ಚಳಿಗಾಲದಲ್ಲಿ ಶುಷ್ಕ ತ್ವಚೆಯ ಆರೈಕೆಯನ್ನು ಈ ಹಣ್ಣುಗಳಿಂದ ಮಾಡಿ...

By: Divya Pandith
Subscribe to Boldsky

ಚಳಿಗಾಲ ಎಂದರೆ ಸಾಮಾನ್ಯವಾಗಿ ತೇವಾಂಶದ ಕೊರತೆಯಿಂದ ಗಾಳಿಯಲ್ಲಿ ಶುಷ್ಕತೆ ಇರುತ್ತದೆ. ಇದರ ಪರಿಣಾಮವು ನಮ್ಮ ಚರ್ಮದ ಮೇಲೆ ಗಣನೀಯವಾದ ಪ್ರಭಾವ ಉಂಟಾಗುತ್ತದೆ. ಚರ್ಮವು ಬಿರಿಯುವುದು, ತುರಿಕೆ, ಉರಿ, ಗಾಯ ಹಾಗೂ ನೀರಿನ ಗುಳ್ಳೆ ಸೇರಿದಂತೆ ಅನೇಕ ಸಮಸ್ಯೆಗಳು ಉಂಟಾಗುತ್ತದೆ. ಹಾಗಾಗಿ ಅಂತಹ ಸಮಯದಲ್ಲಿ ನಮ್ಮ ಚರ್ಮವು ಹೆಚ್ಚು ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳಬೇಕು. ಆಗ ಚರ್ಮದ ಮೇಲೆ ಉಂಟಾಗುವ ಅನೇಕ ಸಮಸ್ಯೆಗಳನ್ನು ದೂರ ಇಡಬಹುದು.

ನಮ್ಮ ಚರ್ಮದ ಆರೈಕೆಯ ವಿಧಾನದಲ್ಲಿ ನೈಸರ್ಗಿಕ ಹಣ್ಣುಗಳು ಅತ್ಯುತ್ತಮವಾದ ಸಹಕಾರವನ್ನು ನೀಡುತ್ತವೆ. ಈ ಹಣ್ಣುಗಳಲ್ಲಿ ಚರ್ಮವನ್ನು ಪೋಷಿಸುವಂತಹ ಅನೇಕ ಆರೋಗ್ಯಕರ ಗುಣಗಳನ್ನು ಒಳಗೊಂಡಿರುತ್ತವೆ. ಇವುಗಳಲ್ಲಿರುವ ರೋಗನಿರೋಧಕ ಶಕ್ತಿ ಹಾಗೂ ಪ್ರೋಟೀನ್‍ಗಳು ಚರ್ಮದಲ್ಲಿ ಹೈಡ್ರೀಕರಿಸುತ್ತದೆ ಅಥವಾ ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ.

ಹಾಗಾಗಿ ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಚರ್ಮದ ಸಮಸ್ಯೆಗಳಿಂದ ಪಾರಾಗಬಹುದು. ನೀವು ಈ ಚಳಿಗಾಲದಲ್ಲಿ ಚರ್ಮದ ಸಮಸ್ಯೆಯಿಂದ ಮುಕ್ತರಾಗಬೇಕು ಎಂದುಕೊಂಡಿದ್ದೀರಾ? ಹಾಗಾದರೆ ಈ ಮುಂದೆ ನೀಡಿರುವ ವಿವರಣೆಯನ್ನು ಪರಿಶೀಲಿಸಿ. ಯಾವ ಹಣ್ಣುಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಬಲ್ಲವು? ಚರ್ಮದಲ್ಲಿ ಯಾವೆಲ್ಲಾ ಬದಲಾವಣೆಯನ್ನು ಕಾಣಬಹುದು ಎನ್ನುವುದನ್ನು ತಿಳಿಯಿರಿ...  

ದಾಳಿಂಬೆ ಹಣ್ಣಿನ ಫೇಸ್ ಪ್ಯಾಕ್

ದಾಳಿಂಬೆ ಹಣ್ಣಿನ ಫೇಸ್ ಪ್ಯಾಕ್

ಒಂದು ಬೌಲ್‍ನಲ್ಲಿ 1 ಟೀ ಚಮಚ ದಳಿಂಬೆ ಹಣ್ಣಿನ ರಸಕ್ಕೆ 1/2 ಟೀ ಚಮಚ ಕಡ್ಲೆ ಹಿಟ್ಟನ್ನು ಸೇರಿಸಿ.

ಈ ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, 10 ನಿಮಿಷಗಳಕಾಲ ಆರಲು ಬಿಡಿ.

ಬೆಚ್ಚಗಿನ ನೀರಿನಲ್ಲಿ ಸ್ಚಚ್ಛಗೊಳಿಸಿ. ನಂತರ ಟೋನರ್‍ಅನ್ನು ಅನ್ವಯಿಸಿ.

ತಿಂಗಳಿಗೆ ಎರಡು ಬಾರಿ ಈ ಮಿಶ್ರಣವನ್ನು ಅನ್ವಯಿಸಿ ಒಣ ತ್ವಚೆಯಿಂದ ದೂರ ಸರಿಯಿರಿ.

 ಕಿತ್ತಳೆ ಹಣ್ಣಿನ ಫೇಸ್ ಪ್ಯಾಕ್

ಕಿತ್ತಳೆ ಹಣ್ಣಿನ ಫೇಸ್ ಪ್ಯಾಕ್

2 ಟೀ ಚಮಚ ಅಲೋವೆರಾ ಜೆಲ್‍ಗೆ 1 ಟೀ ಚಮಚ ಕಿತ್ತಳೆ ರಸವನ್ನು ಸೇರಿಸಿ.

ಈ ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, 10 ನಿಮಿಷಗಳಕಾಲ ಆರಲು ಬಿಡಿ.

ಬೆಚ್ಚಗಿನ ನೀರಿನಲ್ಲಿ ಸ್ಚಚ್ಛಗೊಳಿಸಿ. ನಂತರ ಮಾಯಿಶ್ಚರೈಸ್ ಕ್ರೀಮ್ ಅನ್ವಯಿಸಿ.

ವಾರಕ್ಕೊಮ್ಮೆ ಅನ್ವಯಿಸುವುದರಿಂದ ಒಣ ತ್ವಚೆಯಿಂದ ಉಂಟಾಗುವ ಬಿರುಕು ಹಾಗೂ ಶುಷ್ಕತೆಯಿಂದ ದೂರಾಗಬಹುದು.

ಬಾಳೆ ಹಣ್ಣಿನ ಫೇಸ್ ಪ್ಯಾಕ್

ಬಾಳೆ ಹಣ್ಣಿನ ಫೇಸ್ ಪ್ಯಾಕ್

ಕಿವುಚಿದ ಬಾಳೆ ಹಣ್ಣಿಗೆ 1 ಟೀ ಚಮಚ ತೆಂಗಿನ ಎಣ್ಣೆಯನ್ನು ಬೆರೆಸಿ.

ಈ ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, 10 ನಿಮಿಷಗಳಕಾಲ ಆರಲು ಬಿಡಿ.

ಬೆಚ್ಚಗಿನ ನೀರಿನಲ್ಲಿ ಸ್ಚಚ್ಛಗೊಳಿಸಿ. ಚರ್ಮವು ಒಣಗಿದಂತಾಗಿದ್ದರೆ ಮಾಯಿಶ್ಚರೈಸ್ ಕ್ರೀಮ್ ಅನ್ವಯಿಸಿ.

ವಾರಕ್ಕೊಮ್ಮೆ ಅನ್ವಯಿಸಿದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು.

ಸೇಬು ಫೇಸ್ ಪ್ಯಾಕ್

ಸೇಬು ಫೇಸ್ ಪ್ಯಾಕ್

ಸೇಬು ಹಣ್ಣಿನ ಪೇಸ್ಟ್‍ಗೆ 1 ಟೀ ಚಮಚ ಜೇನುತುಪ್ಪವನ್ನು ಸೇರಿಸಿ, ಮಿಶ್ರಗೊಳಿಸಿ.

ಈ ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, 10 ನಿಮಿಷಗಳಕಾಲ ಆರಲು ಬಿಡಿ.

ಬೆಚ್ಚಗಿನ ನೀರಿನಲ್ಲಿ ಸ್ಚಚ್ಛಗೊಳಿಸಿ.

ಉತ್ತಮ ಫಲಿತಾಂಶವನ್ನು ಪಡೆಯಲು ವಾರಕ್ಕೊಮ್ಮೆ ಅನ್ವಯಿಸಿ.

ಅವಕೋಡಾ/ಬೆಣ್ಣೆ ಹಣ್ಣು ಫೇಸ್ ಪ್ಯಾಕ್

ಅವಕೋಡಾ/ಬೆಣ್ಣೆ ಹಣ್ಣು ಫೇಸ್ ಪ್ಯಾಕ್

ಬೆಣ್ಣೆ ಹಣ್ಣಿನ ತಿರುಳನ್ನು ತೆಗೆದುಕೊಳ್ಳಿ.

ನಂತರ ಮುಖದ ಎಲ್ಲಾಭಾಗಕ್ಕೂ ಅನ್ವಯಸಿ. 10 ನಿಮಿಷಗಳಕಾಲ ಆರಲು ಬಿಡಿ.

ಬೆಚ್ಚಗಿನ ನೀರಿನಲ್ಲಿ ಸ್ಚಚ್ಛಗೊಳಿಸಿ.

ವಾರಕ್ಕೊಮ್ಮೆ ಇದನ್ನು ಅನ್ವಯಿಸುವುದರಿಂದ ತ್ವಚೆಯು ಮೃದು ಹಾಗೂ ಕೋಮಲವಾಗಿರುತ್ತದೆ.

ದ್ರಾಕ್ಷಿ ಫೇಸ್ ಪ್ಯಾಕ್

ದ್ರಾಕ್ಷಿ ಫೇಸ್ ಪ್ಯಾಕ್

ಒಂದು ಮುಷ್ಟಿ ದ್ರಾಕ್ಷಿಹಣ್ಣನ್ನು ಕಿವುಚಿಕೊಳ್ಳಿ. ನಂತರ ಅದಕ್ಕೆ 1 ಟೀ ಚಮಚ ಆಲಿವ್ ಎಣ್ಣೆಯನ್ನು ಸೇರಿಸಿ. ಮಿಶ್ರಗೊಳಿಸಿ.

ನಂತರ ಮುಖದ ಎಲ್ಲಾಭಾಗಕ್ಕೂ ಅನ್ವಯಸಿ. 10 ನಿಮಿಷಗಳಕಾಲ ಆರಲು ಬಿಡಿ.

ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ಈ ಫೇಸ್ ಪ್ಯಾಕ್ ಅನ್ನು ತಿಂಗಳಿಗೆ ಎರಡು ಬಾರಿ ಅನ್ವಯಿಸುವುದರಿಂದ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು.

ಪಿಯರ್/ಮರಸೇಬು ಫೇಸ್ ಪ್ಯಾಕ್

ಪಿಯರ್/ಮರಸೇಬು ಫೇಸ್ ಪ್ಯಾಕ್

ಪಿಯರ್ ಹಣ್ಣಿನ ಪೇಸ್ಟ್‍ಗೆ 1/2 ಟೀ ಚಮಚ ಬಾದಾಮಿ ಎಣ್ಣೆಯನ್ನು ಸೇರಿಸಿ, ಮಿಶ್ರಗೊಳಿಸಿ.

ಈ ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, 10 ನಿಮಿಷಗಳಕಾಲ ಆರಲು ಬಿಡಿ.

ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ವಾರದಲ್ಲಿ ಎರಡು ಬಾರಿ ಅನ್ವಯಿಸಿದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು.

ಸ್ಟ್ರಾಬೆರ್ರಿ ಹಣ್ಣಿನ ಫೇಸ್ ಪ್ಯಾಕ್

ಸ್ಟ್ರಾಬೆರ್ರಿ ಹಣ್ಣಿನ ಫೇಸ್ ಪ್ಯಾಕ್

ಅತಿಯಾಗಿ ಹಣ್ಣಾದ ಸ್ಟ್ರಾಬೆರ್ರಿ ಹಣ್ಣನ್ನು ಕಿವುಚಿಕೊಳ್ಳಿ, 1 ಟೀ ಚಮಚ ಗುಲಾಬಿ ನೀರನ್ನು ಸೇರಿಸಿ.

ಈ ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, 10 ನಿಮಿಷಗಳಕಾಲ ಆರಲು ಬಿಡಿ.

ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ವಾರದಲ್ಲಿ ಒಮ್ಮೆ ಈ ಫೇಸ್ ಪ್ಯಾಕ್ ಅನ್ವಯಿಸಿದರೆ ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು.

English summary

Fruit Face Packs To Avoid Dry Skin This Winter

There are scores of natural ingredients that can be used for preparing face packs. However, fruits such as banana, avocado, etc., are known to be extra effective in warding off skin problems that occur during the winter season. These fruits are replete with skin-nourishing antioxidants and vitamins that can keep your skin well hydrated and moisturized at all times possible. Here are some of the easy-to-make fruit face packs that can prevent your skin from getting too dry during the winter season.
Please Wait while comments are loading...
Subscribe Newsletter