For Quick Alerts
ALLOW NOTIFICATIONS  
For Daily Alerts

ಅಡುಗೆ ಮನೆಯ ಈ ಪುಟ್ಟ ಬೆಳ್ಳುಳ್ಳಿಯ ಸೌಂದರ್ಯ ರಹಸ್ಯ...

By Hemanth
|

ಬೆಳ್ಳುಳ್ಳಿ ಕಂಡರೆ ಹೆಚ್ಚಿನ ಮಹಿಳೆಯರಿಗೆ ಆಗಲ್ಲ, ಅದರ ಘಾಟು ವಾಸನೆ ಕಂಡು ದೂರ ಓಡಿ ಹೋಗುವ ಮಹಿಳೆಯರಿಗೆ ಇಲ್ಲೊಂದು ಒಳ್ಳೆಯ ಸುದ್ದಿಯಿದೆ. ಮಹಿಳೆಯರಿಗೂ ಇನ್ನು ಮುಂದೆ ಬೆಳ್ಳುಳ್ಳಿ ಮೇಲೆ ಪ್ರೀತಿ ಮೂಡಬಹುದು. ಹೌದು, ಬೆಳ್ಳುಳ್ಳಿಯಲ್ಲಿ ಇರುವಂತಹ ಹಲವಾರು ಆರೋಗ್ಯಕಾರಿ ಗುಣಗಳ ಬಗ್ಗೆ ಈಗಾಗಲೇ ಬೋಲ್ಡ್ ಸ್ಕೈಯಲ್ಲಿ ನೀವು ಓದಿ ತಿಳಿದಿರಬಹುದು. ಆದರೆ ಬೆಳ್ಳುಳ್ಳಿಯಲ್ಲಿ ಸೌಂದರ್ಯವರ್ಧಕ ಗುಣಗಳು ಕೂಡ ಇವೆ ಎನ್ನುವುದು ಮಾತ್ರ ನಿಮಗೆ ತಿಳಿದಿರಲಿಕ್ಕಿಲ್ಲ.

ಬೆಳ್ಳುಳ್ಳಿಯಲ್ಲಿ ಆ್ಯಂಟಿಆಕ್ಸಿಡೆಂಟ್, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣಗಳು ಇವೆ. ಈ ಗುಣಗಳಿಂದಾಗಿಯೇ ಬೆಳ್ಳುಳ್ಳಿಯು ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡಲಿದೆ. ಇದು ತ್ವಚೆ ಹಾಗೂ ಕೂದಲಿಗೆ ತುಂಬಾ ಒಳ್ಳೆಯದು. ನಿಯಮಿತವಾಗಿ ಬೆಳ್ಳುಳ್ಳಿ ಹಚ್ಚಿಕೊಂಡರೆ ತ್ವಚೆ ಹಾಗೂ ಕೂದಲು ಬದಲಾಗುವುದು.

ಬ್ಯೂಟಿ ಟಿಪ್ಸ್: ಬೆಳ್ಳುಳ್ಳಿ ಬಳಸಿ ನಿಮ್ಮ ಸೌಂದರ್ಯ ಹೆಚ್ಚಿಸಿ!

ತಜ್ಞರು ಕೂಡ ಈ ನೈಸರ್ಗಿಕ ಸಾಮಗ್ರಿಯನ್ನು ಸೌಂದರ್ಯವರ್ಧಕವಾಗಿ ಬಳಸಿಕೊಳ್ಳಬೇಕೆಂದು ಸಲಹೆ ನೀಡುತ್ತಿದ್ದಾರೆ. ಕ್ರೀಮ್ ಮತ್ತು ಇತರ ಕೆಲವೊಂದು ಸೌಂದರ್ಯವರ್ಧಕಗಳಿಗೆ ಹಣ ವ್ಯಯಿಸುವ ಬದಲು ಅಡುಗೆ ಮನೆಯಲ್ಲೇ ಸಿಗುವಂತಹ ಬೆಳ್ಳುಳ್ಳಿ ಬಳಸಿದರೆ ತುಂಬಾ ಒಳ್ಳೆಯದು. ತ್ವಚೆ ಹಾಗೂ ಕೂದಲು ನಿಮ್ಮ ಕನಸಿನಂತೆ ಇರಬೇಕೆಂದು ಬಯಸುವುದಾದರೆ ನೀವು ಬೆಳ್ಳುಳ್ಳಿಯನ್ನು ಸೌಂದರ್ಯವರ್ಧಕವಾಗಿ ಬಳಸಬೇಕು.
ಸೂಚನೆ: ಸೌಂದರ್ಯವರ್ಧಕವಾಗಿ ಬೆಳ್ಳುಳ್ಳಿ ಬಳಸಲು ಬಯಸುವವರು ತ್ವಚೆಗೆ ಮೊದಲು ಹಚ್ಚಿ ಪರೀಕ್ಷಿಸಿಕೊಳ್ಳಬೇಕು. ಕೆಲವರಿಗೆ ಬೆಳ್ಳುಳ್ಳಿಯು ಅಲರ್ಜಿ ಉಂಟು ಮಾಡಬಹುದು...

ಚರ್ಮದ ರಂಧ್ರಗಳನ್ನು ತೆರೆಯಲು

ಚರ್ಮದ ರಂಧ್ರಗಳನ್ನು ತೆರೆಯಲು

ಚರ್ಮದ ರಂಧ್ರಗಳು ಮುಚ್ಚಿಹೋದರೆ ಆಗ ಬಿಳಿ ಮೊಡವೆಗಳು ಹಾಗೂ ಬೊಕ್ಕೆಗಳು ಇತ್ಯಾದಿ ಕಾಣಿಸಿಕೊಳ್ಳುವುದು. ಇದರಿಂದ ಚರ್ಮದ ರಂಧ್ರಗಳನ್ನು ಸ್ವಚ್ಛ ಹಾಗೂ ಅದು ತುಂಬದಂತೆ ಇಟ್ಟುಕೊಳ್ಳುವುದು ಅಗತ್ಯ. ಈ ಸಂದರ್ಭದಲ್ಲಿ ಬೆಳ್ಳುಳ್ಳಿಯು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಇದರಲ್ಲಿ ಇರುವಂತಹ ಕಿತ್ತುಹಾಕುವ ಗುಣವು ಚರ್ಮದ ರಂಧ್ರವನ್ನು ತೆರೆಯುವುದು ಮತ್ತು ದೀರ್ಘ ಕಾಲ ತನಕ ಇದು ಸ್ವಚ್ಛವಾಗಿರುವಂತೆ ನೋಡಿಕೊಳ್ಳುವುದು.

ಮೊಡವೆಗಳ ನಿವಾರಣೆಗೆ

ಮೊಡವೆಗಳ ನಿವಾರಣೆಗೆ

ಫುಲ್ಲರ್ ಅರ್ಥ್ ಮಣ್ಣನ್ನು ತೆಗೆದುಕೊಳ್ಳಿ. ಅದಕ್ಕೆ ಬೆಳ್ಳುಳ್ಳಿ ಎಣ್ಣೆ ಮತ್ತು ರೋಸ್ ವಾಟರ್ ಹಾಕಿಕೊಂಡು ತೆಳುವಾದ ಪೇಸ್ಟ್ ಮಾಡಿಕೊಳ್ಳಿ. ಮುಖವನ್ನು ಚೆನ್ನಾಗಿ ತೊಳೆದುಕೊಂಡು ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಇದು ಸಂಪೂರ್ಣವಾಗಿ ಒಣಗಿದ ಬಳಿಕ ತಂಪಾದ ನೀರಿನಿಂದ ತೊಳೆಯಿರಿ. ಮೆತ್ತಗಿನ ಟವೆಲ್ ನಿಂದ ಮುಖ ಒರೆಸಿಕೊಳ್ಳಿ.

ಕಪ್ಪು ಕಲೆಗಳ ನಿವಾರಣೆ

ಕಪ್ಪು ಕಲೆಗಳ ನಿವಾರಣೆ

ಕಪ್ಪು ಕಲೆಗಳು ಹೆಚ್ಚಾಗಿ ಮೂಗು ಮತ್ತು ಗಲ್ಲದ ಭಾಗದಲ್ಲಿ ಕಾಣಿಸಿಕೊಳ್ಳುವುದು. ಆದರೆ ಇದು ಮೊಡವೆಗಳಂತೆ ಪದೇ ಪದೇ ಬರುವುದಿಲ್ಲ. ಮುಖದ ಮೇಲೆ ಕಪ್ಪು ಕಲೆಗಳೂ ಇದ್ದರೆ ಅದರಿಂದ ಚರ್ಮವು ಸ್ವಚ್ಛವಾಗಿರದಂತೆ ಹಾಗೂ ಕಲ್ಮಷ ತುಂಬಿರುವಂತೆ ಕಂಡುಬರುವುದು. ಬೆಳ್ಳುಳ್ಳಿಯಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಚರ್ಮದ ಮೇಲ್ಭಾಗವನ್ನು ತಲುಪಿ ಕಪ್ಪು ಕಲೆಗಳು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ನಾಶ ಮಾಡುವುದು. ಚರ್ಮವನ್ನು ಕಪ್ಪು ಕಲೆಗಳಿಂದ ದೂರ ಮಾಡಲು ನಿಯಮಿತವಾಗಿ ಬೆಳ್ಳುಳ್ಳಿ ಹಚ್ಚಿಕೊಂಡರೆ ಒಳ್ಳೆಯದು.

ವಯಸ್ಸಾಗುವ ಲಕ್ಷಣ ವಿಳಂಬಗೊಳಿಸುವುದು

ವಯಸ್ಸಾಗುವ ಲಕ್ಷಣ ವಿಳಂಬಗೊಳಿಸುವುದು

ನೆರಿಗೆ, ಚರ್ಮ ಜೋತು ಬೀಳುವುದು, ಗೆರೆಗಳು ಮೂಡುವುದು ಇವು ವಯಸ್ಸಾಗುತ್ತಿರುವ ಪ್ರಮುಖ ಲಕ್ಷಣಗಳಾಗಿವೆ. ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಬೆಳ್ಳುಳ್ಳಿಯನ್ನು ತ್ವಚೆಗೆ ಹಚ್ಚಿಕೊಂಡರೆ ವಯಸ್ಸಾಗುವ ಲಕ್ಷಣಗಳು ಬೇಗನೆ ಕಾಣಿಸದಂತೆ ಮಾಡಬಹುದು. ವಾರದಲ್ಲಿ ಒಂದು ಸಲ ಬೆಳ್ಳುಳ್ಳಿಯನ್ನು ನಿಮ್ಮ ತ್ವಚೆಯ ಆರೈಕೆಯಲ್ಲಿ ಬಳಸಿಕೊಂಡರೆ ಚರ್ಮವು ಯೌವನಭರಿತವಾಗಿ ಕಾಣುವುದು.

ಚರ್ಮ ಒತ್ತಿದ ಕಲೆಗಳ ತೆಗೆಯುವುದು

ಚರ್ಮ ಒತ್ತಿದ ಕಲೆಗಳ ತೆಗೆಯುವುದು

ಚರ್ಮದಲ್ಲಿ ಕಾಣಿಸಿಕೊಳ್ಳುವಂತಹ ಒತ್ತಿದ ಕಲೆಗಳನ್ನು ನಿವಾರಣೆ ಮಾಡಲು ಬೆಳ್ಳುಳ್ಳಿಯು ತುಂಬಾ ಪರಿಣಾಮಕಾರಿ. ಚರ್ಮದಲ್ಲಿ ಕಾಣಿಸುತ್ತಿರುವ ಹಳೆಯ ಒತ್ತಿದ ಗುರುತುಗಳನ್ನು ತಡೆಯುವ ಇದು ಮತ್ತೆ ಇದು ಆಗದಂತೆ ತಡೆಯುವುದು. ಬೆಳ್ಳುಳ್ಳಿಯನ್ನು ಕೆಲವು ನೈಸರ್ಗಿಕ ತೈಲದೊಂದಿಗೆ ಬಳಸಿಕೊಂಡರೆ ಈ ಗುರುತುಗಳನ್ನು ಬೇಗನೆ ನಿವಾರಣೆ ಮಾಡಬಹುದು. ಬಾಧಿತ ಪ್ರದೇಶಕ್ಕೆ ಎಣ್ಣೆಯಿಂದ ಮಸಾಜ್ ಮಾಡಿಕೊಂಡರೆ ಒಳ್ಳೆಯದು.

 ಕೂದಲು ಉದುರುವಿಕೆ ನಿವಾರಣೆ

ಕೂದಲು ಉದುರುವಿಕೆ ನಿವಾರಣೆ

ಕೂದಲು ಉದುರುವಿಕೆ ಎನ್ನುವುದು ಇಂದಿನ ದಿನಗಳಲ್ಲಿ ತುಂಬಾ ಸಾಮಾನ್ಯವಾಗಿರುವಂತಹ ಸಮಸ್ಯೆಯಾಗಿದೆ ಮತ್ತು 10ರಲ್ಲಿ 8 ಮಂದಿ ಇಂತಹ ಸಮಸ್ಯೆ ಎದುರಿಸುತ್ತಾ ಇದ್ದಾರೆ. ಬೆಳ್ಳುಳ್ಳಿ ಹಚ್ಚಿಕೊಳ್ಳುವುದರಿಂದ ಕೂದಲಿನ ಬುಡವನ್ನು ಭದ್ರಗೊಳಿಸಿ ತಲೆಬುರುಡೆಗೆ ಆರಾಮ ನೀಡುವುದು. ಕೂದಲು ತುಂಡಾಗುವುದನ್ನು ತಡೆಯುವುದು ಮಾತ್ರವಲ್ಲದೆ ಅದು ಬೆಳೆಯುವಂತೆ ಮಾಡುವುದು.

ತಲೆ ಹೊಟ್ಟಿನ ನಿವಾರಣೆ

ತಲೆ ಹೊಟ್ಟಿನ ನಿವಾರಣೆ

ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಹೊಂದಿರುವಂತಹ ಬೆಳ್ಳುಳ್ಳಿಯು ತಲೆಹೊಟ್ಟಿನ ಸಮಸ್ಯೆ ಇರುವಂತಹವರಿಗೆ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಇದನ್ನು ಹೊರತುಪಡಿಸಿ ತಲೆಬುರುಡೆಯ ತುರಿಕೆಯನ್ನು ನಿವಾರಣೆ ಮಾಡುವುದು. ಬೆಳ್ಳುಳ್ಳಿಯನ್ನು ಕೂದಲಿನ ಆರೈಕೆಯಲ್ಲಿ ಬಳಸಿಕೊಮಡರೆ ಅದರಿಂದ ಕಿರಿಕಿರಿ ಉಂಟುಮಾಡುವ ತಲೆಹೊಟ್ಟು ನಿವಾರಣೆ ಆಗುವುದು. ಇದು ಮತ್ತೆ ನಿಮಗೆ ಸಮಸ್ಯೆ ಉಂಟು ಮಾಡುವುದಿಲ್ಲ.

ಕೂದಲಿನ ಕೋಶಗಳ ಬಲಗೊಳಿಸುವುದು

ಕೂದಲಿನ ಕೋಶಗಳ ಬಲಗೊಳಿಸುವುದು

ವಿಟಮಿನ್ ಮತ್ತು ಕಬ್ಬಿನಾಂಶದಿಂದ ಸಮೃದ್ಧವಾಗಿರುವಂತಹ ಬೆಳ್ಳುಳ್ಳಿಯು ಕೂದಲಿನ ಬುಡವನ್ನು ಭದ್ರಗೊಳಿಸುವುದು. ಬೆಳ್ಳುಳ್ಳಿಯನ್ನು ಕೂದಲಿಗೆ ಬಳಸಿಕೊಂಡರೆ ಅದರಿಂದ ದುರ್ಬಲ ಕೂದಲು ಬಲಿಷ್ಠವಾಗುವುದು. ನೀವು ಬೆಳ್ಳುಳ್ಳಿಯನ್ನು ನೇರವಾಗಿ ಅಥವಾ ಆಲಿವ್ ತೈಲ ಅಥವಾ ಜೇನುತುಪ್ಪದೊಂದಿಗೆ ಸೇರಿಸಿ ಬಳಸಬಹುದು.

ತಲೆಬುರುಡೆಯಲ್ಲಿ ಕಿತ್ತುಹಾಕುವುದು

ತಲೆಬುರುಡೆಯಲ್ಲಿ ಕಿತ್ತುಹಾಕುವುದು

ತಲೆಬುರುಡೆಯಲ್ಲಿ ಕಿತ್ತುಹಾಕುವಂತಹ ಕೆಲಸವನ್ನು ಬೆಳ್ಳುಳ್ಳಿ ಮಾಡುವುದು. ಕೂದಲು ಮತ್ತು ತಲೆಬುರುಡೆಗೆ ಸಿಗುವಂತಹ ಪ್ರಮುಖ ಲಾಭ ಇದಾಗಿದೆ. ತಲೆಬುರುಡೆಯನ್ನು ಕಿತ್ತುಹಾಕಲು ಬೆಳ್ಳುಳ್ಳಿ ಬಳಸುವುದು ಹಿಂದಿನಿಂದಲೂ ಅನುಸರಿಸಿಕೊಂಡ ಬಂದ ವಿಧಾನ. ಈ ವಿಧಾನದಿಂದ ತಲೆಬುರುಡೆಯಲ್ಲಿರುವ ಕಲ್ಮಶ ಹಾಗೂ ಧೂಳನ್ನು ತೆಗೆದುಹಾಕುವುದು.

ಕೂದಲನ್ನು ದಪ್ಪಗೊಳಿಸುವುದು

ಕೂದಲನ್ನು ದಪ್ಪಗೊಳಿಸುವುದು

ನಿಮ್ಮ ಕೂದಲು ತುಂಬಾ ತೆಳುವಾಗಿದ್ದರೆ ಆಗ ಬೆಳ್ಳುಳ್ಳಿಯು ನಿಮ್ಮ ರಕ್ಷಣೆಗೆ ಬರುವುದು ಖಚಿತ. ಈ ಅಡುಗೆ ಮನೆಯ ಸಾಂಬಾರ ಪದಾರ್ಥ ಬಳಸುವುದರಿಂದ ಕೂದಲು ದಪ್ಪ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ. ಇತರ ಕೆಲವು ಮನೆಮದ್ದಿನೊಂದಿಗೆ ಬೆಳ್ಳುಳ್ಳಿ ಬಳಸಿಕೊಂಡರೆ ಆಗ ಕೂದಲಿನ ಸಮಸ್ಯೆ ನಿವಾರಣೆಯಾಗುವುದು.

English summary

Here's What Garlic Can Do To Your Skin and Hair

Garlic, a healthy herb is considered to be replete with powerful antioxidants, antibacterial agents and also anti-inflammatory properties. The same features of garlic, make it an incredible beauty ingredient that can benefit your skin and hair in ways you cannot possibly fathom. If you wish to get the skin and hair of your dreams then you must explore the remedial features of this miraculous herb. So, read on learn more about the amazing things that garlic can do for your skin and hair.
X
Desktop Bottom Promotion