ಬ್ಯೂಟಿ ಟಿಪ್ಸ್: ಜೇನುತುಪ್ಪ ಬಳಸಿ ಸೌಂದರ್ಯ ಹೆಚ್ಚಿಸಿ

By: Hemanth
Subscribe to Boldsky

ನೈಸರ್ಗಿಕದತ್ತವಾಗಿ ಸಿಗುವಂತಹ ಪ್ರತಿಯೊಂದು ನಮ್ಮ ಆರೋಗ್ಯಕ್ಕೆ ತುಂಬಾ ಲಾಭದಾಯಕವಾಗಿರುತ್ತದೆ. ಅದರಲ್ಲೂ ಜೇನುತುಪ್ಪದಿಂದ ನಮ್ಮ ಆರೋಗ್ಯಕ್ಕೆ ಹಲವಾರು ರೀತಿಯ ಲಾಭಗಳು ಇವೆ. ಜೇನುತುಪ್ಪ ಕೇವಲ ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯವನ್ನು ಅದರಿಂದ ವೃದ್ಧಿಸಬಹುದು. ಜೇನುತುಪ್ಪದಿಂದ ಕಾಂತಿಯುತ ಮೈಕಾಂತಿ ಹಾಗೂ ರೇಷ್ಮೆಯಂತಹ ಕೂದಲನ್ನು ಪಡೆಯಬಹುದು. ತುಟಿಯ ಅಂದದ ರಕ್ಷಣೆಗೆ ಜೇನು ಒಂದಿದ್ದರೆ ಸಾಕು!

ಮಾರುಕಟ್ಟೆಯಲ್ಲಿ ಸಿಗುವಂತಹ ಕ್ರೀಮ್‌ಗಳನ್ನು ಬಳಸಿ ಮುಖವನ್ನು ಕೆಡಿಸುವ ಬದಲು ನೈಸರ್ಗಿಕದತ್ತವಾದ ಜೇನುತುಪ್ಪವನ್ನು ಬಳಸಿಕೊಂಡರೆ ಅದರಿಂದ ಹೆಚ್ಚಿನ ಲಾಭ ಪಡೆಯಬಹುದು. ಚಿನ್ನದಂತಹ ತ್ವಚೆಗೆ ಬೇಕಿದೆ ಜೇನಿನ ಪೋಷಣೆ 

ನೈಸರ್ಗಿಕದತ್ತವಾಗಿರುವ ಜೇನು ಕೂದಲು ಹಾಗೂ ತ್ವಚೆಗೆ ತುಂಬಾ ಒಳ್ಳೆಯದು. ಜೇನುತುಪ್ಪದಿಂದ ತ್ವಚೆಗೆ ಯಾವ ರೀತಿಯ ಲಾಭವಾಗಲಿದೆ ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ....  

ಚರ್ಮದಲ್ಲಿನ ರಂಧ್ರಗಳನ್ನು ಸ್ವಚ್ಛಗೊಳಿಸುವುದು

ಚರ್ಮದಲ್ಲಿನ ರಂಧ್ರಗಳನ್ನು ಸ್ವಚ್ಛಗೊಳಿಸುವುದು

ಚರ್ಮದಲ್ಲಿನ ರಂಧ್ರಗಳು ಮುಚ್ಚಿಕೊಂಡು ಸಮಸ್ಯೆ ಎದುರಿಸುತ್ತಾ ಇದ್ದರೆ ನಿಮಗೆ ಇದರಿಂದ ಹಲವಾರು ರೀತಿಯ ಲಾಭಗಳು ಸಿಗಲಿದೆ. ಜೇನುತುಪ್ಪವು ನೈಸರ್ಗಿಕವಾಗಿ ಚರ್ಮದ ರಂಧ್ರಗಳಲ್ಲಿ ತುಂಬಿಕೊಂಡಿರುವ ಕಲ್ಮಶ ಹಾಗೂ ಧೂಳನ್ನು ತೆಗೆದುಹಾಕುವುದು. ಜೇನುತುಪ್ಪದಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಹಾಗೂ ಉರಿಯೂತ ಶಮನಕಾರಿ ಗುಣವು ಚರ್ಮವನ್ನು ಆರೋಗ್ಯವಾಗಿಡುವುದು ಮಾತ್ರವಲ್ಲದೆ ಸೋಂಕು ತಗುಲದಂತೆ ತಡೆಯುವುದು.

ಸ್ನಾನಕ್ಕಾಗಿ

ಸ್ನಾನಕ್ಕಾಗಿ

ನೀರಿಗೆ ಹಾಕಿದಾಗ ಜೇನುತುಪ್ಪವು ಒಳ್ಳೆಯ ಫಲಿತಾಂಶವನ್ನು ನೀಡುವುದು. ಜೇನುತುಪ್ಪವು ಚರ್ಮಕ್ಕೆ ತೇವಾಂಶವನ್ನು ನೀಡುವುದು ಮಾತ್ರವಲ್ಲದೆ ಅದರಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಹಲವಾರು ವಿಧಗಳಿಂದ ಚರ್ಮಕ್ಕೆ ನೆರವಾಗುವುದು. ತುರಿಕೆ ಹಾಗೂ ಚರ್ಮ ಎದ್ದು ಬರುವ ಸಮಸ್ಯೆಯಿದ್ದರೆ ನೀರಿಗೆ 6-9 ಜೇನುತುಪ್ಪ ಸೇರಿಸಿಕೊಂಡು ಅದರಲ್ಲಿ ನೆನೆಯಿರಿ.

ಬಿಸಿಲಿನ ಬಿಸಿಗೆ...

ಬಿಸಿಲಿನ ಬಿಸಿಗೆ...

ಬೇಸಿಗೆ ಇನ್ನು ಕೆಲವೇ ದಿನಗಳಲ್ಲಿ ಕಾಲಿಡಲಿದ್ದು, ಈ ವೇಳೆ ಸೂರ್ಯನ ಬಿಸಿಲಿನಿಂದಾಗಿ ದೇಹದ ಚರ್ಮದಲ್ಲಿ ಕಲೆಗಳು ಮೂಡುವುದು ಸಹಜ... ಹಾಗಾಗಿ ಜೇನುತುಪ್ಪದಲ್ಲಿ ಇರುವಂತಹ ಶಮನಕಾರಿ ಗುಣವು ಚರ್ಮಕ್ಕೆ ತಂಪನ್ನು ಒದಗಿಸುವುದು ಮಾತ್ರವಲ್ಲದೆ ಸೂರ್ಯನ ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸುವುದು. ಸ್ವಲ್ಪ ಜೇನುತುಪ್ಪ ತೆಗೆದುಕೊಂಡು ಅದನ್ನು ಭಾದಿತ ಜಾಗಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಮಸಾಜ್ ಮಾಡಿದ ಬಳಿಕ ನೀರಿನಿಂದ ತೊಳೆಯಿರಿ.

ನಯವಾದ ತುಟಿಗಳಿಗೆ

ನಯವಾದ ತುಟಿಗಳಿಗೆ

ಒಣ ಹಾಗೂ ಒಡೆದ ತುಟಿಗಳ ಆರೈಕೆಗೆ ಜೇನುತುಪ್ಪವು ಅತೀ ಉತ್ತಮ ಔಷಧಿಯಾಗಿದೆ. ಸ್ವಲ್ಪ ಬಾದಾಮಿಯನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ನೆನೆಸಿ. ರುಬ್ಬಿಕೊಂಡು ಅದರ ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ತುಟಿಗಳಿಗೆ ಹಚ್ಚಿಕೊಂಡು ಮಸಾಜ್ ಮಾಡಿ. ಬಳಿಕ ತಣ್ಣೀರಿನಿಂದ ತೊಳೆಯಿರಿ. ಒಣ ಹಾಗೂ ಒಡೆದ ತುಟಿಗಳ ಆರೈಕೆಗೆ ದಿನದಲ್ಲಿ ಎರಡು ಸಲ ಇದನ್ನು ಬಳಸಿ.

ಜೇನು ತುಪ್ಪ ಬಾಡಿ ವಾಷ್

ಜೇನು ತುಪ್ಪ ಬಾಡಿ ವಾಷ್

ನಾಲ್ಕು ಸರಳ ಪದಾರ್ಥಗಳು, ಒಂದು ಬಾಟಲ್ ಅಷ್ಟೇ. ಸ್ವಾಭಾವಿಕವಾದ ಈ ಎಲ್ಲಾ ಅಂಶಗಳು ನಿಮ್ಮ ಸೂಕ್ಷ್ಮ ತ್ವಚೆಗೆ ಸರಿಸಾಟಿಯಿಲ್ಲದ ಪರಿಪೂರ್ಣವಾದ ಆರೈಕೆ ಮತ್ತು ಸ್ವಚ್ಛತೆಯನ್ನು ಒದಗಿಸುತ್ತವೆ.

ಅವೊಕ್ಯಾಡೊ ಜೇನು ತುಪ್ಪದ ಮಾಸ್ಕ್

ಅವೊಕ್ಯಾಡೊ ಜೇನು ತುಪ್ಪದ ಮಾಸ್ಕ್

ನಾವು ಸಾಮಾನ್ಯವಾಗಿ ನಮ್ಮ ಸೌಂದರ್ಯದ ಬಗ್ಗೆ ಎಲ್ಲರ ಮುಂದೆ ಜಂಭಕೊಚ್ಚಿಕೊಳ್ಳುವುದಿಲ್ಲ. ಆದರೆ ಈ ಜೇನು ತುಪ್ಪ ಮತ್ತು ಅವೊಕ್ಯಾಡೊಗಳ ಮಾಸ್ಕ್ ನಿಸ್ಸಂಶಯವಾಗಿ ನಿಮ್ಮ ಸೌಂದರ್ಯಕ್ಕೆ ಗರಿ ಮೂಡಿಸುತ್ತದೆ. ಇದನ್ನು ಬಳಸುವುದು ಸ್ವಲ್ಪ ಗೋಜಲಾದರು, ಬಳಸಿದ ನಂತರ ಸಿಗುವ ಫಲಿತಾಂಶವು ನಿಸ್ಸಂಶಯವಾಗಿ ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

 
English summary

Different Ways How Honey Can Make You More Beautiful

Honey is a natural humectant, which is widely used in the beauty industry. Also, due to a lot of antioxidants and anti-inflammatory properties, honey can help to give you a glowing skin and gorgeous hair.
Please Wait while comments are loading...
Subscribe Newsletter