ಮುಖದ ಮೇಲಿನ ಎಲ್ಲಾ ಕಲೆಗಳನ್ನು ನಿವಾರಿಸಲು-'ಅಲೋವೆರಾ' ಬಳಸಿ

By: Hemanth
Subscribe to Boldsky

ಬಿಸಿಲಿನಲ್ಲಿ ಸುತ್ತಾಡಲು ಹೋಗಲು ಹೆಚ್ಚಿನವರು ಹೆದರುವ ಕಾರಣವೆಂದರೆ ತಮ್ಮ ಸೌಂದರ್ಯ ಎಲ್ಲಿ ಹಾಳಾಗಿ ಹೋಗುತ್ತದೆಯಾ ಎನ್ನುವ ಕಾರಣದಿಂದ. ಬಿಸಿಲಿನಲ್ಲಿ ಹೊರಗಡೆ ಹೋದರೆ ಚರ್ಮದ ಮೇಲೆ ಕಪ್ಪು ಕಲೆಗಳು ಮೂಡಬಹುದು. ಇದನ್ನು ಆಂಗ್ಲ ಭಾಷೆಯಲ್ಲಿ ಟ್ಯಾನ್ ಎಂದು ಕರೆಯುತ್ತಾರೆ. ಸೂರ್ಯನ ಕಿರಣಗಳಿಂದಾಗಿ ಉಂಟಾಗುವ ಕಲೆಯಿದು. ಇದನ್ನು ಹೋಗಲಾಡಿಸಲು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಕ್ರೀಮ್‌ಗಳು ಕೂಡ ಲಭ್ಯವಿದೆ.

ಮನೆ ಔಷಧಿ: ಸುಟ್ಟ ಗಾಯದ ಶೀಘ್ರ ಶಮನಕ್ಕೆ 'ಅಲೋವೆರಾ' ಬೆಸ್ಟ್

ಇಂತಹ ಕ್ರೀಮ್‌ಗಳಲ್ಲಿ ನಿಮಗೆ ತಿಳಿಯದೆ ಇರುವಂತಹ ಕೆಲವೊಂದು ರಾಸಾಯನಿಕಗಳನ್ನು ಬೆರೆಸಿರುವರು. ಇದು ನಿಮ್ಮ ತ್ವಚೆಗೆ ತುಂಬಾ ಅಪಾಯಕಾರಿ. ಇದರ ಬದಲಿಗೆ ನೈಸರ್ಗಿಕವಾಗಿ ಸಿಗುವಂತಹ ಕೆಲವೊಂದು ಸಾಮಗ್ರಿಗಳನ್ನು ಬಳಸಿಕೊಂಡು ಈ ಕಲೆಯನ್ನು ತೆಗೆದು ಹಾಕಬಹುದು. ಇದರಲ್ಲಿ ಪ್ರಮುಖವಾಗಿ ಅಲೋವೆರಾ. ಇದರಲ್ಲಿ ಗ್ಲಿಸರಿನ್ ಮತ್ತು ಸೋಡಿಯಂ ಕಾರ್ಬೋನೇಟ್ ನಂತಹ ಪೋಷಕಾಂಶಗಳು ಇವೆ. ತ್ವಚೆಗೆ ನೈಸರ್ಗಿಕ ಕಾಂತಿಯನ್ನು ಇದು ನೀಡುವುದು. 

'ಅಲೋವೆರಾ'ದ ಫೇಸ್ ಪ್ಯಾಕ್-ಸೌಂದರ್ಯದ ಕೀಲಿಕೈ!

ಕಿರಿಕಿರಿ ಉಂಟು ಮಾಡುವ ಚರ್ಮಕ್ಕೆ ಇದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಉರಿಯೂತ ಶಮನಕಾರಿ ಗುಣ ಹೊಂದಿರುವುದು. ಅಲೋವೆರಾವು ತುಂಬಾ ವೇಗವಾಗಿ ಕಲೆ ನಿವಾರಣೆ ಮಾಡುವುದು. ಇದರ ಬಗ್ಗೆ ಇನ್ನಷ್ಟು ತಿಳಿಯಲು ಬೋಲ್ಡ್ ಸ್ಕೈ ಕೊಟ್ಟಿರುವ ಈ ಲೇಖನ ಓದಲೇಬೇಕು.... 

ಬಿಸಿಲಿನಿಂದ ಆದ ಕಲೆಗಳ ನಿವಾರಣೆಗೆ

ಬಿಸಿಲಿನಿಂದ ಆದ ಕಲೆಗಳ ನಿವಾರಣೆಗೆ

ಬಿಸಿಲಿನಿಂದ ಆದ ಕಲೆಗಳ ನಿವಾರಣೆಗೆ ಅಲೋವೆರಾ ಜೆಲ್ ತುಂಬಾ ಪರಿಣಾಮಕಾರಿ....

ಬಳಸುವ ವಿಧಾನ

1. ತಾಜಾ ಅಲೋವೆರಾ ಲೋಳೆ ತೆಗೆದುಕೊಂಡು ಅದನ್ನು ಕಲೆಯಾಗಿರುವ ಭಾಗಕ್ಕೆ ಹಚ್ಚಿಕೊಂಡು ಸರಿಯಾಗಿ ಉಜ್ಜಿಕೊಳ್ಳಿ.

2. ತಣ್ಣೀರಿನಿಂದ ಮುಖ ತೊಳೆಯಿರಿ.

3. ಪರಿಣಾಮಕಾರಿಯಾದ ಫಲಿತಾಂಶ ಪಡೆಯಬೇಕಾದರೆ ದಿನದಲ್ಲಿ ಹಲವಾರು ಸಲ ಇದನ್ನು ಉಪಯೋಗಿಸಿ.

ಅಲೋವೆರಾ ಮತ್ತು ನಿಂಬೆರಸ

ಅಲೋವೆರಾ ಮತ್ತು ನಿಂಬೆರಸ

ಲಿಂಬೆರಸ ಮತ್ತು ಅಲೋವೆರಾವು ಬಿಸಿಲಿನ ಕಲೆಗಳನ್ನು ತುಂಬಾ ಪರಿಣಾಮಕಾರಿಯಾಗಿ ನಿವಾರಣೆ ಮಾಡುವುದು. ಲಿಂಬೆಯಲ್ಲಿ ಚರ್ಮದ ಕಲೆ ನಿವಾರಣೆ ಮಾಡುವ ಗುಣವಿದೆ.

ಅಲೋವೆರಾ ಮತ್ತು ನಿಂಬೆರಸ

ಅಲೋವೆರಾ ಮತ್ತು ನಿಂಬೆರಸ

ಬೇಕಾಗುವ ಸಾಮಗ್ರಿಗಳು

ಅಲೋವೆರಾ ಲೋಳೆ

ಲಿಂಬೆ-1

ವಿಧಾನ

1.ಲಿಂಬೆಯ ರಸ ತೆಗೆಯಿರಿ.

2.ಈ ರಸಕ್ಕೆ ಅಲೋವೆರಾ ಜೆಲ್ ಹಾಕಿ ಮತ್ತು ಮಿಶ್ರಣವನ್ನು ಕಲೆ ಇರುವ ಜಾಗಕ್ಕೆ ಹಚ್ಚಿ.

3.ಚರ್ಮವು ಇದನ್ನು ಹೀರಿಕೊಳ್ಳುವ ತನಕ ಮಸಾಜ್ ಮಾಡಿ.

4.ನೀರಿನಿಂದ ತೊಳೆದು ಮತ್ತೆ ಪುನರಾವರ್ತಿಸಿ.

ಅಲೋವೆರಾ ಮತ್ತು ಶ್ರೀಗಂಧದ ಹುಡಿ

ಅಲೋವೆರಾ ಮತ್ತು ಶ್ರೀಗಂಧದ ಹುಡಿ

ಶ್ರೀಗಂಧದ ಹುಡಿಯು ದೇಹಕ್ಕೆ ತಂಪುಕಾರವಾಗಿದೆ. ಬಿಸಿಲಿನಿಂದ ಆಗಿರುವ ಕಲೆಗಳು ಹೆಚ್ಚು ಉಷ್ಣತೆಯನ್ನು ಸೃಷ್ಟಿಸಿ ಕಿರಿಕಿರಿ ಉಂಟು ಮಾಡುತ್ತದೆ. ಶ್ರೀಗಂಧದ ಹುಡಿಯು ಉಷ್ಣವನ್ನು ಕಡಿಮೆ ಮಾಡಿ ಶಮನ ನೀಡುವುದು.

ಬೇಕಾಗುವ ಸಾಮಗ್ರಿಗಳು

ಅಲೋವೆರಾ- ಒಂದು ಚಮಚ ಶ್ರೀಗಂಧದ ಹುಡಿ

1.ಎರಡನ್ನು ಒಂದು ಸಣ್ಣ ಪಿಂಗಾಣಿಯಲ್ಲಿ ಸರಿಯಾಗಿ ಮಿಶ್ರಣ ಮಾಡಿ.'

2.ಮುಖದ ಮೇಲಿನ ಕಲೆಗಳ ಮೇಲೆ ಹಚ್ಚಿಕೊಳ್ಳಿ ಮತ್ತು 15 ನಿಮಿಷ ಕಾಲ ಹಾಗೆ ಬಿಡಿ.

3.ತಣ್ಣೀರಿನಿಂದ ಇದನ್ನು ತೊಳೆಯಿರಿ ಮತ್ತು ಪ್ರತೀ ದಿನ ಹೀಗೆ ಮಾಡಿ

ಅಲೋವೆರಾ ಮತ್ತು ಸೌತೆಕಾಯಿ

ಅಲೋವೆರಾ ಮತ್ತು ಸೌತೆಕಾಯಿ

ಸೌತೆ ಕಾಯಿಯನ್ನು ತೊಳೆದು ಒಂದು ಚಿಕ್ಕ ತುಂಡು ಕತ್ತರಿಸಿಕೊಳ್ಳಿ. ಇದನ್ನು ಅಲೋವೆರಾ ರಸದೊಂದಿಗೆ ಮಿಕ್ಸಿಯಲ್ಲಿ ಆಡಿಸಿ ರಸ ಮಾಡಿಕೊಳ್ಳಿ. ಈ ರಸವನ್ನು ಕ್ರಮವಾಗಿ ವಾರಕ್ಕೆ ಎರಡು ಅಥವಾ ಮೂರು ಸಾರಿ ಹಚ್ಚಿ ಹದಿನೈದು ನಿಮಿಷಗಳ ಕಾಲ ಬಿಡುವುದರಿಂದ ಕಲೆಗಳು ಕೂಡ ಮಾಯಾ ವಾಗುತ್ತವೆ.

ಅಲೋವೆರಾ ಹಾಗೂ ಅರಿಶಿನ

ಅಲೋವೆರಾ ಹಾಗೂ ಅರಿಶಿನ

ಅಲೋವೆರಾ ರಸವನ್ನು ಸ್ವಲ್ಪ ಅರಿಶಿನ ಹಾಕಿ ಕಲೆಸಿ ಮುಖಕ್ಕೆ ಹಚ್ಚಬೇಕು. ಇದರಿಂದ ಅರಿಶಿನ ಹಾಗೂ ಅಲೋವೆರಾ ಎರಡರ ಪೋಷಕಾಂಶಗಳು ಚರ್ಮಕ್ಕೆ ಶಮನಕಾರಿ ಗುಣವನ್ನು ನೀಡುತ್ತವೆ.

ಕಪ್ಪು ಕಲೆಗಳ ನಿವಾರಣೆಗೆ

ಕಪ್ಪು ಕಲೆಗಳ ನಿವಾರಣೆಗೆ

ಅಲೋವೆರಾ ರಸವನ್ನು ಒಂದು ಚಮಚ ಜೇನು ತುಪ್ಪ ಹಾಗೂ ಅರ್ಧ ನಿಂಬೆ ಹಣ್ಣಿನ ರಸಕ್ಕೆ ಕಲೆಸಿ ಮುಖಕ್ಕೆ ಹಚ್ಚುವುದರಿಂದ ಮುಖದ ಮೇಲಿನ ಕಪ್ಪು ಕಲೆಗಳು ದೂರ ಆಗುತ್ತವೆ.

English summary

Different Ways To Use Aloe Vera To De-tan At Home

It is an ingredient that contains several nutrients like glycerine and sodium carbonate. It is very good for your skin and gives it a natural glow. It is an amazing anti-sunburn remedy which soothes the irritated skin. It has anti-inflammatory properties that help reduce redness. It also heals the skin. Mentioned below are some of the awesome ways to use aloe vera which will help you get rid of your tan faster....
Subscribe Newsletter