ಬಾದಾಮಿ: ಸ್ವಲ್ಪ ದುಬಾರಿಯಾದರೂ, ಮುಖಕ್ಕೆ-ಕೂದಲಿಗೆ ಒಳ್ಳೆಯದು

By: Arshad
Subscribe to Boldsky

ಬಾದಾಮಿ ಒಂದು ಅದ್ಭುತ ಒಣಫಲವಾಗಿದ್ದು ಇದರಲ್ಲಿರುವ ಪೋಷಕಾಂಶಗಳು ಆರೋಗ್ಯ ಹಾಗೂ ಸೌಂದರ್ಯವನ್ನು ಹೆಚ್ಚಿಸಲು ನೆರವಾಗುತ್ತವೆ. ವಿಶೇಷವಾಗಿ ತ್ವಚೆ ಮತ್ತು ಕೂದಲಿಗೆ ಇದರಲ್ಲಿರುವ ವಿಟಮಿನ್ ಇ ಹಾಗೂ ಆಂಟಿ ಆಕ್ಸಿಡೆಂಟುಗಳು ನೆರವಾಗುತ್ತವೆ. ಅಲ್ಲದೇ ಇದರಲ್ಲಿರುವ ಆರೋಗ್ಯಕರ ಕೊಬ್ಬು, ಪ್ರೋಟೀನ್ ಹಾಗೂ ಇತರ ಪೋಷಕಾಂಶಗಳು ಹಲವರು ಕಾಯಿಲೆಗಳಿಂದ ರಕ್ಷಣೆ ಒದಗಿಸುತ್ತವೆ.

ನೆನೆಸಿಟ್ಟ ಬಾದಾಮಿ ಬೀಜದ ಚಮತ್ಕಾರಕ್ಕೆ ಬೆರಗಾಗಲೇಬೇಕು!

ಬಾದಾಮಿಯಲ್ಲಿರುವ ಪೋಷಕಾಂಶಗಳ ಗರಿಷ್ಠ ಪ್ರಯೋಜನ ಪಡೆಯಲು ಕೊಂಚ ಬಾದಾಮಿಗಳನ್ನು ರಾತ್ರಿ ತಣ್ಣೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ತಿನ್ನಬೇಕು. ಅಲ್ಲದೇ ಹೇಗೆ ನೆನೆಸಿಟ್ಟ ಬಾದಾಮಿಗಳನ್ನು ಅರೆದು ಮುಖಕ್ಕೆ ಮುಖಲೇಪದ ರೂಪದಲ್ಲಿ ಹಚ್ಚಿಕೊಳ್ಳುವ ಮೂಲಕ ಸೌಂದರ್ಯವೂ ಹೆಚ್ಚುತ್ತದೆ ಹಾಗೂ ಕೂದಲಿಗೆ ಹಚ್ಚಿಕೊಂಡಾಗ ಕೂದಲೂ ಸೊಂಪಾಗುತ್ತದೆ. ಬನ್ನಿ, ಈ ಲೇಪಗಳನ್ನು ಸುಲಭವಾಗಿ ಮನೆಯಲ್ಲಿಯೇ ಹೇಗೆ ತಯಾರಿಸಿಕೊಳ್ಳಬಹುದು ಎಂಬುದನ್ನು ನೋಡೋಣ... 

ತ್ವಚೆಯ ಕಾಂತಿಗಾಗಿ

ತ್ವಚೆಯ ಕಾಂತಿಗಾಗಿ

ನಮ್ಮ ತ್ವಚೆಯಲ್ಲಿರುವ ಸೂಕ್ಷ್ಮರಂಧ್ರಗಳಲ್ಲಿ ಗಾಳಿಗೆಯಲ್ಲಿರುವ ಸೂಕ್ಷ್ಮ ಕಣಗಳಾದ ಪ್ರದೂಷಿತ ಹೊಗೆಯ ಕಣಗಳು, ಧೂಳು, ಬೆವರು, ಇತ್ಯಾದಿಗಳು ಸುಲಭವಾಗಿ ಸಿಲುಕಿಕೊಳ್ಳುತ್ತವೆ. ಪರಿಣಾಮವಾಗಿ ತ್ವಚೆ ತನ್ನ ಸಹಜ ಕಾಂತಿಯಿಂದ ವಂಚಿತವಾಗುತ್ತದೆ. ಇದನ್ನು ಹೊರಹಾಕಲು ಬಾದಾಮಿ ಸಮರ್ಥವಾಗಿದೆ. ಸುಮಾರು ನಾಲ್ಕೈದು ಬಾದಾಮಿಗಳನ್ನು ಕುಟ್ಟಿ ನಯವಾಗಿ ಪುಡಿ ಮಾಡಿ ಒಂದು ಚಿಕ್ಕ ಚಮಚ ಹಾಲು, ಕೊಂಚವೇ ಲಿಂಬೆರಸ ಹಾಗೂ ಕೊಂಚವೇ ಕಡ್ಲೆಹಿಟ್ಟು ಬೆರೆಸಿ ಚರ್ಮಕ್ಕೆ ಹಚ್ಚುವಷ್ಟು ಗಾಢವಾದ ಲೇಪನ ತಯಾರಿಸಿ ಮುಖದ ಮೇಲೆ ತೆಳುವಾಗಿ ಹಚ್ಚಿಕೊಂಡು ಸುಮಾರು ಮೂವತ್ತು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ಮುಖವನ್ನು ತೊಳೆದುಕೊಂಡು ಟವೆಲ್ಲಿನಿಂದ ಒತ್ತಿಕೊಂಡು ಒರೆಸಿಕೊಳ್ಳಿ. ಈ ವಿಧಾನದಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ಇದೇ ವಿಧಾನವನ್ನು ಬಿಸಿಲಿನಿಂದ ಕಪ್ಪಗಾಗಿರುವ ಚರ್ಮದ ಭಾಗಕ್ಕೂ ಬಳಸಿ ಸಹಜವರ್ಣವನ್ನು ಪಡೆಯಬಹುದು.

ಮೊಡವೆಗಳ ಕಲೆಗಳನ್ನು ನಿವಾರಿಸಲು

ಮೊಡವೆಗಳ ಕಲೆಗಳನ್ನು ನಿವಾರಿಸಲು

ಹಿಂದಿನ ದಿನದಲ್ಲಿ ಎದುರಾಗಿದ್ದು ಮೊಡವೆ ಒಣಗಿ ಹೋದ ಬಳಿಕ ಆ ಸ್ಥಳದಲ್ಲಿ ಕಪ್ಪು ಕಲೆಯೊಂದನ್ನು ಉಳಿಸಿದ್ದರೆ ಈ ಕಲೆಯಲ್ಲು ನಿವಾರಿಸಲು ಬಾದಾಮಿ ನೆರವಾಗುತ್ತದೆ. ಇದಕ್ಕಾಗಿ ಕೊಂಚ ಬಾದಾಮಿ ಎಣ್ಣೆ, ಜೇನು ಮತ್ತು ಲಿಂಬೆರಸಗಳನ್ನು ಬೆರೆಸಿ ಕೆಲವು ಹನಿ ಹಸಿಹಾಲಿನೊಂದಿಗೆ ಬೆರೆಸಿ ಕಲೆಯ ಮೇಲೆ ನಿತ್ಯವೂ ಹಚ್ಚಿಕೊಳ್ಳಿ. ಒಂದು ವಾರ ಸತತವಾಗಿ ರಾತ್ರಿ ಹಚ್ಚಿಕೊಂಡು ಬೆಳಿಗ್ಗೆ ತೊಳೆದುಕೊಳ್ಳುವ ಮೂಲಕ ಕಲೆ ಸಾಕಷ್ಟು ಮಟ್ಟಿಗೆ ಮಾಯವಾಗಿರುವುದನ್ನು ಗಮನಿಸಬಹುದು.

ಕಲೆರಹಿತ ಚರ್ಮಕ್ಕಾಗಿ

ಕಲೆರಹಿತ ಚರ್ಮಕ್ಕಾಗಿ

ಒಂದು ವೇಳೆ ವಯಸ್ಸಿನ ಕಾರಣದಿಂದ ನಿಮ್ಮ ಚರ್ಮದಲ್ಲಿ ಚಿಕ್ಕ ಚಿಕ್ಕ ಚುಕ್ಕಿಗಳು ಮೂಡಿದ್ದರೆ ದಿನಗಳೆದಂತೆ ಈ ಚುಕ್ಕಿಗಳು ದೊಡ್ಡದಾಗುತ್ತಾ ಹೋಗುತ್ತವೆ ಹಾಗೂ ತ್ವಚೆ ತನ್ನ ಸಹಜಕಾಂತಿಯಿಂದ ವಂಚಿತವಾಗುತ್ತಾ ಹೋಗುತ್ತದೆ. ಇದನ್ನು ಎದುರಿಸಲು ಕೊಂಚ ನುಣ್ಣಗೆ ಪುಡಿಮಾಡಿದ ಬಾದಾಮಿ, ಶ್ರೀಗಂಧದ ಪುಡಿ ಮತ್ತು ಕೊಂಚ ಹಸಿ ಹಾಲು ಬೆರೆಸಿ ನಯವಾದ ಲೇಪನ ತಯಾರಿಸಿ.

ಕಲೆರಹಿತ ಚರ್ಮಕ್ಕಾಗಿ

ಕಲೆರಹಿತ ಚರ್ಮಕ್ಕಾಗಿ

ಈ ಲೇಪನವನ್ನು ಮುಖ, ಕುತ್ತಿಗೆ, ಕೈ ಹಾಗೂ ಕಾಲುಗಳಿಗೆ, ಒಟ್ಟಾರೆ ಚುಕ್ಕಿಗಳು ಕಂಡುಬರುವ ಭಾಗಗಳಿಗೆಲ್ಲಾ ತೆಳುವಾಗಿ ಹಚ್ಚಿಕೊಳ್ಳಿ. ಈ ಲೇಪನ ಪೂರ್ಣವಾಗಿ ಒಣಗುವವರೆಗೂ ಹಾಗೇ ಇರಿಸಿ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಕೂದಲು ಉದುರುವುದನ್ನು ನಿಲ್ಲಿಸಲು

ಕೂದಲು ಉದುರುವುದನ್ನು ನಿಲ್ಲಿಸಲು

ಬಾದಾಮಿ ಎಣ್ಣೆ ಕೂದಲು ಉದುರುವುದನ್ನು ನಿಲ್ಲಿಸಲು ಅತ್ಯುತ್ತಮ ಎಣ್ಣೆಯಾಗಿದೆ. ಈ ಎಣ್ಣೆಯಲ್ಲಿ ಚರ್ಮವನ್ನು ಮೃದುಗೊಳಿಸುವ ಗುಣವಿದ್ದು ಕೂದಲು ಉದುರುವುದನ್ನು ತಡೆಯಲು ನೆರವಾಗುತ್ತದೆ. ಇದರಲ್ಲಿರುವ ವಿಟಮಿನ್ ಡಿ ಮತ್ತು ಇ ಹಾಗೂ ಖನಿಜಗಳಾದ ಮೆಗ್ನೀಶಿಯಂ, ಕ್ಯಾಲ್ಸಿಯಂ ಕೂದಲ ದೃಢತೆ ಹೆಚ್ಚಿಸಲು ನೆರವಾಗುತ್ತವೆ. ಬಾದಾಮಿ ಉತ್ತಮವಾದ ತೇವಕಾರಕವೂ ಆಗಿದ್ದು ಕೂದಲು ಸುಲಭವಾಗಿ ತುಂಡಾಗುವುದರಿಂದ ರಕ್ಷಿಸುತ್ತದೆ. ಹಾಗೂ ಕೂದಲ ಬುಡದಿಂದ ಹಲವಾರು ಪೋಷಕಾಂಶಗಳನ್ನು ಒದಗಿಸುವ ಮೂಲಕ ಕೂದಲು ನೀಳವಾಗಿ ಬೆಳೆಯಲು, ಸೊಂಪಾಗಿರಲು ಹಾಗೂ ದೃಢವಾಗಿರಲೂ ನೆರವಾಗುತ್ತದೆ.

ಕೊಂಚ ಬಾದಾಮಿ ತೈಲ

ಕೊಂಚ ಬಾದಾಮಿ ತೈಲ

ಇದಕ್ಕಾಗಿ ಕೊಂಚ ಬಾದಾಮಿ ತೈಲವನ್ನು ಉಗುರುಬೆಚ್ಚಗಾಗಿಸಿ ಬೆರಳುಗಳ ತುದಿಯಿಂದ ಕೂದಲ ಬುಡಗಳಿಗೆ ತಗಲುವಂತೆ ನಯವಾಗಿ ಮಸಾಜ್ ಮಾಡುತ್ತಾ ಹಚ್ಚಿಕೊಳ್ಳಬೇಕು. ಬಳಿಕ ಕೆಲವಾರು ಗಂಟೆ ಹಾಗೇ ಇರಿಸಿ ಬಳಿಕ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.

ಬಾದಾಮಿ ಎಣ್ಣೆ-ದುಬಾರಿಯಾದರೂ ಕೂದಲಿಗೆ ಒಳ್ಳೆಯದು

English summary

DIY almond face and hair packs can make you look gorgeous!

Almond or badam has a host of health benefits but it also does wonders for your skin and hair. It contains antioxidants, vitamin E, good fats, protein and other essential nutrients which come in handy to keep beauty problems at bay.Though eating a handful of almonds soaked overnight in water will do you good,
Subscribe Newsletter