ಕಲೆ ರಹಿತ ತ್ವಚೆಗಾಗಿ ಮೊಸರಿನಿಂದ ಮಾಡಿದ ಫೇಸ್ ಪ್ಯಾಕ್

By: Jaya subramanya
Subscribe to Boldsky

ಸೌಂದರ್ಯವನ್ನು ಕಾಪಾಡಿಕೊಳ್ಳುವ ವಿಧಾನ ಹಿಂದಿನಿಂದಲೂ ಜಾರಿಯಲ್ಲಿದೆ. ನಮ್ಮ ಪೂರ್ವಜರು ಅವರುಗಳ ಸೌಂದರ್ಯವನ್ನು ಹೇಗೆ ಕಾಪಾಡಿ ಕೊಳ್ಳುತ್ತಿದ್ದರು ಎಂಬುದರ ಇತಿಹಾಸವನ್ನು ಕೆದಕಿದಾಗ ತಿಳಿದು ಬರುವ ಅಂಶಗಳೆಂದರೆ ನೈಸರ್ಗಿಕ ವಿಧಾನಗಳಾಗಿವೆ. ಹೌದು ನಮ್ಮ ಪ್ರಕೃತಿಯಲ್ಲಿರುವ ಹೆಚ್ಚಿನ ಅಂಶಗಳು ನಮ್ಮ ಸೌಂದರ್ಯವನ್ನು ವೃದ್ಧಿಗೊಳಿಸಲು ನೆರವಾಗುತ್ತಿದೆ.

ಉದಾಹರಣೆಗೆ ಕಡಲೆಹಿಟ್ಟು, ಲಿಂಬೆ, ಶ್ರೀಗಂಧ, ಅಕ್ಕಿಹಿಟ್ಟು, ಹಣ್ಣುಗಳು, ತರಕಾರಿಗಳು ಹೀಗೆ ನಿಮ್ಮ ಅಡುಗೆ ಮನೆಯಲ್ಲಿ ನಿತ್ಯ ಉಪಯೋಗಿಸುವ ಎಷ್ಟೋ ವಸ್ತುಗಳನ್ನು ಬಳಸಿಕೊಂಡು ನಿಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಈ ಎಲ್ಲಾ ಪರಿಕರಗಳೊಂದಿಗೆ ನೀವು ಮೊಸರನ್ನು ಬಳಸುತ್ತೀರಿ ಎಂದಾದಲ್ಲಿ ಅದೊಂದು ಅದ್ಭುತ ಸೌಂದರ್ಯ ಪ್ರಸಾಧನವಾಗಲಿದೆ. ಹೌದು ಮೊಸರಿನಿಂದ ನಿಮ್ಮ ಸೌಂದರ್ಯಕ್ಕೆ ದೊರೆಯುವ ಸವಲತ್ತುಗಳನ್ನು ನೀವು ಕಂಡುಕೊಳ್ಳಲ್ಲಿ ನೀವು ಅಧೀರರಾಗುವುದು ಖಂಡಿತ.

ಸೌಂದರ್ಯ ಹೆಚ್ಚಿಸುವ 'ಮೊಸರು'-ಎಷ್ಟು ಹೊಗಳಿದರೂ ಸಾಲದು!

ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಸಿಡ್ ತ್ವಚೆಯ ಕೋಶಗಳಿಗೆ ಹೊಸ ಚೈತನ್ಯವನ್ನು ಉಂಟುಮಾಡುತ್ತದೆ. ರಂಧ್ರಗಳಲ್ಲಿ ಹುದುಗಿರುವ ಕೊಳೆಯನ್ನು ನಿವಾರಿಸುತ್ತದೆ. ನಿಮ್ಮ ತ್ವಚೆಯನ್ನು ಯುವತ್ವ ಮತ್ತು 24x7 ಸಮಯವೂ ತಾಜಾ ಆಗಿ ಇರಿಸುತ್ತದೆ. ಇದರಲ್ಲಿರುವ ಹೆಚ್ಚಿನ ಪ್ರೊಟೀನ್, ವಿಟಮಿನ್ ಮತ್ತು ಮಿನರಲ್‌ಗಳು ನಿಮ್ಮ ತ್ವಚೆಯನ್ನು ತಾಜಾ ಆಗಿರಿಸುವಲ್ಲಿ ಹೆಚ್ಚು ಮಹತ್ವದ ಪಾತ್ರವನ್ನು ವಹಿಸಲಿದೆ. ನಿಮ್ಮ ಮುಖದಲ್ಲಿರುವ ಮೊಡವೆ, ಕಪ್ಪು ಕಲೆಗಳು, ಗುಳ್ಳೆಗಳು ಹೀಗೆ ಯಾವುದೇ ರೀತಿಯ ಸಮಸ್ಯೆಗಳನ್ನು ದೂರಮಾಡುತ್ತದೆ. ಇದರಲ್ಲಿರುವ ಶ್ರೀಮಂತ ಅಂಶಗಳು ನಿಮ್ಮ ಮುಖದ ಮಾಯಿಶ್ಚರೈಸರ್ ಅನ್ನು ಭದ್ರಪಡಿಸುತ್ತದೆ ಮತ್ತು ದೀರ್ಘ ಸಮಯದವರೆಗೆ ಹೈಡ್ರೇಟ್ ಆಗಿ ಇರಿಸುತ್ತದೆ. ಇದರಲ್ಲಿರುವ ತಣ್ಣನೆಯ ಗುಣವು ಮೊಡವೆಯ ಹುಟ್ಟಡಗಿಸುತ್ತದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ನಿಮ್ಮ ಮುಖದ ಕಾಂತಿಯನ್ನು ಇಮ್ಮಡಿಸುವ ಹತ್ತು ಬಗೆಯ ಮೊಸರಿನ ಫೇಸ್ ಪ್ಯಾಕ್‌ಗಳ ಬಗ್ಗೆ ತಿಳಿದುಕೊಳ್ಳೋಣ.

ಮೊಸರು ಮತ್ತು ಜೇನಿನ ಫೇಸ್ ಪ್ಯಾಕ್

ಮೊಸರು ಮತ್ತು ಜೇನಿನ ಫೇಸ್ ಪ್ಯಾಕ್

1 ಚಮಚ ಜೇನು

ಒಂದು ಪಾತ್ರೆಯಲ್ಲಿ ಜೇನು ಮತ್ತು ಮೊಸರನ್ನು ಬೆರೆಸಿಕೊಂಡು ನುಣ್ಣಗಿನ ಮಿಶ್ರಣವನ್ನು ತಯಾರಿಸಿಕೊಳ್ಳಿ. ಮೊದಲಿಗೆ ಕ್ಲೆನ್ಸರ್‌ನಿಂದ ಮುಖವನ್ನು ತೊಳೆದುಕೊಂಡು ಒರೆಸಿ. ಈ ಮಿಶ್ರಣವನ್ನು ನಿಮ್ಮ ಕತ್ತಿನವರೆಗೆ ಮುಖದ ತುಂಬೆಲ್ಲಾ ಹಚ್ಚಿಕೊಳ್ಳಿ. 20 ನಿಮಿಷಗಳ ಕಾಲ ಕಾಯಿರಿ. ನಂತರ ತಣ್ಣೀರಿನಿಂದ ಇದನ್ನು ತೊಳೆದುಕೊಳ್ಳಿ. ಜೇನು ಮತ್ತು ಮೊಸರಿನಲ್ಲಿರುವ ಮಾಯಿಶ್ಚರೈಸಿಂಗ್ ಮಿಶ್ರಣ ನಿಮ್ಮ ತ್ವಚೆಗೆ ಉತ್ತಮ ಆರಾಮವನ್ನು ನೀಡುತ್ತದೆ. ಇದನ್ನು ಮುಖದಲ್ಲಿರುವ ಟ್ಯಾನ್ ಅನ್ನು ನಿವಾರಿಸುತ್ತದೆ.

ಮೊಸರು ಮತ್ತು ಕಡಲೆ ಹಿಟ್ಟಿನ ಪ್ಯಾಕ್

ಮೊಸರು ಮತ್ತು ಕಡಲೆ ಹಿಟ್ಟಿನ ಪ್ಯಾಕ್

ಒಂದು ಪಾತ್ರೆಯಲ್ಲಿ ಒಂದು ಚಮಚ ಕಡಲೆ ಹಿಟ್ಟು ಮತ್ತು ಎರಡು ಚಮಚ ಮೊಸರನ್ನು ತೆಗೆದುಕೊಳ್ಳಿ. ಇದನ್ನು ಮೃದುವಾದ ಮಿಶ್ರಣವನ್ನಾಗಿ ಮಾಡಿಕೊಳ್ಳಿ. ನಿಮ್ಮ ಮುಖಕ್ಕೆ ಇದನ್ನು ಹಚ್ಚಿಕೊಂಡು 15 ನಿಮಿಷಗಳ ತರುವಾಯ ತೊಳೆದುಕೊಳ್ಳಿ. ಇದು ಜಿಡ್ಡಿನ ಮತ್ತ ಸೂಕ್ಷ್ಮ ತ್ವಚೆಗೆ ಸೂಕ್ತವಾದುದಾಗಿದೆ. ಇದು ತಾಜಾ ಕಾಂತಿಯನ್ನು ನೀಡುತ್ತದೆ.

ಮೊಸರು ಮತ್ತು ಅರಿಶಿನ ಪ್ಯಾಕ್

ಮೊಸರು ಮತ್ತು ಅರಿಶಿನ ಪ್ಯಾಕ್

2 ಚಮಚ ಮೊಸರು ಮತ್ತು ಒಂದು ಚಮಚ ಅರಶಿನವನ್ನು ತೆಗೆದುಕೊಂಡು ಅದನ್ನು ಒಂದು ಪಾತ್ರೆಯಲ್ಲಿ ಮಿಶ್ರ ಮಾಡಿಕೊಳ್ಳಿ. ನಿಮ್ಮ ಮುಖವನ್ನು ಸ್ವಚ್ಛವಾಗಿ ತೊಳೆದುಕೊಂಡು ಈ ಮಿಶ್ರಣವನ್ನು ಹಚ್ಚಿಕೊಳ್ಳಿ. 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ತಣ್ಣೀರಿನಿಂದ ಇದನ್ನು ತೊಳೆದುಕೊಳ್ಳಿ. ಅರಶಿನವು ಒಂದು ಅದ್ಭುತ ಆಂಟಿಸೆಪ್ಟಿಕ್ ಮತ್ತು ಆಂಟಿಬ್ಯಾಕ್ಟೀರಿಯಲ್ ಅಂಶಕವಾಗಿದ್ದು ಇದು ಮೊಡವೆ ಮತ್ತು ಕಪ್ಪು ಕಲೆಗಳ ವಿರುದ್ಧ ಅದ್ಭುತವಾಗಿ ಕಾರ್ಯನಿರ್ವಹಿಸುತ್ತದೆ.

ಲಿಂಬೆ ಮತ್ತು ಮೊಸರಿನ ಪ್ಯಾಕ್

ಲಿಂಬೆ ಮತ್ತು ಮೊಸರಿನ ಪ್ಯಾಕ್

ಒಂದು ಪಾತ್ರೆಯಲ್ಲಿ 2 ಚಮಚ ಮೊಸರು ಮತ್ತು ಒಂದು ಚಮಚ ಲಿಂಬೆ ರಸವನ್ನು ತೆಗೆದುಕೊಳ್ಳಿ. ನಿಮ್ಮ ಮುಖವನ್ನು ತೊಳೆದುಕೊಂಡು ಟವೆಲ್‌ನಲ್ಲಿ ಒರೆಸಿ ತದನಂತರ ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ಲಿಂಬೆಯಲ್ಲಿ ವಿಟಮಿನ್ ಸಿ ಅಂಶವಿದ್ದು ಇದು ನಿಮ್ಮ ಮುಖಕ್ಕೆ ಕಾಂತಿಯನ್ನು ಉಂಟುಮಾಡುತ್ತದೆ.

ಬ್ಯೂಟಿ ಟಿಪ್ಸ್: ಮುಖದ ಕಾಂತಿ ಹೆಚ್ಚಿಸಲು ಮೊಸರಿನ ಲೇಪನ!

ಮೊಸರು ಮತ್ತು ಓಟ್ಸ್ ಫೇಸ್ ಪ್ಯಾಕ್

ಮೊಸರು ಮತ್ತು ಓಟ್ಸ್ ಫೇಸ್ ಪ್ಯಾಕ್

ಜಿಡ್ಡಿನ ತ್ವಚೆಗೆ ಇದು ಸೂಕ್ತ

1 ಚಮಚ ಮೊಸರು ಮತ್ತು 2 ಚಮಚ ಓಟ್ಸ್ ಹುಡಿಯನ್ನು ತೆಗೆದುಕೊಂಡು ಒಂದು ಪಾತ್ರೆಯಲ್ಲಿ ಮಿಶ್ರ ಮಾಡಿಕೊಳ್ಳಿ. ಇದನ್ನು ನುಣ್ಣನೆಯ ಪೇಸ್ಟ್‌ನಂತೆ ಮಾಡಿಕೊಂಡು ನಿಮ್ಮ ಮುಖವನ್ನು ಸ್ವಚ್ಛವಾಗಿ ತೊಳೆದು ನಂತರ ಇದನ್ನು ಹಚ್ಚಿ. ಓಟ್‌ಮೀಲ್‌ನಲ್ಲಿ ಎಕ್ಸ್‌ಫೋಲಿಯೇಂಟ್ ಅಂಶವಿದ್ದು ಇದು ಮೃತಕೋಶವನ್ನು ಹೊರಹಾಕುತ್ತದೆ. ಇದನ್ನು ಮೊಸರು ಮತ್ತು ಮೊಟ್ಟೆಯೊಂದಿಗೆ ಮಿಶ್ರಮಾಡಿಕೊಂಡು ಹಚ್ಚಿಕೊಂಡಲ್ಲಿ ಇದೊಂದು ಅತ್ಯುತ್ತಮ ಫೇಸ್ ಪ್ಯಾಕ್ ಎಂದೆನಿಸುತ್ತದೆ.

ಮೊಸರು ಟೊಮೇಟೊ ಫೇಸ್ ಪ್ಯಾಕ್

ಮೊಸರು ಟೊಮೇಟೊ ಫೇಸ್ ಪ್ಯಾಕ್

ಇದಕ್ಕೆ ನೀವು ಮೊದಲು ಒಂದು ಚಮಚ ಮೊಸರು ಮತ್ತು 1/2 ಚಮಚ ಟೊಮೇಟೊ ರಸವನ್ನು ಬಳಸಿಕೊಂಡು ಮಿಶ್ರಣವನ್ನು ಸಿದ್ಧಪಡಿಸಿಕೊಳ್ಳಬೇಕು. ನಂತರ ನಿಮ್ಮ ಸ್ವಚ್ಛಮುಖಕ್ಕೆ ಇದನ್ನು ಹಚ್ಚಿಕೊಂಡರೆ ಆಯಿತು. 20 ನಿಮಿಷಗಳ ತರುವಾಯ ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ. ಇದೊಂದು ಅತ್ಯುತ್ತಮ ಡಿ-ಟ್ಯಾನಿಂಗ್ ಫೇಸ್ ಪ್ಯಾಕ್ ಎಂದೆನಿಸಿದ್ದು ಇದು ಮೊಡವೆ ಮತ್ತು ಕಪ್ಪು ಕಲೆಗಳನ್ನು ನಿವಾರಿಸಲಿದೆ.

ಮೊಸರು ಮತ್ತು ಆಲೂಗಡ್ಡೆ ಫೇಸ್ ಪ್ಯಾಕ್

ಮೊಸರು ಮತ್ತು ಆಲೂಗಡ್ಡೆ ಫೇಸ್ ಪ್ಯಾಕ್

ಒಂದು ಪಾತ್ರೆಯಲ್ಲಿ 2 ಚಮಚ ಮೊಸರು ಮತ್ತು ಆಲೂಗಡ್ಡೆಯನ್ನು ತೆಗೆದುಕೊಳ್ಳಿ ಬೇಯಿಸಿದ ಆಲೂಗಡ್ಡೆಯಾಗಿರಲಿ ಮತ್ತು ಇದಕ್ಕೆ ಜೇನು ಸೇರಿಸಿ. ನಿಮ್ಮ ಮುಖವನ್ನು ತೊಳೆದುಕೊಂಡ ನಂತರ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. ನಂತರ 20 ನಿಮಿಷಗಳ ತರುವಾಯ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ಮೊಸರು ಮತ್ತು ಸೌತೆಕಾಯಿ ಪ್ಯಾಕ್

ಮೊಸರು ಮತ್ತು ಸೌತೆಕಾಯಿ ಪ್ಯಾಕ್

ಒಂದು ಪಾತ್ರೆಯಲ್ಲಿ 2 ಚಮಚ ಮೊಸರು, 1 ಚಮಚ ಪೀಚ್ ತಿರುಳು, 1 ಚಮಚ ಸೌತೆಕಾಯಿ ತಿರುಳು ಮತ್ತು 1 ಚಮಚ ಕ್ಯಾರೆಟ್ ತಿರುಳನ್ನು ತೆಗೆದುಕೊಳ್ಳಿ. ಇದನ್ನು ಚೆನ್ನಾಗಿ ಕಲಸಿಕೊಂಡು ಮಿಶ್ರಣ ಸಿದ್ಧಪಡಿಸಿಕೊಳ್ಳಿ. ಇದನ್ನು ಹಚ್ಚಿಕೊಂಡು 20 ನಿಮಿಷಗಳ ತರುವಾಯ ಮುಖ ತೊಳೆದುಕೊಳ್ಳಿ. ಇದೊಂದು ಉತ್ತಮ ಫೇಸ್ ಪ್ಯಾಕ್ ಆಗಿದ್ದು ನಿಮ್ಮ ಮುಖವನ್ನು ಮೃದುವಾಗಿರಿಸುವಲ್ಲಿ ಸಹಕಾರಿ ಎಂದೆನಿಸಲಿದೆ.

ಮೊಸರು ಮತ್ತು ಕಿತ್ತಳೆ ಸಿಪ್ಪೆ ಫೇಸ್ ಪ್ಯಾಕ್

ಮೊಸರು ಮತ್ತು ಕಿತ್ತಳೆ ಸಿಪ್ಪೆ ಫೇಸ್ ಪ್ಯಾಕ್

ಒಂದು ಪಾತ್ರೆಯಲ್ಲಿ ಮೊಸರು ಕಿತ್ತಳೆ ಹುಡಿಯನ್ನು ತೆಗೆದುಕೊಂಡು ಮೃದುವಾದ ಪೇಸ್ಟ್ ತಯಾರಿಸಿಕೊಳ್ಳಿ ನಿಮ್ಮ ಮುಖವನ್ನು ಸ್ವಚ್ಛವಾಗಿ ತೊಳೆದುಕೊಂಡು ಈ ಮಿಶ್ರಣವನ್ನು ಹಚ್ಚಿ. 20 ನಿಮಿಷಗಳ ನಂತರ ಈ ಮಿಶ್ರಣವನ್ನು ತೊಳೆದುಕೊಳ್ಳಿ. ಈ ಫೇಸ್ ಪ್ಯಾಕ್ ತ್ವಚೆಯನ್ನು ಎಕ್ಸ್‌ಫೋಲಿಯೇಟ್ ಮಾಡುತ್ತದೆ ಮತ್ತು ಸ್ವಚ್ಛಗೊಳಿಸುತ್ತದೆ.

ಮೊಸರು ಮತ್ತು ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್

ಮೊಸರು ಮತ್ತು ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್

2 ಚಮಚ ಮುಲ್ತಾನಿ ಮಿಟ್ಟಿ ಮತ್ತು 2 ಚಮಚ ಮೊಸರನ್ನು ತೆಗೆದುಕೊಳ್ಳಿ ಇದನ್ನು ಒಂದು ಪಾತ್ರೆಯಲ್ಲಿ ಚೆನ್ನಾಗಿ ಬ್ಲಂಡ್ ಮಾಡಿಕೊಳ್ಳಿ ಮತ್ತು ಮುಖಕ್ಕೆ ಹಚ್ಚಿ. ನಂತರ 20 ನಿಮಿಷ ಬಿಟ್ಟು ಮುಖವನ್ನು ತೊಳೆಯಿರಿ. ವಾರಕ್ಕೊಮ್ಮೆ ಈ ಫೇಸ್ ಪ್ಯಾಕ್ ಅನ್ನು ನೀವು ಅನುಸರಿಸಬೇಕು. ಇದು ತ್ವಚೆಯನ್ನು ಎಕ್ಸ್‌ಫೋಲಿಯೇಟ್ ಮಾಡುತ್ತದೆ ಮತ್ತು ತ್ವಚೆಗೆ ಬೇಕಾಗಿರುವ ರಕ್ತಪೂರೈಕೆಯನ್ನು ಮಾಡುತ್ತದೆ.

English summary

diy curd face pack recipes for different skin problems

Curd has always been recognized as a valuable natural skin care ingredient. Its application on the skin is known to ward off all kinds of skin problems. A rich source of vitamin C, lactic acid and calcium, curd has numerous beauty benefits that can transform the way your skin looks and feels. This traditional skin care component can offer excellent beauty solutions without burning a hole in your wallet. Also, unlike the pricey over-the-counter beauty products, curd is not full of harsh chemicals.
Subscribe Newsletter