ಕೇಸರಿ ಫೇಸ್ ಪ್ಯಾಕ್- ಸ್ವಲ್ಪ ದುಬಾರಿಯಾದರೂ ತ್ವಚೆಗೆ ಒಳ್ಳೆಯದು

Posted By: Jaya subramanya
Subscribe to Boldsky

ಹೆಣ್ಣಿನ ಸೌಂದರ್ಯವೆಂಬುದು ತೊಳೆದಿಟ್ಟ ಕನ್ನಡಿಯಂತೆ. ಆಗಾಗ ಧೂಳು ಕೊಳೆಗಳು ಸೇರದಂತೆ ಅದನ್ನು ಕಾಪಾಡುತ್ತಾ ಇರಬೇಕು. ಅದರಲ್ಲೂ ಮುಖದ ಕಾಳಜಿಗೆ ಹೆಚ್ಚಿನ ಗಮನವನ್ನು ಸ್ತ್ರೀಯರು ನೀಡಬೇಕಾಗುತ್ತದೆ. ಇಂದಿನ ಕಲುಷಿತ ವಾತಾವರಣವು ನಿಮ್ಮ ಮುಖದ ಮೇಲೆ ಕೆಟ್ಟ ಪ್ರಭಾವವನ್ನು ಬೀರುತ್ತದೆ. ನಿಮ್ಮ ಮುಖದ ಕೋಮಲತೆಗಾಗಿ ನೈಸರ್ಗಿಕ ವಿಧಾನಗಳನ್ನು ಅನುಸರಿಸಿ ಎಂದೇ ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸುತ್ತಿದ್ದೇವೆ. ಚರ್ಮಕ್ಕೆ ಹಾಲು ಮತ್ತು ಕೇಸರಿ ಬಳಸಿ ಅದ್ಭುತ ನೋಡಿ!

ಹೌದು ನಿಮ್ಮ ತ್ವಚೆಯನ್ನು ರಾಸಾಯನಿಕಗಳಿಂದ ಮುಕ್ತಿಗೊಳಿಸಿ ನೈಸರ್ಗಿಕ ಉತ್ಪನ್ನಗಳನ್ನು ಬಳಸಿ ಸಂರಕ್ಷಿಸಬೇಕಾಗುತ್ತದೆ. ಇಂದಿಲ್ಲಿ ನಾವು ತಿಳಿಸುತ್ತಿರುವ ಫೇಸ್ ಪ್ಯಾಕ್ ಕೇಸರಿಯದ್ದಾಗಿದ್ದು ಅದರೊಂದಿಗೆ ಇತರ ಉತ್ಪನ್ನಗಳನ್ನು ಬಳಸಿ ಇದನ್ನು ಸಿದ್ಧಪಡಿಸಲಾಗುತ್ತಿದೆ. ನಿಮ್ಮ ತ್ವಚೆಯ ಸರ್ವ ಸಮಸ್ಯೆಗಳನ್ನೂ ಈ ಫೇಸ್‌ ಪ್ಯಾಕ್‌ನಿಂದ ಹೋಗಲಾಡಿಸಬಹುದಾಗಿದ್ದು ಇದನ್ನು ಒಮ್ಮೆ ಟ್ರೈ ಮಾಡಿ ಫಲಿತಾಂಶವನ್ನು ನೀವೇ ಕಂಡುಕೊಳ್ಳಿ.... 

ಕೇಸರಿ ಮತ್ತು ಶ್ರೀಗಂಧದ ಪೌಡರ್ ಫೇಸ್ ಪ್ಯಾಕ್

ಕೇಸರಿ ಮತ್ತು ಶ್ರೀಗಂಧದ ಪೌಡರ್ ಫೇಸ್ ಪ್ಯಾಕ್

ಕೇಸರಿ ಮತ್ತು ಶ್ರೀಗಂಧದ ಪ್ಯಾಕ್ ನಿಮ್ಮ ತ್ವಚೆಗೆ ಅತ್ಯುತ್ತಮ ಎಂದೆನಿಸಿದೆ. ನಿಮಗೆ ಹೊಳೆಯುವ ಯವ್ವನದ ತ್ವಚೆಯನ್ನು ನೀಡುತ್ತದೆ. ಒಂದು ಚಮಚ ಕೇಸರಿಯೊಂದಿಗೆ ಒಂದು ಚಮಚ ಶ್ರೀಗಂಧವನ್ನು ತೆಗೆದುಕೊಳ್ಳಿ ಇದಕ್ಕೆ ಸ್ವಲ್ಪ ಹಾಲಿನ ಕ್ರೀಂ ಅನ್ನು ಮಿಶ್ರ ಮಾಡಿ. ಈ ಮಾಸ್ಕ್ ಅನ್ನು ತ್ವಚೆಗೆ ಹಚ್ಚಿಕೊಳ್ಳಿ ನಂತರ ಸ್ವಲ್ಪ ಸಮಯ ಹಾಗೆಯೇ ಬಿಡಿ. ವೃತ್ತಾಕಾರವಾಗಿ ಮಸಾಜ್ ಮಾಡಿ 10 ನಿಮಿಷಗಳ ತರುವಾಯ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ಕೇಸರಿ ಮತ್ತು ಹಾಲಿನ ಪುಡಿ ಫೇಸ್ ಪ್ಯಾಕ್

ಕೇಸರಿ ಮತ್ತು ಹಾಲಿನ ಪುಡಿ ಫೇಸ್ ಪ್ಯಾಕ್

ನಿಮ್ಮ ನಿಸ್ತೇಜ ಮತ್ತು ಡ್ರೈ ತ್ವಚೆಗೆ ಈ ಫೇಸ್ ಪ್ಯಾಕ್ ಅತ್ಯುತ್ತಮ ಎಂದೆನಿಸಿದೆ. 10-15 ಕೇಸರಿ ದಳವನ್ನು ತೆಗೆದುಕೊಂಡು ಇದಕ್ಕೆ ಸ್ವಲ್ಪ ಹಾಲಿನ ಪುಡಿಯನ್ನು ಸೇರಿಸಿ. ಒಂದು ಚಮಚ ಲಿಂಬೆ ರಸವನ್ನು ಬೆರೆಸಿ. ಚೆನ್ನಾಗಿ ಎಲ್ಲವನ್ನೂ ಮಿಶ್ರ ಮಾಡಿ. ಈ ಫೇಸ್ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಿ 15 ನಿಮಿಷಗಳ ತರುವಾಯ ಮುಖವನ್ನು ತೊಳೆದುಕೊಳ್ಳಿ.

ಕೇಸರಿ ಮತ್ತು ತುಳಸಿ ಫೇಸ್ ಪ್ಯಾಕ್

ಕೇಸರಿ ಮತ್ತು ತುಳಸಿ ಫೇಸ್ ಪ್ಯಾಕ್

10-12 ತುಳಸಿ ದಳವನ್ನು ತೆಗೆದುಕೊಂಡು ಇದಕ್ಕೆ ಸರಿಸಮನಾಗಿ ಕೇಸರಿ ದಳವನ್ನು ಮಿಶ್ರ ಮಾಡಿಕೊಳ್ಳಿ. ಸ್ವಲ್ಪ ಹಾಲನ್ನು ತೆಗೆದುಕೊಂಡು ಇದನ್ನು ಪೇಸ್ಟ್ ಮಾಡಿ. ನಿಮ್ಮ ಮುಖಕ್ಕೆ ಇದನ್ನು ಹಚ್ಚಿಕೊಳ್ಳಿ 20 ನಿಮಿಷಗಳ ತರುವಾಯ ಮುಖವನ್ನು ತೊಳೆದುಕೊಳ್ಳಿ. ನಿಮ್ಮ ಮೊಡವೆ ಮುಖಕ್ಕೆ ಈ ಫೇಸ್ ಪ್ಯಾಕ್ ಮಹತ್ವಪೂರ್ಣವಾದುದಾಗಿದೆ. ಮುಖದಲ್ಲಿರುವ ಕಲೆಯನ್ನು ಇದು ನಿವಾರಿಸುತ್ತದೆ. ಮುಖದಲ್ಲಿರುವ ಬ್ಯಾಕ್ಟೀರಿಯಾವನ್ನು ತೊಲಗಿಸಲು ತುಳಸಿ ನೆರವನ್ನು ನೀಡಲಿದೆ.

ಕೇಸರಿ ಮತ್ತು ಜೇನಿನ ಫೇಸ್ ಪ್ಯಾಕ್

ಕೇಸರಿ ಮತ್ತು ಜೇನಿನ ಫೇಸ್ ಪ್ಯಾಕ್

ನಿಮ್ಮ ನಿಸ್ತೇಜ ಮತ್ತು ಡ್ರೈ ತ್ವಚೆಗೆ ಈ ಫೇಸ್ ಪ್ಯಾಕ್ ಅತ್ಯುತ್ತಮವಾದುದು. ಇದು ಮಾಯಿಶ್ಚರೈಸರ್ ಅನ್ನು ಮುಖದಲ್ಲಿ ಹಾಗೆಯೇ ಇರಿಸಿ ನಿಮ್ಮನ್ನು ಹೈಡ್ರೇಟ್ ಆಗಿ ಮಾಡುತ್ತದೆ. ಕೇಸರಿಯ ದಳವನ್ನು ತೆಗೆದುಕೊಂಡು ಇದಕ್ಕೆ ಸ್ವಲ್ಪ ಜೇನು ಸೇರಿಸಿ. ಎಲ್ಲವನ್ನೂ ಮಿಶ್ರ ಮಾಡಿಕೊಳ್ಳಿ ಮತ್ತು ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ. ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಇದು ಹೊಳೆಯುವ ಮುಖ ಕಾಂತಿಯನ್ನು ನಿಮಗೆ ಒದಗಿಸಲಿದೆ.

ಕೇಸರಿ ಮತ್ತು ಲಿಂಬೆ ಫೇಸ್ ಪ್ಯಾಕ್

ಕೇಸರಿ ಮತ್ತು ಲಿಂಬೆ ಫೇಸ್ ಪ್ಯಾಕ್

ಕೇಸರಿಯ ದಳವನ್ನು ತೆಗೆದುಕೊಂಡು ಅದಕ್ಕೆ ಲಿಂಬೆ ರಸವನ್ನು ಸೇರಿಸಿ. ಒಂದು ಚಮಚ ಕಡಲೆ ಹಿಟ್ಟನ್ನು ಮಿಶ್ರ ಮಾಡಿ ನಂತರ ಎಲ್ಲವನ್ನೂ ಮಿಶ್ರ ಮಾಡಿಕೊಳ್ಳಿ. ನಿಮ್ಮ ಮುಖಕ್ಕೆ ಈ ಮಿಶ್ರಣವನ್ನು ಹಚ್ಚಿಕೊಳ್ಳಿ. 15 ನಿಮಿಷ ಕಾಯಿರಿ. ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಇದು ನಿಮಗೆ ಹೊಳೆಯುವ ಯವ್ವೌನದ ಕಾಂತಿಯನ್ನು ನೀಡಲಿದೆ. ನಿಮ್ಮ ತ್ವಚೆಯನ್ನು ಇದು ಮಾಯಿಶ್ಚರೈಸ್ ಮಾಡಲಿದ್ದು ದಿನಪೂರ್ತಿ ಹೈಡ್ರೇಟ್ ಮಾಡಲಿದೆ.

ಕೇಸರಿ ಮತ್ತು ದಾಲ್ಚಿನ್ನಿ ಫೇಸ್ ಪ್ಯಾಕ್

ಕೇಸರಿ ಮತ್ತು ದಾಲ್ಚಿನ್ನಿ ಫೇಸ್ ಪ್ಯಾಕ್

2-3 ಚಮಚ ಹಾಲು ಕ್ರೀಂಗೆ 4-5 ದಳ ಕೇಸರಿಯನ್ನು ಸೇರಿಸಿ. ಇದಕ್ಕೆ ಒಂದು ಚಮಚ ದಾಲ್ಚಿನ್ನಿಯನ್ನು ಸೇರಿಸಿಕೊಳ್ಳಿ. ನಿಮ್ಮ ಮುಖಕ್ಕೆ ಈ ಫೇಸ್ ಪ್ಯಾಕ್ ಅನ್ನು ಹಚ್ಚಿಕೊಳ್ಳಿ. 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ವೃತ್ತಾಕಾರವಾಗಿ ಮಸಾಜ್ ಮಾಡಿಕೊಳ್ಳಿ. ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಕೇಸರಿ ಮತ್ತು ದಾಲ್ಚಿನ್ನಿಯನ್ನು ಮುಖದ ಕಾಂತಿಗಾಗಿ ಬಳಸಿಕೊಳ್ಳುವುದರಿಂದ ಮೊಡವೆ ನೀಗಲಿದೆ. ದಾಲ್ಚಿನ್ನಿಯಲ್ಲಿರುವ ಆಂಟಿಬ್ಯಾಕ್ಟೀರಿಯಲ್ ಅಂಶಗಳು ಮೊಡವೆ ಮತ್ತು ಕಲೆಗಳನ್ನು ದೂರವಾಗಿಸಲಿದೆ.

ಕೇಸರಿ ಮತ್ತು ಬಾದಾಮಿ ಫೇಸ್ ಪ್ಯಾಕ್

ಕೇಸರಿ ಮತ್ತು ಬಾದಾಮಿ ಫೇಸ್ ಪ್ಯಾಕ್

ಕೇಸರಿ ಮತ್ತು ಬಾದಾಮಿ ಫೇಸ್ ಪ್ಯಾಕ್ ಅನ್ನು ತ್ವಚೆಗೆ ಬಳಸುವುದರಿಂದ ನಿಮಗೆ ಅದ್ಭುತ ಫಲಿತಾಂಶ ದೊರೆಯಲಿದೆ. ಬಾದಾಮಿಯಲ್ಲಿರುವ ವಿಟಮಿನ್‌ಗಳು ನಿಮ್ಮ ತ್ವಚೆಯನ್ನು ತಾಜಾವಾಗಿರಿಸಲಿದೆ. 10-15 ಕೇಸರಿ ದಳವನ್ನು ತೆಗೆದುಕೊಂಡು ಅದಕ್ಕೆ 2-3 ಬಾದಾಮಿಯನ್ನು ಮಿಶ್ರ ಮಾಡಿ. ಎಲ್ಲವನ್ನೂ ಮಿಶ್ರ ಮಾಡಿಕೊಳ್ಳಿ ಮತ್ತು ನಿಮ್ಮ ಮುಖಕ್ಕೆ ಇದನ್ನು ಹಚ್ಚಿಕೊಳ್ಳಿ. 10 ನಿಮಿಷಗಳ ಕಾಲ ಮಸಾಜ್ ಮಾಡಿ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ದಿನವೂ ಇದನ್ನು ಬಳಸಿಕೊಂಡು ಉತ್ತಮ ಫಲಿತಾಂಶವನ್ನು ನಿಮ್ಮದಾಗಿಸಿ.

ಕೇಸರಿ ಮತ್ತು ಅಲೋವೇರಾ ಫೇಸ್ ಪ್ಯಾಕ್

ಕೇಸರಿ ಮತ್ತು ಅಲೋವೇರಾ ಫೇಸ್ ಪ್ಯಾಕ್

ನಿಮ್ಮ ತ್ವಚೆಯನ್ನು ಹೈಡ್ರೇಟ್ ಮಾಡಿ ಹೆಚ್ಚುವರಿ ಜಿಡ್ಡನ್ನು ಮುಖದಿಂದ ಈ ಫೇಸ್ ಪ್ಯಾಕ್ ತೆಗೆಯಲಿದೆ. ಸ್ವಲ್ಪ ಕೇಸರಿ ದಳವನ್ನು ತೆಗೆದುಕೊಂಡು ಅದಕ್ಕೆ ಅಲೋವೇರಾ ಜೆಲ್ ಅನ್ನು ಸೇರಿಸಿ. ಎರಡನ್ನೂ ಮಿಶ್ರ ಮಾಡಿಕೊಂಡು 1/2 ಚಮಚ ಅರಶಿನವನ್ನು ಸೇರಿಸಿ. ಎಲ್ಲವನ್ನೂ ಮುಖಕ್ಕೆ ಹಚ್ಚಿಕೊಳ್ಳಿ. 10 ನಿಮಿಷಗಳ ಕಾಲ ಕಾಯಿರಿ. ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಸೂರ್ಯನ ಕಿರಣದಿಂದ ಬಾಡಿರುವ ಮುಖಕ್ಕೆ ಈ ಫೇಸ್ ಪ್ಯಾಕ್ ಸಹಕಾರಿ ಎಂದೆನಿಸಲಿದೆ.

For Quick Alerts
ALLOW NOTIFICATIONS
For Daily Alerts

    English summary

    Different Kesar Packs For All Types Of Skin

    Kesar, also known as saffron, is one among the ancient kitchen ingredients used in India from more than 5000 years. It has been termed as a common beauty ingredient that was used by queens and royals in the community. This expensive spice contains a high amount of calcium, manganese, iron, zinc, and copper. All these ingredients found in saffron are extremely beneficial for the skin, which helps to promote healthy and glowing skin.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more