For Quick Alerts
ALLOW NOTIFICATIONS  
For Daily Alerts

ಚರ್ಮಕ್ಕೆ ಹಾಲು ಮತ್ತು ಕೇಸರಿ ಬಳಸಿ ಅದ್ಭುತ ನೋಡಿ!

By Super Admin
|

ಸಿನೆಮಾಗಳ ಹೀರೋಯಿನ್‌ಗಳು ಮತ್ತು ಕೆಲವು ರೂಪದರ್ಶಿಯರು ತುಂಬಾ ಸುಂದರವಾಗಿ ಕಾಣಿಸಿಕೊಳ್ಳಲು ಕಾರಣ ಏನಪ್ಪಾ ಎಂದು ನಾವು ತಲೆಕೆರೆದುಕೊಳ್ಳುತ್ತೇವೆ. ಇದು ಮೇಕಪ್ ಮಾಡಿರುವ ಪರಿಣಾಮವೆಂದು ಭಾವಿಸುವುದುಂಟು. ಆದರೆ ಕೆಲವು ಹೀರೋಯಿನ್ ಹಾಗೂ ರೂಪದರ್ಶಿಯರು ನಿಜ ಜೀವನದಲ್ಲೂ ಸುಂದರವಾಗಿಯೇ ಕಾಣುತ್ತಾರೆ. ಕೇಸರಿಯ ರಹಸ್ಯ: ಕಣ ಕಣದಲ್ಲೂ ಸೌಂದರ್ಯದ ಶಕ್ತಿ!

ಇದಕ್ಕೆ ಕಾರಣ ಅವರು ಬಳಸುವ ಸೌಂದರ್ಯವರ್ಧಕಗಳು. ಕೆಲವರು ಈಗ ಕೂಡ ನೈಸರ್ಗಿಕವಾಗಿ ಸಿಗುವ ಸಾಮಗ್ರಿಗಳನ್ನು ಬಳಸಿಕೊಂಡೇ ತಮ್ಮ ಸೌಂದರ್ಯವನ್ನು ಕಾಪಾಡಿಕೊಂಡು ಬರುತ್ತಾ ಇದ್ದಾರೆ. ಇದಕ್ಕೆ ಖರ್ಚು ಕಡಿಮೆ ಮತ್ತು ಅಡ್ಡಪರಿಣಾಮಗಳು ಇಲ್ಲ. ಅದರಲ್ಲೂ ಹಾಲು ಮತ್ತು ಕೇಸರಿಯನ್ನು ಬಳಸುವುದರಿಂದ ಸೌಂದರ್ಯವನ್ನು ವೃದ್ಧಿಸಬಹುದಾಗಿದೆ. ಹಾಲು ಮತ್ತು ಕೇಸರಿಯ ಮಿಶ್ರಣವನ್ನು ಬಳಸಿ ನಿಮ್ಮ ಸೌಂದರ್ಯ ಹೆಚ್ಚುವಂತೆ ಮಾಡುವುದು ಹೇಗೆ ಎಂದು ತಿಳಿಯಿರಿ. ಬಹುಪಯೋಗಿ ಕೇಸರಿ, ಗರ್ಭಿಣಿಯರ ಪಾಲಿನ ಸಂಜೀವಿನಿ

ಫೇಸ್ ಪ್ಯಾಕ್ ತಯಾರಿಸಲು ಬೇಕಾಗುವ ಸಾಮಗ್ರಿಗಳು
ಬೇಕಾಗುವ ಸಾಮಗ್ರಿಗಳು
ಕೇಸರಿ-1 ಚಮಚ
ಹಾಲು 2 ಚಮಚ ಹಾಲಿನ ಕೆನೆಯಂತಹ ತ್ವಚೆಯ ಸೌಂದರ್ಯ ನಿಮ್ಮದಾಗಿಸಿಕೊಳ್ಳಿ!

ತಯಾರಿಸುವ ಹಾಗೂ ಬಳಸುವ ವಿಧಾನ
ಹೇಳಿದಷ್ಟು ಪ್ರಮಾಣದಲ್ಲಿ ಸಾಮಗ್ರಿಗಳನ್ನು ಹಾಕಿ ಪೇಸ್ಟ್ ಮಾಡಿಕೊಳ್ಳಿ. ತೆಳುವಾದ ಪದರದಲ್ಲಿ ಈ ಪೇಸ್ಟ್ ನ್ನು ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷಗಳ ಕಾಲ ಹಾಗೆ ಬಿಡಿ ನಂತರ ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಹಗುರವಾದ ಫೇಸ್ ವಾಶ್ ಬಳಸಿ. ನಿಮ್ಮ ತ್ವಚೆಗೆ ಹಾಲು ಮತ್ತು ಕೇಸರಿ ಮಿಶ್ರಣ ಯಾವ ರೀತಿ ನೆರವಾಗುವುದು ಎಂದು ತಿಳಿಯಿರಿ.

ಯುವಕರಂತೆ ಕಾಣುತ್ತೀರಿ

ಯುವಕರಂತೆ ಕಾಣುತ್ತೀರಿ

ಹಾಲು ಮತ್ತು ಕೇಸರಿಯ ಮಿಶ್ರಣವು ಚರ್ಮದಲ್ಲಿ ಕಾಲಜನ್ ಉತ್ಪತ್ತಿಯನ್ನು ಹೆಚ್ಚಿಸುವುದು ಮತ್ತು ಚರ್ಮದ ಕೋಶಗಳನ್ನು ಸರಿಪಡಿಸಿ ಚರ್ಮಕ್ಕೆ ಯುವ ಕಾಂತಿಯನ್ನು ನೀಡುವುದು.

ಒಣ ಚರ್ಮ ನಿವಾರಣೆ

ಒಣ ಚರ್ಮ ನಿವಾರಣೆ

ಹಾಲು ಮತ್ತು ಕೇಸರಿಯಲ್ಲಿ ಚರ್ಮಕ್ಕೆ ತೇವಾಂಶ ನೀಡುವ ಗುಣಗಳಿವೆ. ಇದರಿಂದ ನಿಮ್ಮ ಚರ್ಮವು ತೇವಾಂಶವನ್ನು ಪಡೆಯುತ್ತದೆ. ಇದರಿಂದ ಚರ್ಮವು ಮೃಧು ಹಾಗೂ ಹೊಳಪನ್ನು ಪಡೆಯುವುದು.

ಕಂದುಬಣ್ಣ ನಿವಾರಣೆ

ಕಂದುಬಣ್ಣ ನಿವಾರಣೆ

ಸೂರ್ಯನ ಕಿರಣಗಳಿಂದ ಉಂಟಾದ ಕಂದು ಬಣ್ಣ ನಿವಾರಣೆ ಮಾಡುವಲ್ಲಿ ಹಾಲು ಮತ್ತು ಕೇಸರಿ ಅದ್ಭುತವಾಗಿ ಕೆಲಸ ಮಾಡುತ್ತದೆ. ಇದರಿಂದ ನಿಮ್ಮ ಚರ್ಮವು ಮತ್ತಷ್ಟು ಕಾಂತಿಯನ್ನು ಪಡೆಯುವುದು.

ಕಲೆ ತೊಡೆದುಹಾಕುವುದು

ಕಲೆ ತೊಡೆದುಹಾಕುವುದು

ಈ ನೈಸರ್ಗಿಕ ಫೇಸ್ ಪ್ಯಾಕ್ ಒಳ್ಳೆಯ ಬ್ಲೀಚಿಂಗ್ ಆಗಿ ಕೆಲಸ ಮಾಡುವುದು. ಇದನ್ನು ನಿಯಮಿತವಾಗಿ ಬಳಸಿದರೆ ಕಲೆಗಳು ನಿವಾರಣೆಯಾಗಿ ಚರ್ಮ ತನ್ನ ನೈಜ ಬಣ್ಣಕ್ಕೆ ಮರಳುವುದು.

ಗಾಯಕ್ಕೆ ಮದ್ದು

ಗಾಯಕ್ಕೆ ಮದ್ದು

ಜೇನು ಮತ್ತು ಕೇಸರಿಯಲ್ಲಿರುವ ಆ್ಯಂಟಿ ಬ್ಯಾಕ್ಟೀರಿಯಾ ಗುಣಗಳು ಸಣ್ಣಪುಟ್ಟ ಗಾಯ ಮತ್ತು ಸುಟ್ಟ ಗಾಯಗಳನ್ನು ನಿವಾರಣೆ ಮಾಡುವುದು. ಒಡೆದ ಪಾದ, ಸುಟ್ಟಗಾಯ ಇತ್ಯಾದಿಗಳನ್ನು ಇದು ನಿವಾರಿಸುವುದು.

ಮೊಡವೆಗಳ ನಿವಾರಣೆ

ಮೊಡವೆಗಳ ನಿವಾರಣೆ

ಮನೆಯಲ್ಲಿ ಮಾಡಿರುವ ಈ ಫೇಸ್ ಪ್ಯಾಕ್ ನಲ್ಲಿ ಆ್ಯಂಟಿ ಬ್ಯಾಕ್ಟೀರಿಯಾ ಗುಣಗಳು ಇವೆ. ಮೊಡವೆಗಳು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಇದು ತೊಡೆದುಹಾಕುವುದು. ಇದರಿಂದ ಮೊಡವೆಗಳು ಮೂಡುವುದಿಲ್ಲ.

ಚರ್ಮಕ್ಕೆ ಪೋಷಣೆ

ಚರ್ಮಕ್ಕೆ ಪೋಷಣೆ

ಮೊಡವೆಗಳ ಗಾತ್ರವನ್ನು ಕಡಿಮೆ ಮಾಡುವುದು ಮತ್ತು ಕಲೆಗಳನ್ನು ನಿವಾರಣೆ ಮಾಡುವ ಕೇಸರಿ ಮತ್ತು ಹಾಲು ಚರ್ಮಕ್ಕೆ ಪೋಷಣೆ ನೀಡುವುದು.

English summary

Apply Milk And Saffron On Your Skin, Watch What Happens!

Did you know that the mixture of saffron and milk can have various beneficial effects on your skin? Here's a milk and saffron face pack recipe that you must try! Have a look below to know how the saffron and milk face pack can help improve your skin!
X
Desktop Bottom Promotion