For Quick Alerts
ALLOW NOTIFICATIONS  
For Daily Alerts

ಇಂತಹ ಟಿಪ್ಸ್ ಅನುಸರಿಸಿದರೆ, ಇನ್ನಷ್ಟು ಮುದ್ದಾಗಿ ಕಾಣುವಿರಿ!

By Arshad
|

ಮುಖದಲ್ಲಿ ಕಲೆ, ಮೊಡವೆ, ಬ್ಲ್ಯಾಕ್ ಹೆಡ್ ಮೊದಲಾದವು ಇಲ್ಲದ ಸುಂದರ ತ್ವಚೆಯ ತರುಣಿಯರನ್ನು ಕಂಡಾಗ ಸಂತೋಷದೊಂದಿಗೆ ಕೊಂಚ ಅಸೂಯೆಯೂ ಆಗುವುದು ಸಹಜ. ಏಕೆಂದರೆ ಅಸೂಯೆ ಪಡುವವರ ಮುಖದಲ್ಲಿ ಇವುಗಳಲ್ಲೊಂದಾದರೂ ತೊಂದರೆ ಇದ್ದೇ ಇರುತ್ತದೆ. ಮೂಗಿನ ಮೇಲೆ ಗೋಚರಿಸುವ ಕಪ್ಪು ಚುಕ್ಕೆ ನಿವಾರಣೆಗೆ ಸೂಕ್ತ ಸಲಹೆ

ವಾಸ್ತವವಾಗಿ ಅಸೂಯೆಪಡುವುದಕ್ಕಿಂತಲೂ ಅವರು ಅನುಸರಿಸುವ ಕೆಲವು ಅಭ್ಯಾಸಗಳನ್ನು ಅನುಸರಿಸಿದರೆ ತ್ವಚೆ ಕಲೆರಹಿತವಾಗುವ ಮೂಲಕ ಅಸೂಯೆಗೆ ಸ್ಥಳವೇ ಇಲ್ಲವಾಗುತ್ತದೆ. ಸಾಮಾನ್ಯವಾಗಿ ಕಲೆರಹಿತ ಚರ್ಮ ಅನುವಂಶಿಕವಾಗಿ ಬಂದಿರುತ್ತದೆ. ಅಂತೆಯೇ ಮೊಡವೆಗಳು ಸಹಾ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಮೊಡವೆಗಳನ್ನು ಚಿವುಟುವ ಮೊದಲಾದ ಅಭ್ಯಾಸಗಳ ಮೂಲಕವೇ ಈ ಕಲೆಗಳು ಬಂದಿದ್ದು ಈ ಅಭ್ಯಾಸಗಳನ್ನು ಅನುಸರಿಸದೇ ಆರೋಗ್ಯಕರ ಅಭ್ಯಾಸಗಳನ್ನು ಅನುಸರಿಸುವ ಮೂಲಕ ಕಲೆಯಿಲ್ಲದ, ಕಾಂತಿಯುಕ್ತ ಮತ್ತು ಆರೋಗ್ಯಕರ ತ್ವಚೆಯನ್ನು ಯಾರೂ ಪಡೆಯಬಹುದು.

ಇಂದಿನ ದಿನಗಳಲ್ಲಿ ಗಾಳಿಯಲ್ಲಿ ತುಂಬಿದ ಪ್ರದೂಷಣೆ ಮತ್ತು ಇತರ ಕಣಗಳು ಚರ್ಮದಲ್ಲಿ ಮೊಡವೆ ಕಲೆಗಳುಂಟಾಗಲು ಕಾರಣವಾಗುತ್ತವೆ. ಈ ಕಣಗಳು ಅನುವಂಶಿಕವಾಗಿ ಕಲೆಯಿಲ್ಲದ ಚರ್ಮ ಹೊಂದಿರುವವರಿಗೂ ಬಾಧಿಸಬಹುದು. ಅಲ್ಲದೇ ಕೊಬ್ಬಿನ ಆಹಾರ ಸೇವನೆ, ಭಾವನೆಗಳನ್ನು ನಿಯಂತ್ರಿಸದೇ ಹೋಗುವುದು, ಮಾನಸಿಕ ಒತ್ತಡ, ದೇಹದಲ್ಲಿ ಸ್ರವಿಸುವ ಹಾರ್ಮೋನುಗಳ ಪ್ರಭಾವ ಮೊದಲಾದವೂ ತ್ವಚೆಯ ಮೇಲೆ ಗಾಢವಾದ ಪರಿಣಾಮ ಬೀರುತ್ತವೆ. ತ್ವಚೆಯ ಸೌಂದರ್ಯಕ್ಕೆ ಕ್ರೀಂ, ಪೌಡರ್ ಏತಕ್ಕೆ ಬೇಕು?

ಆದರೆ ನಾವು ನಮಗರಿವಿಲ್ಲದೇ ಅನುಸರಿಸುವ ಕೆಲವು ಅಭ್ಯಾಸಗಳೂ ಇದಕ್ಕೆ ಪ್ರತ್ಯಕ್ಷವಾಗಿ ಕಾರಣವಾಗುತ್ತವೆ. ಬನ್ನಿ, ಈ ಅಭ್ಯಾಸಗಳು ಯಾವುವು ಎಂಬುದನ್ನು ಕಂಡುಕೊಂಡು ಕಲೆರಹಿತ ತ್ವಚೆಯನ್ನು ಪಡೆಯೋಣ...

ತ್ವಚೆಯ ಆರೈಕೆಯ ದಿನಚರಿ

ತ್ವಚೆಯ ಆರೈಕೆಯ ದಿನಚರಿ

ಕಲೆರಹಿತ ತ್ವಚೆಯುಳ್ಳ ತರುಣಿಯರ ದಿನಚರಿಯನ್ನು ಕೊಂಚ ಅವಲೋಕಿಸಿದರೆ ಇವರೆಲ್ಲರೂ ತಮ್ಮ ದಿನಚರಿಯಲ್ಲಿ ಸ್ವಚ್ಛತೆ ಮತ್ತು ಸೂಕ್ತವಾದ ಆರೈಕೆಯಲ್ಲಿ ಕಟ್ಟುನಿಟ್ಟಿನ ನಿಯಮವನ್ನು ಪಾಲಿಸುವುದು ಕಂಡುಬರುತ್ತದೆ. ಈ ನಿಯಮಗಳಲ್ಲಿ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳುವುದು, ದಿನಕ್ಕೆರಡು ಬಾರಿ, ಬೆಳಿಗ್ಗೆದ್ದ ಬಳಿಕ ಮತ್ತು ರಾತ್ರಿ ಮಲಗುವ ಮುನ್ನ ಟೋನಿಂಗ್ ಮತ್ತು ಮಾಯಿಶ್ಚರೈಸಿಂಗ್

ಮಾಡಿಕೊಳ್ಳುವುದು ಪ್ರಮುಖವಾಗಿ ಕಂಡುಬರುತ್ತದೆ.

ಆಹಾರ ಕ್ರಮ

ಆಹಾರ ಕ್ರಮ

ನಾವೆಲ್ಲಾ ಸುಂದರವಾಗಿ ಕಂಡರೆ ಸಾಕು, ಅನಾರೋಗ್ಯಕರವಾಗಿದ್ದರೂ ಸೇವಿಸುವ ಹಲವಾರು ಆಹಾರಗಳು ನಮ್ಮ ಸೌಂದರ್ಯವನ್ನು ಕುಂದಿಸುತ್ತವೆ. ವಿಶೇಷವಾಗಿ ಹುರಿದ, ಎಣ್ಣೆಯ ಮತ್ತು ಅತಿಹೆಚ್ಚಿನ ಸಕ್ಕರೆಯ ಪ್ರಮಾಣವಿರುವ ಆಹಾರಗಳು ಮೊಡವೆಗಳಿಗೆ ನೇರವಾಗಿ ಕಾರಣವಾಗುತ್ತವೆ. ಅಲ್ಲದೇ ವಿಶೇಷವಾಗಿ ಮಾಸಿಕ ದಿನಗಳು ಹತ್ತಿರ ಬರುತ್ತಿದ್ದ ದಿನಗಳಲ್ಲಿ ಈ ಆಹಾರಗಳನ್ನು ಸೇವಿಸಿದರೆ ಮೊಡವೆಗಳು ಹೆಚ್ಚುವ ಸಾಧ್ಯತೆ ನೂರು ಪಟ್ಟು ಹೆಚ್ಚುತ್ತದೆ.

ಮೊಡವೆಗಳಿಗೆ ತಕ್ಷಣ ಮತ್ತು ಸೂಕ್ತ ಆರೈಕೆ

ಮೊಡವೆಗಳಿಗೆ ತಕ್ಷಣ ಮತ್ತು ಸೂಕ್ತ ಆರೈಕೆ

ಮೊಡವೆಗಳು ಕಾಡದ ತರುಣಿಯರೇ ಇಲ್ಲವೆಂದು ಹೇಳಬಹುದು. ಆದರೆ ಮೊಡವೆಗಳು ಮೂಡುವ ಹಂತದಲ್ಲಿರುವಾಗಲೇ ತಡಮಾಡದೇ ತಕ್ಷಣವೇ ಸೂಕ್ತ ಆರೈಕೆ ಪಡೆಯಬೇಕು. ಇದಕ್ಕಾಗಿ ಟೀ ಟ್ರೀ ಎಣ್ಣೆ, ಕ್ಯಾಲಮೈನ್ ಸೊಲ್ಯೂಶನ್, ಅಡಿಗೆ ಸೋಡಾ ಮೊದಲಾದವುಗಳಲ್ಲಿ ನಿಮಗೆ ಸೂಕ್ತವಾದ ವಿಧಾನವನ್ನು ಅನುಸರಿಸಬೇಕು. ತಡಮಾಡಿದಷ್ಟೂ ಮೊಡವೆ ದೊಡ್ಡದಾಗುತ್ತಾ ಬಳಿಕ ಒಡೆದು ಕಲೆಯಾಗುವ ಸಾಧ್ಯತೆ ಹೆಚ್ಚುತ್ತದೆ. ಮನೆಮದ್ದಿನ ಮಾಯಾ ಜಾದೂಗೆ ಮೊಡವೆ ಮಂಗಮಾಯ!

ಚರ್ಮದ ಆರೈಕೆಗೆ ಸಮಯ ನೀಡುವುದು

ಚರ್ಮದ ಆರೈಕೆಗೆ ಸಮಯ ನೀಡುವುದು

ಇಂದಿನ ದಿನಗಳಲ್ಲಿ ಯಾರಿಗೂ ಸಮಯವಿಲ್ಲ. ಆದರೆ ಸುಂದರ ಚರ್ಮ ಬೇಕೆಂದರೆ ಇದಕ್ಕೆ ಸಾಕಷ್ಟು ಕಾಲಾವಕಾಶ ನೀಡುವುದು ಅಗತ್ಯ. ವಾರಕ್ಕೊಮ್ಮೆ ಮುಖಕ್ಕೆ ಮುಖಲೇಪದ ಆರೈಕೆಯ ಜೊತೆಗೇ ನಿತ್ಯವೂ ಅಗತ್ಯವಿರುವ ಆರೈಕೆಯನ್ನು ಮಾಡಲೇಬೇಕು. ಇದರಿಂದ ಚರ್ಮಕ್ಕೆ ಸಾಕಷ್ಟು ಆರಾಮ

ದೊರೆತು ಆರೋಗ್ಯಕರವಾಗಿರುತ್ತದೆ. ಆಲೂಗಡ್ಡೆ ಫೇಸ್ ಪ್ಯಾಕ್-ಬರೀ ಒಂದೇ ತಿಂಗಳಲ್ಲಿ ರಿಸಲ್ಟ್!

ಸಾಕಷ್ಟು ನೀರು ಕುಡಿಯುವುದು

ಸಾಕಷ್ಟು ನೀರು ಕುಡಿಯುವುದು

ದಿನವಿಡೀ ಸತತವಾಗಿ ಸಾಕಷ್ಟು ನೀರು ಕುಡಿಯುತ್ತಿರಬೇಕು. ದಿನಕ್ಕೆ ಎಂಟು ಲೋಟಗಳಷ್ಟು ಸಾದಾ ನೀರನ್ನು ಅಥವಾ ಕನಿಷ್ಠ ಒಂದು ಲೀಟರ್ ನೀರನ್ನಾದರೂ ಕುಡಿಯಬೇಕು. ಇದರಿಂದ ದೇಹದಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳು ಹೊರಹೋಗಲು ಸಾಧ್ಯವಾಗುತ್ತದೆ. ಚರ್ಮದ ಸೂಕ್ಷ್ಮರಂಧ್ರಗಳಿಂದ ಕಲ್ಮಶ ಹೊರಹೋಗಲು ಸಾಧ್ಯವಾಗುವ ಮೂಲಕ ಕಲೆಯಿಲ್ಲದ ಮತ್ತು ಸೌಮ್ಯವಾದ ತ್ವಚೆ ಪಡೆಯಲು ಸಾಧ್ಯವಾಗುತ್ತದೆ.

English summary

Habits That Can Actually Give You Clear Skin

We have all seen girls who have gorgeous, clear skin and been so so jealous, haven't we. Well, there are certain habits that can give you clear skin, if you follow them religiously. Sometimes, a lot of girls are genetically blessed with super clear skin. At other times, they just follow a strict skincare regime that takes care of it for them. Honestly, even women who have really good skin genetically can end up having breakouts.
X
Desktop Bottom Promotion