For Quick Alerts
ALLOW NOTIFICATIONS  
For Daily Alerts

ನೈಸರ್ಗಿಕ ಕ್ಲೆನ್ಸರ್ ಮಾಡುವುದು ಸರಳ ಪರಿಣಾಮ ಅದ್ಭುತ!

By Jaya Subramanya
|

ಮುಖವನ್ನು ಸ್ವಚ್ಛಗೊಳಿಸುವುದು ಎಂದರೆ ನೀವು ಹೆಚ್ಚುವರಿ ಕಾಳಜಿಯನ್ನು ವಹಿಸಬೇಕಾಗುತ್ತದೆ. ಅದರಲ್ಲಿ ದಿನಕ್ಕೆ ಎರಡು ಬಾರಿ ಮುಖವನ್ನು ಸ್ವಚ್ಛಗೊಳಿಸುವುದು ಅತಿ ಮುಖ್ಯವಾಗಿದೆ. ಇದು ವಿಷಕಾರಿ ಅಂಶಗಳು ಅಂತೆಯೇ ಇತರ ರೋಗಾಣುಗಳಿಂದ ಮುಖವನ್ನು ಅಂದವಾಗಿ ಇರಿಸುತ್ತದೆ. ಬರಿಯ ನೀರಿನಿಂದ ಮುಖವನ್ನು ಸ್ವಚ್ಛಮಾಡದೆಯೇ ಕೆಲವೊಂದು ಪರಿಣಾಮಕಾರಿ ನೈಸರ್ಗಿಕ ಅಂಶಗಳನ್ನು ಬಳಸಿಕೊಂಡು ನಿಮ್ಮ ಮುಖವನ್ನು ನೀವು ತೊಳೆದುಕೊಂಡರೆ ಪರಿಣಾಮ ಅತ್ಯಂತ ಪ್ರಭಾವಶಾಲಿಯಾಗಿರುತ್ತದೆ.

ಇದೀಗ ಮಾರುಕಟ್ಟೆಯಲ್ಲಿ ರಾಸಾಯನಿಕವಾಗಿರುವ ಸಿದ್ಧಪಡಿಸಿದ ಕ್ಲೆನ್ಸರ್‌ಗಳು ದೊರಕಿದರೂ ಇವುಗಳು ನೈಸರ್ಗಿಕ ಅಂಶಗಳಂತೆ ಕೆಲಸ ಮಾಡುವುದಿಲ್ಲ. ನೈಸರ್ಗಿಕ ಅಂಶಗಳು ವಿವಿಧ ಪೋಷಕಾಂಶಗಳಿಂದ ಒಳಗೊಂಡಿದ್ದು ಇವುಗಳು ನಿಮ್ಮ ಮುಖವನ್ನು ಹಾನಿಕಾರಕಗಳಿಂದ ಸಂರಕ್ಷಿಸುವುದರ ಜೊತೆಗೆ ನಿಮ್ಮ ಮುಖದ ಅಂದವನ್ನು ಹಾಳುಗೆಡವದಂತೆ ಕಾಪಾಡುತ್ತದೆ. ಇವುಗಳನ್ನು ಬಳಸಲು ನೀವು ಹೆಚ್ಚುವರಿ ಸಮಯವನ್ನು ವಿನಿಯೋಗಿಸಬೇಕಾಗಿಲ್ಲ, ಸರಳವಾಗಿ ಈ ಕ್ಲೆನ್ಸರ್‌ಗಳನ್ನು ನೀವು ತಯಾರಿಸಬಹುದಾಗಿದೆ..

ಜೇನು + ವಿಟಮಿನ್ ಇ ಆಯಿಲ್

ಜೇನು + ವಿಟಮಿನ್ ಇ ಆಯಿಲ್

ಒಂದು ಬೌಲ್‌ನಲ್ಲಿ 1/2 ಚಮಚ ಜೇನು, 2 ಚಮಚ ರೋಸ್ ವಾಟರ್ ಅನ್ನು ತೆಗೆದುಕೊಳ್ಳಿ ಮತ್ತು ವಿಮಟಿನ್ ಇ ಮಾತ್ರೆಯಿಂದ ಜೆಲ್ ಅನ್ನು ಹೊರತೆಗೆಯಿರಿ.

ಚಮಚದ ಸಹಾಯದಿಂದ ಇವುಗಳನ್ನು ಬೆರೆಸಿಕೊಳ್ಳಿ

ನಿಮ್ಮ ಮುಖವನ್ನು ತೊಳೆದುಕೊಂಡು ನಂತರ ಈ ಮಿಶ್ರಣವನ್ನು ಹಚ್ಚಿಕೊಳ್ಳಿ

ಸಂಪೂರ್ಣವಾಗಿ ಇದು ಒಣಗಿದ ನಂತರ ನೀರಿನಿಂದ ಮುಖ ತೊಳೆದುಕೊಳ್ಳಿ

ವಾರಕ್ಕೊಮ್ಮೆ ಈ ವಿಧಾನವನ್ನು ಬಳಸಿಕೊಂಡು ಸುಂದರ ತ್ವಚೆಯನ್ನು ಪಡೆಯಿರಿ

ಮೊಸರು + ತೆಂಗಿನೆಣ್ಣೆ

ಮೊಸರು + ತೆಂಗಿನೆಣ್ಣೆ

1/2 ಚಮಚ ಮೊಸರನ್ನು 2 ಚಮಚಗಳಷ್ಟು ಮೊಸರಿನೊಂದಿಗೆ ಬ್ಲೆಂಡ್ ಮಾಡಿ

ನಿಮ್ಮ ತ್ವಚೆಯ ಮೇಲೆ ಇದನ್ನು ಹಚ್ಚಿಕೊಳ್ಳಿ

ನೀರಿನಿಂದ ಮುಖವನ್ನು ತೊಳೆದುಕೊಳ್ಳಿ

ಈ ಕ್ಲೆನ್ಸರ್ ಅನ್ನು ವಾರಕ್ಕೊಮ್ಮೆ ಬಳಸುವುದರಿಂದ ನಿಮ್ಮ ಮುಖದ ರಂಧ್ರ ಸ್ವಚ್ಛಗೊಳ್ಳುತ್ತದೆ

ಲಿಂಬೆ ರಸ + ಟೊಮೇಟೊ ರಸ

ಲಿಂಬೆ ರಸ + ಟೊಮೇಟೊ ರಸ

1 ಚಮಚ ಟೊಮೇಟೊ ರಸದೊಂದಿಗೆ 1/2 ಚಮಚ ಲಿಂಬೆ ರಸವನ್ನು ಬೆರೆಸಿಕೊಳ್ಳಿ

ನಿಮ್ಮ ಮುಖವನ್ನು ಒದ್ದೆ ಮಾಡಿಕೊಂಡು ನಂತರ ಈ ಮಿಶ್ರಣವನ್ನು ಹಚ್ಚಿ

ಒಂದು ನಿಮಿಷ ಎಲ್ಲವನ್ನೂ ಮುಖಕ್ಕೆ ಹಚ್ಚಿ

ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

ವಾರಕ್ಕೊಮ್ಮೆ ಈ ವಿಧಾನವನ್ನು ಅನುಸರಿಸಿ

ಲ್ಯಾವೆಂಡರ್ ಎಸೆನ್ಶಿಯಲ್ ಆಯಿಲ್ + ಆಲೀವ್ ಆಯಿಲ್

ಲ್ಯಾವೆಂಡರ್ ಎಸೆನ್ಶಿಯಲ್ ಆಯಿಲ್ + ಆಲೀವ್ ಆಯಿಲ್

1/2 ಚಮಚ ಆಲೀವ್ ಆಯಿಲ್‌ನೊಂದಿಗೆ 2 ಹನಿ ಲ್ಯಾವೆಂಡರ್ ಎಸನ್ಶಿಯಲ್ ಆಯಿಲ್ ಅನ್ನು ಬೆರೆಸಿಕೊಳ್ಳಿ

ಈ ಕ್ಲೆನ್ಸರ್ ಅನ್ನು ಹಚ್ಚಿಕೊಳ್ಳುವ ಮೊದಲು ನಿಮ್ಮ ಮುಖವನ್ನು ಒದ್ದೆಮಾಡಿಕೊಳ್ಳಿ

ನಿಮ್ಮ ಮುಖವನ್ನು ನಂತರ ತೊಳೆದುಕೊಳ್ಳಿ

ವಾರಕ್ಕೊಮ್ಮೆ ಈ ಕ್ಲೆನ್ಸರ್ ಅನ್ನು ಬಳಸಿಕೊಂಡು ಬ್ಲ್ಯಾಕ್‌ಹೆಡ್ ನಿವಾರಿಸಿ

ತೆಂಗಿನ ಹಾಲು + ಆಪಲ್ ಸೀಡರ್ ವಿನೇಗರ್

ತೆಂಗಿನ ಹಾಲು + ಆಪಲ್ ಸೀಡರ್ ವಿನೇಗರ್

ತೆಂಗಿನ ಹಾಲು + 3, 4 ಹನಿಗಳಷ್ಟು ಆಪಲ್ ಸೀಡರ್ ವಿನೇಗರ್ ಅನ್ನು ತೆಗೆದುಕೊಳ್ಳಿ

ಇದನ್ನು ಮಿಶ್ರ ಮಾಡಿ ನಿಮ್ಮ ಮುಖಕ್ಕೆ ಹಚ್ಚಿ

ಇದನ್ನು ತೊಳೆಯುವ ಮುನ್ನ ಒಮ್ಮೆ ಮುಖದ ತುಂಬಾ ಮಸಾಜ್ ಮಾಡಿಕೊಳ್ಳಿ

ವಾರಕ್ಕೊಮ್ಮೆ ಈ ನೈಸರ್ಗಿಕ ಕ್ಲೆನ್ಸರ್ ಅನ್ನು ಬಳಸಿ

ಬಾದಾಮಿ ಎಣ್ಣೆ + ಚಮೊಯಿಲ್ ಟಿ

ಬಾದಾಮಿ ಎಣ್ಣೆ + ಚಮೊಯಿಲ್ ಟಿ

1/2 ಚಮಚ ಬಾದಾಮಿ ಎಣ್ಣೆಯನ್ನು 1 ಚಮಚ ತಂಪಾದ ಚಮೊಯಿಲ್ ಚಹಾದೊಂದಿಗೆ ಬೆರೆಸಿ

ಮೊದಲಿಗೆ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

ಇದನ್ನು ಮುಖದ ತುಂಬಾ ಹಚ್ಚಿಕೊಂಡು ಸ್ವಲ್ಪ ಸಮಯ ಮಸಾಜ್ ಮಾಡಿಕೊಳ್ಳಿ

ಸ್ವಲ್ಪ ಹೊತ್ತಿನ ನಂತರ ಮುಖವನ್ನು ತೊಳೆದುಕೊಳ್ಳಿ

ಮೃದುವಾದ ಸ್ವಚ್ಛ ಮುಖವನ್ನು ಪಡೆದುಕೊಳ್ಳಲು ಈ ಕ್ಲೆನ್ಸರ್ ಅನ್ನು ಬಳಸಿ

ಅಕ್ಕಿ ನೀರು + ಗ್ಲಿಸರಿನ್

ಅಕ್ಕಿ ನೀರು + ಗ್ಲಿಸರಿನ್

2 ಚಮಚ ಅಕ್ಕಿ ನೀರನ್ನು 1/2 ಚಮಚ ಗ್ಲಿಸರಿನ್‌ನೊಂದಿಗೆ ಬೆರೆಸಿಕೊಳ್ಳಿ

ನಿಮ್ಮ ಮುಖ ಮತ್ತು ಕತ್ತಿನ ತುಂಬೆಲ್ಲಾ ಅದನ್ನು ಹಚ್ಚಿಕೊಳ್ಳಿ

2 ನಿಮಿಷ ಹಾಗೆಯೇ ಬಿಡಿ

ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

ವಾರಕ್ಕೊಮ್ಮೆ ಈ ಕ್ಲೆನ್ಸರ್ ಅನ್ನು ಬಳಸಿಕೊಂಡು ನಿಮ್ಮ ತ್ವಚೆಯನ್ನು ಅಂದಗೊಳಿಸಿ.

English summary

DIY All-Natural Facial Cleansers For Healthy Skin

Cleansing is an essential step of skincare routine that should be done at least twice a day. This will ensure that your skin pores stay clean and clear, and prevent toxins and dirt from getting accumulated.However, the way in which you clean your face and, especially, the type of cleanser you use on your skin can determine the overall impact of this essential step.
X
Desktop Bottom Promotion