For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಚರ್ಮದ ಆರೈಕೆಗೆ ಸಾರಭೂತ ತೈಲಗಳು

By Hemanth
|

ಚಳಿಗಾಲ ಬಂತೆಂದರೆ ಸಾಕು, ಚರ್ಮದ ಸಂಕಷ್ಟ ಆರಂಭವಾಗುವುದು. ಅತಿಯಾದ ಶೀತ, ತಾಪಮಾನ ಕಡಿಮೆಯಾಗುವುದರಿಂದ ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಚಳಿಗಾಲದಲ್ಲಿ ಚರ್ಮವು ತುಂಬಾ ಒಣ, ತೇವಾಂಶವಿಲ್ಲದಂತೆ ಮತ್ತು ನಿಸ್ತೇಜವಾಗಿ ಕಾಣಿಸುವುದು. ಇಂತಹ ಸಮಯದಲ್ಲಿ ಚರ್ಮಕ್ಕೆ ಮೊಶ್ವಿರೈಸ್ ನೀಡಿ ತೇವಾಂಶ ಕಾಪಾಡಿಕೊಳ್ಳುವಂತಹ ತೈಲದಿಂದ ಚರ್ಮದ ಆರೈಕೆ ಮಾಡಿಕೊಳ್ಳುವುದು ಅತೀ ಅಗತ್ಯ. ಸಾರಭೂತ ತೈಲಗಳು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಇದು ಚರ್ಮಕ್ಕೆ ಶಮನ ನೀಡಿ, ಮೊಡವೆ, ಒಣಚರ್ಮ ಸಮಸ್ಯೆ ತಡೆದು ಚರ್ಮಕ್ಕೆ ತುಂಬಾ ಪರಿಣಾಮಕಾರಿಯಾಗಿ ಮೊಶ್ವಿರೈಸ್ ಮಾಡುವುದು. ಈ ಸಾರಭೂತ ತೈಲಗಳನ್ನು ಬಳಸುವುದು ತುಂಬಾ ಸುರಕ್ಷಿತ. ಖರ್ಚು ಕಡಿಮೆ ಮತ್ತು ಹೆಚ್ಚು ಪರಿಣಾಮಕಾರಿ. ಹಲವಾರು ರೀತಿಯಿಂದ ಚರ್ಮಕ್ಕೆ ಲಾಭ ನೀಡುವಂತಹ ಸಾರಭೂತ ತೈಲವು ಚಳಿಗಾಲದಲ್ಲಿ ತ್ವಚೆಯ ಆರೈಕೆಗೆ ಹೇಳಿ ಮಾಡಿಸಿದಂತಿದೆ.

beauty tips in kannada

ಚಳಿಗಾಲದಲ್ಲಿ ನಿಮ್ಮ ಚರ್ಮದ ಆರೈಕೆಯಲ್ಲಿ ಬಳಕೆ ಮಾಡಬಹುದಾದ ಕೆಲವೊಂದು ಸಾರಭೂತ ತೈಲಗ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ. ಅದು ಯಾವುದೆಂದು ನೀವು ತಿಳಿಯಿರಿ.

ಸೂಚನೆ: ಸಾರಭೂತ ತೈಲಗಳನ್ನು ತೆಳು ಮಾಡಿಕೊಂಡು ಬಳಸಿಕೊಳ್ಳಬೇಕು. ಬಳಸುವ ಮೊದಲು ದೇಹದ ಒಂದು ಭಾಗಕ್ಕೆ ಸ್ವಲ್ಪ ಹಚ್ಚಿಕೊಂಡು ಅಲರ್ಜಿಯಾಗುತ್ತದೆಯಾ ಎಂದು ನೋಡಿಕೊಳ್ಳಿ.

1. ಶ್ರೀಗಂಧದ ಸಾರಭೂತ ತೈಲ

1. ಶ್ರೀಗಂಧದ ಸಾರಭೂತ ತೈಲ

ಈ ಸಾರಭೂತ ತೈಲದಲ್ಲಿ ಇರುವಂತಹ ಪುನಃಶ್ವೇತನಗೊಳಿಸುವ ಗುಣವು ಚಳಿಗಾಲದಲ್ಲಿ ಒಣ ಚರ್ಮದ ಆರೈಕೆಗೆ ಅತ್ಯಂತ ಪರಿಣಾಮಕಾರಿ ತೈಲವಾಗಿದೆ.

ಬಳಸುವುದು ಹೇಗೆ

ವಾರಕೊಮ್ಮೆ ಬಳಸುವಂತಹ ಫೇಶಿಯಲ್ ಕ್ರೀಮ್ ಜತೆಗೆ ಕೆಲವು ಹನಿ ಶ್ರೀಗಂಧದ ಸಾರಭೂತ ತೈಲ ಹಾಕಿಕೊಳ್ಳಿ. ಇದು ಚರ್ಮಕ್ಕೆ ಪರಿಣಾಮಕಾರಿಯಾಗಿರುವುದು. ಬೇರೆ ಯಾವುದೇ ತೈಲದೊಂದಿಗೆ ಈ ತೈಲವನ್ನು ಮಿಶ್ರಣ ಮಾಡಿಕೊಂಡು ಚರ್ಮಕ್ಕೆ ಮಸಾಜ್ ಮಾಡಿಕೊಳ್ಳಿ.

2. ಲ್ಯಾವೆಂಡರ್ ಸಾರಭೂತ ತೈಲ

2. ಲ್ಯಾವೆಂಡರ್ ಸಾರಭೂತ ತೈಲ

ಲ್ಯಾವೆಂಡರ್ ಸಾರಭೂತ ತೈಲದಲ್ಲಿ ಚರ್ಮಕ್ಕೆ ಶಮನ ನೀಡುವಂತಹ ಗುಣವಿದೆ. ಇದರಿಂದ ಚಳಿಗಾಲದಲ್ಲಿ ಚರ್ಮದ ಮೇಲೆ ಮೂಡುವಂತಹ ಮೊಡವೆಗಳನ್ನು ನಿವಾರಣೆ ಮಾಡಬಹುದಾಗಿದೆ.

ಬಳಸುವುದು ಹೇಗೆ

ತೆಂಗಿನ ಎಣ್ಣೆ ಅಥವಾ ಬೇರೆ ಯಾವುದೇ ಸಾಮಾನ್ಯ ಎಣ್ಣೆಯೊಂದಿಗೆ ಕೆಲವು ಹನಿ ಲ್ಯಾವೆಂಡರ್ ತೈಲವನ್ನು ಮಿಶ್ರಣ ಮಾಡಿಕೊಂಡು ಮಸಾಜ್ ಮಾಡಿದರೆ ಆಗ ಚರ್ಮವು ಒಳ್ಳೆಯ ಫಲಿತಾಂಶ ಪಡೆಯುವುದು.

3. ಮಲ್ಲಿಗೆ ಸಾರಭೂತ ತೈಲ

3. ಮಲ್ಲಿಗೆ ಸಾರಭೂತ ತೈಲ

ನಂಜುನಿರೋಧಕ ಗುಣಗಳನ್ನು ಹೊಂದಿರುವ ಮಲ್ಲಿಗೆ ಸಾರಭೂತ ತೈಲವು ಸೋಂಕನ್ನು ಉಂಟುಮಾಡಿ ಚರ್ಮದ ಸೌಂದರ್ಯಕ್ಕೆ ಹಾನಿ ಉಂಟು ಮಾಡುವ ಬ್ಯಾಕ್ಟೀರಿಯಾವನ್ನು ತಡೆಯುವುದು.

ಬಳಸುವುದು ಹೇಗೆ

ವಾರದಲ್ಲಿ ಎರಡು ಸಲ ನಿಮ್ಮ ಮೊಶ್ಚಿರೈಸರ್ ಗೆ ಮಲ್ಲಿಗೆ ಸಾರಭೂತ ತೈಲ ಹಾಕಿಕೊಂಡು ಅದನ್ನು ಚರ್ಮಕ್ಕೆ ಹಚ್ಚಿಕೊಳ್ಳಿ. ಇದರಿಂದ ಚರ್ಮವು ನಯ ಹಾಗೂ ಮೃದುವಾಗುವುದು.

4. ಸೀಡರ್ವುಡ್ ಸಾರಭೂತ ತೈಲ

4. ಸೀಡರ್ವುಡ್ ಸಾರಭೂತ ತೈಲ

ಈ ತೈಲದಲ್ಲಿ ಇರುವಂತಹ ಶಮನಕಾರಿ ಗುಣವು ಚಳಿಗಾಲದಲ್ಲಿ ಚರ್ಮದ ಆರೋಗ್ಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ಬಳಸುವ ವಿಧಾನ

ವಾರದಲ್ಲಿ ಒಮ್ಮೆ ಬಳಸುವ ಫೇಶಿಯಲ್ ಮಾಸ್ಕ್ ಗೆ ಕೆಲವು ಹನಿ ಸಿಡರ್ವುಡ್ ಸಾರಭೂತ ತೈಲ ಹಾಕಿ. ಈ ಮಿಶ್ರಣವನ್ನು ತ್ಚಚೆಗೆ ಹಚ್ಚಿಕೊಳ್ಳಿ. ಇದರಿಂದ ಚರ್ಮವು ಮೊಡವೆ ಮುಕ್ತ ಮತ್ತು ನಯವಾಗಿರುವುದು.

5. ಫ್ಲೆಕ್ಸ್ ಬೀಜಗಳ ಸಾರಭೂತ ತೈಲ

5. ಫ್ಲೆಕ್ಸ್ ಬೀಜಗಳ ಸಾರಭೂತ ತೈಲ

ಚಳಿಗಾಲದಲ್ಲಿ ಚರ್ಮದ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವ ತೈಲಗಳಲ್ಲಿ ಇದು ಒಂದಾಗಿದೆ. ಇದು ಚರ್ಮಕ್ಕೆ ಮೊಶ್ಚಿರೈಸ್ ಮಾಡಿ ತೇವಾಂಶವಿರುವಂತೆ ನೋಡಿಕೊಳ್ಳುವುದು.

ಬಳಸುವುದು ಹೇಗೆ

ಫ್ಲೆಕ್ಸ್ ಬೀಜಗಳ ಸಾರಭೂತ ತೈಲವನ್ನು ಆಲಿವ್ ತೈಲದಂತಹ ಬೇರೆ ಯಾವುದಾದರೂ ತೈಲದೊಂದಿಗೆ ಮಿಶ್ರಣ ಮಾಡಿಕೊಳ್ಳಿ. ವಾರದಲ್ಲಿ ಒಂದು ಸಲ ಇದನ್ನು ಬಳಸಿದರೆ ಚರ್ಮವು ಒಣಗುವುದನ್ನು ತಡೆಯುವುದು.

6. ಜೆರೇನಿಯಂ ಸಾರಭೂತ ತೈಲ

6. ಜೆರೇನಿಯಂ ಸಾರಭೂತ ತೈಲ

ಚಳಿಗಾಲದಲ್ಲಿ ಚರ್ಮವು ತುಂಬಾ ನಿಸ್ತೇಜವಾಗಿ ಕಾಣುವುದು. ಇಂತಹ ಸಮಯದಲ್ಲಿ ಜೆರೇನಿಯಂ ಸಾರಭೂತ ತೈಲವು ತುಂಬಾ ಉಪಯೋಗಕಾರಿ.

ಬಳಸುವ ವಿಧಾನ

ಮೊಶ್ಚಿರೈಸರ್ ಗೆ 2-3 ಹನಿ ಸಾರಭೂತ ತೈಲ ಹಾಕಿಕೊಳ್ಳಿ ಮತ್ತು ಇದನ್ನು ಚರ್ಮಕ್ಕೆ ಹಚ್ಚಿಕೊಳ್ಳಿ. ಕಾಂತಿಯುತ ಚರ್ಮ ಪಡೆಯಲು ವಾರದಲ್ಲಿ ಮೂರು ಸಲ ಇದನ್ನು ಬಳಸಿ.

7. ರೋಸ್ ವುಡ್ ಸಾರಭೂತ ತೈಲ

7. ರೋಸ್ ವುಡ್ ಸಾರಭೂತ ತೈಲ

ಚರ್ಮದಲ್ಲಿ ಕಣ್ಣಿಗೆ ಕಾಣದೇ ಇರುವ ಕೆಲವು ಸಮಸ್ಯೆ ಅಥವಾ ಚರ್ಮಕ್ಕೆ ಮೊಶ್ಚಿರೈಸರ್ ನೀಡುವಂತಹ ಪ್ರಮುಖ ತೈಲವೆಂದರೆ ಅದು ರೋಸ್ ವುಡ್ ಸಾರಭೂತ ತೈಲ.

ಬಳಸುವ ವಿಧಾನ

2-3 ಹನಿ ರೋಸ್ ವುಡ್ ಸಾರಭೂತ ತೈಲವನ್ನು ಫೇಶಿಯಲ್ ಮಾಸ್ಕ್ ಗೆ ಮಿಶ್ರಣ ಮಾಡಿ ಅದನ್ನು ಚರ್ಮಕ್ಕೆ ಹಚ್ಚಿಕೊಳ್ಳಿ. ಇದು ಚರ್ಮವನ್ನು ಆರೋಗ್ಯವಾಗಿಡುವುದು ಮತ್ತು ಚರ್ಮ ಸುಂದರವಾಗಿ ಕಾಣುವುದು.

English summary

Essential Oils You Should Include In Your Winter Skin Care Routine

Today, at Boldsky, we've curated a list of those essential oils that deserve a spot in your winter skin care routine. These essential oils can work wonders on the state of your skin during the winter season. Always use an essential oil in its diluted form and it is important to do a patch test with an essential oil blend prior to applying it all over your skin.
Story first published: Saturday, January 13, 2018, 13:11 [IST]
X
Desktop Bottom Promotion