For Quick Alerts
ALLOW NOTIFICATIONS  
For Daily Alerts

  ಅಪಾಯಕಾರಿ ಸೌಂದರ್ಯ ಚಿಕಿತ್ಸೆಗಳು, ಆದಷ್ಟು ಇದರಿಂದೆಲ್ಲಾ ದೂರವಿರಿ!

  By Divya Pandith
  |

  ಪ್ರತಿಯೊಬ್ಬರಿಗೂ ತಾವು ಸುಂದರವಾಗಿ ಕಾಣಬೇಕೆಂದು ಬಯಕೆ ಇರುತ್ತದೆ. ಅದರಲ್ಲೂ ಮಹಿಳೆಯರಿಗೆ ಸ್ವಲ್ಪ ಹೆಚ್ಚೆಂದೇ ಹೇಳಬಹುದು. ನೈಸರ್ಗಿಕವಾಗಿ ಪ್ರತಿಯೊಬ್ಬರೂ ವಿಶೇಷ ಸೌಂದರ್ಯವನ್ನೇ ಹೊಂದಿರುತ್ತಾರೆ. ಆದರೆ ವಿಭಿನ್ನ ಅಭಿರುಚಿಗಾಗಿ ತಮ್ಮ ನೈಜ ಸೌಂದರ್ಯದಲ್ಲಿ ವ್ಯತ್ಯಾಸ ಸೃಷ್ಟಿಸಲು ವಿವಿಧ ಬಗೆಯ ಸೌಂದರ್ಯ ವರ್ಧಕ ಚಿಕಿತ್ಸೆಗೆ ಒಳಗಾಗುತ್ತಾರೆ. ಈ ಚಿಕಿತ್ಸೆಯು ಇಷ್ಟಕ್ಕೆ ಅನುಗುಣವಾಗಿ ಸೌಂದರ್ಯದ ಬದಲಾವಣೆ ಮಾಡಬಹುದು. ಆದರೆ ಅದರಿಂದ ಗಂಭೀರವಾದ ಅಡ್ಡ ಪರಿಣಾಮವನ್ನು ಅನುಭವಿಸಬೇಕಾಗುವುದು.

  ಶಾಶ್ವತವಾಗಿ ಕೂದಲುಗಳ ವಿನ್ಯಾಸ ಬದಲಾವಣೆಯ ಚಿಕಿತ್ಸೆ, ದೇಹದ ಮೇಲಿರುವ ಅನಗತ್ಯ ಕೂದಲುಗಳನ್ನು ತೆಗೆಯುವ ಲೇಸರ್ ಚಿಕಿತ್ಸೆ, ತ್ವಚೆಯ ಬಣ್ಣದ ಬದಲಾವಣೆಯ ಚಿಕಿತ್ಸೆ ಹೀಗೆ ಅನೇಕ ಬಗೆಯ ಚಿಕಿತ್ಸೆಯು ಅಪಾಯಕಾರಿ ಬದಲಾವಣೆಯನ್ನು ಉಂಟುಮಾಡುವುದು. ಅಲ್ಪಸಮಯದ ಸೌಂದರ್ಯಕ್ಕಾಗಿ ಜೀವನ ಪೂರ್ತಿ ಅನುಭವಿಸಬೇಕಾದ ತೊಂದರೆಗಳಿಗೆ ನಾವು ಭಾಗಿಯಾಗಬಾರದು. ಒಮ್ಮೆ ಸುಂದರವಾಗಿ ಕಾಣಿಸುವಂತೆ ಮಾಡುವ ಸೌಂದರ್ಯ ಚಿಕಿತ್ಸೆಯು ಯಾವೆಲ್ಲಾ ಅಪಾಯವನ್ನುಂಟು ಮಾಡಬಹುದು ಎನ್ನುವ ವಿವರಣೆಯನ್ನು ಬೋಲ್ಡ್ ಸ್ಕೈ ನಿಮ್ಮ ಮುಂದೆ ತೆರೆದಿಡುತ್ತಿದೆ...

  ಮೆನಿಕ್ಯೂರ್ ಮತ್ತು ಪೆಡಿಕ್ಯೂರ್ ಚಿಕಿತ್ಸೆ

  ಮೆನಿಕ್ಯೂರ್ ಮತ್ತು ಪೆಡಿಕ್ಯೂರ್ ಚಿಕಿತ್ಸೆ

  ಈ ಸೌಂದರ್ಯ ಚಿಕಿತ್ಸೆಯು ಬಹಳ ಅಪಾಯಕಾರಿ ಎಂದು ಹೇಳಬಹುದು. ಈ ಚಿಕಿತ್ಸೆಯಿಂದಾಗಿ ಅಪಾಯಕಾರಿ ಶಿಲೀಂದ್ರ ಮತ್ತು ಬ್ಯಾಕ್ಟೀರಿಯಾದ ಸೋಂಕಿನ ಮೂಲವಾಗಿರುತ್ತದೆ. ಇದು ಕೈ ಮತ್ತು ಕಾಲುಗಳಲ್ಲಿ ನೋವು, ಕೀಲುಗಳ ಸೆಳೆತ, ಉಗುರುಗಳ ಆರೋಗ್ಯ ಕೆಡುವುದು ಸೇರಿದಂತೆ ವಿವಿಧ ಸಮಸ್ಯೆಗಳು ಕಾಡಬಹುದು.

  ಟ್ಯಾನಿಂಗ್ ಬೆಡ್ಸ್

  ಟ್ಯಾನಿಂಗ್ ಬೆಡ್ಸ್

  ಚರ್ಮವು ಸದಾ ಹೊಳಪು ಹಾಗೂ ಕಾಂತಿಯಿಂದ ಕಾಣಲು ಟ್ಯಾನಿಂಗ್ ಬೆಡ್ ಚಿಕಿತ್ಸೆಯ ಮೊರೆ ಹೋಗುತ್ತಾರೆ. ಇದರಲ್ಲಿ ನೀಡುವ ಯುವಿ ಕಿರಣದ ಕಾರಣದಿಂದ ಅಕಾಲಿಕ ವಯಸ್ಸಿನ ಕಳೆ, ಸುಕ್ಕುಗಟ್ಟುವುದು, ಕಣ್ಣಿನ ಕೆಳಭಾಗದಲ್ಲಿ ನೆರಿಗೆ ಹಾಗೂ ಚರ್ಮದ ಕ್ಯಾನ್ಸರ್ ಉಂಟಾಗಬಹುದು.

  ಬೊಟೋಕ್ಸ್ ಇಂಜೆಕ್ಷನ್

  ಬೊಟೋಕ್ಸ್ ಇಂಜೆಕ್ಷನ್

  ಈ ವಿಧಾನವು ಚರ್ಮಕ್ಕೆ ಬೊಟೊಲಿನಮ್ ಟಾಕ್ಸಿನ್ ಎನ್ನುವ ಇಂಜಕ್ಷನ್ ನೀಡಲಾಗುತ್ತದೆ. ಈ ಚುಚ್ಚು ಮದ್ದನ್ನು ಪಡೆಯುವುದರಿಂದ ಸ್ವಲ್ಪ ಸಮಯ ನಿಮ್ಮ ಸೌಂದರ್ಯ ಸುಂದರವಾಗಿ ಕಾಣಬಹುದು. ಆದರೆ ನಿಧಾನವಾಗಿ ಸ್ನಾಯುಗಳಲ್ಲಿ ದೌರ್ಬಲ್ಯ, ಸ್ನಾಯುಗಳು ಜೋತು ಬೀಳುವುದು, ಸುಟ್ಟಂತ ಕಲೆಗಳಾಗುವುದು ಹಾಗೂ ಚರ್ಮವು ಕೆಂಪು ಬಣ್ಣಕ್ಕೆ ತಿರುಗಿಕೊಳ್ಳುವುದು.

   ಲೇಸರ್ ಹೇರ್ ರಿಮೂವರ್

  ಲೇಸರ್ ಹೇರ್ ರಿಮೂವರ್

  ಈ ಚಿಕಿತ್ಸೆಯಿಂದ ಬೇಡದ ಕೂದಲನ್ನು ಶಾಶ್ವತವಾಗಿ ತೆಗೆಯುವ ಕ್ರಿಯೆಯಾಗಿದೆ. ಈ ಚಿಕಿತ್ಸೆಯನ್ನು ನೋಂದಾಯಿತ ವೈದ್ಯರು ಮಾಡಿದರೆ ಕಡಿಮೆ ಅಪಾಯವನ್ನು ಉಂಟುಮಾಡುವುದು. ಅಸಮರ್ಪಕ ವ್ಯಕ್ತಿಗಳಿಂದ ಈ ಕ್ರಿಯೆ ನಡೆದರೆ ಇದು ಚರ್ಮದ ವರ್ಣವನ್ನು ಕಳೆಯುವುದು. ಗುಳ್ಳೆಗಳು, ಸುಟ್ಟಂತಾಗುವುದು ಹಾಗೂ ಕಲೆಯು ಉಂಟಾಗುವುದು. ಮುನ್ನೆಚ್ಚರಿಕೆಯ ಕ್ರಮವಾಗಿ ಕೆಲವು ವಾರಗಳ ವರೆಗೆ ಸೂರ್ಯನ ಕಿರಣಕ್ಕೆ ಹೋಗಬಾರದು.

   ಬಿಕಿನಿ ವ್ಯಾಕ್ಸಿಂಗ್

  ಬಿಕಿನಿ ವ್ಯಾಕ್ಸಿಂಗ್

  ಈ ಚಿಕಿತ್ಸೆಯನ್ನು ಪಡೆಯುವುದರಿಂದ ಹರ್ಪಿಸ್, ಬ್ಯಾಕ್ಟೀರಿಯಾ ಮತ್ತು ಯೀಸ್ಟ್ ಸೋಂಕುಗಳು ಹರಡುವ ಸಾಧ್ಯತೆ ಇದೆ. ಈ ಬಗೆಯ ಚಿಕಿತ್ಸೆಯನ್ನು ಪಡೆಯುವಾಗ ಅನುಭವ ಹೊಂದಿರುವ ತಜ್ಞರ ಬಳಿ ಹೋಗಬೇಕು. ಆಗ ಗಂಭೀರ ಮಟ್ಟದ ಅಪಾಯವನ್ನು ತಪ್ಪಿಸಬಹುದು.

   ಐಬ್ರೋ ವ್ಯಾಕ್ಸಿಂಗ್

  ಐಬ್ರೋ ವ್ಯಾಕ್ಸಿಂಗ್

  ಕಣ್ಣಿನ ಮೇಲೆ ಹಾಗೂ ಕೆಳಭಾಗದ ಚರ್ಮವು ಬಹಳ ಸೂಕ್ಷ್ಮತೆಯನ್ನು ಹೊಂದಿರುತ್ತದೆ. ಈ ಪ್ರದೇಶದಲ್ಲಿ ವ್ಯಾಕ್ಸಿಂಗ್ ಮಾಡುವುದರಿಂದ ಚರ್ಮವು ಎಳೆದಂತಾಗಿ ಹೆಚ್ಚಿನ ಹಾನಿ ಉಂಟಾಗುವುದು.

  ಹೇರ್ ಬ್ಲೀಚಿಂಗ್

  ಹೇರ್ ಬ್ಲೀಚಿಂಗ್

  ಕೂದಲಿಗೆ ಬ್ಲೀಚಿಂಗ್ ಮಾಡಿಸುವುದರಿಂದ ಅಧಿಕ ಹಾನಿ ಉಂಟಾಗುವುದು. ಇದರಲ್ಲಿರುವ ಅಮೋನಿಯಾ ಕೂದಲನ್ನು ಹಾಳು ಮಾಡುತ್ತದೆ. ಬಹು ಬೇಗ ಕೇಶರಾಶಿಯು ಶುಷ್ಕತೆ, ಒರಡು ಹಾಗೂ ತುಂಡಾಗುವ ಗುಣಕ್ಕೆ ತಿರುಗಿಕೊಳ್ಳುವುದು.

  English summary

  Dangerous Beauty Treatments To Avoid

  You must have heard that many people lost their hair after a chemical rebounding and some people lost their nails while going for advanced manicure. These advanced cosmetic procedures should be avoided as they can be a cosmetic disaster. It is easy to go for laser treatment to permanently remove body hair but it can do much damage to your skin that is irreversible. All other dangerous beauty treatments carry the same risk. Here are few dangerous beauty treatments that your must avoid.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more