ಹೊಟ್ಟೆ ಮೇಲಿನ ಗುರುತು ನಿವಾರಣೆಗೆ ಮನೆಮದ್ದುಗಳು

By: Hemanth
Subscribe to Boldsky

ಮಹಿಳೆಯರಲ್ಲಿ ಹೆಚ್ಚಾಗಿ ಪ್ರಸವದ ಬಳಿಕ ಹೊಟ್ಟೆಯಲ್ಲಿ ಹಿಗ್ಗಿಸಲ್ಪಟ್ಟ ಗುರುತು ಕಾಣಿಸಿಕೊಳ್ಳುವುದು ಸಾಮಾನ್ಯ. ಗರ್ಭಧಾರಣೆ ವೇಳೆ ಹೊಟ್ಟೆಯು ದೊಡ್ಡದಾಗುವ ಕಾರಣದಿಂದ ಪ್ರಸವ ಬಳಿಕ ಹೊಟ್ಟೆಯು ಕುಗ್ಗಲ್ಪಟ್ಟರೂ ಗುರುತು ಮಾತ್ರ ಹಾಗೆ ಉಳಿದುಕೊಂಡಿರುತ್ತದೆ. ಆದರೆ ಕೇವಲ ಹೆರಿಗೆಯಿಂದ ಮಾತ್ರ ಹೊಟ್ಟೆಯಲ್ಲಿ ಗುರುತು ಮೂಡುತ್ತದೆ ಎನ್ನುವುದು ಮಾತ್ರ ನಿಜವಲ್ಲ. ಯಾಕೆಂದರೆ ಇತರ ಕೆಲವೊಂದು ಕಾರಣಗಳಿಂದಲೂ ಗುರುತು ಮೂಡುವುದು. ಅನುವಂಶೀಯವಾಗಿ, ತೂಕ ಹೆಚ್ಚಾದಾಗ ಮತ್ತು ತೂಕ ಕಳೆದುಕೊಂಡಾಗ ಇಂತಹ ಗುರುತು ಮೂಡಬಹುದು.

ಸ್ಟ್ರೆಚ್ ಮಾರ್ಕ್ಸ್ ಬೀಳಲು ಕಾರಣ ಮತ್ತು ಪರಿಹಾರ

ಇದರೊಂದಿಗೆ ಹಾರ್ಮೋನು ಬದಲಾವಣೆ, ಅನಾರೋಗ್ಯ, ಯೋಜನೆಯಿಲ್ಲದ ಔಷಧಿ, ಜೀವನಶೈಲಿಯಲ್ಲಿ ಹಠಾತ್ ಬದಲಾವಣೆ ಮತ್ತು ಆಹಾರ ಕ್ರಮದಲ್ಲಿ ಬದಲಾವಣೆ ಇತ್ಯಾದಿ ಹೊಟ್ಟೆಯಲ್ಲಿ ಗುರುತು ಮೂಡಿಸಬಹುದು. ಆದರೆ ಇದಕ್ಕೆ ಪರಿಹಾರ ಕಂಡುಕೊಳ್ಳುವುದು ತುಂಬಾ ಕಷ್ಟಕರ. ಇಂತಹ ಗುರುತುಗಳು ಮೂಡಬಾರದು ಎನ್ನುವ ಕಾರಣಕ್ಕೆ ಗರ್ಭಿಣಿ ಮಹಿಳೆಯರಿಗಾಗಿಯೇ ಕೆಲವೊಂದು ಕ್ರೀಮ್ ಗಳು ಬಂದಿವೆ. ಆದರೆ ಇದು ಮಗು ಹಾಗೂ ಗರ್ಭಿಣಿ ಮಹಿಳೆ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಬಾಣಂತಿ ಮಹಿಳೆಯರು ಕ್ರೀಮ್ ಹಚ್ಚಿಕೊಂಡು ಗುರುತು ನಿವಾರಣೆ ಮಾಡಲು ಪ್ರಯತ್ನಿಸಬಹುದು.

ಗರ್ಭಧಾರಣೆಯಲ್ಲದೆ ಇತರ ಕಾರಣಗಳಿಂದ ಈ ಗುರುತು ಮೂಡಿದ್ದರೂ ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಕಷ್ಟಕರ. ಕ್ರೀಮ್ ಗಳನ್ನು ಬಳಸಿಕೊಂಡು ಯಾವುದೇ ಪರಿಹಾರ ಸಿಗದೆ ಇರುವಂತವು ಕೆಲವೊಂದು ಮನೆಮದ್ದನ್ನು ಪ್ರಯೋಗಿಸಿ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಆದರೆ ತಾಳ್ಮೆ ಮತ್ತು ಬದ್ಧತೆ ಮುಖ್ಯ.

ಸ್ಟ್ರೆಚ್ ಮಾರ್ಕ್ಸ್ ಕಲೆಯನ್ನು ಕಡಿಮೆ ಮಾಡುವ ಎಣ್ಣೆಗಳು

ಕೇವಲ ಒಂದು ದಿನ ಬಳಸಿ ಫಲಿತಾಂಶ ಸಿಗಲಿಲ್ಲವೆಂದರೆ ಅದು ಸಾಧ್ಯವಾಗಲ್ಲ. ಮನೆಮದ್ದನ್ನು ನಿಯಮಿತವಾಗಿ ಬಳಸುತ್ತಾ ಹೋದರೆ ಅದರಿಂದ ಖಂಡಿತವಾಗಿಯೂ ಪರಿಹಾರ ಸಿಗಲಿದೆ. ಬೋಲ್ಡ್ ಸ್ಕೈ ಹೊಟ್ಟೆ ಮೇಲಿನ ಗುರುತನ್ನು ನಿವಾರಿಸಲು ನಿಮಗೆ ಐದು ಬಗೆಯ ಮನೆಮದ್ದನ್ನು ಹೇಳಿಕೊಡಲಿದೆ. ಇದನ್ನು ನೀವು ತಿಳಿದುಕೊಂಡು ಬಳಸಿರಿ....

ಸಕ್ಕರೆ

ಸಕ್ಕರೆ

ನಾವು ಚಾ, ಕಾಫಿ ಮತ್ತು ಇತರ ಖಾದ್ಯಗಳಿಗೆ ಬಳಸುವಂತಹ ಸಕ್ಕರೆಯು ನೈಸರ್ಗಿಕವಾಗಿ ಸತ್ತ ಚರ್ಮ ತೆಗೆದುಹಾಕುವಂತಹ ಗುಣ ಹೊಂದಿದೆ. ಸಕ್ಕರೆಯನ್ನು ಚರ್ಮಕ್ಕೆ ಹಚ್ಚಿಕೊಳ್ಳಲು ಇದರ ಸ್ಕ್ರಬ್ ಮಾಡಿಕೊಳ್ಳಬೇಕು. ಎರಡು ಚಮಚ ಸಕ್ಕರೆಗೆ ಐದು ಚಮಚ ಬಾದಾಮಿ ಎಣ್ಣೆ ಹಾಕಿಕೊಂಡು ಹೊಟ್ಟೆಯಲ್ಲಿ ಮೂಡಿರುವ ಗುರುತು ನಿವಾರಿಸಲು ಸ್ಕ್ರಬ್ ತಯಾರಿಸಬಹುದು. ಬಾದಾಮಿ ಎಣ್ಣೆಯ ಬದಲಿಗೆ ಲಿಂಬೆರಸ ಬಳಸಿಕೊಳ್ಳಬಹುದು. ವಾರದಲ್ಲಿ ಮೂರು ಸಲ ಸ್ಕ್ರಬ್ ಮಾಡಿದರೆ ಅದರಿಂದ ಒಳ್ಳೆಯ ಫಲಿತಾಂಶ ಕಾಣಬಹುದು.

ಹರಳೆಣ್ಣೆ

ಹರಳೆಣ್ಣೆ

ಕೂದಲಿನಿಂದ ಹಿಡಿದು ದೇಹದ ತನಕ ಪ್ರತಿಯೊಂದು ಭಾಗಕ್ಕೂ ಹರಳೆಣ್ಣೆಯು ತುಂಬಾ ಉಪಯುಕ್ತವಾಗಿದೆ. ಹೊಟ್ಟೆಯ ಗುರುತು ಇರುವ ಭಾಗಕ್ಕೆ ನೇರವಾಗಿ ಹರಳೆಣ್ಣೆ ಹಚ್ಚಿಕೊಂಡರೆ ಅದರಿಂದ ಹೆಚ್ಚಿನ ಪರಿಣಾಮವಾಗುವುದು.

ಹರಳೆಣ್ಣೆ

ಹರಳೆಣ್ಣೆ

ಹರಳೆಣ್ಣೆ ಹಚ್ಚಿಕೊಂಡು ವೃತ್ತಾಕಾರದಲ್ಲಿ ಮಸಾಜ್ ಮಾಡಿಕೊಂಡರೆ ಅದರಿಂದ ಮೂಡಿರುವಂತಹ ಗುರುತುಗಳು ಮಾಯವಾಗುವುದು. ಹೊಟ್ಟೆ ಮೇಲಿನ ಗುರುತುಗಳಿಗೆ ಹೆರಳೆಣ್ಣೆಯಿಂದ 15 ನಿಮಿಷ ಕಾಲ ಮಸಾಜ್ ಮಾಡಿಕೊಂಡ ಬಳಿಕ ಬಿಸಿ ನೀರಿನ ಬ್ಯಾಗ್ ಗಳನ್ನು ಅದರ ಮೇಲಿಡಿ. ಬಿಸಿ ನೀರಿನ ಬ್ಯಾಗ್ ಗಳು ಚರ್ಮದ ಮೇಲೆ ಪ್ರತಿಕ್ರಿಯೆ ಉಂಟು ಮಾಡಬಹುದು. ಇದರಿಂದ ಮಸಾಜ್ ಮಾಡಿದ ಜಾಗವನ್ನು ಒಳ್ಳೆಯ ಬಟ್ಟೆಯಿಂದ ಒರೆಸಿಕೊಂಡು ಆ ಜಾಗಕ್ಕೆ ಬಿಸಿಯನ್ನಿಡಿ. ರಾತ್ರಿ ಮಲಗುವ ಮೊದಲು ಹೀಗೆ ಮಾಡಿ. ಇದರಿಂದ ನಿಮಗೆ ನಿದ್ರೆ ಕೂಡ ಬೇಗನೆ ಬರುವುದು.

ಸ್ಟ್ರೆಚ್ ಮಾರ್ಕ್ ಸಮಸ್ಯೆಗೆ, ಹರಳೆಣ್ಣೆ-ಆಲೂಗಡ್ಡೆ ಪ್ಯಾಕ್

ಅಲೋವೆರಾ

ಅಲೋವೆರಾ

ಅಲೋವೆರಾದ ಬಹುಮುಖ ಅಂಶಗಳು ಹೊಟ್ಟೆ ಮೇಲಿನ ಗುರುತುಗಳನ್ನು ನಿವಾರಣೆ ಮಾಡಲು ತುಂಬಾ ಸಹಕಾರಿ. ಅಲೋವೆರಾ ಲೋಳೆಯನ್ನು ತೆಗೆದು ನೇರವಾಗಿ ಗುರುತು ಇರುವ ಭಾಗಕ್ಕೆ ಹಚ್ಚಿಕೊಳ್ಳಿ. ಅಲೋವೆರಾವು ಗುರುತು ನಿವಾರಣೆ ಮಾಡಲು ಹೋಮಿಯೋಪಥಿ ಚಿಕಿತ್ಸೆಯಾಗಿದೆ. ಅಲೋವೆರಾ ಹಚ್ಚಿಕೊಂಡ ಬಳಿಕ ಚರ್ಮವು ಸ್ವಲ್ಪ ಅಂಟಿಕೊಂಡಂತೆ ಆಗಬಹುದು. ಆದರೆ ಇದನ್ನು ಬಿಸಿ ನೀರಿನಿಂದ ತೊಳೆದರೆ ಸಮಸ್ಯೆ ನಿವಾರಣೆಯಾಗುವುದು.

ತೆಂಗಿನ ಎಣ್ಣೆ

ತೆಂಗಿನ ಎಣ್ಣೆ

ತೆಂಗಿನ ಎಣ್ಣೆಯು ತುಂಬಾ ಹಿಂದಿನಿಂದಲೂ ಹೊಟ್ಟೆಯ ಮೇಲಿನ ಗುರುತು ನಿವಾರಣೆ ಮಾಡಲು ಬಳಸಿಕೊಂಡು ಬರುತ್ತಿರುವಂತಹ ಮನೆಯೌಷಧಿಯಾಗಿದೆ. ಇದು ಶೇ.100ರಷ್ಟು ನೈಸರ್ಗಿಕವಾಗಿರುವುದು ಮಾತ್ರವಲ್ಲದೆ ಸುಲಭದಲ್ಲಿ ಸಿಗುವ ಹಾಗೂ ಆಗ್ಗದ ಸಾಮಗ್ರಿಯಾಗಿದೆ. ದಿನದಲ್ಲಿ ಎರಡು ಸಲ ತೆಂಗಿನೆಣ್ಣೆಯಿಂದ ಮಸಾಜ್ ಮಾಡಿಕೊಂಡರೆ ಹೊಟ್ಟೆ ಮೇಲಿನ ಗುರುತು ನಿವಾರಣೆಯಾಗುವುದು. ಒಂದು ತಿಂಗಳಲ್ಲಿ ಹೊಟ್ಟೆ ಮೇಲಿನ ಗುರುತು ಕಡಿಮೆಯಾಗುವುದು ಮತ್ತು ಎರಡನೇ ತಿಂಗಳಲ್ಲಿ ಇದು ಮಾಯವಾಗುವುದು. ಪ್ರತೀ ದಿನ ಎರಡು ಸಲ ತೆಂಗಿನೆಣ್ಣೆ ಮಸಾಜ್ ಮಾಡಿದರೆ ಇದು ಸಾಧ್ಯ.

ಕೋಕಾ ಬೆಣ್ಣೆ

ಕೋಕಾ ಬೆಣ್ಣೆ

ಚಿಕಿತ್ಸಕ, ನೆರಿಗೆ ನಿವಾರಣೆ ಹಾಗೂ ವಯಸ್ಸಾಗುವುದನ್ನು ತಡೆಯುವ ಗುಣಗಳು ಇರುವಂತಹ ಕೋಕಾ ಬೆಣ್ಣೆಯು ಹೊಟ್ಟೆ ಮೇಲಿನ ಗುರುತು ನಿವಾರಣೆಗೆ ಮ್ಯಾಜಿಕ್ ನಂತೆ ಕೆಲಸ ಮಾಡಲಿದೆ. ಕೋಕಾ ಬೆಣ್ಣೆಯನ್ನು ನೇರವಾಗಿ ಚರ್ಮದ ಮೇಲೆ ಹಚ್ಚಿಕೊಂಡಾಗ ನಿಮಗೆ ಒಂದು ಒಳ್ಳೆಯ ಅನುಭವವಾಗುವುದು. ಒಳ್ಳೆಯ ಫಲಿತಾಂಶ ಪಡೆಯಬೇಕೆಂದರೆ ಗುರುತು ಇರುವಂತಹ ಜಾಗಕ್ಕೆ ದಿನದಲ್ಲಿ ಎರಡು ಸಲ ಕೋಕಾ ಬೆಣ್ಣೆಯನ್ನು ಸವರಬೇಕು. ಕೋಕಾ ಬೆಣ್ಣೆಗೆ ವಿಟಮಿನ್ ಇ ಎಣ್ಣೆ ಸೇರಿಸಿಕೊಂಡರೆ ಗುರುತು ಮಾಯವಾಗುವ ಪ್ರಕ್ರಿಯೆ ವೇಗವಾಗುವುದು.

English summary

Cure Your Stretch Marks At Home With These Quick Remedies

Only delivery of babies can create stretch marks is the first major myth. Stretch marks can happen at any muscle of your body and the list of reasons is hard to count. It might come from your family, or outcome of extreme weight gain or weight loss. Hormonal changes in the body, genetic disorders, unplanned medication, swift change in lifestyle, altering food habits, etc., are other probable reasons why you are getting those hard-to-treat stretch marks.
Subscribe Newsletter