Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಚಿನ್ನದಂತಹ ತ್ವಚೆಗೆ ಬೇಕಿದೆ ಜೇನಿನ ಪೋಷಣೆ

ಜೇನುತುಪ್ಪವನ್ನು ತ್ವಚೆಯ ರಕ್ಷಣೆಗೆಂದು ಬಳಸುವ ಪರಿ ಅನಾದಿಕಾಲದಿಂದಲೂ ಇದೆ. ಜೇನಿನೊಂದಿಗೆ ಮನೆಯಲ್ಲೇ ಇರುವ ಇನ್ನಿತರ ಪದಾರ್ಥಗಳನ್ನು ಉಪಯೋಗಿಸಿಕೊಂಡು ಖರ್ಚಿಲ್ಲದೆ ತ್ವಚೆಯ ರಕ್ಷಣೆಯನ್ನು ಮಾಡಿಕೊಳ್ಳಬಹುದು ಹಾಗೂ ನಿಮ್ಮ ತ್ವಚೆಯ ತೊಂದರೆಗೆ ಸಿಂಪಲ್ ಪರಿಹಾರ ಕಂಡುಕೊಳ್ಳಬಹುದು.
ಜೇನಿನಿಂದ ತಯಾರಿಸಬಹುದಾದ ಫೇಸ್ ಪ್ಯಾಕ್ ಗಳು:
* ಜೇನು ಮತ್ತು ಅರಿಶಿನದ ಫೇಸ್ ಪ್ಯಾಕ್: ಅರಿಶಿನ ಮತ್ತು ಒಂದು ಚಮಚ ಜೇನನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಂಡು 15 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಬೇಕು. ಬೇಕಾದರೆ ಇದಕ್ಕೆ ಹಾಲನ್ನೂ ಬೆರೆಸಿಕೊಳ್ಳಬಹುದು. ಇದು ತ್ವಚೆಯನ್ನು ಶುಭ್ರಗೊಳಿಸುವುದು ಮಾತ್ರವಲ್ಲ, ಕ್ರಮೇಣ ಕಾಂತಿಯುತವಾಗುವಂತೆ ಮಾಡುತ್ತದೆ. ಆದರೆ ಇದು ಕಣ್ಣು ರೆಪ್ಪೆಗೆ, ಹುಬ್ಬಿಗೆ ಮತ್ತು ತಲೆಗೂದಲಿಗೆ ತಾಕದಂತೆ ಎಚ್ಚರವಹಿಸಿ.
* ಜೇನು ಮತ್ತು ಮೊಸರಿನ ಪ್ಯಾಕ್: ಜೇನನ್ನು ಸ್ವಲ್ಪ ಬಿಸಿ ಮಾಡಿ, ಅದಕ್ಕೆ ಮೊಸರು ಬೆರೆಸಿಕೊಂಡು ಮುಖ ಮತ್ತು ಕುತ್ತಿಗೆಗೆ ಲೇಪಿಸಬೇಕು 15 ನಿಮಿಷದ ನಂತರ ತಣ್ಣಗಿನ ನೀರಿನಲ್ಲಿ ತೊಳೆದುಕೊಳ್ಳಬೇಕು. ಆಮೇಲೆ ಯಾವುದಾದರೂ ಮಾಯಿಸ್ಚರೈಸರ್ ಹಚ್ಚಿಕೊಳ್ಳಬಹುದು.
* ಜೇನು, ನಿಂಬೆರಸದ ಪ್ಯಾಕ್: ಬೆಚ್ಚಗಿನ ಜೇನುತುಪ್ಪಕ್ಕೆ ಜಾಪತ್ರೆ, ದಾಲ್ಚಿನ್ನಿ ಹಾಗೂ ನಿಂಬೆ ರಸ ಸೇರಿಸಬೇಕು. ಪೇಸ್ಟ್ ನಂತೆ ಆಗುವವರೆಗೂ ಇದನ್ನು ಕಲೆಸಿ ಮುಖಕ್ಕೆ ಹಚ್ಚಿಕೊಳ್ಳಬೇಕು. 3 ನಿಮಿಷದ ಮಸಾಜ್ ನಂತರ 15 ನಿಮಿಷ ಬಿಟ್ಟು ತಣ್ಣಗಿನ ನೀರಿನಲ್ಲಿ ಮುಖ ತೊಳೆದುಕೊಳ್ಳಬೇಕು.
* ಜೇನು ಮತ್ತು ಮೊಟ್ಟೆ: ಆಲಿವ್ ಎಣ್ಣೆ ಮತ್ತು ಮೊಟ್ಟೆಯ ಹಳದಿ ಭಾಗವನ್ನು ಜೇನಿನೊಂದಿಗೆ ಮೊದಲು ಬೆರೆಸಿಕೊಳ್ಳಬೇಕು. ಬಿಸಿ ನೀರಿಗೆ ಬಟ್ಟೆ ಅದ್ದು ಮುಖವನ್ನು ಒರೆಸಿಕೊಂಡ ನಂತರ ಈ ಮಿಶ್ರಣವನ್ನು ಮುಖಕ್ಕೆ ಲೇಪಿಸಿ. ಹಾಗೆಯೇ ಎರಡು ಸೌತೆ ತುಂಡುಗಳನ್ನು ಕಣ್ಣುಗಳ ಮೇಲೆ ಇಟ್ಟುಕೊಳ್ಳಿ. ಇದು ಚರ್ಮದ ಒಳಗಿದ್ದ ಕೊಳೆ ಮತ್ತು ಎಣ್ಣೆ ಅಂಶವನ್ನು ಹೊರತಂದು ಮುಖದ ಹೊಳಪಿಗೆ ಕಾರಣವಾಗುತ್ತದೆ.
ಇದರಲ್ಲಿ ಯಾವುದಾದರೂ ಫೇಸ್ ಪ್ಯಾಕ್ ಅನ್ನು ಒಂದಷ್ಟು ದಿನಗಳ ಕಾಲ ಅನುಸರಿಸುವುದರಿಂದ ನಿಮ್ಮ ತ್ವಚೆಯಲ್ಲಿನ ಬದಲಾವಣೆಯನ್ನು ನೀವೇ ಅನುಭವಿಸಿ ನೋಡುತ್ತೀರ...



Click it and Unblock the Notifications
