ಒಣ ಚರ್ಮದ ಸಮಸ್ಯೆಗೆ 'ಹಣ್ಣುಗಳ ಫೇಸ್ ಪ್ಯಾಕ್' ಪ್ರಯತ್ನಿಸಿ ನೋಡಿ...

By: Hemanth
Subscribe to Boldsky

ಚರ್ಮ ನೋಡಿ ದೇಹದ ಆರೋಗ್ಯದ ಬಗ್ಗೆ ಹೇಳಬಹುದು ಎನ್ನುತ್ತಾರೆ. ಒಬ್ಬನ ಚರ್ಮವು ಒಳ್ಳೆಯ ರೀತಿಯಲ್ಲಿದ್ದರೆ ಆಗ ಆತನ ಆರೋಗ್ಯವು ಚೆನ್ನಾಗಿ ಇದೆ ಎನ್ನಬಹುದು. ಆದರೆ ದೇಹದಲ್ಲಿ ಕೆಲವೊಂದು ಬದಲಾವಣೆಗಳು ಆದಾಗ ಅದು ಚರ್ಮದಲ್ಲಿ ಕಾಣಿಸಿಕೊಳ್ಳುತ್ತದೆ. ದೇಹದಲ್ಲಿ ನೈಸರ್ಗಿಕ ತೇವಾಂಶ ಇಲ್ಲದೆ ಇರುವಂತಹ ಸಂದರ್ಭದಲ್ಲಿ ಒಣ ಚರ್ಮವು ಕಂಡುಬರುವುದು. ಸಂಪೂರ್ಣ ದೇಹವು ಇದರಿಂದ ಒಣಗದೆ ಇದ್ದರೂ ಕೆಲವೊಂದು ಭಾಗಗಳು ಒಣಗಿರುತ್ತದೆ.

ಇಂತಹ ಒಣಚರ್ಮವು ಕೆಲವು ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಚರ್ಮವು ಒಣಗಿದ್ದ ಕಡೆಗಳಲ್ಲಿ ತುರಿಸುವುದು ಮತ್ತು ಗಡುಸಾಗಿರುತ್ತದೆ. ತುರಿಸಿದರೆ ಬಿಳಿ ಬಣ್ಣದ ಗೆರೆ ಚರ್ಮದ ಮೇಲೆ ಮೂಡುತ್ತದೆ. ಒಣ ಚರ್ಮದ ಸಮಸ್ಯೆಯು ಕೆಲವೊಂದು ಸಲ ತೀವ್ರವಾಗಬಹುದು. ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಇರುತ್ತದೆ. ಇದಕ್ಕೆ ಕೆಲವೊಂದು ಕ್ರೀಮ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇಂತಹ ಕ್ರೀಮ್‌ಗಳನ್ನು ಬಳಸಿಕೊಂಡು ಒಣ ಚರ್ಮ ನಿವಾರಣೆ ಮಾಡಬಹುದು. 

ಒಣ ಚರ್ಮ ಸಮಸ್ಯೆಗೆ ನೈಸರ್ಗಿಕ ಪರಿಹಾರ-ಪ್ರಯತ್ನಿಸಿ ನೋಡಿ

ಆದರೆ ಇದಕ್ಕೆ ಉತ್ತಮ ಪರಿಹಾರವೆಂದರೆ ಮನೆಯಲ್ಲಿ ತಯಾರಿಸುವಂತಹ ಫೇಸ್ ಪ್ಯಾಕ್ ಬಳಸಿಕೊಳ್ಳುವುದು. ಹಣ್ಣುಗಳಿಂದ ತಯಾರಿಸುವಂತಹ ಫೇಸ್ ಪ್ಯಾಕ್ ಚರ್ಮಕ್ಕೆ ತೇವಾಂಶ ನೀಡುವುದು. ದೇಹದ ಯಾವುದೇ ಭಾಗಕ್ಕೆ ಈ ಪ್ಯಾಕ್ ಹಚ್ಚಿಕೊಳ್ಳಬಹುದು. ಒಳ್ಳೆಯ ಫಲಿತಾಂಶ ನೀಡಿದರೆ ಇದನ್ನು ಮುಂದೆ ಕೂಡ ಬಳಸಬಹುದು. ಹಣ್ಣುಗಳಿಂದ ಫೇಸ್ ಪ್ಯಾಕ್ ತಯಾರಿಸುವುದು ಹೇಗೆ ಮತ್ತು ಅದನ್ನು ಬಳಸುವುದು ಹೇಗೆ ಎಂದು ತಿಳಿಯಲು ಮುಂದೆ ಓದಿಕೊಳ್ಳಿ....

ಬಾಳೆಹಣ್ಣು

ಬಾಳೆಹಣ್ಣು

ಆ್ಯಂಟಿಆಕ್ಸಿಡೆಂಟ್ ಮತ್ತು ಫ್ಯಾಟೊಕೆಮಿಕಲ್ಸ್ ನ್ನು ಹೊಂದಿರುವ ಬಾಳೆಹಣ್ಣು ನೈಸರ್ಗಿಕವಾಗಿ ತೇವಾಂಶ ನೀಡುವುದು. ಚರ್ಮಕ್ಕೆ ಒಳ್ಳೆಯ ಫಲಿತಾಂಶ ನೀಡಬೇಕಾದರೆ ಜೇನುತುಪ್ಪ ಮತ್ತು ಆಲಿವ್ ತೈಲದೊಂದಿಗೆ ಇದರ ಮಿಶ್ರಣ ಮಾಡಿ ಬಳಸಿಕೊಳ್ಳಿ.

ಬೇಕಾಗುವ ಸಾಮಗ್ರಿಗಳು

ಬೇಕಾಗುವ ಸಾಮಗ್ರಿಗಳು

*ಹಣ್ಣಾಗಿರುವ ಬಾಳೆಹಣ್ಣು ಒಂದು

*ಒಂದು ಚಮಚ ಆಲಿವ್ ತೈಲ

*ಒಂದು ಸಣ್ಣ ಪಾತ್ರೆ

*ಒಂದು ಬಾಳೆಹಣ್ಣನ್ನು ಸರಿಯಾಗಿ ಕಿವುಚಿಕೊಳ್ಳಿ ಮತ್ತು ಮಿಕ್ಸಿಗೆ ಇದನ್ನು ಹಾಕಿ. *ಬಾಳೆಹಣ್ಣಿನ ಪೇಸ್ಟ್ ಮಾಡಿ ಅದನ್ನು ಸಣ್ಣ ಪಾತ್ರೆಯಲ್ಲಿಡಿ.

*ಬಾಳೆಹಣ್ಣಿನ ಪೇಸ್ಟ್‌ಗೆ ಜೇನುತುಪ್ಪ ಮತ್ತು ಆಲಿವ್ ಎಣ್ಣೆ ಹಾಕಿ. ಈ ವೇಳೆ ಪೇಸ್ಟ್ ತೆಳು ಹಳದಿ ಬಣ್ಣಕ್ಕೆ ಬರುವುದು.

*ಈ ಪೇಸ್ಟ್ ಅನ್ನು ಒಣಚರ್ಮವಿರುವ ಭಾಗಕ್ಕೆ ಮೇಲ್ಮುಖವಾಗಿ ಹಚ್ಚಿಕೊಳ್ಳಿ.

*ಹತ್ತು ನಿಮಿಷ ತನಕ ಈ ಪ್ಯಾಕ್ ಒಣಚರ್ಮದ ಭಾಗದಲ್ಲಿ ಇರಲಿ.

ಹತ್ತು ನಿಮಿಷ ಬಿಟ್ಟು ತಂಪು ನೀರು ಅಥವಾ ಹಾಲಿನಿಂದ ತೊಳೆಯಿರಿ.

ಬಾಳೆಹಣ್ಣಿನ ಕರಾಮತ್ತಿನಲ್ಲಿದೆ ಶುಷ್ಕ ತ್ವಚೆ ಸಮಸ್ಯೆಗೆ ಪರಿಹಾರ!

ಮುಳ್ಳು ಸೌತೆಕಾಯಿ

ಮುಳ್ಳು ಸೌತೆಕಾಯಿ

ಮುಳ್ಳು ಸೌತೆಯಲ್ಲಿರುವಂತಹ ರಸವು ಒಣಚರ್ಮಕ್ಕೆ ಒಳ್ಳೆಯ ತೇವಾಂಶ ನೀಡುವುದು. ಮುಳ್ಳುಸೌತೆಕಾಯಿಯ ರಸ ಹಚ್ಚಿಕೊಂಡರೆ ಒಳ್ಳೆಯ ಫಲಿತಾಂಶ ಪಡೆಯಬಹುದು. ಆದರೆ ಈ ರಸಕ್ಕೆ ಅಲೋವೆರಾ ಜೆಲ್ ಹಾಕಿಕೊಂಡರೆ ಮತ್ತಷ್ಟು ಪರಿಣಾಮಕಾರಿಯಾಗಲಿದೆ.

ಬೇಕಾಗುವ ಸಾಮಗ್ರಿಗಳು

ಬೇಕಾಗುವ ಸಾಮಗ್ರಿಗಳು

*ಒಂದು ಕಪ್ ಮುಳ್ಳುಸೌತೆ ರಸ

*2 ಚಮಚ ತಾಜಾ ಅಲೋವೆರಾ ಜೆಲ್

*ಒಂದು ಸ್ವಚ್ಛವಾಗಿರುವ ಸಣ್ಣ ಪಾತ್ರೆ.

*ಮುಳ್ಳುಸೌತೆ ರಸ ತೆಗೆಯಲು ಇದನ್ನು ಮಿಕ್ಸಿಗೆ ಹಾಕಿಕೊಂಡು ರುಬ್ಬಿಕೊಳ್ಳಿ. ಇದನ್ನು ಸೋಸಿಕೊಂಡು ರಸ ತೆಗೆಯಿರಿ.

*ಸಣ್ಣ ಪಾತ್ರೆಗೆ ಸೌತೆಕಾಯಿ ರಸ ಹಾಕಿ ಮತ್ತು ಇದಕ್ಕೆ ಅಲೋವೆರಾ ಹಾಕಿ ಮಿಶ್ರಣ ಮಾಡಿಕೊಳ್ಳಿ.

*ಇದನ್ನು ಒಣಚರ್ಮವಿರುವ ಜಾಗಕ್ಕೆ ಹಚ್ಚಿಕೊಳ್ಳಿ ಮತ್ತು ಸ್ವಚ್ಛ ನೀರಿನಿಂದ ತೊಳೆಯುವ ಮೊದಲು 15 ನಿಮಿಷ ಕಾಲ ಹಾಗೆ ಬಿಡಿ.

ಪಪ್ಪಾಯಿ

ಪಪ್ಪಾಯಿ

ಪಪ್ಪಾಯಿಯು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪ್ರತಿಯೊಬ್ಬರಿಗೂ ತಿಳಿದಿದೆ. ಅದೇ ಪಪ್ಪಾಯಿಯಲ್ಲಿ ಆ್ಯಂಟಿಆಕ್ಸಿಡೆಂಟ್, ಫ್ಲಾವನಾಯ್ಡ್, ಪಾಂಟೊಥೆನಿಕ್ ಆಮ್ಲ, ವಿಟಮಿನ್ ಬಿ ಮತ್ತು ಹಲವಾರು ರೀತಿಯ ಖನಿಜಾಂಶಗಳು ಪಪ್ಪಾಯಿಯಲ್ಲಿದೆ. ಇದು ಚರ್ಮಕ್ಕೆ ತೇವಾಂಶ ನೀಡುವುದು. ಇಷ್ಟು ಮಾತ್ರವಲ್ಲದೆ ವಯಸ್ಸಾಗುವ ಲಕ್ಷಣ, ನೆರಿಗೆ ಮತ್ತು ಕಪ್ಪು ಕಲೆಗಳಿಂದ ಮುಕ್ತಿ ನೀಡುವುದು.

ಬೇಕಾಗುವ ಸಾಮಗ್ರಿಗಳು

ಬೇಕಾಗುವ ಸಾಮಗ್ರಿಗಳು

*1 ಚಮಚ ದಪ್ಪ ಮೊಸರು

*3-5 ಹನಿ ಲಿಂಬೆರಸ

*2 ಚಮಚ ಪಪ್ಪಾಯಿ ತಿರುಳು

*1 ಚಮಚ ಮುಲ್ತಾನಿ ಮಿಟ್ಟಿ

*1 ಚಮಚ ಜೇನುತುಪ್ಪ

1 ಸ್ವಚ್ಛ ಸಣ್ಣ ಪಾತ್ರೆ

ಪಪ್ಪಾಯಿ ತಿರುಳು ಮತ್ತು ಮೊಸರನ್ನು ಜತೆ ಸೇರಿಸಿಕೊಂಡು ಮಿಶ್ರಣ ಮಾಡಿಕೊಳ್ಳಿ. ಇದಕ್ಕೆ ಜೇನುತುಪ್ಪ, ಲಿಂಬೆರಸ ಮತ್ತು ಮುಲ್ತಾನಿ ಮಿಟ್ಟಿ ಸೇರಿಸಿಕೊಳ್ಳಿ. ಇದನ್ನು ಮಿಶ್ರಣ ಮಾಡಿ ಮೃಧುವಾದ ಪೇಸ್ಟ್ ಮಾಡಿಕೊಳ್ಳಿ. ಒಣ ಚರ್ಮವಿರುವ ಜಾಗಕ್ಕೆ ಬ್ರಷ್ ಅಥವಾ ಕೈಯಿಂದ ಪಪ್ಪಾಯಿ ಫೇಸ್ ಪ್ಯಾಕ್ ಹಚ್ಚಿಕೊಳ್ಳಿ. ಒಣಚರ್ಮವು ಈ ಫೇಸ್ ಪ್ಯಾಕ್ ನ್ನು ಹೀರಿಕೊಳ್ಳಲು ಬಿಡಿ. ಸ್ವಲ್ಪ ಸಮಯ ಬಿಟ್ಟು ಒಣಗಿದ ಬಳಿಕ ತಣ್ಣೀರಿನಿಂದ ತೊಳೆಯಿರಿ.

ಪಪ್ಪಾಯಿ ಹಣ್ಣಿನಲ್ಲಿದೆ 'ಸೌಂದರ್ಯದ' ಮಾಂತ್ರಿಕ ಶಕ್ತಿ!

English summary

Fruit-based Face Packs That Work Wonders On Dry Skin

To help, here is a list of simple eight fruit-based face packs that you can prepare at home and apply on your dry skin to keep it hydrated and moistened. These fruit-based packs can be applied anywhere on the body as well; and if you think there is a difference, you can continue using them. Do not try preserving any of these fruit-based face packs for dry skin and use them as fresh as you can. Continue reading.
Subscribe Newsletter