ಉಪ್ಪಿನಿಂದ ತಯಾರಿಸಿದ, ಕಡಿಮೆ ಖರ್ಚಿನ ತ್ವಚೆಯ ಸ್ಕ್ರಬ್‌ಗಳು!

By: Anuradha
Subscribe to Boldsky

ಉಪ್ಪು ಅಡುಗೆಯಲ್ಲಿ ಹೇಗೆ ಮುಖ್ಯ ಪಾತ್ರ ವಹಿಸುವದೋ, ಹಾಗೆಯೇ ಸೌಂದರ್ಯವರ್ಧನೆಯಲ್ಲೂ ಪ್ರಮುಖ ಪಾತ್ರ ವಹಿಸುವದೆಂದರೆ ಆಶ್ಚರ್ಯವೆನಿಸುವದಲ್ಲವೆ? ಇಡೀ ದಿನ ಹೊರಗಿನ ಧೂಳು, ಮಣ್ಣು,ಬಿಸಿಲಿಗೆ ಬಳಲಿ ತ್ವಚೆಯು ಕಾಂತಿಯನ್ನು ಕಳೆದುಕೊಳ್ಳಬಹುದು. ತ್ವಚೆಯ ಆರೋಗ್ಯ ರಕ್ಷಿಸಿಕೊಳ್ಳಲು ಈಗ ಯುವಜನತೆ ಏನೆಲ್ಲ ಪರದಾಡುವದು. ಪದೇ ಪದೇ ಪಾರ್ಲರುಗಳಿಗೆ ಹೋಗಿ ನೂರಾರು,ಸಾವಿರಾರುಗಳಷ್ಟು ದುಡ್ಡು ಸುರಿಯುವರು, ಕೆಲವೊಮ್ಮೆ ಅದಕ್ಕೆ ತಕ್ಕಂತೆ ನಮಗೆ ಒಳ್ಳೆಯ ಪರಿಣಾಮಗಳೂ ಸಿಗಲಿಕ್ಕಿಲ್ಲ.

ಕೇವಲ ಉಪ್ಪು ಮತ್ತು ಕೆಲವು ನೈಸರ್ಗಿಕ ವಸ್ತುಗಳನ್ನು ಉಪಯೋಗಿಸಿಕೊಂಡೇ ತ್ವಚೆಯನ್ನು ಕಾಪಾಡಿಕೊಳ್ಳಬಹುದು ಎಂದರೆ ನಂಬುವಿರಾ? ಇದು ಆಲ್ಮೋಸ್ಟ್ ಜೀರೊ ಇನ್ವೆಸ್ಟ್‌ಮೆಂಟ್ ಸ್ಕೀಮ್ ತರಹ! ನೀವು ತಯಾರಿಸಿದ ಮಿಶ್ರಣವನ್ನು ಒಮ್ಮೆ ನಿಮ್ಮ ಕೈ ಅಥವಾ ಕಾಲಿನ ಮೇಲೆ ಪ್ರಯೋಗಿಸಿ ನಂತರ ಮುಖದ ತ್ವಚೆಗೆ ಲೇಪಿಸಿಕೊಂಡು ನೋಡಿ.

ಉಪ್ಪು ಮತ್ತು ಕೊಬ್ಬರಿ ಎಣ್ಣೆಯ ಮಿಶ್ರಣ

ಉಪ್ಪು ಮತ್ತು ಕೊಬ್ಬರಿ ಎಣ್ಣೆಯ ಮಿಶ್ರಣ

ಎರಡು ಚಮಚ ಉಪ್ಪು ಮತ್ತು ರಿಂದ ನಾಲ್ಕು ಚಮಚದಷ್ಟು ಕೊಬ್ಬರಿ ಎಣ್ಣೆಯ ಮಿಶ್ರಣವನ್ನು ತಯಾರಿಸಿಕೊಳ್ಳಿ. ಇದನ್ನು ನಿಮ್ಮ ತ್ವಚೆಗೆ ಚೆನ್ನಾಗಿ ಲೇಪಿಸಿಕೊಂಡು 5 ರಿಂದ 10ನಿಮಿಷ ಹಾಗೆ ಬಿಟ್ಟುಬಿಡಿ. ನಂತರ ಸ್ವಚ್ಚವಾದ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ. ವಾರಕ್ಕೊಮ್ಮೆ ಇಷ್ಟು ಮಾಡಿಡರೆ ಸಾಕು ಒಳ್ಳೆಯ ಪರಿಣಾಮ ದೊರೆಯುವದು.

ಉಪ್ಪು ಮತ್ತು ಫಿಲ್ಟರ್ ಕಾಫಿ ಪೌಡರ್

ಉಪ್ಪು ಮತ್ತು ಫಿಲ್ಟರ್ ಕಾಫಿ ಪೌಡರ್

ಕಾಫಿ ಮಾಡಿ ಉಳಿದ ಪೌಡರ್‌ನ್ನು ಉಪ್ಪಿನ ಜೊತೆಗೆ ಚೆನ್ನಾಗಿ ಬೆರೆಸಿಕೊಳ್ಳಿ. ೩ ಚಮಚ ಉಪ್ಪಿಗೆ ೨ ಚಮಚದಷ್ಟು ಕಾಫಿ ಪೌಡರು ಮತ್ತು ೨ ಚಮಚದಷ್ಟು ಶುದ್ಧ ನೀರಾದರೆ ಸಾಕು. ಸ್ವಲ್ಪ ನಿಧಾನವಾಗಿ ಮಸಾಜ್ ಮಾಡುತ್ತಾ ಇರಿ. ನಂತರ ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿ. ಹದಿನೈದು ದಿನಕೊಮ್ಮೆ ಈ ವಿಧಾನ ಅನುಸರಿಸಿದರೂ ಸಾಕು, ಅತ್ಯಂತ ಒಳ್ಳೆಯ ಪರಿಣಾಮಗಳನ್ನು ನೋಡುತ್ತೀರಿ.

ಉಪ್ಪು ಮತ್ತು ಲಿಂಬೆ ರಸ

ಉಪ್ಪು ಮತ್ತು ಲಿಂಬೆ ರಸ

4 ಚಮಚ ಲಿಂಬೆರಸಕ್ಕೆ 3 ಚಮಚ ಉಪ್ಪನ್ನು ಬೆರೆಸಿ. ಚೆನ್ನಾಗಿ ಕಲೆಸಿಕೊಂಡು ತ್ವಚೆಗೆ ಲೇಪಿಸಿಕೊಳ್ಳಿ. ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿಕೊಂಡು ನೋಡಿ. ತ್ವಚೆಯು ಮಿರಮಿರನೆ ಮಿಂಚುವದು.ಇದು ನಿಮ್ಮ ಮೈಬಣ್ಣವನ್ನು ಸುಧಾರಿಸುವದಲ್ಲದೆ, ತ್ವಚೆಗೆ ಒಳ್ಳೆಯ ಕಾಂತಿಯನ್ನು ತಂದು ಕೊಡುತ್ತದೆ.

ಉಪ್ಪು, ಓಟ್ ಮೀಲ್ ಮತ್ತು ಆಲಿವ್ ಎಣ್ಣೆಯ ಮಿಶ್ರಣ

ಉಪ್ಪು, ಓಟ್ ಮೀಲ್ ಮತ್ತು ಆಲಿವ್ ಎಣ್ಣೆಯ ಮಿಶ್ರಣ

ಒಂದು ಚಮಚ ಓಟ್ ಮೀಲ್, 3 ಚಮಚ ಉಪ್ಪು ಮತ್ತು ೪ ಚಮಚದಷ್ಟು ಆಲಿವ್ ಎಣ್ಣೆಯ ಮಿಶ್ರಣವನ್ನು ತಯಾರಿಸಿಕೊಳ್ಳಿ. ಈ ಮಿಶ್ರಣವನ್ನು ಚೆನ್ನಾಗಿ ತ್ವಚೆಯ ಮೇಲೆ ಮಸಾಜ್ ಮಾಡಿ, 10 ರಿಂದ 15 ನಿಮಿಷಗಳ ನಂತರ ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ತಿಂಗಳಿಗೆರಡು ಬಾರಿ ಈ ವಿಧಾನ ಅನುಸರಿಸಿದರೂ ಸಾಕು, ಕಾಂತಿಯುಳ್ಳ ತ್ವಚೆ ನಿಮ್ಮದಾಗುವದು.

ಉಪ್ಪು, ಬ್ರೌನ್ ಶುಗರ್ ಮತ್ತು ರೋಸ್ ವಾಟರ್‌ನ ಮಿಶ್ರಣ

ಉಪ್ಪು, ಬ್ರೌನ್ ಶುಗರ್ ಮತ್ತು ರೋಸ್ ವಾಟರ್‌ನ ಮಿಶ್ರಣ

ಎರಡು ಚಮಚ ಉಪ್ಪು, 3 ಚಮಚ ಬ್ರೌನ್ ಶುಗರ್ ಮತ್ತು 4 ಚಮಚ ರೋಸ್ ವಾಟರ್‌ನ ಮಿಶ್ರಣ ತಯಾರಿಸಿಕೊಳ್ಳಿ. ಇದನು ತ್ವಚೆಗೆ ಅನ್ವಯಿಸಿಕೊಂಡು ನಿಧಾನವಾಗಿ ಮಸಾಜ್ ಮಾಡಿ. ನಂತರ ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿಕೊಳ್ಳಿ. ಒಳ್ಳೆಯ ಪರಿಣಾಮಗಳಿಗಾಗಿ ತಿಂಗಳಿಗೊಮ್ಮೆ ಈ ವಿಧಾನವನ್ನು ಅನುಸರಿಸಿದರೂ ಸಾಕು.

ಉಪ್ಪು ಮತ್ತು ಸೇಬಿನ ರಸದ ಮಿಶ್ರಣ

ಉಪ್ಪು ಮತ್ತು ಸೇಬಿನ ರಸದ ಮಿಶ್ರಣ

3 ಚಮಚ ಉಪ್ಪಿನ ಜೊತೆಗೆ 1 ಚಮಚ ಸೇಬಿನ ರಸ ಮತ್ತು 1 ಚಮಚ ಸ್ವಚ್ಛ ನೀರನ್ನು ಬೆರೆಸಿಕೊಳ್ಳಿ. ಈ ಮಿಶ್ರಣವನ್ನು ತ್ವಚೆಗೆ ಅನ್ವಯಿಸಿಕೊಂಡು ಹತ್ತು ನಿಮಿಷ ಬಿಟ್ಟುಬಿಡಿ, ನಂತರ ಶುದ್ಧವಾದ ನೀರಿನಿಂದ ತೊಳೆಕೊಂಡು ಕಾಂತಿಯುತ ತ್ವಚೆ ನಿಮ್ಮದಾಗಿಸಿಕೊಳ್ಳಿ.

ಉಪ್ಪು ಮತ್ತು ಲೋಳೆ ಸರದ ಮಿಶ್ರಣ:

ಉಪ್ಪು ಮತ್ತು ಲೋಳೆ ಸರದ ಮಿಶ್ರಣ:

3 ಚಮಚಗಳಷ್ಟು ಅಲೋವೆರ ರಸವನ್ನು ೪ ಚಮಚ ಉಪ್ಪಿನೊಂದಿಗೆ ಬೆರೆಸಿಕೊಳ್ಳಿ. ಈ ಮಿಶ್ರಣವನ್ನು ತ್ವಚೆಗೆ ಅನ್ವಯಿಸಿಕೊಂಡು ೫ ರಿಂದ ೧೦ ನಿಮಿಷ ಬಿಟ್ಟುಬಿಡಿ. ನಂತರ ಸ್ವಚ್ಛವಾದ ನೀರಿನಿಂದ ತೊಳೆದುಕೊಳ್ಳಿ. 15 ದಿನಗಳಿಗೊಮ್ಮೆ ಈ ವಿಧಾನವನ್ನು ಅನುಸರಿಸಿದರೆ ಸಾಕು ಹೊಳಪುಳ್ಳ ತ್ವಚೆ ನಿಮ್ಮದಾಗುವದು.

ಉಪ್ಪು ಮತ್ತು ಬದಾಮಿನ ಎಣ್ಣೆ

ಉಪ್ಪು ಮತ್ತು ಬದಾಮಿನ ಎಣ್ಣೆ

ಈ ಮಿಶ್ರಣ ನಿಮ್ಮ ತ್ವಚೆಗೆ ಲಾಂಗ್ ಲಾಸ್ಟಿಂಗ್ ಎಫೆಕ್ಟ್ ತರುವದು ಎಂದರೆ ಸುಳ್ಳಾಗಲಾರದು. 3 ಚಮಚ ಉಪ್ಪಿನೊಂದಿಗೆ 2 ಚಮಚ ಬದಾಮಿನ ಎಣ್ಣೆಯನ್ನು ಬೆರೆಸಿಕೊಳ್ಳಿ. ತ್ವಚೆಗೆ ನಿಧಾನವಾಗಿ ಲೇಪಿಸಿಕೊಳ್ಳಿ. ನಂತರ ಸ್ವಚ್ಛವಾದ ನೀರಿನಿಂದ ತೊಳೆದುಕೊಳ್ಳಿ. ಹೊಳಪುಳ್ಳ ,ಕಲೆರಹಿತ ತ್ವಚೆ ನಿಮ್ಮದಾಗುವದರಲ್ಲಿ ಸಂಶಯವೇ ಇಲ್ಲ!

English summary

DIY Sea Salt Body Scrubs For Flawless Skin

Sea salt can come to your skin’s rescue and help it become clean and clear. This famous component is loaded with powerful antioxidants and exfoliating agents that can eliminate toxins and impurities from your skin. More often than not, these impurities make your skin prone to infections and ruin its natural beauty. To ensure that your skin stays dirt-free, you should use sea salt to exfoliate your skin. And, the best way to do that would be by combining it with other natural ingredients that too possess exfoliating properties.
Subscribe Newsletter