Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸಮೃದ್ಧ ಪೋಷಕಾಂಶಗಳ ಆಗರ- ಕ್ಯಾರೆಟ್ ಜ್ಯೂಸ್
ನಮ್ಮ ಆರೋಗ್ಯದ ಜೊತೆಗೇ ಸೌಂದರ್ಯವನ್ನೂ ವೃದ್ಧಿಸಲು ನಿಸರ್ಗ ನೀಡಿರುವ ವರಗಳಲ್ಲಿ ಕ್ಯಾರೆಟ್ ಸಹಾ ಒಂದು. ಕನ್ನಡದಲ್ಲಿ ಗಜ್ಜರಿ ಎಂದು ಕರೆಯಲ್ಪಡುವ ಈ ಸಿಹಿಯಾದ, ಕೇಸರಿ ಬಣ್ಣದ ಮೂಲಂಗಿಯಾಕಾರದ ಗಡ್ಡೆಯಲ್ಲಿ ಪ್ರಮುಖವಾಗಿ ವಿಟಮಿನ್ ಎ ಇದೆ. ಈ ವಿಟಮಿನ್ ಎ ಚರ್ಮದ ಆರೈಕೆ ಮತ್ತು ಕಣ್ಣಿನ ಪೋಷಣೆಗೆ ಅತ್ಯಗತ್ಯವಾದ ಪೋಷಕಾಂಶವಾಗಿದೆ. ಚರ್ಮದ ಆರೈಕೆಯಲ್ಲಂತೂ ವಿಟಮಿನ್ ಎ ನ ಪಾತ್ರ ಮಹತ್ವದ್ದಾಗಿದೆ. ನಿತ್ಯವೂ ಒಂದು ಲೋಟ ಕ್ಯಾರೆಟ್ಟಿನ ಜ್ಯೂಸ್ ಕುಡಿಯುವ ಮೂಲಕ ಚರ್ಮದ ಕಾಂತಿ ಹೆಚ್ಚುವುದು ಮತ್ತು ಸಹಜವರ್ಣ ಪಡೆಯುವುದು ಖಚಿತ.
ಜೊತೆಗೇ ಹೊಳಪುಳ್ಳ ಕೂದಲು ಮತ್ತು ಉರುಗುಗಳು ಬೋನಸ್ ರೂಪದಲ್ಲಿ ಲಭಿಸುತ್ತವೆ, ಅಲ್ಲದೆ ಮೊಡವೆಗಳೂ ಕಡಿಮೆಯಾಗುತ್ತವೆ ಇದರ ಉಪಯೋಗ ಇಷ್ಟೇ ಎಂಬ ತೀರ್ಮಾನಕ್ಕೆ ಬರುವ ಮುನ್ನ ಇದರ ಜೀರ್ಣಕ್ರಿಯೆಗೆ ಲಭಿಸುವ ಲಾಭಗಳ ಬಗ್ಗೆ ತಿಳಿಯುವುದು ಒಳ್ಳೆಯದು. ಕ್ಯಾರೆಟ್‌ನಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇರುವುದರಿಂದ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಅಲ್ಲದೇ ಕೆಲವು ಬಗೆಯ ಕ್ಯಾನ್ಸರ್‌ಗಳನ್ನು ಬರದಂತೆ ತಡೆಯುತ್ತದೆ. ಸ್ಕಿನ್ ಕೇರ್ ಮಾಡುವುದು ಈ ಕ್ಯಾರೆಟ್ ಜ್ಯೂಸ್
ಕ್ಯಾರೆಟ್ಟುಗಳಲ್ಲಿರುವ ಇನ್ನೊಂದು ಪ್ರಮುಖ ಪೋಷಕಾಂಶವೆಂದರೆ ಬೀಟಾ ಕ್ಯಾರೋಟೀನ್. ಇದರ ಸಹಿತ ಇರುವ ಇತರ ಆಂಟಿ ಆಕ್ಸಿಡೆಂಟುಗಳು ಚರ್ಮದ ವಿವಿಧ ರೋಗ ಮತ್ತು ಸೋಂಕುಗಳಿಂದ ತಡೆಯುತ್ತದೆ. ಬನ್ನಿ ಈ ರುಚಿಕರ, ಹಸಿಯಾಗಿಯೇ ಸೇವಿಸಬಹುದಾದ ತರಕಾರಿಯ ಬಗ್ಗೆ ಹೆಚ್ಚಿನ ವಿವರಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ..

ಮೊಡವೆಗಳನ್ನು ನಿವಾರಿಸುತ್ತದೆ
ಕ್ಯಾರೆಟ್‌ಗಳಲ್ಲಿರುವ ವಿಟಮಿನ್ ಎ ಚರ್ಮಕ್ಕೆ ಆರೈಕೆ ನೀಡುವ ಜೊತೆಗೇ ಮೊಡವೆಗಳನ್ನು ಕೊನೆಗೊಳಿಸಲೂ ನೆರವಾಗುತ್ತದೆ. ಅಲ್ಲದೇ ಚರ್ಮದಡಿಯಿಂದ ಮೊಡವೆಗಳು ಮೂಡಲು ಕಾರಣವಾಗುವ ಕೊಳೆ ಮತ್ತು ಕಲ್ಮಶಗಳನ್ನು ಚರ್ಮದ ರಂಧ್ರಗಳ ಮೂಲಕ ಹೊರದೂಡಿ ಮೊಡವೆಗಳು ಮೂಡುವ ಸಂಭವವನ್ನೇ ಬುಡದಿಂದ ನಿವಾರಿಸುತ್ತದೆ.

ಕೂದಲ ಬೆಳವಣಿಗೆಗೆ ನೆರವಾಗುತ್ತದೆ
ಕ್ಯಾರೆಟ್ಟುಗಳಲ್ಲಿರುವ ಅವಶ್ಯಕ ಪೋಷಕಾಂಶಗಳು ಕೂದಲನ್ನು ಬುಡದಿಂದ ದೃಢಗೊಳಿಸಿ ಕೂದಲ ಬೆಳವಣಿಗೆಗೆ ನೆರವಾಗುತ್ತದೆ. ಅಲ್ಲದೇ ಕ್ಯಾರೆಟ್ಟುಗಳಲ್ಲಿರುವ ವಿಟಮಿನ್ ಸಿ, ಮತ್ತು ಇ ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ ಹಾಗೂ ಕೂದಲು ನೆರೆಯುವುದನ್ನು ತಡೆಯುತ್ತದೆ.

ಚರ್ಮದ ಉರಿಯನ್ನು ತಗ್ಗಿಸುತ್ತದೆ
ಕೆಲವೊಮ್ಮೆ ಬಿಸಿಲು, ಚಿಕ್ಕಪುಟ್ಟ ಗಾಯಗಳು, ಗೀರುಗಳು, ಬೆವರುಸಾಲೆಯ ಮೂಲಕ ಉಂಟಾದ ಗುಳ್ಳೆ ಒಡೆದ ಬಳಿಕ ಉಂಟಾಗುವ ಉರಿಯನ್ನು ಕ್ಯಾರೆಟ್ಟುಗಳಲ್ಲಿರುವ ಆಂಟಿ ಆಕ್ಸಿಡೆಂಟುಗಳು ಸಮರ್ಥವಾಗಿ ನಿವಾರಿಸುತ್ತವೆ. ಅಲ್ಲದೇ ಬೇಗನೇ ಗುಣವಾಗಲೂ ನೆರವಾಗುತ್ತವೆ.

ಚರ್ಮಕ್ಕೆ ಆರ್ದ್ರತೆ ನೀಡುತ್ತದೆ
ನಮ್ಮ ದೇಹದಲ್ಲಿ ಪೊಟ್ಯಾಶಿಯಂ ಕಡಿಮೆಯಾದರೆ ಚರ್ಮ ಆರ್ದ್ರತೆಯನ್ನು ಹಿಡಿದಿಡಲು ಅಸಮರ್ಥವಾಗುತ್ತದೆ. ಕ್ಯಾರೆಟ್ಟುಗಳಲ್ಲಿರುವ ಉತ್ತಮ ಪ್ರಮಾಣದ ಪೊಟ್ಯಾಶಿಯಂ ಚರ್ಮ ಆರ್ದ್ರತೆಯನ್ನು ಹೀರಿಕೊಳ್ಳಲು ನೆರವಾಗುವ ಮೂಲಕ ಆರ್ದ್ರತೆ ಪಡೆಯಲು ನೆರವಾಗುತ್ತದೆ.

ನೆರಿಗೆ ಮೂಡುವುದನ್ನು ನಿವಾರಿಸುತ್ತದೆ
ಮೂವತ್ತು ದಾಟಿದ ಬಳಿಕ ನಿಧಾನವಾಗಿ ಚರ್ಮದ ಸೆಳೆತ ಕಡಿಮೆಯಾಗಿ ನೆರಿಗೆಗಳು ಮೂಡುತ್ತವೆ. ಕಣ್ಣುಗಳ ಕೆಳಗೆ ಚೀಲವೊಂದು ಜೋತುಬಿದ್ದಂತೆ ಕಾಣುತ್ತದೆ. ನಿತ್ಯವು ಕ್ಯಾರೆಟ್ಟಿನ ಜ್ಯೂಸ್ ಕುಡಿಯುವ ಮೂಲಕ ಚರ್ಮದ ಸೆಳೆತ ಹೆಚ್ಚಾಗಿ ಈ ತೊಂದರೆಗಳಿಂದ ಬಹುಕಾಲ ರಕ್ಷಣೆ ಪಡೆಯಬಹುದು.



Click it and Unblock the Notifications
