಿಭಿನ್ನವಾದ ತ್ವಚೆಯನ್ನು ಹೊಂದಿರುವುದರಿಂದ ಔಷಧಿಯಲ್ಲಿ ಸ್ವಲ್ಪ ಬದಲಾವಣೆಯನ್ನು ಕಂಡುಕೊಳ್ಳಬೇಕಾಗುವುದಷ್ಟೆ. ಪುರುಷರು ಮತ್ತು ಮಹಿಳೆಯರು ಎನ್ನುವ ತಾರತಮ್ಯವಿಲ್ಲದೆ ಕೆಲವು ತ್ವಚೆಯ ಸಮಸ್ಯೆ ಉಂಟಾಗುವುದು. ಅಂತಹ ಸಮಸ್ಯೆಗಳಿಗೆ ನಿಸರ್ಗದಲ್ಲಿ ಸುಲಭವಾದ ಚಿಕಿತ್ಸೆಯಿದೆ.

ಬ್ಯೂಟಿ ಟಿಪ್ಸ್: ಮೈಕಾಂತಿ ಹೆಚ್ಚಿಸುವ ಹಳ್ಳಿಗಾಡಿನ 'ತೆಂಗಿನೆಣ್ಣೆ'

ನೈಸರ್ಗಿಕ ಪರಿಹಾರ ಕಂಡುಕೊಳ್ಳುವ ಮೊದಲು ಚರ್ಮದ ಸಮಸ್ಯೆಯೇನು ಎನ್ನುವುದನ್ನು ಮೊದಲು ಗುರುತಿಸಿಕೊಳ್ಳಬೇಕು. ಆಗ ನಿಸರ್ಗದತ್ತವಾದ ಆರೈಕೆಯಿಂದ ಸಂಪೂರ್ಣವಾಗಿ ಗುಣಮುಖವಾಗಬಹುದು. ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆಗಳ ಪಟ್ಟಿ ಹಾಗೂ ಅವುಗಳ ಪರಿಹಾರ ಕ್ರಮಗಳ ಬಗ್ಗೆ ಸಂಕ್ಷಿಪ್ತವಾದ ವಿವರಣೆ ಇಲ್ಲಿದೆ ನೋಡಿ....

ಎಣ್ಣೆ ತ್ವಚೆ

ಎಣ್ಣೆ ತ್ವಚೆ

ಚರ್ಮದ ಮೇಲಿರುವ ಮೇದಸ್ಸಿನ ಗ್ರಂಥಿಗಳು ಅತಿಯಾಗಿ ಕಾರ್ಯ ನಿರ್ವಹಿಸುವುದರಿಂದ ತ್ವಚೆಯಲ್ಲಿ ಎಣ್ಣೆಯ ಪ್ರಮಾಣ ಹೆಚ್ಚುತ್ತದೆ. ಇದರಿಂದ ಅನೇಕ ಬಾರಿ ನಮಗೆ ಕಿರಿಕಿರಿ ಆಗುವ ಸಾಧ್ಯತೆ ಇರುತ್ತದೆ. ಈ ಸಮಸ್ಯೆಗೆ ಸರಳ ಹಾಗೂ ಸುಲಭ ಪರಿಹಾರ ಹೀಗಿದೆ...ಹಸಿರು ಜೇಡಿ ಮಣ್ಣಿಗೆ ಗುಲಾಬಿ ನೀರನ್ನು ಸೇರಿಸಿ ಒಂದು ಪೇಸ್ಟ್ ತಯಾರಿಸಿಕೊಳ್ಳಿ. ಅದನ್ನು ಪ್ರತಿದಿನ ಒಂದು ಬಾರಿ ಮುಖಕ್ಕೆ ಅನ್ವಯಿಸಿ, ಆರಲು ಬಿಡಿ. ಹೀಗೆ ಗಣನೀಯವಾಗಿ ಮಾಡಿದರೆ ಎಣ್ಣೆಯುಕ್ತ ತ್ವಚೆಯಲ್ಲಿ ಬದಲಾವಣೆಯನ್ನು ಕಾಣಬಹುದು.

ಹಾನಿಗೊಳಗಾದ ಚರ್ಮ

ಹಾನಿಗೊಳಗಾದ ಚರ್ಮ

ಒತ್ತಡ, ಧೂಳು, ಮಾಲಿನ್ಯ, ಅಡುಗೆ ವಿಧಾನದ ಸಂದರ್ಭದಲ್ಲಿ ತ್ವಚೆಯ ಮೇಲೆ ಅನೇಕ ಹಾನಿಗಳು ಉಂಟಾಗುತ್ತವೆ. ಇಂತಹ ಸಮಸ್ಯೆಗೆ ಪರಿಹಾರವೆಂದರೆ ತೈಲಗಳ ಬಳಕೆ. ಹಾನಿಗೊಳಗಾದ ಚರ್ಮದ ಮೇಲೆ ತೆಂಗಿನ ಎಣ್ಣೆ, ಚಹಾ ತೈಲ, ಲ್ಯಾವೆಂಡರ್ ಸಾರಭೂತ ತೈಲವನ್ನು ಅನ್ವಯಿಸಬಹುದು. ಅಥವಾ ವಿಟಮಿನ್ ಇ ಮಾತ್ರೆಯನ್ನು ಸೇವಿಸಬೇಕು. ಇದರಿಂದ ಹಾನಿಗೊಳಗಾದ ಚರ್ಮವು ಬಹು ಬೇಗ ಚೇತರಿಕೆ ಕಂಡುಕೊಳ್ಳುತ್ತದೆ.

ಸುಟ್ಟ ತ್ವಚೆ

ಸುಟ್ಟ ತ್ವಚೆ

ಬೆಂಕಿಯ ಹತ್ತಿರ ಅಥವಾ ಎಲೆಕ್ಟ್ರಾನಿಕ್ಸ್ ವಸ್ತುಗಳ ಮಧ್ಯೆ ಕೆಲಸ ಮಾಡುವಾಗ ತ್ವಚೆಯು ಸುಡುವ ಸಾಧ್ಯತೆ ಇರುತ್ತದೆ. ಈ ಸಂದರ್ಭದಲ್ಲಿ ಹಾನಿಗೊಳಗಾದ ಚರ್ಮದ ಆರೈಕೆ ಕೆಲವು ಸರಳ ವಿಧಾನವನ್ನು ಅನುಸರಿಸಬೇಕು. ಗ್ರೀನ್ ಟೀ ಪುಡಿಯ ಬ್ಯಾಗ್ ಅನ್ನು ನೀರಿನಲ್ಲಿ ಅದ್ದಿ, ನೀರನ್ನು ಹಿಂಡಿ ತೆಗೆದು, ನಂತರ ಗಾಯದ ಮೇಲೆ ಇಡಬೇಕು. ಹೀಗೆ ಮಾಡುವುದರಿಂದ ಗಾಯ ಹಾಗೂ ಕಲೆಗಳು ಬಹು ಬೇಗ ನಿರ್ಮೂಲನೆ ಹೊಂದುವವು.

ಒಣ ತ್ವಚೆ

ಒಣ ತ್ವಚೆ

ಒಣ ತ್ವಚೆಯಿಂದ ಉರಿ ಹಾಗೂ ಬಹುಬೇಗ ಹಾನಿಗೊಳಗಾಗುತ್ತವೆ. ಇವುಗಳ ಆರೈಕೆಯ ವಿಧಾನವೆಂದರೆ...ಓಟ್ ಮಿಲ್ ಸ್ನಾನ. ಇದನ್ನು ಸ್ನಾನದ ನೀರಿನಲ್ಲಿ ಬೆರೆಸಿ ಸ್ವಲ್ಪ ಸಮಯ ಬಿಟ್ಟು ಸ್ನಾನ ಮಾಡ ಬೇಕು. ಹೀಗೆ ಮಾಡುವುದರಿಂದ ಒಣ ತ್ವಚೆಗೆ ಉತ್ತಮ ಆರೈಕೆ ದೊರೆಯುತ್ತದೆ. ಇದನ್ನು ಬಿಸಿ ನೀರಿಗೆ ಹಾಕಬಾರದು ಎನ್ನುವುದನ್ನು ನೆನಪಿಟ್ಟಿಕೊಳ್ಳಬೇಕು.

ಒಣ ಚರ್ಮದ ಸಮಸ್ಯೆಗೆ 'ಹಣ್ಣುಗಳ ಫೇಸ್ ಪ್ಯಾಕ್' ಪ್ರಯತ್ನಿಸಿ ನೋಡಿ...

ಬ್ಲ್ಯಾಕ್ ಹೆಡ್ಸ್/ವೈಟ್ ಹೆಡ್ಸ್

ಬ್ಲ್ಯಾಕ್ ಹೆಡ್ಸ್/ವೈಟ್ ಹೆಡ್ಸ್

ಪುರುಷರಿಗೆ ಮತ್ತು ಮಹಿಳೆಯರಿಗೆ ಬ್ಲ್ಯಾಕ್ ಹೆಡ್ಸ್ ಮತ್ತು ವೈಟ್ ಹೆಡ್ಸ್ ಎನ್ನುವುದು ಸಾಮಾನ್ಯ. ಇವುಗಳ ನಿವಾರಣೆಗೆ ಸುಲಭ ಉಪಾಯವೆಂದರೆ..ಬೇಕಿಂಗ್ ಸೋಡಾ ಬಳಸುವುದು. ಮೊದಲು ಬಾಧಿತ ಪ್ರದೇಶವನ್ನು ನೀರಿನಿಂದ ಸ್ವಚ್ಛಗೊಳಿಸಬೇಕು. ನಂತರ ಅಡುಗೆ ಸೋಡವನ್ನು ಕುದಿಸಿ, ಅದರಿಂದ ಬಾಧಿತ ಪ್ರದೇಶದ ಮೇಲೆ ತಿಕ್ಕಿ. ಹೀಗೆ ಮಾಡುವುದುರಿಂದ ಸಮಸ್ಯೆ ಸುಲಭವಾಗಿ ಪರಿಹಾರವಾಗುವುದು.

ಅನಗತ್ಯ ಚರ್ಮದ ಕೂದಲು

ಅನಗತ್ಯ ಚರ್ಮದ ಕೂದಲು

ತ್ವಚೆಯ ಮೇಲಿರುವ ಅನಗತ್ಯದ ಕೂದಲು ಕೆಲವೊಮ್ಮೆ ನಮ್ಮ ಸೌಂದರ್ಯವನ್ನು ಹಾಳು ಮಾಡುತ್ತವೆ. ಇವುಗಳ ನಿವಾರಣೆಗೆ ನೈಸರ್ಗಿಕ ಪರಿಹಾರವೆಂದರೆ ಮನೆಯಲ್ಲಿ ವ್ಯಾಕ್ಸಿಂಗ್ ತಯಾರಿಸಿಕೊಳ್ಳುವುದು. ಮೈಕ್ರೋವೇವ್‍ನಲ್ಲಿ ಸಕ್ಕರೆ ಮತ್ತು ಜೇನುತುಪ್ಪವನ್ನು ಕರಗಿಸಿ ಒಂದು ಮೇಣದ ಮಿಶ್ರಣ ತಯಾರಿಸಿಕೊಳ್ಳಿ. ನಂತರ ಅನಗತ್ಯ ಕೂದಲಿನ ಮೇಲೆ ಅನ್ವಯಿಸಿ. ವಿರುದ್ಧ ದಿಕ್ಕಿನಿಂದ ವ್ಯಾಕ್ಸಿಂಗ್ ಬಟ್ಟೆಯನ್ನು ಬಳಸಿ ಎತ್ತಿದರೆ ಕೂದಲ ನಿರ್ಮೂಲನೆ ಆಗುತ್ತದೆ.

ವಯಸ್ಸಾದ ಚರ್ಮ ಮತ್ತು ಸುಕ್ಕು

ವಯಸ್ಸಾದ ಚರ್ಮ ಮತ್ತು ಸುಕ್ಕು

ತ್ವಚೆಯ ಆರೋಗ್ಯ ಹಾಳಾಗುತ್ತಿದ್ದಂತೆ ಸುಕ್ಕು ಗಟ್ಟುವುದು ಹಾಗೂ ತ್ವಚೆಯು ಹೆಚ್ಚು ವಯಸ್ಸಾದಂತೆ ಗೋಚರಿಸುತ್ತದೆ. ಇದಕ್ಕೆ ಮನೆಯ ಸುಲಭ ಔಷಧಿಯೆಂದರೆ ಮೊಟ್ಟೆ ಬಳಕೆ.ಮೊಟ್ಟೆಯ ಬಿಳಿ ಭಾಗವನ್ನು ತ್ವಚೆಯ ಮೇಲೆ ಅನ್ವಯಿಸಿ, ಆರಲು ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ತ್ವಚೆಯು ಮರುಜನ್ಮ ಪಡೆಯುವುದು.

ಮೊಡವೆ ಮತ್ತು ಗುಳ್ಳೆಗಳು

ಮೊಡವೆ ಮತ್ತು ಗುಳ್ಳೆಗಳು

ಎಲ್ಲಾ ವಯಸ್ಸಿನ ಪುರುಷರು ಮತ್ತು ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸ್ವಚೆಯ ಸಮಸ್ಯೆಯೆಂದರೆ ಮೊಡವೆ ಹಾಗೂ ಗುಳ್ಳೆಗಳು. ಆಂತರಿಕ ದೇಹದ ಉಷ್ಣತೆಯಿಂದ ಉಂಟಾಗುವ ಈ ಸಮಸ್ಯೆಗೆ ಮನೆಯ ಔಷಧ ವೆಂದರೆ ಅಲೋವೆರಾ. ಅಲೋವೆರಾ ಜೆಲ್ ಅನ್ನು ನಿತ್ಯವೂ ತ್ವಚೆಯ ಮೇಲೆ ಅನ್ವಯಿಸುತ್ತಾ ಬಂದರೆ ಮೊಡವೆಗಳು ಹಾಗೂ ಗುಳ್ಳೆಗಳು ಶಮನಗೊಳ್ಳುತ್ತವೆ. ಅಲ್ಲದೆ ತ್ವಚೆಯ ಮೇಲಿರುವ ಸತ್ತ ಕೋಶಗಳು ನಿರ್ಮೂಲನೆ ಹೊಂದಿ, ಕಲೆಮುಕ್ತ ತ್ವಚೆಯಾಗುತ್ತವೆ. ಅಲೋವೆರಾ ಜೆಲ್ ಬಳಕೆ ಮಾಡುವಾಗ ಅದು ತಾಜಾ ಅಲೋವೆರಾವೇ? ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

ತ್ವಚೆಯ ಎಲ್ಲಾ ಸಮಸ್ಯೆಗೆ ರಾಮಬಾಣ 'ಅಲೋವೆರಾ' ಫೇಸ್ ಮಾಸ್ಕ್

English summary

Home Remedies For All Common & Critical Skin Problems

Exactly how a headache or a cough and cold can be cured at home initially, there are skin problems too that can be treated at home at first. Some skin problems are very common among both men and women.
X
Desktop Bottom Promotion