For Quick Alerts
ALLOW NOTIFICATIONS  
For Daily Alerts

ಹೂವುಗಳ ಮುಖಲೇಪ-ಈಗ ಮನೆಯಲ್ಲಿಯೇ ಮಾಡಿ, ಕಾಂತಿ ಹೆಚ್ಚಿಸಿಕೊಳ್ಳಿ

By Arshad
|

ಸ್ಪಾಗಳಿಗೆ ಭೇಟಿ ನೀಡುವುದು ಎಂದರೆ ಮಹಿಳೆಯರಿಗೆ ತುಂಬಾ ಇಷ್ಟವಾದ ಕಾರ್ಯಕ್ರಮ. ಇಲ್ಲಿ ಕಳೆಯುವ ಪ್ರತಿ ಕ್ಷಣವೂ ಇವರ ಅತ್ಯಂತ ಆತ್ಮೀಯ ಹಾಗೂ ತಮ್ಮ ಬಿಡುವಿಲ್ಲದ ದಿನಚರಿಯಿಂದ ಕೊಂಚ ಬಿಡುಗಡೆ ಪಡೆಯುವ ಅವಕಾಶವೂ ಆಗಿದೆ. ಇಲ್ಲಿ ಪಡೆಯುವ ಸೇವೆಗಳಲ್ಲಿ ಅತಿ ಹೆಚ್ಚು ಜನಪ್ರಿಯವಾದುದೆಂದರೆ ಪೇಶಿಯಲ್. ಇದು ಚರ್ಮಕ್ಕೆ ಆರಾಮ ಹಾಗೂ ತಂಪನ್ನೆರೆಯುವ ಸೇವೆಯಾಗಿದ್ದು ನವಿರಾಗಿ ಮಸಾಜ್ ಮಾಡುವ ಮೂಲಕ ಕೆನ್ನೆಯ ಸ್ನಾಯುಗಳನ್ನು ಸಡಿಲಿಸುತ್ತದೆ ಹಾಗೂ ಚರ್ಮದಲ್ಲಿರುವ ಕೊಳೆಯನ್ನು ನಿವಾರಿಸುತ್ತದೆ.

ಫೇಶಿಯಲ್ ನಿಂದ ಕೆಲವಾರು ಪ್ರಯೋಜನಗಳಿವೆ. ನಯವಾದ ಮಸಾಜ್ ನಿಂದ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ ಹಾಗೂ ಕಾಂತಿಯನ್ನು ಹೆಚ್ಚಿಸುತ್ತದೆ. ಅಲ್ಲದೇ ಇದರಲ್ಲಿ ಕೈಗೊಳ್ಳುವ ಕ್ರಮಗಳಿಂದ ಚರ್ಮದ ಸೂಕ್ಷ್ಮರಂಧ್ರಗಳಲ್ಲಿದ್ದ ಕಲ್ಮಶ ನಿವಾರಣೆಯಾಗುತ್ತದೆ. ಈ ಕ್ರಿಯೆಯಿಂದ ಚರ್ಮಕ್ಕೆ ಒಳಗಿನಿಂದ ಹೆಚ್ಚಿನ ಪೋಷಣೆ ದೊರಕುವ ಮೂಲಕ ಚರ್ಮ ಪುನಃಶ್ಚೇತನಗೊಳ್ಳುತ್ತದೆ. ನಿಯಮಿತವಾಗಿ ಅನುಸರಿಸುವ ಮೂಲಕ ಇದು ಚರ್ಮದ ಸೆಳೆತವನ್ನು ಹೆಚ್ಚಿಸುತ್ತದೆ, ಕೊಲ್ಯಾಜೆನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಹಾಗೂ ನೆರಿಗೆ ಬೀಳುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಚರ್ಮಕ್ಕೆ ಆರ್ದ್ರತೆ ಒದಗಿಸಲು ಸಹಾ ಫೇಶಿಯಲ್ ಉತ್ತಮ ಆಯ್ಕೆಯಾಗಿದೆ. ಇದರಿಂದ ಹೊಸ ಜೀವಕೋಶಗಳ ಬೆಳವಣಿಗೆ ಸುಲಭವಾಗುತ್ತದೆ. ಈ ವಿಧಾನದಲ್ಲಿ ಬಳಸಲಾಗುವ ಪ್ರಸಾದನಗಳು ಒಳಚರ್ಮಕ್ಕೆ ಇಳಿದು ಚರ್ಮಕ್ಕೆ ಪರಿಪೂರ್ಣ ಪೋಷಣೆ ಒದಗಿಸುತ್ತದೆ. ಇದರ ಜನಪ್ರಿಯತೆಯಿಂದಾಗಿ ಫೇಶಿಯಲ್ ಗೆ ಸದಾ ಬೇಡಿಕೆ ಇರುತ್ತದೆ. ಫೇಶಿಯಲ್ ನಲ್ಲಿ ಬಳಸಲಾಗುವ ಪ್ರಸಾದನಗಳನ್ನನುಸರಿಸಿ ಹಲವಾರು ಫೇಶಿಯಲ್ ಸೇವೆಗಳು ಲಭ್ಯವಿದ್ದು ಇವುಗಳಲ್ಲಿ ಪ್ರತಿಯೊಂದನ್ನೂ ಪಡೆಯಲು ಮಹಿಳೆಯರು ಸದಾ ಉತ್ಸುಕರಾಗಿರುತ್ತಾರೆ.

ಚರ್ಮದ ಅಗತ್ಯಕ್ಕೆ ತಕ್ಕಂತೆ ಫೇಶಿಯಲ್ ಸೇವೆಯಲ್ಲಿಯೂ ಕೊಂಚ ವೈವಿಧ್ಯತೆ ಲಭ್ಯವಿದೆ. ಸುಕ್ಕುಗಳನ್ನು ನಿವಾರಿಸುವ, ಚರ್ಮವನ್ನು ಬಿಳಿಚಿಸುವ, ಎಣ್ಣೆಪಸೆಯನ್ನು ನಿಯಂತ್ರಿಸುವ, ಕಲೆಯನ್ನು ನಿವಾರಿಸುವ ಮೊದಲಾದ ಹತ್ತು ಹಲವು ಸೇವೆಗಳಿವೆ. ಕೆಲವೆಡೆ ಇದಕ್ಕಾಗಿ ಹಾವು, ಬೆಂಕಿ ಮೊದಲಾದ ವಿಕೃತ ವಿಧಾನಗಳನ್ನು ಬಳಸುತ್ತಿದ್ದು ಆಶ್ಚರ್ಯವೆಂಬಂತೆ ಒಂದು ಥ್ರಿಲ್ ಗಾಗಿ ಮುಗಿಬೀಳುವ ಮೂಲಕ ಈ ಸೇವೆಗಳೂ ಜನಪ್ರಿಯಗೊಳ್ಳುತ್ತಿವೆ.

ಫೇಶಿಯಲ್ ಜನಪ್ರಿಯತೆ ಹೆಚ್ಚುತ್ತಿದ್ದಂತೆಯೇ ಇದರ ವೆಚ್ಚವೂ ದುಬಾರಿಯಾಗತೊಡಗಿದೆ. ಇದನ್ನೇ ನಪವಾಗಿಸಿಕೊಂಡು ಫೇಶಿಯಲ್ ಸೇವೆಯನ್ನು ಸ್ವತಃ ಮನೆಯಲ್ಲಿಯೇ ಮಾಡಿಕೊಳ್ಳಲು ಕೆಲವಾರು ಪ್ರಸಾದನಗಳು ಮಾರುಕಟ್ಟೆಯಲ್ಲಿ ಬಂದಿವೆ. ಇದರಲ್ಲಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಗಮನ ಸೆಳೆದದ್ದೆಂದರೆ ಹೂವುಗಳ ಫೇಶಿಯಲ್ ಕ್ರೀಂ. ಹೂವುಗಳಿಗೂ ಮಹಿಳೆಯರಿಗೂ ಅವಿನಾಭಾವ ಸಂಬಂಧವಿದೆ. ಇದರಲ್ಲಿರುವ ಅವಶ್ಯಕ ತೈಲಗಳು ಚರ್ಮದ ಕಾಂತಿ ಹಾಗೂ ಸೆಳೆತ ಹೆಚ್ಚಿಸುತ್ತವೆ ಹಾಗೂ ಉರಿಯನ್ನು ಕಡಿಮೆಮಾಡುತ್ತವೆ. ಅಗತ್ಯ ಪೋಷಣೆ ನೀಡುವ ಮೂಲಕ ಆರೋಗ್ಯಕರವಾಗಿರಲು ಹಾಗೂ ಕಾಂತಿ ಹೆಚ್ಚಿಸಲೂ ನೆರವಾಗುತ್ತವೆ. ನಿಮ್ಮ ಚರ್ಮದ ಬಗೆಯನ್ನು ಗುರುತಿಸಿ ಇದಕ್ಕೆ ಸೂಕ್ತವಾದ ಫೇಶಿಯಲ್ ಕ್ರೀಂ ಖರೀದಿಸುವ ಮೂಲಕ ಈ ಸೇವೆಯನ್ನು ಮನೆಯಲ್ಲಿ ಸ್ವತಃ ಪಡೆದುಕೊಳ್ಳಬಹುದು.

ಗುಲಾಬಿ ಫೇಶಿಯಲ್

ಗುಲಾಬಿ ಫೇಶಿಯಲ್

ಸೌಂದರ್ಯ ಪ್ರಸಾದನಗಳಲ್ಲಿ ಹೆಚ್ಚಾಗಿ ಬಳಸಲಾಗುವ ಗುಲಾಬಿ ಹೂವುಗಳು ಮುಖದ ತ್ವಚೆಗೂ ಉತ್ತಮವಾಗಿದ್ದು ಚರ್ಮಕ್ಕೆ ಅಗತ್ಯವಾದ ತಂಪು ಹಾಗೂ

ಕೆಂಪಗಾಗಿರುವುದನ್ನು ಸರಿಪಡಿಸಲು ನೆರವಾಗುತ್ತದೆ. ಇದರ ಗುಣಪಡಿಸುವ ಗುಣ ಸೂಕ್ಷ್ಮರಂಧ್ರಗಳು ದೊಡ್ಡದಾಗಿದ್ದರೆ ಮತ್ತೆ ಸಹಜಗಾತ್ರಕ್ಕೆ ಕಡಿಮೆಯಾಗಿ ಚರ್ಮದಡಿಯಲ್ಲಿರುವ ಅವಶ್ಯಕ ಪೋಷಕಾಂಶಗಳು ಸೋರಿ ಹೋಗದಂತೆ ತಡೆಯುತ್ತದೆ. ಒಂದು ವೇಳೆ ನಿಮ್ಮ ಚರ್ಮದ ಸೂಕ್ಷ್ಮ ರಂಧ್ರಗಳು ಬರಿಗಣ್ಣಿಗೇ ಕಾಣುವಷ್ಟು ದೊಡ್ಡದಾಗಿದ್ದರೆ ಹಾಗೂ ಚರ್ಮ ಕೆಂಪಗಾಗುವ ತೊಂದರೆ ಇದ್ದರೆ ಗುಲಾಬಿಯ ಫೇಶಿಯಲ್ ಸೂಕ್ತವಾದ ಆಯ್ಕೆಯಾಗಿದೆ.

ಲ್ಯಾವೆಂಡರ್ ಫೇಶಿಯಲ್

ಲ್ಯಾವೆಂಡರ್ ಫೇಶಿಯಲ್

ಈ ಹೂವಿನಲ್ಲಿ ಪ್ರತಿಜೀವಕ ಹಾಗೂ ಬ್ಯಾಕ್ಟೀರಿಯಾ ನಿರೋಧಕ ಗುಣಗಳಿದ್ದು ಚರ್ಮದಲ್ಲಿರುವ ಅನಗತ್ಯವಾದ ಎಣ್ಣೆಯನ್ನು ಹೀರಿಕೊಳ್ಳಲು ನೆರವಾಗುತ್ತದೆ. ಇದರಿಂದ ಚರ್ಮದ ಅಡಿಯಲ್ಲಿ ಕೀವು ಉಂಟಾಗುವುದನ್ನು ತಡೆಯುತ್ತದ್.ಎ ಇದು ಮೊಡವೆಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ಕೊಂದು ಮೊಡವೆಗಳಿಲ್ಲದಂತೆ ಮಾಡುತ್ತದೆ. ನಿಯಮಿತವಾದ ಈ ಫೇಶಿಯಲ್ ಬಳಕೆಯಿಂದ ಚರ್ಮದ ಬಣ್ಣವೂ ಬದಲಾಗಿ ಶೀಘ್ರವೇ ಸಹಜವರ್ಣ ಪಡೆಯಲು ನೆರವಾಗುತ್ತದೆ.

 ಆರ್ಕಿಡ್ ಫೇಶಿಯಲ್

ಆರ್ಕಿಡ್ ಫೇಶಿಯಲ್

ಕಾಡಿನ ಮರಗಳ ಮೇಲೆ ಬೆಳೆಯುವ ಈ ಪರಾವಲಂಬಿ ಗಿಡದ ಹೂವುಗಳು ಸಹಾ ಚರ್ಮದ ಆರೈಕೆಯಲ್ಲಿ ಅಧ್ಬುತವಾದ ಪರಿಣಾಮವನ್ನುಂಟುಮಾಡುತ್ತವೆ. ಇವು ವೃದ್ದಾಪ್ಯದ ಚಿಹ್ನೆಗಳನ್ನು ಸರಿಪಡಿಸುವ ಗುಣವನ್ನು ಹೊಂದಿದೆ. ಇವುಗಳಲ್ಲಿ ಪ್ರದೂಷಣೆಯಿಂದ ಚರ್ಮವನ್ನು ರಕ್ಷಿಸಲು ರಕ್ಷಾಕವಚದಂತೆ ಪದರವೊಂದನ್ನು ನಿರ್ಮಿಸುವ ಗುಣವಿದೆ. ಅಲ್ಲದೇ ಚರ್ಮ ನೀರನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡುವ ಮೂಲಕ ವಿಶೇಷವಾಗಿ ಒಣಚರ್ಮ ಹಾಗೂ ಒಣಚರ್ಮ ಸಂಬಂಧಿತ ತೊಂದರೆಗಳಿಗೆ ಹೆಚ್ಚಿನ ಆರೈಕೆ ನೀಡುತ್ತದೆ.

 ಗೊಂಡೆಹೂವು

ಗೊಂಡೆಹೂವು

ಈ ಹೂವುಗಳು ಪ್ರಖರ ಹಳದಿ ಬಣ್ಣದ್ದಾಗಿದ್ದು ನಮ್ಮ ದೇಶದ ಎಲ್ಲೆಡೆ ಯಾವುದೇ ಆರೈಕೆಯಿಲ್ಲದೆಯೂ ಬೆಳೆಯುತ್ತದೆ. ಇದರಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿದ್ದು ಚರ್ಮದ ಮೇಲೆ ಘೋರ ಪರಿಣಾಮವುಂಟುಮಾಡುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ಧ ಹೋರಾಡುತ್ತದೆ. ಅಲ್ಲದೇ ಸತ್ತ ಜೀವಕೋಶಗಳನ್ನು ನಿವಾರಿಸಲು ಹಾಗೂ ಸಹಜಕಾಂತಿ ಪಡೆಯಲು ನೆರವಾಗುತ್ತದೆ. ಮೊಡವೆಗಳು ಮೂಡುವುದನ್ನು ತಡೆಯುವ ಹಾಗೂ ಸೂರ್ಯನ ಅತಿನೇರಳೆ ಕಿರಣಗಳಿಗೆ ಚರ್ಮ ಘಾಸಿಗೊಳ್ಳದಂತೆ ತಡೆಯುವ ಮೂಲಕ ಅಗತ್ಯ ಪೋಷಣೆ ಒದಗಿಸುತ್ತದೆ.

ಕ್ಯಾಮೋಮೈಲ್ ಫೇಶಿಯಲ್

ಕ್ಯಾಮೋಮೈಲ್ ಫೇಶಿಯಲ್

ಈ ಹೂವಿನ ಅವಶ್ಯಕ ತೈಲದಲ್ಲಿ ಹಲವಾರು ಪ್ರಯೋಜನಗಳಿವೆ. ಇದು ನರಗಳನ್ನು ಸಂಕುಚಿತಗೊಳಿಸಿ ಚರ್ಮ ಕೆಂಪಗಾಗುವುದನ್ನು ತಡೆಯುತ್ತದೆ. ಅಲ್ಲದೇ ಚರ್ಮದ ಸೆಳೆತವನ್ನು ಹೆಚ್ಚಿಸಿ ನೆರಿಗೆ ಮೂಡುವುದನ್ನು ತಡೆಯುವ ಮೂಲಕ ವೃದ್ದಾಪ್ಯದ ಸೂಚನೆಗಳನ್ನು ತಡವಾಗಿಸುತ್ತದೆ.

ದಾಸವಾಳ ಮತ್ತು ಮೊಸರಿನ ಫೇಶಿಯಲ್

ದಾಸವಾಳ ಮತ್ತು ಮೊಸರಿನ ಫೇಶಿಯಲ್

ನಿಮ್ಮ ತ್ವಚೆಗೆ ಅತ್ಯುತ್ತಮವಾಗಿರುವ ದಾಸವಾಳ ತ್ವಚೆಯನ್ನು ಸದಾಕಾಲ ಚಿರ ಯವ್ವೌನಗೊಳಿಸುತ್ತದೆ ಮತ್ತು ಗೆರೆಗಳು ಹಾಗೂ ಕಪ್ಪು ವರ್ತುಲಗಳನ್ನು ದೂರಮಾಡುತ್ತದೆ. ಸ್ವಲ್ಪ ದಾಸವಾಳವನ್ನು ಸೂರ್ಯನ ಬಿಸಿಲಿನ ಅಡಿಯಲ್ಲಿ ಇರಿಸಿ ಮತ್ತು ಚೆನ್ನಾಗಿ ಹುಡಿ ಮಾಡಿಕೊಂಡು ಡಬ್ಬದಲ್ಲಿ ಸಂಗ್ರಹಿಸಿಡಿ. ಮೂರು ಚಮಚ ಈ ಪುಡಿಯನ್ನು ನಾಲ್ಕು ಚಮಚ ಮೊಸರಿನೊಂದಿಗೆ ಕಲಸಿಕೊಳ್ಳಿ. ಈಗ ಒಂದು ಚಮಚ ಶ್ರೀಗಂಧ ಹುಡಿಯನ್ನು ಮಿಶ್ರ ಮಾಡಿ. ಚೆನ್ನಾಗಿ ಎಲ್ಲವನ್ನೂ ಬೆರೆಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ಅದ್ಭುತ ಕಾಂತಿಯನ್ನು ಪಡೆದುಕೊಳ್ಳಿ.

ಮಲ್ಲಿಗೆ ಮತ್ತು ಹಾಲಿನ ಫೇಶಿಯಲ್

ಮಲ್ಲಿಗೆ ಮತ್ತು ಹಾಲಿನ ಫೇಶಿಯಲ್

ಮಲ್ಲಿಗೆ ಮತ್ತು ಹಾಲಿನ ಫೇಶಿಯಲ್ ಮುಖದಲ್ಲಿರುವ ಮೊಡವೆಗಳನ್ನು ನಿವಾರಿಸಲಿದೆ. ಇದು ಆಂಟಿ ಏಜಿಂಗ್ ಅಂಶಗಳನ್ನು ಒಳಗೊಂಡಿದ್ದು ಇದು ಮೊಡವೆ ಮತ್ತು ವರ್ತುಲಗಳನ್ನು ನಿವಾರಿಸಲಿದೆ. ಮಲ್ಲಿಗೆ ಮತ್ತು ಹಾಲಿನ ಫೇಸ್ ಪ್ಯಾಕ್ ಮೃತಕೋಶಗಳಿಂದ ಸಂರಕ್ಷಣೆಯನ್ನು ನೀಡಲಿದೆ. ಅಂತೆಯೇ ತ್ವಚೆಯನ್ನು ಕಾಂತಿಕಯುಕ್ತಗೊಳಿಸಲಿದೆ. ಮುಷ್ಟಿಯಷ್ಟು ಮಲ್ಲಿಗೆ ಎಸಳನ್ನು ತೆಗೆದುಕೊಂಡು ಅದನ್ನು ಹುಡಿ ಮಾಡಿಕೊಳ್ಳಿ. ಇದಕ್ಕೆ ಎರಡು ಚಮಚ ಹಾಲು ಸೇರಿಸಿಕೊಳ್ಳಿ.

ಮತ್ತು ಮುಲ್ತಾನಿ ಮಿಟ್ಟಿಯನ್ನು ಬೆರೆಸಿ ಮತ್ತು ಎರಡು ಚಮಚ ಓಟ್ಸ್ ಅನ್ನು ಬೆರೆಸಿಕೊಳ್ಳಿ. ಎಲ್ಲಾ ಮಿಶ್ರಣಗಳನ್ನು ಚೆನ್ನಾಗಿ ಕಲಸಿಕೊಂಡು ನಿಮ್ಮ ಮುಖಕ್ಕೆ ಈ ಮಾಸ್ಕ್ ಅನ್ನು ಹಚ್ಚಿಕೊಳ್ಳಿ. ಸ್ವಲ್ಪ ಹೊತ್ತು ಕಾಯಿರಿ ತದನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ಗುಲಾಬಿ ಮತ್ತು ಹಾಲಿನ ಫೇಶಿಯಲ್

ಗುಲಾಬಿ ಮತ್ತು ಹಾಲಿನ ಫೇಶಿಯಲ್

ಸೂಕ್ಷ್ಮ ತ್ವಚೆಗೆ ಅತ್ಯಂತ ಉತ್ತಮವಾದುದಾಗಿದೆ ಹಾಲು ಮತ್ತು ಗುಲಾಬಿ ಫೇಸ್ ಪ್ಯಾಕ್. ತ್ವಚೆಯನ್ನು ಇದು ಆಳವಾಗಿ ಕ್ಲೆನ್ಸ್ ಮಾಡಲಿದ್ದು ಮುಚ್ಚಿರುವ ರಂಧ್ರಗಳನ್ನು ತೆರೆಯಲಿದೆ. ಕೆಲವು ಗುಲಾಬಿ ದಳಗಳನ್ನು ಹಾಲಿನೊಂದಿಗೆ ಅರೆದುಕೊಳ್ಳಿ. ನಲ್ವತ್ತು ನಿಮಿಷಗಳ ಕಾಲ ಕಾಯಿರಿ ಮತ್ತು ಎಸಳು ಮೃದುವಾದ ನಂತರವೇ ಅದನ್ನು ಅರೆದುಕೊಳ್ಳಿ. ಅರೆದ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಹೊತ್ತಿನ ಬಳಿಕ ಇದನ್ನು ತೊಳೆದುಕೊಳ್ಳಿ.

English summary

Different Flower Facials To Indulge In This Season

Women love to visit the spas. It is their only "Me-time" that they may get from their busy schedule. The most popular services that women opt for during their salon visit are facials. Facials are very relaxing and soothing for the skin. It involves gently massaging the facial muscles and cleaning up the impurities from it. Facials have many advantages. The gentle massaging which is done during the facial increases the blood circulation in the skin and gives a nice glow to it. The steps involved in a facial clear out the dust and other impurities from the skin.
X
Desktop Bottom Promotion