ಸೌಂದರ್ಯದ ಯಾವುದೇ ಸಮಸ್ಯೆಗೆ, ಉತ್ತರ ಒಂದೇ- 'ಕ್ಯಾರೆಟ್ ಫೇಸ್ ಪ್ಯಾಕ್'

By: Arshad
Subscribe to Boldsky

ಕ್ಯಾರೆಟ್ ಅಥವಾ ಗಜ್ಜರಿಯ ಸೇವನೆಯಿಂದ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ ಎಂಬುದು ನಮಗೆ ಗೊತ್ತೇ ಇದೆ... ಆದರೆ ಇನ್ನೊಂದು ಸಂತಸದ ಸುದ್ದಿ ಎಂದರೆ ಇದೊಂದು ಉತ್ತಮ ಸೌಂದರ್ಯವರ್ಧಕವೂ ಆಗಿದೆ! ಹೌದು, ಇದರಲ್ಲಿ ವಿವಿಧ ವಿಟಮಿನ್ನುಗಳು ಮತ್ತು ಖನಿಜಗಳಿದ್ದು ನಿಮ್ಮ ಚರ್ಮಕ್ಕೆ ಅಗತ್ಯವಾದ ಪೋಷಣೆಯನ್ನು ನೀಡುತ್ತದೆ. ಸಮೃದ್ಧ ಪೋಷಕಾಂಶಗಳ ಆಗರ- ಕ್ಯಾರೆಟ್ ಜ್ಯೂಸ್

ಇಂದು ಮಾರುಕಟ್ಟೆಯಲ್ಲಿ ದೊರಕುತ್ತಿರುವ ರಾಸಾಯನಿಕ ಆಧಾರಿತ ಪ್ರಸಾಧನಗಳು ತಕ್ಷಣಕ್ಕೆ ಉತ್ತಮ ಪರಿಣಾಮ ನೀಡಿದರೂ ಇದರ ದೀರ್ಘಕಾಲೀನ ಪರಿಣಾಮ ಮಾತ್ರ ಭೀಕರವಾಗಿರುತ್ತವೆ. ಆದ್ದರಿಂದ ಸೂಕ್ಷ್ಮವಾದ ಮುಖದ ತ್ವಚೆಗೆ ನೈಸರ್ಗಿಕ ಪ್ರಸಾಧನಗಳನ್ನು ಬಳಸುವುದೇ ಆರೋಗ್ಯಕರವಾಗಿದ್ದು ಇದರಲ್ಲಿ ಕ್ಯಾರೆಟ್ ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತದೆ.  ಬೆಳಗಿನ ಉಪಹಾರಕ್ಕೆ ಒಂದು ಗ್ಲಾಸ್ ಕ್ಯಾರೆಟ್ ಶುಂಠಿ ಜ್ಯೂಸ್!

ಇದರಲ್ಲಿ ಪ್ರಮುಖವಾಗಿ ವಿಟಮಿನ್ ಸಿ, ಎ, ಮತ್ತು ಇ ಇದ್ದು ಚರ್ಮಕ್ಕೆ ಅಗತ್ಯವಾದ ಪೋಷಣೆ ನೀಡುತ್ತದೆ ಹಾಗೂ ಚರ್ಮದ ಸೆಳೆತವನ್ನು ಹೆಚ್ಚಿಸಿ ವೃದ್ಧಾಪ್ಯದ ಚಿಹ್ನೆಗಳನ್ನು ದೂರಾಗಿಸುತ್ತದೆ. ಅಲ್ಲದೇ ಮುಖದ ಚರ್ಮಕ್ಕೆ ರಕ್ತಪರಿಚಲನೆ ಹೆಚ್ಚಿಸುವ ಮೂಲಕ ಮೊಡವೆಗಳಾಗದಂತೆ ಕಾಪಾಡುತ್ತದೆ. ಬನ್ನಿ ಇಂದಿನ ಲೇಖನದಲ್ಲಿ ಕೆಲವು ಮುಖಲೇಪಗಳನ್ನು ಪರಿಚಯಿಸುತ್ತಿದ್ದು ಇವುಗಳಲ್ಲಿ ನಿಮಗೆ ಸೂಕ್ತವಾದುದನ್ನು ಅನುಸರಿಸುವ ಮೂಲಕ ನಿಮ್ಮ ಎಲ್ಲಾ ತೊಂದರೆಗಳಿಗೂ ಪರಿಹಾರ ಕಂಡುಕೊಳ್ಳಬಹುದು... 

ಚರ್ಮದ ಗೌರವರ್ಣ ಹೆಚ್ಚಿಸಲು ಕ್ಯಾರೆಟ್ ಮುಖಲೇಪ

ಚರ್ಮದ ಗೌರವರ್ಣ ಹೆಚ್ಚಿಸಲು ಕ್ಯಾರೆಟ್ ಮುಖಲೇಪ

ಕೇವಲ ಹದಿನಾರೇ ದಿನಗಳಲ್ಲಿ ನಿಮ್ಮ ಮುಖದ ಚರ್ಮ ಗೌರವರ್ಣ ಪಡೆಯುವಂತಾಗಲು ಪ್ರತಿ ದಿನ ಬಿಟ್ಟು ದಿನ ಎಂಟು ಬಾರಿ ಕ್ಯಾರೆಟ್ ಮುಖಲೇಪವನ್ನು ಹಚ್ಚಿಕೊಳ್ಳುತ್ತಾ ಬರಬೇಕು. ಇದಕ್ಕಾಗಿ ಒಂದು ದೊಡ್ಡಚಮಚ ಕ್ಯಾರೆಟ್ ತುರಿ, ಒಂದು ಚಿಕ್ಕ ಚಮಚ ಕಡ್ಲೆಹಿಟ್ಟು, ಒಂದು ಚಿಕ್ಕಚಮಚ ಗುಲಾಬಿ ನೀರು, ಒಂದು ಚಿಕ್ಕ ಚಮಚ ಸೌತೆಯ ತಿರುಳಿನ ಪೇಸ್ಟ್ ಬೆರೆಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖ ಕುತ್ತಿಗೆ ಮತ್ತು ಮೊಣಕೈಗಳಿಗೆ ಹಚ್ಚಿ ಹದಿನೈದು ನಿಮಿಷ ಬಿಟ್ಟು ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ.

ಚರ್ಮದ ಕಾಂತಿ ಹೆಚ್ಚಿಸುವ ಕ್ಯಾರೆಟ್ ಮುಖಲೇಪ

ಚರ್ಮದ ಕಾಂತಿ ಹೆಚ್ಚಿಸುವ ಕ್ಯಾರೆಟ್ ಮುಖಲೇಪ

ಒಂದು ದೊಡ್ಡಚಮಚ ಕ್ಯಾರೆಟ್ ತುರಿ, ಒಂದು ಚಿಕ್ಕ ಚಮಚ ಓಟ್ಸ್ ರವೆ, ಒಂದು ದೊಡ್ಡಚಮಚ ಸೇಬುಹಣ್ಣಿನ ತಿರುಳಿನ ತುರಿಯನ್ನು ಬೆರೆಸಿ ಮಿಶ್ರಣ ಮಾಡಿ. ಈ ಲೇಪವನ್ನು ಮುಖಕ್ಕೆ ನಯವಾದ ಮಸಾಜ್ ಮೂಲಕ ಹಚ್ಚಿಕೊಂಡು ಸುಮಾರು ಹತ್ತು ನಿಮಿಷ ಹಾಗೇ ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಒಣಚರ್ಮಕ್ಕಾಗಿ ಕ್ಯಾರೆಟ್ ಮುಖಲೇಪ

ಒಣಚರ್ಮಕ್ಕಾಗಿ ಕ್ಯಾರೆಟ್ ಮುಖಲೇಪ

ಒಣಚರ್ಮಕ್ಕೆ ಇತರರಿಗಿಂತಲೂ ಹೆಚ್ಚಿನ ಆರ್ದ್ರತೆಯ ಅಗತ್ಯವಿದೆ. ಇದಕ್ಕಾಗಿ ಒಂದು ದೊಡ್ಡಚಮಚ ಕ್ಯಾರೆಟ್ ತುರಿ, ಒಂದು ಚಿಕ್ಕ ಚಮಚ ಹಾಲಿನ ಕ್ರೀಂ, ಒಂದು ಚಿಕ್ಕ ಚಮಚ ಮೊಟ್ಟೆಯ ಬಿಳಿಭಾಗ ಬೆರೆಸಿ ಮಿಶ್ರಣ ಮಾಡಿ. ಈ ಲೇಪವನ್ನು ಮುಖಕ್ಕೆ ಹಚ್ಚಿ ಹದಿನೈದು ನಿಮಿಷ ಒಣಗಳು ಬಿಡಿ. ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಒಣಚರ್ಮವೂ ಮೃದು ಹಾಗೂ ಕಾಂತಿಯುಕ್ತವಾಗುತ್ತದೆ.

ಎಣ್ಣೆ ಚರ್ಮಕ್ಕಾಗಿ ಕ್ಯಾರೆಟ್ ಮುಖಲೇಪ

ಎಣ್ಣೆ ಚರ್ಮಕ್ಕಾಗಿ ಕ್ಯಾರೆಟ್ ಮುಖಲೇಪ

ಎಣ್ಣೆಚರ್ಮದ ಎಣ್ಣೆಪಸೆಯನ್ನು ನಿವಾರಿಸಲು ಮೂರು ದೊಡ್ಡಚಮಚ ಕ್ಯಾರೆಟ್ ಜ್ಯೂಸ್ ಮತ್ತು ಒಂದು ದೊಡ್ಡಚಮಚ ಸೇಬಿನ ಶಿರ್ಕಾ ಬೆರೆಸಿ.

ಎಣ್ಣೆ ಚರ್ಮಕ್ಕಾಗಿ ಕ್ಯಾರೆಟ್ ಮುಖಲೇಪ

ಎಣ್ಣೆ ಚರ್ಮಕ್ಕಾಗಿ ಕ್ಯಾರೆಟ್ ಮುಖಲೇಪ

ಈ ದ್ರವದಲ್ಲಿ ಹತ್ತಿಯುಂಡೆಯನ್ನು ಮುಳುಗಿಸಿ ಎಣ್ಣೆಚರ್ಮವನ್ನು ಪ್ರತಿದಿನ ಬಳಿಗ್ಗೆ ಮತ್ತು ಸಂಜೆ ಒರೆಸಿಕೊಳ್ಳುತ್ತಾ ಇರಿ. ನಾಲ್ಕಾರು ಬಾರಿ ಒರೆಸಿಕೊಂಡು ದ್ರವ ಸುಮಾರು ಹತ್ತು ನಿಮಿಷವಾದರೂ ಒಣಗಲು ಬಿಡಿ. ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ.

English summary

Carrot Face Masks To Solve All Your Beauty Problems

In this article, we have mentioned different carrot face masks that can solve all your beauty problems. Read on to know how to use carrot in your beauty regimen.
Story first published: Monday, April 3, 2017, 13:41 [IST]
Please Wait while comments are loading...
Subscribe Newsletter