ಒಮ್ಮೆ ಚಾಕಲೇಟ್ ಫೇಸ್ ಮಾಸ್ಕ್ ಬಳಸಿ ನೋಡಿ...

Posted By: Lekhaka
Subscribe to Boldsky

ಚಾಕಲೇಟ್ ಯಾರಿಗೇ ತಾನೇ ಇಷ್ಟವಾಗಲ್ಲ ಹೇಳಿ. ಮಕ್ಕಳಿಂದ ಹಿಡಿದು ದೊಡ್ಡವರ ತನಕ ಪ್ರತಿಯೊಬ್ಬರಿಗೂ ಚಾಕಲೇಟ್ ಇಷ್ಟ. ಅದರಲ್ಲೂ ಮಹಿಳೆಯರು ಇದನ್ನು ತುಂಬಾ ಇಷ್ಟಪಡುವುದು. ಇದಕ್ಕೆ ಮುಖ್ಯ ಕಾರಣ ಇದು ತ್ವಚೆಯ ಆರೋಗ್ಯಕ್ಕೂ ಒಳ್ಳೆಯದು. ಚಾಕಲೇಟ್ ತ್ವಚೆಯ ಆರೈಕೆಗೆ ತುಂಬಾ ದುಬಾರಿ ವಸ್ತು. ಚಾಕಲೇಟ್ ನಲ್ಲಿ ಇರುವಂತಹ ಫ್ಲಾವನಾಯ್ಡ್, ಆ್ಯಂಟಿಆಕ್ಸಿಡೆಂಟ್ ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡಿ ತ್ವಚೆಗೆ ಹಾನಿಯಾಗದಂತೆ ತಡೆಯುವುದು.

ಚರ್ಮಕ್ಕೆ ಫ್ರೀ ರ್ಯಾಡಿಕಲ್ ತುಂಬಾ ಹಾನಿಕಾರಕ. ಇದು ಕಾಲಜನ್ ವಿಘಟಿಸಿ ವಯಸ್ಸಾಗುವ ಲಕ್ಷಣಗಳನ್ನು ತೋರಿಸುವುದು ಮತ್ತು ಇದರಿಂದ ನೀವು ತುಂಬಾ ವಯಸ್ಸಾದವರಂತೆ ಕಾಣುವಿರಿ. ಇಂತಹ ಸಮಯದಲ್ಲಿ ಚಾಕಲೇಟ್ ತುಂಬಾ ಪರಿಣಾಮಕಾರಿ ಮತ್ತು ಚರ್ಮಕ್ಕೆ ಹಾನಿ ಉಂಟು ಮಾಡುವ ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುವುದು. ಯೌವನಭರಿತ ಚರ್ಮವನ್ನು ಪಡೆಯಲು ಹಲವಾರು ರೀತಿಯ ವಿಧಾನಗಳು ಇಂದಿನ ದಿನಗಳಲ್ಲಿ ಲಭ್ಯವಿದೆ. ಇಂದು ಬೋಲ್ಡ್ ಸ್ಕೈ ನಿಮಗೆ ತುಂಬಾ ಸರಳ ಹಾಗೂ ಮನೆಯಲ್ಲೇ ತಯಾರಿಸಬಹುದಾದ ಪರಿಣಾಮಕಾರಿ ಮಾಸ್ಕ್ ಬಗ್ಗೆ ತಿಳಿಸಿಕೊಡಲಿದೆ.  ಈ ಮಾಸ್ಕ್ ಗಳಿಂದ ವಯಸ್ಸಾಗುವ ಚಿಹ್ನಗಳು ದೂರವಾಗಿ ಯೌವನಭರಿತ ಚರ್ಮ ಪಡೆಯಬಹುದು. ಇದನ್ನು ಪ್ರಯತ್ನಿಸಿ ನೋಡಿ....

ಸೂಚನೆ:

ಚಾಕಲೇಟ್ ಅನ್ನು ಮುಖಕ್ಕೆ ಹಚ್ಚಿಕೊಳ್ಳುವ ಮೊದಲು ದೇಹದ ಬೇರೆ ಭಾಗಕ್ಕೆ ಹಚ್ಚಿ ಅಲರ್ಜಿಯಾಗುವುದೇ ಎಂದು ತಿಳಿದುಕೊಳ್ಳಿ...

ಚಾಕಲೇಟ್ ಮತ್ತು ಮೊಟ್ಟೆಯ ಬಿಳಿಭಾಗ

ಚಾಕಲೇಟ್ ಮತ್ತು ಮೊಟ್ಟೆಯ ಬಿಳಿಭಾಗ

*ಒಂದು ಬೌಲ್ ನಲ್ಲಿ ಎರಡು ಚಮಚ ಕರಗಿಸಿದ ಚಾಕಲೇಟ್ ಮತ್ತು ಒಂದು ಮೊಟ್ಟೆಯ ಬಿಳಿ ಲೋಳೆ ಹಾಕಿ.

*ಈ ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡ ಬಳಿಕ ನಿಮ್ಮ ಮುಖದ ಮೇಲೆ ಹಚ್ಚಿಕೊಳ್ಳಿ.

*ತಣ್ಣೀರಿನಿಂದ ತೊಳೆಯುವ ಮೊದಲು ಇದು ಮುಖದ ಮೇಲೆ 10-15 ನಿಮಿಷ ಕಾಲ ಹಾಗೆ ಇರಲಿ.

*ವಾರದಲ್ಲಿ ಒಂದು ಸಲ ಈ ಮಾಸ್ಕ್ ನ್ನು ಬಳಸಿಕೊಂಡು ಪರಿಣಾಮಕಾರಿ ಫಲಿತಾಂಶ ಸಿಗುವುದು.

ಚಾಕಲೇಟ್ ಮತ್ತು ಆಲಿವ್ ತೈಲ

ಚಾಕಲೇಟ್ ಮತ್ತು ಆಲಿವ್ ತೈಲ

*ಒಂದು ಚಮಚ ಆಲಿವ್ ತೈಲ ಮತ್ತು ಒಂದು ಚಮಚ ಕರಗಿಸಿದ ಚಾಕಲೇಟ್ ಮಿಶ್ರಣ ಮಾಡಿ.

*ಮುಖದ ಮೇಲಿನ ಚರ್ಮಕ್ಕೆ ಹಚ್ಚಿಕೊಂಡು ಹತ್ತು ನಿಮಿಷ ಹಾಗೆ ಬಿಡಿ.

*ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

*ಫ್ರೀ ರ್ಯಾಡಿಕಲ್ ಚರ್ಮಕ್ಕೆ ಹಾನಿ ಉಂಟು ಮಾಡುವುದನ್ನು ತಡೆಯಲು ಈ ಚಾಕಲೇಟ್ ಮಾಸ್ಕ್ ಅನ್ನು ತಿಂಗಳಲ್ಲಿ ಎರಡು ಸಲ ಬಳಸಿ.

ಚಾಕಲೇಟ್ ಮತ್ತು ರೋಸ್ ವಾಟರ್

ಚಾಕಲೇಟ್ ಮತ್ತು ರೋಸ್ ವಾಟರ್

*ಒಂದು ಚಮಚ ಕರಗಿಸಿದ ಚಾಕಲೇಟ್ ಮತ್ತು ಒಂದು ಚಮಚ ರೋಸ್ ವಾಟರ್ ಮಿಶ್ರಣ ಮಾಡಿ.

*ಈ ಮಾಸ್ಕ್ ನಿಂದ ಮುಖದ ಮೇಲೆ ಮಸಾಜ್ ಮಾಡಿಕೊಳ್ಳಿ ಮತ್ತು 15 ನಿಮಿಷ ಕಾಲ ಹಾಗೆ ಬಿಡಿ.

*ಹೀಗೆ ಮಾಡಿದ ಬಳಿ ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

*ವಾರದಲ್ಲಿ ಒಂದು ಸಲ ಈ ಮಾಸ್ಕ್ ಬಳಸಿಕೊಂಡರೆ ಚರ್ಮವು ತುಂಬಾ ಯೌವನಭರಿತವಾಗಿ ಕಾಣುವುದು.

ಚಾಕಲೇಟ್ ಮತ್ತು ಬಾದಾಮಿ ತೈಲ

ಚಾಕಲೇಟ್ ಮತ್ತು ಬಾದಾಮಿ ತೈಲ

*ಮೂರು ಚಮಚ ಬಾದಾಮಿ ತೈಲ ಮತ್ತು ಒಂದು ಚಮಚ ಕರಗಿಸಿದ ಚಾಕಲೇಟ್ ಮಿಶ್ರಣ ಮಾಡಿ.

*ಈ ಮಾಸ್ಕ್ ನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ.

* ಚರ್ಮದ ಮೇಲೆ ಮಾಸ್ಕ್ ನ್ನು ಹಚ್ಚಿಕೊಂಡು 15-20 ನಿಮಿಷ ಹಾಗೆ ಬಿಡಿ. ಬಳಿಕ ಹಗುರ ಕ್ಲೆನ್ಸರ್ ಮತ್ತು ನೀರಿನಿಂದ ತೊಳೆಯಿರಿ.

*ತಿಂಗಳಲ್ಲಿ ಎರಡು ಸಲ ಈ ಮಾಸ್ಕ್ ತಯಾರಿಸಿದರೆ ಅದರಿಂದ ನೆರಿಗೆ ಮತ್ತು ಗೆರೆಗಳು ಮಾಯವಾಗುವುದು.

ಚಾಕಲೇಟ್ ಮತ್ತು ಬಾಳೆಹಣ್ಣು

ಚಾಕಲೇಟ್ ಮತ್ತು ಬಾಳೆಹಣ್ಣು

*ಒಂದು ಹಣ್ಣಾದ ಬಾಳೆಹಣ್ಣು ಮತ್ತು ಎರಡು ಚಮಚ ಚಾಕಲೇಟ್ ಮಿಶ್ರಣ ಮಾಡಿ.

* ತೆಳುವಾದ ಮಾಸ್ಕ್ ನ್ನು ನಿಮ್ಮ ಮುಖದ ಚರ್ಮಕ್ಕೆ ಹಚ್ಚಿಕೊಂಡು 10-15 ನಿಮಿಷ ಕಾಲ ಹಾಗೆ ಬಿಡಿ.

* ಇದರ ಬಳಿಕ ಉಗುರುಬೆಚ್ಚಗಿನ ನೀರು ಮತ್ತು ಹಗುರ ಕ್ಲೆನ್ಸರ್ ಬಳಸಿ ಮುಖ ತೊಳೆಯಿರಿ.

*ಎರಡು ವಾರಕ್ಕೊಮ್ಮೆ ಈ ಮಾಸ್ಕ್ ನ್ನು ಬಳಸಿಕೊಂಡರೆ ನಯ ಹಾಗೂ ಸುಂದರ ಚರ್ಮ ನಿಮ್ಮದಾಗುವುದು.

ಚಾಕಲೇಟ್ ಹಾಲು ಮತ್ತು ಗುಲಾಬಿ ಸಾರಭೂತ ತೈಲ

ಚಾಕಲೇಟ್ ಹಾಲು ಮತ್ತು ಗುಲಾಬಿ ಸಾರಭೂತ ತೈಲ

*ಒಂದು ಗಾಜಿನ ಸಣ್ಣ ಪಿಂಗಾಣಿ ತೆಗೆದುಕೊಳ್ಳಿ. ಇದಕ್ಕೆ ಚಾಕಲೇಟ್ ತುಂಡುಗಳನ್ನು ಹಾಕಿ ಮತ್ತು 2-3 ಚಮಚ ಹಸಿ ಹಾಲು ಮತ್ತು 3 ಚಮಚ ಗುಲಾಬಿ ಸಾರಭೂತ ತೈಲ ಹಾಕಿ.

*ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ.

*ಹತ್ತು ನಿಮಿಷ ಕಾಲ ಮುಖದ ಮೇಲೆ ಇರಲಿ. ಬಳಿಕ ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

*ತಿಂಗಳಲ್ಲಿ ಒಂದು ಸಲ ಈ ಮಾಸ್ಕ್ ಬಳಸಿಕೊಂಡರೆ ಅದರಿಂದ ಮೊಡವೆ ಬರುವುದನ್ನು ತಡೆಯಬಹುದು.

ಚಾಕಲೆಟ್ ಮತ್ತು ಜೇನುತುಪ್ಪ

ಚಾಕಲೆಟ್ ಮತ್ತು ಜೇನುತುಪ್ಪ

*ಒಂದು ಚಮಚ ಚಾಕಲೇಟ್ ಮತ್ತು 2 ಚಮಚ ಜೇನುತುಪ್ಪ ಬೆರೆಸಿಕೊಳ್ಳಿ.

* ಮಿಶ್ರಣವನ್ನು ಮುಖದ ಮೇಲೆ ಹಚ್ಚಿಕೊಂಡ ಬಳಿಕ ಸುಮಾರು ಹತ್ತರಿಂದ ಹದಿನೈದು ನಿಮಿಷ ಹಾಗೆ ಬಿಡಿ.

*ಬಳಿಕ ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

*ಚರ್ಮವು ಯಾವಾಗಲೂ ಮಾಯಿಶ್ಚರೈಸ್ ಆಗಿರಲು ಮತ್ತು ತೇವಾಂಶದಿಂದ ಕೂಡಿರಲು ಈ ಚಾಕಲೇಟ್ ಮಾಸ್ಕ್ ಬಳಸಿಕೊಳ್ಳಿ.

ಚಾಕಲೇಟ್ ಮತ್ತು ವಿಟಮಿನ್ ಈ ತೈಲ

ಚಾಕಲೇಟ್ ಮತ್ತು ವಿಟಮಿನ್ ಈ ತೈಲ

*ವಿಟಮಿನ್ ಈ ಕ್ಯಾಪ್ಸೂಲ್ ನಿಂದ ತೈಲ ತೆಗೆಯಿರಿ ಮತ್ತು ಅದನ್ನು ಒಂದು ಚಮಚ ಕರಗಿಸಿದ ಚಾಕಲೇಟ್ ಜತೆ ಸೇರಿಸಿ.

*ಈ ಮಿಶ್ರಣವನ್ನು ಮುಖದ ಚರ್ಮಕ್ಕೆ ಹಚ್ಚಿಕೊಳ್ಳಿ.

*ಹತ್ತು ನಿಮಿಷ ಕಾಲ ಹಾಗೆ ಬಿಟ್ಟ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

*ಈ ಮಾಸ್ಕ್ ನ್ನು ಕಲೆಗಳ ನಿವಾರಣೆ ಮತ್ತು ಕಾಂತಿಯುತ ಚರ್ಮಕ್ಕಾಗಿ ಬಳಸಿಕೊಳ್ಳಿ.

English summary

Easy And Effective DIY Chocolate Face Masks For Youthful Skin

This is where chocolate can come to your skin's rescue and fight off the skin-damaging free radicals. Moreover, there are numerous ways in which you can use this age-defying ingredient for achieving a youthful skin. Today, at Boldsky, we've brought together a list of easy and effective chocolate face masks that you can make at home.These DIY masks can ward off unsightly signs of ageing whilst imparting a youthful glow on your face. Give them a try to get the kind of skin you've always yearned for.