ಮೊಟ್ಟೆಯ ಬಿಳಿ ಲೋಳೆಯಲ್ಲಿರುವ ಸೌಂದರ್ಯ ರಹಸ್ಯ!

By: Hemanth
Subscribe to Boldsky

ಮಹಿಳೆಯರಿಗೆ ತಮ್ಮ ಚರ್ಮದ ಬಗ್ಗೆ ಎಷ್ಟೇ ಕಾಳಜಿಯಿದ್ದರೂ ಸಾಲದು. ಹೊರಗಿನ ವಾತಾವರಣ, ಧೂಳು ಹಾಗೂ ಕಲುಷಿತ ನೀರು ಕೂಡ ಚರ್ಮಕ್ಕೆ ಹಾನಿಯನ್ನು ಉಂಟು ಮಾಡುತ್ತದೆ. ಜೋತುಬಿದ್ದ ಚರ್ಮವು ಇಂದಿನ ದಿನಗಳಲ್ಲಿ ಮಹಿಳೆಯರಿಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಾ ಇದೆ. ಇದರಿಂದಾಗಿ ಮಹಿಳೆಯರು ವಯಸ್ಸಾದವರಂತೆ ಕಾಣಿಸುತ್ತಾರೆ.  ಮೊಟ್ಟೆಯಲ್ಲಿ ಅಡಗಿದೆ ಕೂದಲಿನ ಸಕಲ ಸೌಂದರ್ಯದ ರಹಸ್ಯ!

ಕೆಲವೊಂದು ಕಾಸ್ಮೆಟಿಕ್ ಸರ್ಜರಿ ಮತ್ತು ಉತ್ಪನ್ನಗಳು ಇದಕ್ಕೆ ಪರಿಹಾರ ನೀಡಬಲ್ಲದು. ಆದರೆ ಅದರಿಂದ ಅಡ್ಡಪರಿಣಾಮಗಳು ಖಂಡಿತವಾಗಿಯೂ ಇದೆ. ಇದಕ್ಕಾಗಿಯೇ ಬೋಲ್ಡ್ ಸ್ಕೈ ನೈಸರ್ಗಿಕ ಚಿಕಿತ್ಸೆಯ ಬಗ್ಗೆ ನಿಮಗೆ ತಿಳಿಸಿಕೊಡಲಿದೆ. ಇಂತಹ ಸಮಸ್ಯೆಯಿರುವ ಮಹಿಳೆಯರಿಗೆ ಒಂದು ಪರಿಣಾಮಕಾರಿ ಚಿಕಿತ್ಸೆಯೆಂದರೆ ಮೊಟ್ಟೆಯ ಬಿಳಿ ಲೋಳೆ. ಅದು ಹೇಗೆ ನಿಮ್ಮ ಚರ್ಮಕ್ಕೆ ನೆರವಾಗಲಿದೆ ಎಂದು ತಿಳಿಯಲು ಮುಂದಕ್ಕೆ ಓದಿ....  

ಮೊಟ್ಟೆಯ ಬಿಳಿ ಲೋಳೆ ಮತ್ತು ಕ್ಯಾರೆಟ್ ಜ್ಯೂಸ್

ಮೊಟ್ಟೆಯ ಬಿಳಿ ಲೋಳೆ ಮತ್ತು ಕ್ಯಾರೆಟ್ ಜ್ಯೂಸ್

ತಾಜಾ ಕ್ಯಾರೆಟ್ ನಿಂದ ತಯಾರಿಸಿದ ಜ್ಯೂಸ್ ಗೆ ಒಂದು ಮೊಟ್ಟೆಯ ಬಿಳಿ ಲೋಳೆಯನ್ನು ಸೇರಿಸಿಕೊಳ್ಳಿ. ಇದನ್ನು ತೆಳುವಾಗಿ ತ್ವಚೆಗೆ ಹಚ್ಚಿಕೊಂಡು ಸ್ವಲ್ಪ ಸಮಯ ಒಣಗಲು ಬಿಡಿ. ಉಗುರುಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಒಂದು ಸಲ ಹೀಗೆ ಮಾಡಿ.

ಓಟ್ ಮೀಲ್ ಜತೆ ಮೊಟ್ಟೆಯ ಲೋಳೆ

ಓಟ್ ಮೀಲ್ ಜತೆ ಮೊಟ್ಟೆಯ ಲೋಳೆ

ಜೋತು ಬಿದ್ದ ಚರ್ಮದ ಚಿಕಿತ್ಸೆಗಾಗಿ ಒಂದು ಚಮಚ ಓಟ್ ಮೀಲ್ ಮತ್ತು ಒಂದು ಮೊಟ್ಟೆಯ ಬಿಳಿ ಲೋಳೆಯನ್ನು ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ ಬಳಿಕ ಮೊಶ್ಚಿರೈಸರ್ ಹಚ್ಚಿಕೊಳ್ಳಿ.

ಮೊಟ್ಟೆಯ ಬಿಳಿ ಲೋಳೆ ಮತ್ತು ಜೇನುತುಪ್ಪ

ಮೊಟ್ಟೆಯ ಬಿಳಿ ಲೋಳೆ ಮತ್ತು ಜೇನುತುಪ್ಪ

ಚರ್ಮವು ಕಾಂತಿಯುತವಾಗಲು ಮೊಟ್ಟೆಯ ಬಿಳಿ ಲೋಳೆ ಮತ್ತು ಜೇನುತುಪ್ಪವನ್ನು ಸೇರಿಸಿಕೊಂಡು ಸರಿಯಾಗಿ ಮಿಶ್ರಣ ಮಾಡಿ ಹಚ್ಚಿಕೊಳ್ಳಿ. ಉತ್ತಮ ಫಲಿತಾಂಶಕ್ಕಾಗಿ 15 ನಿಮಿಷ ಬಿಟ್ಟು ತೊಳೆಯಿರಿ.

 ಮೊಟ್ಟೆಯ ಬಿಳಿ ಲೋಳೆ ಮತ್ತು ಮೊಸರು

ಮೊಟ್ಟೆಯ ಬಿಳಿ ಲೋಳೆ ಮತ್ತು ಮೊಸರು

ಒಂದು ಚಮಚ ಮೊಸರಿಗೆ ಒಂದು ಮೊಟ್ಟೆಯ ಬಿಳಿ ಲೋಳೆ ಹಾಕಿಕೊಂಡು ಮುಖಕ್ಕೆ ಹಚ್ಚಿದರೆ ಕಾಂತಿಯುತ ತ್ವಚೆ ನಿಮ್ಮದಾಗುವುದು. ಇದು ಚರ್ಮ ಜೋತು ಬೀಳದಂತೆ ತಡೆಯುತ್ತದೆ. ಈ ಮಿಶ್ರಣವನ್ನು ವಾರದಲ್ಲಿ ಒಂದು ಸಲ ಬಳಸಿ.

ಮೊಟ್ಟೆಯ ಬಿಳಿ ಲೋಳೆ ಮತ್ತು ಕಡಲೆಹಿಟ್ಟು

ಮೊಟ್ಟೆಯ ಬಿಳಿ ಲೋಳೆ ಮತ್ತು ಕಡಲೆಹಿಟ್ಟು

ಒಂದು ಚಮಚ ಕಡಲೆಹಿಟ್ಟು ಮತ್ತು ಒಂದು ಮೊಟ್ಟೆಯ ಬಿಳಿ ಲೋಳೆಯನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷ ಬಿಟ್ಟು ಮುಖ ತೊಳೆಯಿರಿ. ವಾರಕ್ಕೊಮ್ಮೆ ಈ ಮಿಶ್ರಣವನ್ನು ಬಳಸಿ.

 
English summary

How To Use Egg White For Firmer Skin

With these remedies you could get a more firm skin and keep those early signs of ageing at bay. Learn how to make different egg white masks with the help of this post.
Please Wait while comments are loading...
Subscribe Newsletter