For Quick Alerts
ALLOW NOTIFICATIONS  
For Daily Alerts

ತುಟಿಯ ಅಂದದ ರಕ್ಷಣೆಗೆ ಜೇನು ಒಂದಿದ್ದರೆ ಸಾಕು!

|

ಜೇನು ಸೌಂದರ್ಯ ಹಾಗೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಜೇನನ್ನು ಸೌಂದರ್ಯ ವೃದ್ಧಿಸಲು ಅನೇಕ ರೀತಿಯಲ್ಲಿ ಬಳಸಬಹುದು. ಇದನ್ನು ಕೂದಲಿಗೆ ಹಚ್ಚಿದರೆ ಕೂದಲು ಹೊಳಪನ್ನು ಪಡೆಯುತ್ತದೆ.

ಮುಖಕ್ಕೆ ಪೇಶಿಯಲ್ ಮಾಡುವಾಗ ಜೇನು ಹಾಕಿ ಮಾಡಿದರೆ ಮುಖ ಅಂದ ಹೆಚ್ಚುವುದು, ಇದನ್ನು ತುಟಿಗೆ ಹಚ್ಚಿದರೆ ತುಟಿ ಹೊಳಪನ್ನು ಪಡೆಯುವುದರ ಜೊತೆಗೆ ಮೃದು ತುಟಿಯನ್ನು ಪಡೆಯಬಹುದು.

Honey As A Natural Beauty Product

ಅದರಲ್ಲೂ ಜೇನನ್ನು ಈ ಕೆಳಗಿನ ತ್ವಚೆ ಸಮಸ್ಯೆಗಳನ್ನು ಹೋಗಲಾಡಿಸಲು ಬಳಸಬಹುದು.

1. ನಿಮ್ಮದು ತುಂಬಾ ಒಣ ತುಟಿಯಾಗಿದ್ದರೂ ಕೂಡ ಜೇನು ಹಚ್ಚಿದರೆ ತುಟಿ ಮೃದುವಾಗುವುದು ಹಾಗೂ ತುಟಿ ಒಣಗುವುದು ಕಡಿಮೆಯಾಗುವುದು.

2. ಜೇನಿನಲ್ಲಿ ರೋಗಾಣುಗಳ ವಿರುದ್ಧ ಹೋರಾಡುವ ಅಂಶವಿರುವುದರಿಂದ ತ್ವಚೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ತುಟಿ ಒಡೆಯುವುದನ್ನು ತಡೆಗಟ್ಟುತ್ತದೆ.

3. ಮೈಯಲ್ಲಿ ಚಿಕ್ಕ ಪುಟ್ಟ ಗಾಯವಾಗಿದ್ದರೆ ಆ ಭಾಗಕ್ಕೆ ಜೇನು ಹಚ್ಚಿದರೆ ಸಾಕು ಗುಣಮುಖವಾಗುವುದು.

4. ಜೇನನ್ನು ತುಟಿ ಹಾಗೂ ಮೂಖದ ಆರೈಕೆಯಲ್ಲಿ ಬಾದಾಮಿ ಅಥವಾ ಆಲೀವ್ ಎಣ್ಣೆಯಲ್ಲಿ ಮಿಶ್ರ ಮಾಡಿ ಹಚ್ಚಬಹುದು. ಈ ರೀತಿ ಮಾಡಿದರೆ ತ್ವಚೆ ಮಾಯಿಶ್ಚರೈಸರ್ ಆಗಿರುತ್ತದೆ, ಅಕಾಲಿಕ ನೆರಿಗೆ ಕೂಡ ಕಂಡು ಬರುವುದಿಲ್ಲ.

5. ಮೇಕಪ್ ಮಾಡುವಾಗ ಲಿಪ್ ಸ್ಟಿಕ್ ಹಚ್ಚಿ ಅದರ ಮೇಲೆ ಸ್ವಲ್ಪ ಜೇನು ಸವರಿದರೆ ತುಟಿ ಹೊಳಪಿನಿಂದ ಆಕರ್ಷಕವಾಗಿ ಕಾಣುವುದು ಅಲ್ಲದೆ ಲಿಪ್ ಸ್ಟಿಕ್ ಬೇಗನೆ ಮಾಸುವುದಿಲ್ಲ.

ಚಳಿಗಾಲದ ಸಮಯದಲ್ಲಿ ಜೇನಿನ ಲಿಪ್ ಬಾಮ್ ತುಂಬ ಪ್ರಯೋಜಕಾರಿಯಾಗಿದ್ದು, ಜೇನಿನ ಲಿಪ್ ಬಾಮ್ ಅನ್ನು ನೀವೇ ತಯಾರಿಸಬಹುದಾಗಿದ್ದು ರೆಸಿಪಿ ನೋಡಿ ಇಲ್ಲಿದೆ:

1. ಒಂದು ಚಮಚ ಜೇನಿಗೆ ಎರಡು ಹನಿ ಬಾದಾಮಿ ಎಣ್ಣೆ ಹಾಕಿ ಅದನ್ನು ಮಿಶ್ರಣ ಮಾಡಿ ರಾತ್ರಿ ಮಲಗುವ ಮುನ್ನ ತುಟಿಗೆ ಹಚ್ಚಿಕೊಳ್ಳಿ. ಇದನ್ನು ಹೊರಗಡೆ ಹೋಗುವಾಗ, ಆಫೀಸ್ ಗೆ ಹೋಗುವಾಗ ಕೂಡ ಹಚ್ಚಬಹುದು.

ಸಲಹೆ: ಈ ಲಿಪ್ ಬಾಮ್ ಅನ್ನು ಸ್ವಲ್ಪ ಅಧಿಕ ಮಾಡಿ ಚಿಕ್ಕ ಡಬ್ಬದಲ್ಲಿ ಹಾಕಿಟ್ಟರೆ ಆಗಾಗ ಮಾಡಬೇಕಾಗಿಲ್ಲ.

ಗಮನಿಸಬೇಕಾದ ಅಂಶಗಳು:
* ಕೆಲವರಿಗೆ ಜೇನು ಅಲರ್ಜಿಯನ್ನು ತರಬಹುದು, ಅಂತಹವರು ಈ ವಿಧಾನವನ್ನು ಟ್ರೈ ಮಾಡಬೇಡಿ.
* ತರಚು ಗಾಯಕ್ಕೆ ಮಾತ್ರ ಹಚ್ಚಿ.

English summary

Honey As A Natural Beauty Product | Tips For Skin Care | ಜೇನು ನೈಸರ್ಗಿಕವಾದ ಸೌಂದರ್ಯ ವರ್ಧಕ | ತ್ವಚೆ ಆರೈಕೆಗೆ ಕೆಲ ಸಲಹೆಗಳು

Apart from weight loss, honey can be good for the skin especially lips. Honey lip balms are very popular. This is because honey moisturises chapped lips and makes them soft. That is why, honey is used as a multi-purpose beauty product.
X
Desktop Bottom Promotion