For Quick Alerts
ALLOW NOTIFICATIONS  
For Daily Alerts

ಮುಖದ ತಾರುಣ್ಯ ಹೆಚ್ಚಿಸಲು ಮೊಟ್ಟೆಯ ಫೇಸ್ ಪ್ಯಾಕ್

By Arshad
|

ತಾರುಣ್ಯ ಕಳೆದ ಬಳಿಕ ತ್ವಚೆಯ ಸೆಳೆತ ಕಡಿಮೆಯಾಗುವುದು ವಯೋಸಹಜವಾಗಿದೆ. ಆದರೆ ಸೂಕ್ತ ಆರೈಕೆ ಇಲ್ಲದಿದ್ದರೆ ಈ ಸೆಳೆತ ಅಗತ್ಯಕ್ಕೂ ಹೆಚ್ಚೇ ಕಡಿಮೆಯಾಗಿ ಚರ್ಮ ಜೋಲು ಬೀಳುತ್ತದೆ ಹಾಗೂ ಸೌಂದರ್ಯವನ್ನೇ ಕಂದಿಸುತ್ತದೆ. ಚರ್ಮ ಜೋಲು ಬೀಳಲು ವಯಸ್ಸಿನ ಹೊರತಾಗಿಯೂ ಕೆಲವಾರು ಕಾರಣಗಳಿವೆ. ದೇಹದ ತೂಕ ಥಟ್ಟನೇ ಇಳಿಯುವುದು, ಚರ್ಮದಲ್ಲಿ ಕೊಲ್ಯಾಜೆನ್ ಹಾಗೂ ಎಲಾಸ್ಟಿನ್ ಪ್ರಮಾಣ ಇಳಿಯುವುದು ಮೊದಲಾದವು ಚರ್ಮ ಜೋಳುಬೀಳುವುದು, ನೀರು ತುಂಬಿಕೊಂಡತೆ ಊದಿಕೊಳ್ಳುವುದು ಮೊದಲಾದ ತೊಂದರೆ ಎದುರಾಗುತ್ತವೆ.

ಈ ಕೊರತೆಯನ್ನೇ ಎತ್ತಿ ತೋರಿಸಿ ಇದನ್ನು ಸರಿಪಡಿಸುತ್ತೇವೆ ಎಂದು ಹೇಳುವ ಮೂಲಕ ಭಾರೀ ಪ್ರಚಾರದೊಂದಿಗೆ ದುಬಾರಿ ಪ್ರಸಾಧನಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಇವುಗಳಲ್ಲಿ ಹೆಚ್ಚಿನವು ಹೇಳಿದ ಮಾತನ್ನು ಪೂರ್ಣಗೊಳಿಸದೇ ಕೇವಲ ಹಣವನ್ನು ಮಾತ್ರ ಪೋಲು ಮಾಡಿಸುತ್ತವೆ. ಈ ಪ್ರಸಾಧನಗಳ ಹೊರತಾಗಿ ಕೆಲವು ಸೌಂದರ್ಯವರ್ಧಕ ವಿಧಾನಗಳೂ ಚರ್ಮದ ಸೆಳೆತವನ್ನು ಹೆಚ್ಚಿಸುತ್ತವೆ ಎಂದು ಕೆಲವು ಸಂಸ್ಥೆಗಳು ಪ್ರಚಾರ ಮಾಡುತ್ತವೆ. ಆದರೆ ಈ ವಿಧಾನಗಳು ಕೊಂಚ ಮಟ್ಟಿಗೆ ಪರಿಣಾಮಕಾರಿಯಾಗಿದ್ದರೂ ಇವು ದುಬಾರಿಯೇ ಆಗಿವೆ...

ಕಾಂತಿಯುಕ್ತ ತ್ವಚೆಗೆ ಮೊಟ್ಟೆಯ ಬಿಳಿ ಲೋಳೆಯ ಫೇಸ್ ಮಾಸ್ಕ್

ಒಂದು ವೇಳೆ ಈ ಜಾಹೀರಾತುಗಳಿಗೆ ಮರುಳಾಗಿ ಸಾವಿರಾರು ರೂಪಾಯಿಗಳನ್ನು ಈಗಾಗಲೇ ಪೋಲು ಮಾಡಿರುವ ಮಹಿಳೆಯರ ಪಟ್ಟಿಯಲ್ಲಿ ನೀವೂ ಒಬ್ಬರಾಗಿದ್ದರೆ ಹಾಗೂ ಈಗ ಚರ್ಮದ ಸೆಳೆತ ಹೆಚ್ಚಿಸಲು ನೈಸರ್ಗಿಕ ವಿಧಾನವನ್ನು ಅನುಸರಿಸ ಬಯಸಿದರೆ ಇಂದಿನ ಲೇಖನ ನಿಮಗಾಗಿಯೇ ಇದೆ. ತ್ವಚೆಗೆ ನೈಸರ್ಗಿಕ ಸೆಳೆತ ಹಾಗೂ ತನ್ಮೂಲಕ ನೈಸರ್ಗಿಕ ಕಾಂತಿ ಹೆಚ್ಚಿಸಲು ನಿಸರ್ಗ ನೀಡಿರುವ ಕೆಲವು ಸಾಮಾಗ್ರಿಗಳು ಉತ್ತಮ ಆಯ್ಕೆಯಾಗಿದೆ. ಇದಕ್ಕೆ ಪ್ರಮುಖವಾಗಿ ಬೇಕಾಗಿರುವುದೆಂದರೆ ಮೊಟ್ಟೆಯ ಬಿಳಿಭಾಗ. ಇದರಲ್ಲಿ ಹೆಚ್ಚಿರುವ ಪ್ರಬಲ ಆಂಟಿ ಆಕ್ಸಿಡೆಂಟುಗಳು, ಪ್ರೋಟೀನ್ ಹಾಗೂ ವಿಟಮಿನ್ ಬಿ6 ಚರ್ಮದ ಆಳಕ್ಕೆ ಇಳಿದು ಅತ್ಯಂತ ಸೂಕ್ಷ್ಮಪ್ರಮಾಣದಲ್ಲಿ ಚರ್ಮದ ಜೀವಕೋಶಗಳಿಗೆ ಪೋಷಣೆ ನೀಡುವ ಮೂಲಕ ಸೆಳೆತವನ್ನು ಹೆಚ್ಚಿಸುತ್ತದೆ. ಇದನ್ನು ಬಳಸಲು ಕೆಲವಾರು ವಿಧಾನಗಳಿದ್ದು ನಿಮಗೆ ಅತಿ ಸೂಕ್ತವಾದುದನ್ನು ಆರಿಸಿಕೊಳ್ಳುವ ಮೂಲಕ ನೈಸರ್ಗಿಕ ಪೋಷಣೆ ಹಾಗೂ ಆರೋಗ್ಯಕರ ತ್ವಚೆಯನ್ನು ಪಡೆಯಬಹುದು...

ಮೊಟ್ಟೆಯ ಬಿಳಿಭಾಗ + ಲಿಂಬೆ

ಮೊಟ್ಟೆಯ ಬಿಳಿಭಾಗ + ಲಿಂಬೆ

*ಒಂದು ಚಿಕ್ಕ ಬೋಗುಣಿಯಲ್ಲಿ ಒಂದು ಮೊಟ್ಟೆಯ ಬಿಳಿಭಾಗ ಹಾಗೂ ಎರಡು ದೊಡ್ಡ ಚಮಚ ಲಿಂಬೆರಸವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.

*ಈ ಮಿಶ್ರಣವನ್ನು ಈಗತಾನೇ ತೊಳೆದುಕೊಂಡಿದ್ದ ತ್ವಚೆಯ ಮೇಲೆ ತೆಳ್ಳನೆ ಹಚ್ಚಿ ಸುಮಾರು ಐದರಿಂದ ಹತ್ತು ನಿಮಿಷ ಒಣಗಲು ಬಿಡಿ.

*ಈ ಪದರ ಒಣಗಿದ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಸೋಪು ಬಳಸದಿರಿ.

*ಈ ವಿಧಾನವನ್ನು ವಾರಕ್ಕೆರಡು ಬಾರಿ ಅನುಸರಿಸುವ ಮೂಲಕ ಶೀಘ್ರವೇ ನವತಾರುಣ್ಯದ ತ್ವಚೆಯನ್ನು ಪಡೆಯಬಹುದು.

ಮೊಟ್ಟೆಯ ಬಿಳಿಭಾಗ + ಓಟ್ಸ್ ರವೆ

ಮೊಟ್ಟೆಯ ಬಿಳಿಭಾಗ + ಓಟ್ಸ್ ರವೆ

*ಒಂದು ಚಿಕ್ಕ ಬೋಗುಣಿಯಲ್ಲಿ ಒಂದು ಮೊಟ್ಟೆಯ ಬಿಳಿಭಾಗ ಹಾಗೂ ಎರಡು ಚಿಕ್ಕ ಚಮಚ ಓಟ್ಸ್ ರವೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

*ಈ ಮಿಶ್ರಣವನ್ನು ಈಗತಾನೇ ತೊಳೆದುಕೊಂಡಿದ್ದ ತ್ವಚೆಯ ಮೇಲೆ ತೆಳ್ಳನೆ ಹಚ್ಚಿ ಸುಮಾರು ಹತ್ತು ನಿಮಿಷಗಳ ಕಾಲ ಒಣಗಲು ಬಿಡಿ.

*ಬಳಿಕ ಒದ್ದೆಯಾಗಿಸಿದ ದಪ್ಪನೆಯ ಟವೆಲ್ ಒಂದನ್ನು ಬಳಸಿ ಒರೆಸಿಕೊಳ್ಳಿ. ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಬಳಸಬೇಡಿ.

*ಈ ವಿಧಾನವನ್ನು ವಾರಕ್ಕೆರಡು ಬಾರಿ ಅನುಸರಿಸುವ ಮೂಲಕ ಸೆಳೆತ ಹೆಚ್ಚಿಸುವ ತ್ವಚೆಯನ್ನು ಪಡೆಯಿರಿ.

ಮೊಟ್ಟೆಯ ಬಿಳಿಭಾಗ + ಗುಲಾಬಿ ನೀರು

ಮೊಟ್ಟೆಯ ಬಿಳಿಭಾಗ + ಗುಲಾಬಿ ನೀರು

*ಒಂದು ಚಿಕ್ಕ ಬೋಗುಣಿಯಲ್ಲಿ ಒಂದು ಮೊಟ್ಟೆಯ ಬಿಳಿಭಾಗ ಹಾಗೂ ½ ಚಿಕ್ಕಚಮಚ ಕಾರ್ನ್ ಸ್ಟಾರ್ಚ್ (ಮೆಕ್ಕೆಜೋಳದ ಹಿಟ್ಟು) ಮತ್ತು ಒಂದು ಚಿಕ್ಕ ಚಮಚ ಗುಲಾಬಿ ನೀರು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.

*ಈ ಲೇಪನವನ್ನು ಈಗತಾನೇ ತೊಳೆದುಕೊಂಡಿದ್ದ ತ್ವಚೆಯ ಮೇಲೆ ತೆಳ್ಳನೆ ಹಚ್ಚಿ ಸುಮಾರು ಹತ್ತು ನಿಮಿಷ ಒಣಗಲು ಬಿಡಿ. ಬಳಿಕ ಉಗುರು ಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

*ಈ ವಿಧಾನವನ್ನು ತಿಂಗಳಿಗೊಂದು ಬಾರಿ ಅನುಸರಿಸುವ ಮೂಲಕ ಅಪೇಕ್ಷಿತ ಪರಿಣಾಮವನ್ನು ಪಡೆಯಬಹುದು.

ಮೊಟ್ಟೆಯ ಬಿಳಿಭಾಗ + ಜೇನು

ಮೊಟ್ಟೆಯ ಬಿಳಿಭಾಗ + ಜೇನು

*ಒಂದು ಚಿಕ್ಕ ಬೋಗುಣಿಯಲ್ಲಿ ಒಂದು ಮೊಟ್ಟೆಯ ಬಿಳಿಭಾಗ ಹಾಗೂ ಒಂದು ದೊಡ್ಡ ಚಮಚ ಜೇನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.

*ಬಳಿಕ ಈ ಲೇಪನವನ್ನು ಈಗತಾನೇ ತೊಳೆದುಕೊಂಡಿದ್ದ ತ್ವಚೆಯ ಮೇಲೆ ತೆಳ್ಳನೆ ಹಚ್ಚಿ ಸುಮಾರು ಹತ್ತರಿಂದ ಹದಿನೈದು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

*ಈ ವಿಧಾನವನ್ನು ವಾರಕ್ಕೊಂದು ಬಾರಿ ಅನುಸರಿಸಿ, ಶೀಘ್ರವೇ ತ್ವಚೆಯ ಸೆಳೆತ ಹೆಚ್ಚಿಸಿ.

ಮೊಟ್ಟೆಯ ಬಿಳಿಭಾಗ + ಅಕ್ಕಿ ಹಿಟ್ಟು

ಮೊಟ್ಟೆಯ ಬಿಳಿಭಾಗ + ಅಕ್ಕಿ ಹಿಟ್ಟು

*ಒಂದು ಚಿಕ್ಕ ಬೋಗುಣಿಯಲ್ಲಿ ಒಂದು ಮೊಟ್ಟೆಯ ಬಿಳಿಭಾಗ ಹಾಗೂ ಎರಡು ದೊಡ್ಡ ಚಮಚ ಅಕ್ಕಿಹಿಟ್ಟನ್ನು ಬೆರೆಸಿ ಮಿಶ್ರಣ ಮಾಡಿ.

*ಈ ಮಿಶ್ರಣವನ್ನು ಈಗತಾನೇ ತೊಳೆದುಕೊಂಡಿದ್ದ ತ್ವಚೆಯ ಮೇಲೆ ದಪ್ಪನಾಗಿ ಹಚ್ಚಿ ಸುಮಾರು ಹದಿನೈದು ನಿಮಿಷ ಒಣಗಲು ಬಿಡಿ.

*ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

*ಈ ವಿಧಾನವನ್ನು ವಾರಕ್ಕೆರಡು ಬಾರಿ ಅನುಸರಿಸುವ ಮೂಲಕ ಕೋಮಲ ಹಾಗೂ ಸೆಳೆತ ಹೆಚ್ಚಿರುವ ತ್ವಚೆಯನ್ನು ಪಡೆಯಬಹುದು.

ಮೊಟ್ಟೆಯ ಬಿಳಿಭಾಗ + ಮೊಸರು

ಮೊಟ್ಟೆಯ ಬಿಳಿಭಾಗ + ಮೊಸರು

*ಒಂದು ಚಿಕ್ಕ ಬೋಗುಣಿಯಲ್ಲಿ ಒಂದು ಮೊಟ್ಟೆಯ ಬಿಳಿಭಾಗ ಹಾಗೂ ಎರಡು ದೊಡ್ಡ ಚಮಚ ಮೊಸರನ್ನು ಚೆನ್ನಾಗಿ ಮಿಶ್ರಣ ಮಾಡಿ.

*ಈ ಮಿಶ್ರಣವನ್ನು ಈಗತಾನೇ ತೊಳೆದುಕೊಂಡಿದ್ದ ತ್ವಚೆಯ ಮೇಲೆ ದಪ್ಪನಾಗಿ ಹಚ್ಚಿ ಸುಮಾರು ಹತ್ತು ನಿಮಿಷ ಒಣಗಲು ಬಿಡಿ.

*ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

*ಈ ವಿಧಾನವನ್ನು ವಾರಕ್ಕೊಂದು ಬಾರಿ ಅನುಸರಿಸಿ, ಶೀಘ್ರವೇ ಕೋಮಲ, ಕಲೆರಹಿತ ಹಾಗೂ ಉತ್ತಮ ಸೆಳೆತದ ತ್ವಚೆಯನ್ನು ಪಡೆಯಿರಿ.

 ಮೊಟ್ಟೆಯ ಬಿಳಿಭಾಗ + ಸೇಬಿನ ತಿರುಳು

ಮೊಟ್ಟೆಯ ಬಿಳಿಭಾಗ + ಸೇಬಿನ ತಿರುಳು

*ಒಂದು ಚಿಕ್ಕ ಬೋಗುಣಿಯಲ್ಲಿ ಒಂದು ಮೊಟ್ಟೆಯ ಬಿಳಿಭಾಗ ಹಾಗೂ ಎರಡು ದೊಡ್ಡ ಚಮಚ ಸೇಬಿನ ತಿರುಳನ್ನು ಚೆನ್ನಾಗಿ ಮಿಶ್ರಣ ಮಾಡಿ.

*ಈ ಮಿಶ್ರಣವನ್ನು ಈಗತಾನೇ ತೊಳೆದುಕೊಂಡಿದ್ದ ತ್ವಚೆಯ ಮೇಲೆ ದಪ್ಪನಾಗಿ ಹಚ್ಚಿ ಸುಮಾರು ಇಪ್ಪತ್ತು ನಿಮಿಷ ಒಣಗಲು ಬಿಡಿ.

*ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

*ಈ ವಿಧಾನವನ್ನು ತಿಂಗಳಿಗೆ ಎರಡು ಬಾರಿ ಅನುಸರಿಸುವ ಮೂಲಕ ಶೀಘ್ರವೇ ತ್ವಚೆಯ ಸೆಳೆತ ಹೆಚ್ಚಿಸಬಹುದು.

ಮೊಟ್ಟೆಯ ಬಿಳಿಭಾಗ + ಗ್ಲಿಸರಿನ್

ಮೊಟ್ಟೆಯ ಬಿಳಿಭಾಗ + ಗ್ಲಿಸರಿನ್

*ಒಂದು ಚಿಕ್ಕ ಬೋಗುಣಿಯಲ್ಲಿ ಒಂದು ಮೊಟ್ಟೆಯ ಬಿಳಿಭಾಗ ಹಾಗೂ ಒಂದು ಚಿಕ್ಕ ಚಮಚ ಗ್ಲಿಸರಿನ್ ದ್ರವವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.

*ಈ ಮಿಶ್ರಣವನ್ನು ಗತಾನೇ ತೊಳೆದುಕೊಂಡಿದ್ದ ತ್ವಚೆಯ ಮೇಲೆ ದಪ್ಪನಾಗಿ ಹಚ್ಚಿ ಸುಮಾರು ಇಪ್ಪತ್ತು ನಿಮಿಷ ಒಣಗಲು ಬಿಡಿ.

*ಬಳಿಕ ಸೌಮ್ಯ ಕ್ಲೀನ್ಸರ್ ದ್ರಾವಣ ಹಾಗೂ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

*ಈ ವಿಧಾನವನ್ನು ತಿಂಗಳಿಗೆ ಒಂದು ಬಾರಿ ಅನುಸರಿಸುವ ಮೂಲಕ ಶೀಘ್ರವೇ ನವತಾರುಣ್ಯದ ತ್ವಚೆಯನ್ನು ಪಡೆಯಬಹುದು.

English summary

Here’s How You Should Use Egg White To Tighten Your Skin

There are scores of commercial skin care items that claim to possess skin-tightening properties; however, a majority of them do not live up to the hype. Apart from that, there are cosmetic procedures that can be opted for to attain tighter skin. But, as you can imagine, going for such treatments can burn a hole in your wallet. If like thousands of women, you too are plagued with this skin-related problem and wish to treat it with the help of natural ingredients, then today's post is perfect for you.
X
Desktop Bottom Promotion