For Quick Alerts
ALLOW NOTIFICATIONS  
For Daily Alerts

ಕೋಮಲ ತ್ವಚೆಗೆ ಮನೆಯಲ್ಲಿ ತಯಾರಿಸಿ 'ಸೌತೆಕಾಯಿ ಫೇಶಿಯಲ್'

By Divya Pandith
|

ನಿತ್ಯವೂ ನಮ್ಮ ಚರ್ಮದ ಮೇಲೆ ಹಾನಿಕಾರಕ ಅಂಶಗಳು ಪರಿಣಾಮ ಬೀರುತ್ತಲೇ ಇರುತ್ತವೆ. ಅಸಮರ್ಪಕ ಜೀವನ ಶೈಲಿ, ದೇಹದ ಶುಚಿತ್ವ ಕಾಪಾಡಿಕೊಳ್ಳುವುದರಲ್ಲಿ ನಿರ್ಲಕ್ಷ್ಯ, ಅಶುಚಿತವಾದ ವಾತಾವರಣ ಹೀಗೆ ಅನೇಕ ಬಗೆಯ ಸಮಸ್ಯೆಗಳು ನಿರಂತರವಾಗಿ ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಲೇ ಇರುತ್ತದೆ. ಇದರಿಂದ ತ್ವಚೆ ಮಂಕಾಗುವುದು, ಗುಳ್ಳೆಗಳು, ಮೊಡವೆ ಹಾಗೂ ತುರಿಕೆಯಂತಹ ಸಮಸ್ಯೆಗಳು ನಿರಂತರವಾಗಿ ತೊಂದರೆಯನ್ನುಂಟು ಮಾಡುತ್ತವೆ.

ಈ ಪರಿಯ ಸಮಸ್ಯೆಗೆ ಮನೆಯಲ್ಲಿಯೇ ಪರಿಹಾರ ನೀಡುವ ಉತ್ಪನ್ನಗಳು ಹಲವಾರಿವೆ. ನೈಸರ್ಗಿಕವಾದ ಈ ಉತ್ಪನ್ನಗಳನ್ನು ಬಳಸುವುದರಿಂದ ತ್ವಚೆಯಲ್ಲಿ ಗಣನೀಯ ಬದಲಾವಣೆಯನ್ನು ಕಾಣಬಹುದು. ಸೂಕ್ತ ವಿಧಾನದಲ್ಲಿ ತಯಾರಿಸಿಕೊಂಡ ಮಿಶ್ರಣವನ್ನು ತ್ವಚೆಯ ಮೇಲೆ ಅನ್ವಯಿಸುವುದರಿಂದ ಸೂರ್ಯನ ಕಿರಣದಿಂದ ಉಂಟಾಗುವ ಹಾನಿ, ಶುಷ್ಕವಾದ ತ್ವಚೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಬಗೆಹರಿಸಬಹುದು.

ವಿಟಮಿನ್ ಸಿ ಹೇರಳವಾಗಿರುವ ಸೌತೆಕಾಯಿಯನ್ನು ಮುಖ್ಯ ಘಟಕಾಂಶವನ್ನಾಗಿಸಿಕೊಂಡು ಕೆಲವು ನೈಸರ್ಗಿಕ ಉತ್ಪನ್‍ಗಳನ್ನು ಸೇರಿಸಬೇಕು. ಇವುಗಳಿಂದ ತಯಾರಿಸಲಾದ ಫೇಶಿಯಲ್ ಮಾಸ್ಕ್‍ಗಳು ತ್ವಚೆಯ ಮೇಲೆ ಯಾವುದೇ ಅಡ್ಡಪರಿಣಾಮ ಬೀರದು. ಮನೆಯಲ್ಲಿ ನಾವೇ ಸುಲಭವಾಗಿ ತಯಾರಿಸಿಕೊಳ್ಳುವ ಈ ಮಾಸ್ಕ್‍ಗಳು ಅತ್ಯಂತ ಪರಿಣಾಮಕಾರಿ ಅನುಭವವನ್ನು ನೀಡುತ್ತವೆ. ತ್ವಚೆಯ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಉಂಟುಮಾಡುವ 10 ಸುಲಭ ಫೇಶಿಯಲ್ ಕ್ರಮಗಳು ಯಾವವು ಎನ್ನುವುದನ್ನು ಅರಿಯೋಣ....

ನಿಂಬೆ ರಸದೊಂದಿಗಿನ ಫೇಶಿಯಲ್

ನಿಂಬೆ ರಸದೊಂದಿಗಿನ ಫೇಶಿಯಲ್

*3 ಟೇಬಲ್ ಚಮಚ ಸೌತೆಕಾಯಿ ರಸ ಮತ್ತು 1 ಟೇಬಲ್ ಚಮಚ ನಿಂಬೆ ರಸ.

*ಎರಡು ಉತ್ಪನ್ನಗಳನ್ನು ಚೆನ್ನಾಗಿ ಮಿಶ್ರಗೊಳಿಸಿ.

*ಮಿಶ್ರಣವನ್ನು ಮುಖದ ಮೇಲೆ ಅನ್ವಯಿಸಿ, ದಿನವಿಡೀ ಹಾಗೇ ಬಿಡಿ.

*ವಾರದಲ್ಲಿ 2 ಬಾರಿ ಹೀಗೆ ಮಾಡಿ ಸ್ವಚ್ಛ ಹಾಗೂ ಕಾಂತಿಯುತ ತ್ವಚೆಯನ್ನು ಪಡೆಯಿರಿ.

ಗ್ರೀನ್ ಟೀಯೊಂದಿಗೆ ಫೇಶಿಯಲ್

ಗ್ರೀನ್ ಟೀಯೊಂದಿಗೆ ಫೇಶಿಯಲ್

*ಗ್ರೀನ್ ಟೀಯನ್ನು ತಯಾರಿಸಿ, ಫ್ಯಾನ್ ಗಾಳಿಯ ಕೆಳಗಿಟ್ಟು ತಣಿಸಿ.

*2-3 ಟೇಬಲ್ ಚಮಚ ಸೌತೆಕಾಯಿ ರಸದೊಂದಿಗೆ 11 ಟೇಬಲ್ ಚಮಚ ಗ್ರೀನ್ ಟೀ ಬೆರೆಸಿ ಮಿಶ್ರಗೊಳಿಸಿ.

*ಇದನ್ನು ಸ್ಪ್ರೇ ಬಾಟಲ್‍ಗೆ ವರ್ಗಾಯಿಸಿ.

*ಮುಖದ ಮೇಲೆ ಇದನ್ನು ಸ್ಪ್ರೇ ಮಾಡಿ ತ್ವಚೆಯನ್ನು ಆರೈಕೆಮಾಡಿ. ಹೀಗೆ ಮಾಡುವುದರಿಂದ ಪ್ರಕಾಶಮಾನವಾದ ತ್ವಚೆಯನ್ನು ಪಡೆದುಕೊಳ್ಳಬಹುದು.

ಅಲೋವೆರಾ ಜೆಲ್‍ನೊಂದಿಗೆ ಫೇಶಿಯಲ್

ಅಲೋವೆರಾ ಜೆಲ್‍ನೊಂದಿಗೆ ಫೇಶಿಯಲ್

*1 ಟೇಬಲ್ ಚಮಚ ಅಲೋವೆರಾ ಜೆಲ್‍ನೊಂದಿಗೆ 1 ಟೇಬಲ್ ಚಮಚ ಸೌತೆಕಾಯಿ ರಸವನ್ನು ಸೇರಿಸಿ.

*ಇವೆರಡನ್ನು ಸೇರಿಸಿ, ಮೃದುವಾದ ಪೇಸ್ಟ್ ತಯಾರಿಸಿ.

*ಒಂದು ಹತ್ತಿ ಉಂಡೆಯನ್ನು ಮಿಶ್ರಣದಲ್ಲಿ ಅದ್ದಿ, ಮುಖದ ಮೇಲೆ ಅನ್ವಯಿಸಿ.

*ಆಗಾಗ ದಿನವಿಡೀ ಮಾಡುವುದರಿಂದ ತ್ವಚೆಯು ಶುಚಿಯಾಗಿ ತೇವಾಂಶದಿಂದ ಕೂಡಿರುತ್ತದೆ.

ತ್ವಚೆ ಹೆಚ್ಚು ಆಕರ್ಷಕವಾಗಬೇಕೇ ಹಾಗಾದರೆ ಬ್ಲೀಚಿಂಗ್ ಪ್ರಯೋಗ ಮಾಡಿ

ಲ್ಯಾವೆಂಡರ್ ಎಸೆನ್ಸಿಯಲ್ ಎಣ್ಣೆಯೊಂದಿಗೆ ಫೇಶಿಯಲ್

ಲ್ಯಾವೆಂಡರ್ ಎಸೆನ್ಸಿಯಲ್ ಎಣ್ಣೆಯೊಂದಿಗೆ ಫೇಶಿಯಲ್

*2 ಟೇಬಲ್ ಚಮಚ ಸೌತೆಕಾಯಿ ರಸದೊಂದಿಗೆ 3-4 ಹನಿ ಲ್ಯಾವೆಂಡರ್ ಎಣ್ಣೆಯನ್ನು ಸೇರಿಸಿ.

*ಮನೆಯಲ್ಲಿ ತಯಾರಿಸಿದ ಈ ಮಿಶ್ರಣವನ್ನು ಒಂದು ಸ್ಪ್ರೇ ಬಾಟಲ್‍ಗೆ ವರ್ಗಾಯಿಸಿ.

*ದಿನದಲ್ಲೊಮ್ಮೆ ಮುಖದ ಮೇಲೆ ಇದನ್ನು ಅನ್ವಯಿಸುವುದರಿಂದ ಕಾಂತಿಯುತವಾದ ತ್ವಚೆಯನ್ನು ಪಡೆಯಬಹುದು.

*ಈ ಫೇಶಿಯಲ್ ಮಿಶ್ರಣವನ್ನು ವಾರದಲ್ಲಿ 2-3 ಬಾರಿ ಅನ್ವಯಿಸಿ.

ವಿಟಮಿನ್ ಇ ಎಣ್ಣೆಯೊಂದಿಗೆ ಫೇಶಿಯಲ್

ವಿಟಮಿನ್ ಇ ಎಣ್ಣೆಯೊಂದಿಗೆ ಫೇಶಿಯಲ್

*ವಿಟಮಿನ್ ಇ ಕ್ಯಾಪ್ಸುಲ್/ಮಾತ್ರೆಯಿಂದ ಎಣ್ಣೆಯನ್ನು ಹೊರತೆಗೆಯಿರಿ. 2 ಟೀ ಚಮಚ ಸೌತೆಕಾಯಿ ರಸದೊಂದಿಗೆ ಬೆರೆಸಿ.

*ಘಟಕಗಳನ್ನು ಚೆನ್ನಾಗಿ ಮಿಶ್ರಗೊಳಿಸಿ.

*ತ್ವಚೆಯ ಮೇಲೆ ಮೃದುವಾಗಿ ಅನ್ವಯಿಸಿ.

*ನಿತ್ಯವೂ ಇದನ್ನು ಬಳಸುವುದರಿಂದ ಕಾಂತಿಯುತವಾದ ತ್ವಚೆಯನ್ನು ಪಡೆಯಬಹುದು.

ಗುಲಾಬಿ ನೀರಿನೊಂದಿಗೆ ಫೇಶಿಯಲ್

ಗುಲಾಬಿ ನೀರಿನೊಂದಿಗೆ ಫೇಶಿಯಲ್

*ಒಂದು ಚಮಚ ಗುಲಾಬಿ ನೀರು ಮತ್ತು ಸೌತೆಕಾಯಿ ರಸವನ್ನು ಸೇರಿಸಿ.

*ಮಿಶ್ರಣವನ್ನು ಒಂದು ಸ್ಪ್ರೇ ಬಾಟಲ್‍ಗೆ ವರ್ಗಾಯಿಸಿ.

*ಮುಖವನ್ನು ಶುದ್ಧವಾದ ನೀರಲ್ಲಿ ತೊಳೆದು, ನಂತರ ಮಿಶ್ರಣವನ್ನು ಸ್ಪ್ರೇ ಮಾಡುವ ಮೂಲಕ ಮುಖದ ಮೇಲೆ ಅನ್ವಯಿಸಿ.

*ಹೀಗೆ ಮಾಡುವುದರಿಂದ ಆಕರ್ಷಕ ನೋಟವನ್ನು ಪಡೆಯಬಹುದು.

ಟೊಮ್ಯಾಟೋ ರಸದೊಂದಿಗೆ ಫೇಶಿಯಲ್

ಟೊಮ್ಯಾಟೋ ರಸದೊಂದಿಗೆ ಫೇಶಿಯಲ್

*ಒಂದು ಟೇಬಲ್ ಚಮಚ ಸೌತೆಕಾಯಿ ರಸದೊಂದಿಗೆ ಒಂದು ಟೀ ಚಮಚ ಟೊಮ್ಯಾಟೋ ರಸವನ್ನು ಸೇರಿಸಿ.

*ಮಿಶ್ರಣವನ್ನು ಒಂದು ಸ್ಪ್ರೇ ಬಾಟಲ್‍ಗೆ ವರ್ಗಾಯಿಸಿ.

*ದಿನಕ್ಕೊಮ್ಮೆ ಮಿಶ್ರಣವನ್ನು ನಿಮ್ಮ ತ್ವಚೆಯ ಮೇಲೆ ಅನ್ವಯಿಸಿ.

*ನಿತ್ಯವೂ ಇದರ ಬಳಕೆ ಮಾಡುವುದರಿಂದ ಪರಿಣಾಮಕಾರಿ ಫಲಿತಾಂಶವನ್ನು ಪಡೆಯಬಹುದು.

ಚಮೋಮೈಲ್ ಟೀಯೊಂದಿಗೆ ಫೇಶಿಯಲ್

ಚಮೋಮೈಲ್ ಟೀಯೊಂದಿಗೆ ಫೇಶಿಯಲ್

*ಒಂದು ಟೇಬಲ್ ಚಮಚ ಸೌತೆಕಾಯಿ ರಸದೊಂದಿಗೆ 1 ಟೀ ಚಮಚ ಚಮೋಮೈಲ್ ಟೀಯನ್ನು ಸೇರಿಸಿ.

*ಮಿಶ್ರಣವನ್ನು ಒಂದು ಸ್ಪ್ರೇ ಬಾಟಲ್‍ಗೆ ವರ್ಗಾಯಿಸಿ.

* ದಿನಕ್ಕೆ 2-3 ಬಾರಿ ಮುಖಕ್ಕೆ ಅನ್ವಯಿಸಿದರೆ ನೀವು ಬಯಸುವಂತಹ ತ್ವಚೆಯನ್ನು ಪಡೆಯಬಹುದು.

*ವಾರದಲ್ಲಿ 2-3 ಬಾರಿ ಬಳಸಿದರೂ ಪರಿಣಾಮಕಾರಿ ಫಲಿತಾಂಶವನ್ನು ಪಡೆಯಬಹುದು.

ಗ್ಲಿಸರಿನ್ ಜೊತೆಯಲ್ಲಿ ಫೇಶಿಯಲ್

ಗ್ಲಿಸರಿನ್ ಜೊತೆಯಲ್ಲಿ ಫೇಶಿಯಲ್

*ಒಂದು ಟೇಬಲ್ ಚಮಚ ಸೌತೆಕಾಯಿ ರಸದೊಂದಿಗೆ 1/2 ಟೀ ಚಮಚ ಗ್ಲಿಸರಿನ್ ಸೇರಿಸಿ.

*ಇವೆರಡನ್ನು ಚೆನ್ನಾಗಿ ಮಿಶ್ರಗೊಳಿಸಿ.

*ಮಿಶ್ರಣವನ್ನು ಒಂದು ಸ್ಪ್ರೇ ಬಾಟಲ್‍ಗೆ ವರ್ಗಾಯಿಸಿ.

*ತ್ವಚೆಯ ಮೇಲೆ ಅನ್ವಯಿಸುವುದರಿಂದ ಸ್ವಚ್ಛ ಹಾಗೂ ಕೋಮಲ ತ್ವಚೆಯನ್ನು ಪಡೆಯಬಹುದು.

ವಿಟ್ಜ್ ಹಾಝೆಲ್‍ನೊಂದಿಗೆ ಫೇಶಿಯಲ್

ವಿಟ್ಜ್ ಹಾಝೆಲ್‍ನೊಂದಿಗೆ ಫೇಶಿಯಲ್

*ಒಂದು ಟೇಬಲ್ ಚಮಚ ಸೌತೆಕಾಯಿ ರಸದೊಂದಿಗೆ 1/2 ಟೀ ಚಮಚ ವಿಟ್ಜ್ ಹಾಝೆಲ್ ಸೇರಿಸಿ.

*ಮಿಶ್ರಗೊಂಡ ಘಟಕಾಂಶವನ್ನು ಸ್ಪ್ರೇ ಬಾಟಲ್‍ಗೆ ವರ್ಗಾಯಿಸಿ.

*ಇದನ್ನು ಮುಖದ ಮೇಲೆ ಅನ್ವಯಿಸುವುದರಿಂದ ತ್ವಚೆಗೆ ಆಳವಾದ ಪೋಷಣೆಯನ್ನು ನೀಡುತ್ತದೆ.

*ಇದರಿಂದ ಪರಿಣಾಮಕಾರಿ ಫಲಿತಾಂಶ ಪಡೆಯಲು ವಾರದಲ್ಲಿ 3-4 ಬಾರಿ ಬಳಸಬೇಕು.

English summary

DIY Facial Mists Using Cucumber For Clear Looking Skin

Facial mist is an essential skin care item that is known for its soothing and healing ability. In the past few years, it has become the go-to beauty item for getting fresh and clear skin. Here, we've curated a list of DIY facial mists using cucumber that can be helpful in improving your skin's quality and texture. Take a look at the recipes here
X
Desktop Bottom Promotion