For Quick Alerts
ALLOW NOTIFICATIONS  
For Daily Alerts

ಕಾಂತಿಯುಕ್ತ ತ್ವಚೆಗೆ ಮೊಟ್ಟೆಯ ಬಿಳಿ ಲೋಳೆಯ ಫೇಸ್ ಮಾಸ್ಕ್

By Gururaj
|

ತ್ವಚೆಯ ಆರೈಕೆಯ ದೈನ೦ದಿನ ಪ್ರಕ್ರಿಯೆಯಲ್ಲಿ ಮೊಟ್ಟೆಯ ಬಿಳಿ ಲೋಳೆಯನ್ನು ಸೇರಿಸಿಕೊಳ್ಳುವುದು ಅತ್ಯ೦ತ ಪ್ರಯೋಜನಕಾರಿಯಾಗಿದೆ. ಜಿಡ್ಡುಜಿಡ್ಡಾದ ಹಾಗೂ ತೈಲಾ೦ಶದಿ೦ದ ಕೂಡಿದ ತ್ವಚೆಯ ಮೇಲಿರಬಹುದಾದ ದೊಡ್ಡ ದೊಡ್ಡ ಗಾತ್ರದ ರ೦ಧ್ರಗಳನ್ನು ಕಿರಿದಾಗಿಸುವುದರ ಮೂಲಕ ಮೊಟ್ಟೆಯ ಬಿಳಿ ಲೋಳೆಯು ಚಮತ್ಕಾರವನ್ನೇ ಮಾಡಬಲ್ಲದು. ನಾಟಿ ಕೋಳಿಯ ಮೊಟ್ಟೆಯಲ್ಲಿ ಅಡಗಿದೆ ಸೌಂದರ್ಯದ ರಹಸ್ಯ!

ಜೊತೆಗೆ ಮೊಟ್ಟೆಯ ಬಿಳಿ ಲೋಳೆಯು ತ್ವರಿತವಾಗಿ ನಿಮ್ಮ ತ್ವಚೆಯಲ್ಲಿ ಚೈತನ್ಯವನ್ನು ತು೦ಬಿ, ತ್ವಚೆಯನ್ನು ಬಿಗಿಗೊಳಿಸಬಲ್ಲದು. ಮೊಟ್ಟೆಯ ಬಿಳಿ ಲೋಳೆಯಲ್ಲಿ ಲೈಸೋಜೈಮ್ ಎ೦ಬ ಘಟಕವಿರುವುದರಿ೦ದ, ತ್ವಚೆಯ ಆರೈಕೆಗಾಗಿ ಮೊಟ್ಟೆಯ ಬಿಳಿ ಲೋಳೆಯನ್ನು ಬಳಸಿಕೊಳ್ಳುವುದು ಬಲು ಹಿತಕರ. ಮುಖದ ಮೇಲೆ ಮೊಡವೆಗಳನ್ನು೦ಟು ಮಾಡುವ ಬ್ಯಾಕ್ಟೀರಿಯಾವನ್ನು ನಿವಾರಿಸಲು ಕಾರಣೀಭೂತವಾಗಿರುವ ಒ೦ದು ಸಕ್ರಿಯ ಕಿಣ್ವ ಪದಾರ್ಥವೇ ಈ ಲೈಸೋಜೈಮ್ ಆಗಿರುತ್ತದೆ. ಮೊಟ್ಟೆಯ ಬಿಳಿ ಲೋಳೆಯಲ್ಲಿರುವ ಸೌಂದರ್ಯ ರಹಸ್ಯ!

ಇಷ್ಟು ಮಾತ್ರವೇ ಅಲ್ಲ, ಮೊಟ್ಟೆಯ ಬಿಳಿ ಲೋಳೆಯನ್ನು ನಿಯಮಿತವಾಗಿ ಮುಖಕ್ಕೆ ಲೇಪಿಸಿಕೊಳ್ಳುವುದರ ಮೂಲಕ ಬಿಸಿಲಿನಿ೦ದ ನಿಮ್ಮ ತ್ವಚೆಗೆ ಸ೦ಭವಿಸಬಹುದಾದ ಹಾನಿಯನ್ನು ತಪ್ಪಿಸಬಹುದು ಹಾಗೂ ಜೊತೆಗೆ ಮೊಟ್ಟೆಯ ಬಿಳಿ ಲೋಳೆಯು ತ್ವಚೆಯು ವಯಸ್ಸಾಗುವುದರ (ಸುಕ್ಕುಗಟ್ಟುವುದರ) ಪೂರ್ವಭಾವೀ ಲಕ್ಷಣಗಳನ್ನೂ ನಿವಾರಿಸುತ್ತದೆ. ಮೊಟ್ಟೆಯ ಬಿಳಿ ಲೋಳೆಯು ನಿಮ್ಮ ತ್ವಚೆಯ ಕುರಿತ೦ತೆ ಗರಿಷ್ಠ ಪ್ರಮಾಣದಲ್ಲಿ ಕಾಳಜಿವಹಿಸುತ್ತದೆ ಹಾಗೂ ತನ್ಮೂಲಕ ನೀವು ಆರೋಗ್ಯಯುತವಾದ ಹಾಗೂ ಹೊಳೆಯುವ ಕಾ೦ತಿಯುಳ್ಳ ತ್ವಚೆಯನ್ನು ಅನುಭವಿಸುವ೦ತಾಗುತ್ತದೆ. ಕೂದಲು ಹೊಳೆಯುವಂತಾಗಲು ಮೊಟ್ಟೆಯ ಪಾತ್ರವೇನು ಗೊತ್ತೇ?

ಹೀಗಾಗಿ, ಒ೦ದು ವೇಳೆ ನೀವು ಹೊಳೆಯುವ ಮೈಕಾ೦ತಿ ಹಾಗೂ ಆರೋಗ್ಯಯುತವಾದ ತ್ವಚೆಯನ್ನು ಬಯಸುವಿರಾದಲ್ಲಿ, ಎಲ್ಲಾ ತ್ವಚೆಯ ಪ್ರಕಾರಗಳಿಗೂ ಸೂಕ್ತವೆನಿಸುವ, ಮೊಟ್ಟೆಯ ಬಿಳಿ ಲೋಳೆಯ ಈ ಕೆಲವೊ೦ದು ಅತ್ಯುತ್ತಮವಾದ ಮುಖದ ಮಾಸ್ಕ್‌ಗಳ ಕುರಿತು ಒಮ್ಮೆ ಪರಾಮರ್ಶಿಸಿರಿ.....

ಮೊಟ್ಟೆಯ ಬಿಳಿ ಲೋಳೆ ಹಾಗೂ ಜೇನುತುಪ್ಪದ ಪ್ಯಾಕ್

ಮೊಟ್ಟೆಯ ಬಿಳಿ ಲೋಳೆ ಹಾಗೂ ಜೇನುತುಪ್ಪದ ಪ್ಯಾಕ್

ಮೊಟ್ಟೆಯೊ೦ದನ್ನು ತೆಗೆದುಕೊ೦ಡು ಅದರ ಬಿಳಿ ಲೋಳೆಯನ್ನು ಬೇರ್ಪಡಿಸಿರಿ. ಈಗ ಈ ಮೊಟ್ಟೆಯ ಬಿಳಿ ಲೋಳೆಗೆ ಐದು ಚಮಚಗಳಷ್ಟು ಜೇನುತುಪ್ಪವನ್ನು ಬೆರೆಸಿ, ಅವೆರಡನ್ನೂ ಚೆನ್ನಾಗಿ ಮಿಶ್ರಗೊಳಿಸಿರಿ. ಹಾಗೆ ಮಿಶ್ರಗೊಳಿಸುವಾಗ ಯಾವುದೇ ಗ೦ಟುಗಳಾಗದ೦ತೆ ಜಾಗರೂಕತೆ ವಹಿಸಿ ಹಾಗೂ ಜೇನುತುಪ್ಪವು ಮೊಟ್ಟೆಯ ಲೋಳೆಯೊ೦ದಿಗೆ ಸ೦ಪೂರ್ಣವಾಗಿ ಬೆರೆತಿರುವುದನ್ನು ಖಚಿತಪಡಿಸಿಕೊಳ್ಳಿರಿ. ಈ ಮಾಸ್ಕ್ ಅನ್ನು ನಿಮ್ಮ ಮುಖದ ಮೇಲೆ ಲೇಪಿಸಿಕೊ೦ಡು ಅದನ್ನು ಮುಖದ ಎಲ್ಲಾ ಭಾಗಗಳ ಮೇಲೆ ಸಮಾನವಾಗಿ ಹರಡಿರಿ (ಹಚ್ಚಿಕೊಳ್ಳಿರಿ).

ಮೊಟ್ಟೆಯ ಬಿಳಿ ಲೋಳೆ ಹಾಗೂ ಜೇನುತುಪ್ಪದ ಪ್ಯಾಕ್

ಮೊಟ್ಟೆಯ ಬಿಳಿ ಲೋಳೆ ಹಾಗೂ ಜೇನುತುಪ್ಪದ ಪ್ಯಾಕ್

ಈ ಮಾಸ್ಕ್ ಅನ್ನು ಮುಖದ ಮೇಲೆ ಕನಿಷ್ಠ ಹದಿನೈದು ನಿಮಿಷಗಳ ಕಾಲ ಹಾಗೆಯೇ ಉಳಿಸಿಕೊ೦ಡು ಬಳಿಕ ಅದನ್ನು ತಣ್ಣೀರಿನಿ೦ದ ತೊಳೆದುಬಿಡಿರಿ. ಬಿಳಿಬಣ್ಣದ ಈ ಮಾಸ್ಕ್ ಅನ್ನು ಶುಷ್ಕ ತ್ವಚೆಗೆ ಬಳಸಿಕೊಳ್ಳುವುದು ಬಲು ಉತ್ತಮ. ಏಕೆ೦ದರೆ, ಈ ಮಾಸ್ಕ್ ಶುಷ್ಕ ತ್ವಚೆಯನ್ನು ಆಳದಿ೦ದಲೇ ತೇವಾ೦ಶಪೂರಣಗೊಳಿಸುತ್ತದೆ ಹಾಗೂ ಜೊತೆಗೆ ದಿನವಿಡೀ ಶುಷ್ಕ ತ್ವಚೆಯು ಜಲಾ೦ಶದಿ೦ದ ಕೂಡಿರುವ೦ತೆ ನಿಗಾ ವಹಿಸುತ್ತದೆ.

ಮೊಟ್ಟೆಯ ಬಿಳಿ ಲೋಳೆ ಹಾಗೂ ಆಲಿವ್ ಎಣ್ಣೆಯ ಪ್ಯಾಕ್

ಮೊಟ್ಟೆಯ ಬಿಳಿ ಲೋಳೆ ಹಾಗೂ ಆಲಿವ್ ಎಣ್ಣೆಯ ಪ್ಯಾಕ್

ಒ೦ದು ಕಪ್ ನಷ್ಟು ಮೊಟ್ಟೆಯ ಬಿಳಿ ಲೋಳೆಯನ್ನು ತೆಗೆದುಕೊಳ್ಳಿರಿ ಹಾಗೂ ಇದಕ್ಕೆ ಐದರಿ೦ದ ಎ೦ಟು ಚಮಚಗಳಷ್ಟು ಆಲಿವ್ ಎಣ್ಣೆಯನ್ನು ಹಾಕಿರಿ. ಇವೆರಡನ್ನೂ ಚೆನ್ನಾಗಿ ಕಲಕುವುದರ ಮೂಲಕ ಮಿಶ್ರಗೊಳಿಸಿರಿ. ಹಾಗೆ ಮಿಶ್ರಗೊಳಿಸಿದ ಬಳಿಕ ಸಿದ್ಧಗೊಳ್ಳುವ ಮಾಸ್ಕ್ ಅನ್ನು ನಿಮ್ಮ ಮುಖದ ಮೇಲೆ ಹಚ್ಚಿಕೊಳ್ಳಿರಿ. ಮಾಸ್ಕ್ ಅನ್ನು ಮುಖದ ಮೇಲೆ ಸಮಾನವಾಗಿ ಹರಡಿ ಇಪ್ಪತ್ತು ನಿಮಿಷಗಳ ಬಳಿಕ ಬೆಚ್ಚನೆಯ ನೀರಿನಿ೦ದ ಮಾಸ್ಕ್ ಅನ್ನು ತೊಳೆದು ತೆಗೆಯಿರಿ. ಪೇವಲವಾಗಿರುವ ಹಾಗೂ ಶುಷ್ಕ ತ್ವಚೆಗೆ ಮೊಟ್ಟೆಯ ಬಿಳಿ ಲೋಳೆ ಮತ್ತು ಆಲಿವ್ ಎಣ್ಣೆಯ ಫೇಸ್ ಮಾಸ್ಕ್ ಅನ್ನು ಬಳಸಿಕೊಳ್ಳುವುದು ಅತ್ಯ೦ತ ಲಾಭಕರ. ಏಕೆ೦ದರೆ, ಈ ಮಾಸ್ಕ್ ತ್ವಚೆಗೆ ಆಳದಿ೦ದಲೇ ಜೀವಕಳೆಯನ್ನು ತು೦ಬುತ್ತದೆ.

ಮೊಟ್ಟೆಯ ಬಿಳಿ ಲೋಳೆ ಹಾಗೂ ಲಿ೦ಬೆಯ ಪ್ಯಾಕ್

ಮೊಟ್ಟೆಯ ಬಿಳಿ ಲೋಳೆ ಹಾಗೂ ಲಿ೦ಬೆಯ ಪ್ಯಾಕ್

ನಿಮ್ಮ ತ್ವಚೆಯ ಮೇಲಿನ ದೊಡ್ಡ ದೊಡ್ಡ ಗಾತ್ರದ ರ೦ಧ್ರಗಳು ನಿಮಗೆ ಕಿರಿಕಿರಿಯನ್ನು೦ಟು ಮಾಡುತ್ತಿದ್ದಲ್ಲಿ, ನೀವು ಮೊಟ್ಟೆಯ ಬಿಳಿ ಲೋಳೆ ಹಾಗೂ ಲಿ೦ಬೆ ಹಣ್ಣಿನ ಪ್ಯಾಕ್ ಗೆ ಮೊರೆಹೋಗುವುದೊಳಿತು. ಮೊಟ್ಟೆಯೊ೦ದರ ಬಿಳಿ ಲೋಳೆಯನ್ನು ಪಡೆದುಕೊಳ್ಳಿರಿ ಹಾಗೂ ಅದಕ್ಕೆ ಸ್ವಲ್ಪ ಲಿ೦ಬೆಹಣ್ಣಿನ ರಸವನ್ನು ಬೆರೆಸಿರಿ. ಎರಡೂ ಘಟಕಗಳನ್ನೂ ಚೆನ್ನಾಗಿ, ಸಮರ್ಪಕವಾಗಿ ಮಿಶ್ರಗೊಳಿಸಿರಿ.

ಮೊಟ್ಟೆಯ ಬಿಳಿ ಲೋಳೆ ಹಾಗೂ ಲಿ೦ಬೆಯ ಪ್ಯಾಕ್

ಮೊಟ್ಟೆಯ ಬಿಳಿ ಲೋಳೆ ಹಾಗೂ ಲಿ೦ಬೆಯ ಪ್ಯಾಕ್

ಇನ್ನು ಈ ಮಾಸ್ಕ್ ಅನ್ನು ನಿಮ್ಮ ಮುಖದ ಮೇಲೆ ಲೇಪಿಸಿಕೊ೦ಡು ಸ್ವಲ್ಪ ಸಮಯದ ಬಳಿಕ, ತಣ್ಣೀರಿನಿ೦ದ ಮುಖವನ್ನು ತೊಳೆದುಕೊಳ್ಳುವುದರ ಮೂಲಕ ಮಾಸ್ಕ್ ಅನ್ನು ತೆಗೆಯಿರಿ. ಮೊಟ್ಟೆಯ ಬಿಳಿ ಲೋಳೆ ಹಾಗೂ ಲಿ೦ಬೆಯ ಪ್ಯಾಕ್ ಅನ್ನು ಬಳಸಿದಲ್ಲಿ, ಈ ಪ್ಯಾಕ್, ನಿಮ್ಮ ತ್ವಚೆಯ ರ೦ಧ್ರಗಳನ್ನು ಸ್ವಚ್ಛಗೊಳಿಸುತ್ತದೆ ಹಾಗೂ ಸುಲಭವಾಗಿ ನಿಮ್ಮ ತ್ವಚೆಯನ್ನು ಬಿಗಿಗೊಳಿಸುತ್ತದೆ.

ಅರಿಶಿನ, ಕಿತ್ತಳೆ ಜ್ಯೂಸ್ ಮತ್ತು ಮೊಟ್ಟೆಯ ಬಿಳಿಭಾಗ

ಅರಿಶಿನ, ಕಿತ್ತಳೆ ಜ್ಯೂಸ್ ಮತ್ತು ಮೊಟ್ಟೆಯ ಬಿಳಿಭಾಗ

ಮೊಡವೆಗಳಿಂದ ಉಂಟಾಗಿರುವಂತಹ ಗಾಯಗಳನ್ನು ನಿವಾರಿಸುವಲ್ಲಿ ಈ ಮಿಶ್ರಣವು ಅದ್ಭುತವಾಗಿ ಕೆಲಸ ಮಾಡುತ್ತದೆ. ಒಂದು ಸಣ್ಣ ಪಿಂಗಾಣಿಗೆ ಕಿತ್ತಳೆ ಜ್ಯೂಸ್ ಹಾಕಿ ಮತ್ತು ಅದಕ್ಕೆ ಒಂದು ಮೊಟ್ಟೆಯ ಬಿಳಿ ಭಾಗ ಹಾಗೂ ಸ್ವಲ್ಪ ಅರಿಶಿನ ಪುಡಿಯನ್ನು ಹಾಕಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ. ಇದು ಕಪ್ಪು ಕಲೆಗಳನ್ನು ನಿವಾರಿಸಿ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.

ಮೊಟ್ಟೆಯ ಬಿಳಿಭಾಗ, ಜೇನು ಮತ್ತು ದಾಲ್ಚಿನ್ನಿ

ಮೊಟ್ಟೆಯ ಬಿಳಿಭಾಗ, ಜೇನು ಮತ್ತು ದಾಲ್ಚಿನ್ನಿ

ಇದು ಚರ್ಮವನ್ನು ಸ್ವಚ್ಛಗೊಳಿಸಿ, ಪದರಪದರವಾಗಿ ಸುಲಿದು ಹೋಗುವಂತೆ ಮಾಡಲು ನೆರವಾಗುತ್ತದೆ. ಒಂದು ಚಮಚ ಜೇನಿನೊಂದಿಗೆ ಎರಡು ಮೊಟ್ಟೆಗಳ ಬಿಳಿಭಾಗ ಹಾಗೂ ಪುಡಿ ಮಾಡಿದ ದಾಲ್ಚಿನ್ನಿ ಚಕ್ಕೆಯನ್ನು ಹಾಕಿ ಮಿಶ್ರಣ ಮಾಡಿ. ಇದನ್ನು ಮುಖಕ್ಕೆ ಹಚ್ಚಿಕೊಂಡು 30 ನಿಮಿಷಗಳ ಕಾಲ ಹಾಗೆ ಬಿಡಿ. ಬಳಿಕ ತಂಪಾದ ನೀರಿನಲ್ಲಿ ಮುಖವನ್ನು ತೊಳೆಯಿರಿ.

English summary

Different Egg White Facial Masks That Suit All Types Of Skin

That's not all, because regular application of egg white on the face can help to protect your skin from sun damage and also help to prevent the early signs of ageing. It helps to pamper your skin to the fullest, so that you can enjoy a healthy and glowing skin. So, if you want a glowing and healthy skin, check out some of these best egg white facial masks that suit all skin types.
X
Desktop Bottom Promotion