For Quick Alerts
ALLOW NOTIFICATIONS  
For Daily Alerts

ಬರೀ 15 ದಿನಗಳಲ್ಲಿ ಮುಖದ ಅಂದ ಹೆಚ್ಚಿಸುವ ಮನೆಮದ್ದುಗಳು

By Jaya Subramanya
|

ಸುಂದರ ತ್ವಚೆ ಮತ್ತು ಮುಖಾರವಿಂದವನ್ನು ಪಡೆಯಬೇಕು ಎಂಬ ಆಸೆ ಯಾರಿಗೆ ಇರುವುದಿಲ್ಲ ಹೇಳಿ? ಮಾರುಕಟ್ಟೆಯಲ್ಲಿ ದೊರೆಯುವ ದುಬಾರಿ ವಸ್ತುಗಳಿಗೆ ಖರ್ಚು ಮಾಡಿ ಅದನ್ನು ಬಳಸಿ ನಿಷ್ಪ್ರಯೋಜನವನ್ನು ಪಡೆಯುವುದಕ್ಕಿಂತ ಮನೆಯಲ್ಲೇ ದೊರೆಯುವ ಮನೆಮದ್ದುಗಳಿಂದ ನಿಮ್ಮ ಸೌಂದರ್ಯವನ್ನು ಇನ್ನಷ್ಟು ವರ್ಧಿಸಿಕೊಳ್ಳಬಹುದಲ್ಲವೇ?

ನೈಸರ್ಗಿಕ ವಸ್ತುಗಳು ಹೆಚ್ಚಿನ ಪ್ರೊಟೀನ್ ಮತ್ತು ವಿಟಮಿನ್‌ಗಳನ್ನು ಒಳಗೊಂಡಿರುವುದರಿಂದ ನಿಮ್ಮ ತ್ವಚೆಯನ್ನು ಇದು ರಿಫ್ರೆಶ್ ಮಾಡಲಿದೆ ಅಂತೆಯೇ ಮುಪ್ಪಿನಿಂದ ನಿಮ್ಮ ತ್ವಚೆಯನ್ನು ಸದಾ ರಕ್ಷಿಸಲಿದೆ. ಈ ಉತ್ಪನ್ನಗಳು ನೈಸರ್ಗಿಕ ಎಣ್ಣೆಯನ್ನು ಒಳಗೊಂಡಿದ್ದು ನಿಮ್ಮ ತ್ವಚೆಯನ್ನು ಮಾಯಿಶ್ಚರೈಸ್ ಮಾಡಿ ತಾಜಾಗೊಳಿಸುತ್ತದೆ.


ಮುಖದ ಸೌಂದರ್ಯ ಹೆಚ್ಚಿಸಬೇಕೇ? ಇಲ್ಲಿದೆ ನೋಡಿ 15 ಬ್ಯೂಟಿ ಟಿಪ್ಸ್

ಮಾರುಕಟ್ಟೆಯಲ್ಲಿ ದೊರೆಯುವ ದುಬಾರಿ ಸೌಂದರ್ಯ ವರ್ಧಕಗಳು ನಿಮ್ಮ ತ್ವಚೆಯನ್ನು ಇನ್ನಷ್ಟು ಹಾನಿಗೀಡು ಮಾಡುವ ಸಂಭವವಿರುತ್ತದೆ. ಅಂತೆಯೇ ಇನ್ನಿತರ ಕಾಯಿಲೆಗಳಿಗೆ ನೀವು ಒಳಗಾಗುವ ಸಾಧ್ಯತೆ ಕೂಡ ಇರುತ್ತದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ಮನೆಯಲ್ಲೇ ಬಳಸಬಹುದಾದ ತರಕಾರಿ ಹಣ್ಣುಗಳ ವಿವರಗಳನ್ನು ನೀಡುತ್ತಿದ್ದು ಇವುಗಳು ನಿಮ್ಮ ತ್ವಚೆಗೆ ಅದ್ಭುತ ಮ್ಯಾಜಿಕ್ ಅನ್ನೇ ಉಂಟುಮಾಡಲಿದೆ...

ಮೂಲಂಗಿ

ಮೂಲಂಗಿ

ಕುದಿಯುವ ನೀರಿನಲ್ಲಿ ಮೂಲಂಗಿಯನ್ನು ಬೇಯಿಸಿ. ಈ ನೀರು ತಣ್ಣಗಾಗಲು ಬಿಡಿ ಮತ್ತು ಆ ನೀರಿನಿಂದ ನಿಮ್ಮ ಮುಖವನ್ನು ತೊಳೆದುಕೊಳ್ಳಿ. ನಿಮ್ಮ ಮುಖದ ಎಲ್ಲಾ ಕಲೆಗಳನ್ನು ಈ ನೀರು ನಿವಾರಣೆ ಮಾಡುತ್ತದೆ. ಇದು ನಿಮ್ಮ ತ್ವಚೆಯ ರಕ್ಷಣೆಯನ್ನು ಮಾಡುವ ಅದ್ಭುತ ಪರಿಕರವಾಗಿದೆ.

ಮುಲ್ತಾನಿ ಮಿಟ್ಟಿ ಮತ್ತು ಶ್ರೀಗಂಧದ ಹುಡಿ

ಮುಲ್ತಾನಿ ಮಿಟ್ಟಿ ಮತ್ತು ಶ್ರೀಗಂಧದ ಹುಡಿ

ಒಂದು ಚಮಚದಷ್ಟು ಮುಲ್ತಾನಿ ಮಿಟ್ಟಿಯನ್ನು ಶ್ರೀಗಂಧದ ಹುಡಿಯನ್ನು ಬೆರೆಸಿಕೊಳ್ಳಿ ಮತ್ತು ಇದಕ್ಕೆ ಎರಡು ಚಮಚದಷ್ಟು ರೋಸ್ ವಾಟರ್ ಬೆರೆಸಿ. ನಿಮ್ಮ ತ್ವಚೆಗೆ ಈ ಪೇಸ್ಟ್ ಅನ್ನು ಹಚ್ಚಿಕೊಳ್ಳಿ ಮತ್ತು 15 ನಿಮಿಷಗಳ ಕಾಲ ಕಾಯಿರಿ. ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ಮುಲ್ತಾನಿ ಮಿಟ್ಟಿ ಟೊಮೇಟೊ ಮತ್ತು ಕಡಲೆ ಹಿಟ್ಟು ಫೇಸ್ ಪ್ಯಾಕ್

ಹಣ್ಣಾದ ಟೊಮೇಟೊವನ್ನು ಎರಡು ಟೀ.ಚಮಚ ಮುಲ್ತಾನಿ ಮಿಟ್ಟಿ ಹಾಗು ಒಂದು ಟೀ.ಚಮಚ ಕಡಲೆ ಹಿಟ್ಟಿನ ಜೊತೆಗೆ ಬೆರೆಸಿ ಗಟ್ಟಿಯಾದ ಪೇಸ್ ಪ್ಯಾಕ್ ಮಾಡಿಕೊಳ್ಳಿ. ಇದನ್ನು ನಿಮ್ಮ ಮುಖಕ್ಕೆ ಲೇಪಿಸಿ, 20 ನಿಮಿಷಗಳ ಕಾಲ ಬಿಡಿ. ನಂತರ ಇದನ್ನು ತಣ್ಣೀರಿನಲ್ಲಿ ತೊಳೆಯಿರಿ. ಈ ಪ್ಯಾಕ್ ನಿಮ್ಮ ತ್ವಚೆಯಲ್ಲಿರುವ ಎಣ್ಣೆ ಅಂಶವನ್ನು ನಿವಾರಿಸುತ್ತದೆ.

ಇಲ್ಲವೆಂದೆರೆ ಹೀಗೆ ಮಾಡಿ- 5-6 ಸೌತೆಕಾಯಿ ತುಂಡುಗಳನ್ನು ತೆಗೆದುಕೊಂಡು, ಅದನ್ನು ಎರಡು ಟೀ.ಚಮಚ ಮುಲ್ತಾನಿ ಮಿಟ್ಟಿ ಮತ್ತು ಒಂದು ಟೀ.ಚಮಚ ರೋಸ್ ವಾಟರ್ ಜೊತೆಗೆ ಬೆರೆಸಿಕೊಳ್ಳಿ. ಇದನ್ನು ನಿಮ್ಮ ಮುಖಕ್ಕೆ ಲೇಪಿಸಿ 15 ನಿಮಿಷ ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ. ಇದು ಸಹ ಮುಖಕ್ಕೆ ಹೊಳಪನ್ನು ನೀಡುತ್ತದೆ.

ತ್ವಚೆಯ ಕಾಂತಿಗೆ, ಅಡುಗೆ ಮನೆಯ ಉತ್ಪನ್ನಗಳೇ ಸಾಕು

ಬಾದಾಮಿ

ಬಾದಾಮಿ

ರಾತ್ರಿ ಪೂರ್ತಿ ಬಾದಾಮಿಯನ್ನು ಹಾಲಿನಲ್ಲಿ ನೆನೆಸಿ. ನಂತರ ಮರುದಿನ ಬೆಳಗ್ಗೆ ಇದನ್ನು ಪೇಸ್ಟ್ ಮಾಡಿಕೊಳ್ಳಿ. ನಿಮ್ಮ ಮುಖಕ್ಕೆ ಈ ಪೇಸ್ಟ್ ಅನ್ನು ಹಚ್ಚಿಕೊಳ್ಳಿ ಮತ್ತು ಅದನ್ನು ಉಜ್ಜಿಕೊಳ್ಳಿ. ನಿಮ್ಮ ಮುಖದಲ್ಲಿರುವ ಎಲ್ಲಾ ಕಲೆಗಳನ್ನು ಇದು ನಿವಾರಿಸುತ್ತದೆ.

ಹಾಲಿನ ಕ್ರೀಮ್

ಹಾಲಿನ ಕ್ರೀಮ್

ನಿಮ್ಮ ಮುಖಕ್ಕೆ ಸ್ವಲ್ಪ ಹಾಲಿನ ಕ್ರೀಮ್ ಅನ್ನು ಹಚ್ಚಿಕೊಳ್ಳಿ. ಮಲಗುವ ಮುಂಚೆ ಇದನ್ನು ಮಾಡಿ. ನಿಮ್ಮ ತ್ವಚೆಯನ್ನು ಇದು ಮಾಯಿಶ್ಚರೈಸ್ ಮಾಡಲಿದೆ ಹಾಗೂ ತ್ವಚೆಯಲ್ಲಿರುವ ಎಲ್ಲಾ ಮುಪ್ಪಿನ ಲಕ್ಷಣಗಳನ್ನು ಇದು ದೂರ ಮಾಡುತ್ತದೆ. ಹೊಳೆಯುವ ಬೆಳ್ಳಗಿನ ತ್ವಚೆಯನ್ನು ಪಡೆಯಲು ಇದು ಮನೆಮದ್ದಾಗಿದೆ.

ಕಡಲೆ ಹಿಟ್ಟು ಮತ್ತು ಲಿಂಬೆ ರಸ

ಕಡಲೆ ಹಿಟ್ಟು ಮತ್ತು ಲಿಂಬೆ ರಸ

ಮೂರು ಚಮಚಗಳಷ್ಟು ಕಡಲೆ ಹಿಟ್ಟನ್ನು ಎರಡು ಚಮಚ ಹಾಲಿನೊಂದಿಗೆ ಬೆರೆಸಿಕೊಳ್ಳಿ ಇದಕ್ಕೆ ಒಂದು ಚಮಚ ಲಿಂಬೆ ರಸವನ್ನು ಸೇರಿಸಿ ಮತ್ತು ಪೇಸ್ಟ್ ತಯಾರಿಸಿ. ನಿಮ್ಮ ಮುಖಕ್ಕೆ ಈ ಪೇಸ್ಟ್ ಅನ್ನು ಹಚ್ಚಿಕೊಳ್ಳಿ ನಂತ 20 ನಿಮಿಷಗಳ ತರುವಾಯ ಮುಖವನ್ನು ತೊಳೆದುಕೊಳ್ಳಿ.

ಇನ್ನೊಂದು ವಿಧಾನ-

ಒಣ ಹಾಗೂ ಹಾನಿಗೊಳಗಾದ ಚರ್ಮಕ್ಕೆ ಫೇಸ್ ಪ್ಯಾಕ್ ಬೇಕಾಗುವ ಸಾಮಗ್ರಿಗಳು ಎರಡು ಚಮಚ ಕಡಲೆಹಿಟ್ಟು, ಎರಡು ಚಮಚ ಗಂಧದ ಹುಡಿ, ಎರಡು ಚಮಚ ಮುಳ್ಳುಸೌತೆಕಾಯಿ ಜ್ಯೂಸ್, ಎರಡು ಚಮಚ ಟೊಮೆಟೋ ಜ್ಯೂಸ್, ಎರಡು ಚಮಚ ಲಿಂಬೆರಸ, ಸ್ವಲ್ಪ ಮೊಸರು ಮತ್ತು ಸ್ವಲ್ಪ ರೋಸ್ ವಾಟರ್. ಎಲ್ಲವನ್ನೂ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದು ಹೆಚ್ಚು ದಪ್ಪ ಅಥವಾ ತೆಳುವಾಗದಂತೆ ನೋಡಿಕೊಳ್ಳಿ. ಕೈಬೆರಳುಗಳು ಅಥವಾ ಒಂದು ಸ್ವಚ್ಛ ಬ್ರಷ್ ತೆಗೆದುಕೊಂಡು ಈ ಫೇಸ್ ಪ್ಯಾಕ್ ಅನ್ನು ಹಚ್ಚಿಕೊಳ್ಳಿ. 20 ನಿಮಿಷ ಹಾಗೆ ಬಿಟ್ಟು ಬಳಿಕ ತಣ್ಣಗಿನ ನೀರಿನಿಂದ ತೊಳೆಯಿರಿ.

ಜೀರಿಗೆ

ಜೀರಿಗೆ

ಅರ್ಧಗಂಟೆಯಷ್ಟು ಸಮಯ ಜೀರಿಗೆಯನ್ನು ನೀರಿನಲ್ಲಿ ಕುದಿಸಿಕೊಳ್ಳಿ. ಈ ನೀರಿನಿಂದ ನಿಮ್ಮ ಮುಖವನ್ನು ತೊಳೆದುಕೊಳ್ಳಿ ಇದರಿಂದ ನಿಮ್ಮ ಮುಖ ಕಾಂತಿಯಿಂದ ಹೊಳೆಯುತ್ತದೆ. ಸುಂದರವಾದ ತ್ವಚೆಯನ್ನು ಪಡೆದುಕೊಳ್ಳಲು ಇದೊಂದು ಅದ್ಭುತ ಮನೆಮದ್ದಾಗಿದೆ.

ಕಿತ್ತಳೆ ಸಿಪ್ಪೆಗಳು

ಕಿತ್ತಳೆ ಸಿಪ್ಪೆಗಳು

ಬಿಸಿಲಿನಲ್ಲಿ ಕಿತ್ತಳೆ ಸಿಪ್ಪೆಯನ್ನು ಒಣಗಿಸಿ. ಇದನ್ನು ಚೆನ್ನಾಗಿ ಒಣಗಿಸಿಕೊಳ್ಳಿ ಮತ್ತು ಹುಡಿ ಮಾಡಿಕೊಳ್ಳಿ. ಇದನ್ನು ಮೂರು ಚಮಚ ಹಾಲಿನಲ್ಲಿ ಪೇಸ್ಟ್ ಮಾಡಿಕೊಂಡು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷಗಳ ತರುವಾಯ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ಪಪ್ಪಾಯಿ

ಪಪ್ಪಾಯಿ

*ಚೆನ್ನಾಗಿ ಹಣ್ಣಾಗಿರುವ ಪಪ್ಪಾಯಿ ತೆಗೆದುಕೊಂಡು ಅದರ ಸಿಪ್ಪೆ ತೆಗೆಯಿರಿ. ಈಗ ಪಪ್ಪಾಯಿಯನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ. ಮುಖಕ್ಕೆ ಇದನ್ನು ಹಚ್ಚಿಕೊಂಡು 20 ನಿಮಿಷ ಹಾಗೆ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದು ಒರೆಸಿಕೊಳ್ಳಿ.

*ಚೆನ್ನಾಗಿ ಬಲಿತಿರುವ ಪಪ್ಪಾಯಿಯನ್ನು ಹಿಚುಕಿಕೊಳ್ಳಿ. ಇದಕ್ಕೆ ಜೇನುತುಪ್ಪ ಮತ್ತು ಅಕ್ಕಿಹಿಟ್ಟು ಹಾಕಿಕೊಳ್ಳಿ. ಈ ಮಾಸ್ಕ್ ನ್ನು ಮುಖಕ್ಕೆ ಹಚ್ಚಿಕೊಂಡು 15-20 ನಿಮಿಷ ಕಾಲ ಹಾಗೆ ಬಿಡಿ. ವಾರದಲ್ಲಿ ಮೂರು ದಿನ ಹಚ್ಚಿಕೊಂಡರೆ ಒಳ್ಳೆಯ ಚರ್ಮವನ್ನು ಪಡೆಯಬಹುದು.

* ಪಪ್ಪಾಯಿಯ ತಿರುಳಿಗೆ ಮೊಸರು, ನಿಂಬೆರಸ, ಜೇನುತುಪ್ಪ ಮತ್ತು ಮೊಟ್ಟೆಯ ಬಿಳಿ ಲೋಳೆಯನ್ನು ಹಾಕಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಬಳಿಕ ಮುಖಕ್ಕೆ ಹಚ್ಚಿಕೊಳ್ಳಿ. ಮುಖದ ಮೇಲೆ ಹಚ್ಚಿಕೊಂಡು 15 ನಿಮಿಷ ಕಾಲ ಹಾಗೆ ಬಿಟ್ಟುಬಿಡಿ. ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ಚರ್ಮದ ಕಾಂತಿಯನ್ನು ಹೆಚ್ಚಿಸಿ ಕಲೆಗಳನ್ನು ನಿವಾರಿಸುವುದು.

ಪುದೀನಾ ಎಲೆಯ ಪೇಸ್ಟ್

ಪುದೀನಾ ಎಲೆಯ ಪೇಸ್ಟ್

ಈ ಪೇಸ್ಟ್ ಮಾಡಿಕೊಳ್ಳಲು ತಾಜಾ ಪುದೀನಾ ಎಲೆಗಳನ್ನು ಬಳಸಿಕೊಳ್ಳಬೇಕು. ಇದನ್ನು ತಯಾರಿಸಿದ ತಕ್ಷಣ ಬಳಸಿಕೊಳ್ಳಬೇಕು. ಫ್ರಿಡ್ಜ್ ನಲ್ಲಿ ಇಡಬಾರದು. ಪುದೀನಾ ಎಲೆಯ ಪೇಸ್ಟ್ ಮಾಡಿ ಒಂದು ಸಲಕ್ಕೆ ಬಳಸಿಕೊಳ್ಳಿ. ಮರುದಿನ ಮತ್ತೆ ತಾಜಾ ಪುದೀನಾ ಎಲೆಗಳನ್ನು ಬಳಸಿ.

ತಯಾಸುವ ವಿಧಾನ

*1 ಕಟ್ಟು ಪುದೀನಾ ಎಲೆಗಳು *ಒಂದು ಸಣ್ಣ ಪಾತ್ರೆಯಲ್ಲಿ ನೀರು ಹಾಕಿಕೊಂಡು ಅದಕ್ಕೆ ಪುದೀನಾ ಎಲೆಗಳನ್ನು ಹಾಕಿ ಎರಡನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ.

*ಮೊದಲ ಸಲ ಇದು ತುಂಬಾ ಕಡು ಬಣ್ಣವಾಗಿ ಕಾಣಿಸಿಕೊಳ್ಳಬಹುದು. ಆದರೆ ಸ್ವಲ್ಪ ನೀರು ಹಾಕಿದರೆ ಮತ್ತೆ ತೆಳುವಾಗುವುದು. ಇದರಿಂದ ತೆಳುವಾದ ಪುದೀನಾ ಪೇಸ್ಟ್ ಮಾಡಬಹುದು.

*ಇದನ್ನು ದೇಹಕ್ಕೆ ಸಂಪೂರ್ಣವಾಗಿ ಹಚ್ಚಿಕೊಳ್ಳಿ. ಒಣಗಿದ ಬಳಿಕ ಪುದೀನಾ ನೀರಿನಿಂದ ತೊಳೆಯಿರಿ.

English summary

Easy home remedies to get glowing skin in 15 days

Who doesn’t love silky smooth skin like our favourite magazine models and Bollywood stars? But first of all, with our busy scheduled lifestyle there is hardly any time to go to the parlour and the huge amount of money it takes for an overall skin treatment, it is not possible always. So why don’t we try and do something at home? Our refrigerators and kitchen cabinets have such a lot of useful things to offer us. Why don’t we turn our home into our own personal parlour?
X
Desktop Bottom Promotion