ವೈಟ್ ಹೆಡ್ ಸಮಸ್ಯೆಗೆ, ಅಡುಗೆಮನೆಯಲ್ಲಿಯೇ ಇದೆ ಪರಿಹಾರ!

By: Jayasubramanya
Subscribe to Boldsky

ಸೌಂದರ್ಯವೆಂಬುದು ಹೆಣ್ಣಿಗೆ ದೈವದತ್ತ ವರವಾಗಿದೆ. ಅಂತೆಯೇ ಸೌಂದರ್ಯದ ವಿಷಯದಲ್ಲೂ ಅವರು ಹೆಚ್ಚಿನ ಮುತುವರ್ಜಿಯನ್ನು ವಹಿಸುತ್ತಾರೆ. ಮುಖದಲ್ಲಿ ಸಣ್ಣ ಕಲೆ ಉಂಟಾದರೂ ಅದಕ್ಕಾಗಿ ಅವರು ಮಾಡುವ ಆರೈಕೆ ಮಾತ್ರ ಅಷ್ಟಿಷ್ಟಲ್ಲ! ವೈಟ್ ಹೆಡ್‌ ಸಮಸ್ಯೆಯೇ? ಚಿಂತೆ ಬಿಡಿ, ಟೂತ್ ಪೇಸ್ಟ್ ಬಳಸಿ!

ಅದರಲ್ಲೂ ಮೊಡವೆ, ಮುಖದಲ್ಲಿನ ಚುಕ್ಕೆಗಳು ಮೊದಲಾದವುಗಳು ಮುಖದಲ್ಲಿ ರಚನೆಯಾದಾಗಲಂತೂ ಹೆಣ್ಣು ಹೌಹಾರಿಬಿಡುತ್ತಾಳೆ. ಇಷ್ಟೊಂದು ಕಾಳಜಿಯನ್ನು ತ್ವಚೆಯ ಸೌಂದರ್ಯದ ವಿಷಯದಲ್ಲಿ ತೆಗೆದುಕೊಳ್ಳುವುದು ಅಗತ್ಯವಾಗಿದ್ದರೂ ರಾಸಾಯನಿಕಗಳನ್ನು ಬಳಸದೇ ಆದಷ್ಟು ನೈಸರ್ಗಿಕ ಉತ್ಪನ್ನಗಳ ಬಳಕೆ ಮಾಡಿ ಎಂದೇ ನಾವು ಸಲಹೆ ನೀಡುತ್ತಿದ್ದೇವೆ. ಏಕೆಂದರೆ ನೈಸರ್ಗಿಕ ಉತ್ಪನ್ನಗಳು ಮುಖದ ಹೊಳಪನ್ನು ಕುಂದಿಸದೇ ಅಂತೆಯೇ ಯಾವುದೇ ರೀತಿಯ ಹಾನಿಯನ್ನುಂಟು ಮಾಡದೆಯೇ ಸೌಂದರ್ಯ ಸಲಹೆಗಳಿಗೆ ಪರಿಹಾರವನ್ನು ನೀಡಲಿದೆ. ಮುಖದ ಮೇಲಿನ ವೈಟ್ ಹೆಡ್ ನಿವಾರಣೆ ಹೇಗೆ? 

ಇಂದಿನ ಲೇಖನದಲ್ಲಿ ಮೂಗಿನ ಬದಿಯಲ್ಲಿ, ಕೆನ್ನೆ ಅಥವಾ ಗದ್ದದಲ್ಲಿ ಕಂಡುಬರುವ ವೈಟ್‌ಹೆಡ್ಸ್‌ಗಳನ್ನು ನಿವಾರಿಸುವುದು ಹೇಗೆ ಎಂಬುದನ್ನು ಅರಿತುಕೊಳ್ಳಲಿದ್ದೇವೆ. ರಂಧ್ರಗಳು ಕೊಳೆ, ಮೃತಚರ್ಮ ಅಥವಾ ಸೇಬಮ್‌ನಿಂದ ತುಂಬಿಹೋದಾಗ ಈ ವೈಟ್‌ ಹೆಡ್ಸ್ ಕಂಡುಬರುತ್ತದೆ. ಇವುಗಳು ಕಾಣಲು ಕಪ್ಪು ಬಣ್ಣದಲ್ಲಿದ್ದು ಇದರ ನಿವಾರಣೆ ತುಂಬಾ ಕಷ್ಟಕರವಾಗಿರುತ್ತದೆ.

ಗಾಳಿಗೆ ಇದು ಹೆಚ್ಚು ಗೋಚರವಾಗುವುದರಿಂದ ಕಲೆಗಳು ಕಪ್ಪಾಗಿಯೇ ಇರುತ್ತದೆ. ಜಿಡ್ಡಿನ ತ್ವಚೆಯುಳ್ಳವರು ಬ್ಲ್ಯಾಕ್‌ಹೆಡ್ಸ್ ಇಲ್ಲವೇ ವೈಟ್‌ಹೆಡ್ಸ್‌ಗಳ ದಾಳಿಗೆ ಒಳಗಾಗುವುದು ಸಹಜವಾಗಿದೆ. ಇವುಗಳ ನಿವಾರಣೆಗೆ ನೀವು ಮನೆಯಲ್ಲಿಯೇ ನೈಸರ್ಗಿಕ ಸಾಮಾಗ್ರಿಗಳನ್ನು ಬಳಸಬಹುದಾಗಿದೆ.....   

ಅಡುಗೆ ಸೋಡಾ

ಅಡುಗೆ ಸೋಡಾ

ನೀರನ್ನು ಬೆರೆಸಿಕೊಂಡು ಸೋಡಾವನ್ನು ದಪ್ಪನೆಯ ಮಿಶ್ರಣವನ್ನಾಗಿ ತಯಾರಿಸಿ. ಇದನ್ನು ಕಲೆಗಳಿರುವ ಭಾಗಕ್ಕೆ ಹಚ್ಚಿ. ವಾರಕ್ಕೆ ಎರಡು ಬಾರಿ ಹೀಗೆ ಮಾಡಿ ತದನಂತರ ಟೋನರ್ ಅನ್ನು ಮುಖಕ್ಕೆ ಬಳಸಿಕೊಳ್ಳಿ.

ಸ್ಟೀಮ್

ಸ್ಟೀಮ್

ನಿಮ್ಮ ಮುಖವನ್ನು ಸ್ಟೀಮ್‌ಗೆ ಒಡ್ಡುವುದು ಕೂಡ ವೈಡ್‌ಹೆಡ್ಸ್ ಇಲ್ಲವೇ ಬ್ಲ್ಯಾಕ್‌ ಹೆಡ್‌ಗಳ ಸಮಸ್ಯೆಯನ್ನು ನಿವಾರಿಸಲಿದೆ. ಇದು ನಿಮ್ಮ ತ್ವಚೆಯನ್ನು ಶುಭ್ರವಾಗಿಸಿ ಮೃತಕೋಶಗಳನ್ನು ನಿವಾರಿಸಲಿದೆ. ವಾರಕ್ಕೊಮ್ಮೆ ಈ ಕ್ರಿಯೆಯನ್ನು ಅನುಸರಿಸಿ ಮತ್ತು ಫಲಿತಾಂಶವನ್ನು ನೀವೇ ಕಂಡುಕೊಳ್ಳಿ.

ಸಕ್ಕರೆ

ಸಕ್ಕರೆ

ಹುಡಿಮಾಡಿದ ಸಕ್ಕರೆಯಿಂದ ಸ್ಕ್ರಬ್ ತಯಾರಿಸಿಕೊಳ್ಳಿ ಇದಕ್ಕೆ ಲಿಂಬೆ ರಸವನ್ನು ಬೆರೆಸಿ ಮತ್ತು ಸಮಸ್ಯೆ ಇರುವ ತ್ವಚೆಯ ಭಾಗಕ್ಕೆ ಇದನ್ನು ಹಚ್ಚಿಕೊಳ್ಳಿ. ಮೃತಕೋಶಗಳನ್ನು ನಿವಾರಿಸುವಲ್ಲಿ ಇದು ಪರಿಣಾಮಕಾರಿ ಎಂದೆನಿಸಲಿದೆ. ಅಂತೆಯೇ ನಿರಂತರವಾಗಿ ಈ ಸ್ಕ್ರಬ್ ಅನ್ನು ಬಳಸುವುದು ವೈಟ್‌ಹೆಡ್ಸ್ ಅನ್ನು ಸಂಪೂರ್ಣವಾಗಿ ನಿವಾರಣೆ ಮಾಡಲಿದೆ.

ಓಟ್ಸ್

ಓಟ್ಸ್

ಮೃತಕೋಶಗಳನ್ನು ನಿವಾರಣೆ ಮಾಡುವಲ್ಲಿ ಓಟ್ಸ್ ಸಹಾಯ ಮಾಡಲಿದೆ. ಹುಡಿ ಮಾಡಿದ ಓಟ್ಸ್ ಅನ್ನು ಮೊಸರಿನೊಂದಿಗೆ ಮಿಶ್ರ ಮಾಡಿ ಅದನ್ನು ನಿಮ್ಮ ಮೂಗು ಹಾಗೂ ಕೆನ್ನೆಗೆ ಹಚ್ಚಿಕೊಳ್ಳಿ. ಕಲೆಗಳನ್ನು ಮೊಸರು ನಿವಾರಿಸಿ ನಿಮ್ಮ ತ್ವಚೆಯನ್ನು ಶುಭ್ರವಾಗಿರಿಸಲಿದೆ.

ಆಪಲ್ ಸೀಡರ್ ವಿನೇಗರ್

ಆಪಲ್ ಸೀಡರ್ ವಿನೇಗರ್

ಇದು ಕೂಡ ಆಂಟಿಬ್ಯಾಕ್ಟೀರಿಯಲ್ ಅಂಶಗಳನ್ನು ಒಳಗೊಂಡಿದೆ. ಇದು ಟೋನರ್‌ನಂತೆ ಕಾರ್ಯನಿರ್ವಹಿಸಲಿದೆ. ಇದನ್ನು ನೀರಿನೊಂದಿಗೆ ಬೆರೆಸಿಕೊಳ್ಳಿ ಮತ್ತು ಮೂಗಿಗೆ ಹಚ್ಚಿ. 10 ನಿಮಿಷ ಹಾಗೆಯೇ ಬಿಡಿ. ನಂತರ ಅದನ್ನು ತೊಳೆದುಕೊಳ್ಳಿ. ಇದನ್ನು ನಿಯಮಿತವಾಗಿ ಬಳಸುವುದು ವೈಟ್‌ಹೆಡ್ಸ್ ಅನ್ನು ನಿವಾರಿಸಲಿದೆ.

ದಾಲ್ಚಿನ್ನಿ

ದಾಲ್ಚಿನ್ನಿ

ದಾಲ್ಚಿನ್ನಿಯ ಹುಡಿಯನ್ನು ತಯಾರಿಸಿಕೊಂಡು ಇದಕ್ಕೆ ಜೇನು ಬೆರೆಸಿ ನಂತರ ಇದನ್ನು ಹಾನಿಯಾಗಿರುವ ಸ್ಥಳಕ್ಕೆ ಹಚ್ಚಿಕೊಳ್ಳಿ. ನಿಮ್ಮ ಸಂಪೂರ್ಣ ಮುಖಕ್ಕೂ ಇದನ್ನು ಬಳಸಿಕೊಳ್ಳಬಹುದಾಗಿದೆ ಇದರಿಂದ ಮೊಡವೆಗಳ ನಿವಾರಣೆಯನ್ನು ಮಾಡಿಕೊಳ್ಳಬಹುದಾಗಿದೆ. ಇವೆರಡೂ ವಸ್ತುಗಳು ಉರಿಯೂತ ಗುಣಲಕ್ಷಣಗಳನ್ನು ಪಡೆದುಕೊಂಡಿದ್ದು ಎಲ್ಲಾ ರೀತಿಯ ಮೊಡವೆಗಳನ್ನು ನಿವಾರಿಸಲು ಸಹಕಾರಿ ಎಂದೆನಿಸಲಿದೆ.

ಕಡಲೆ ಹಿಟ್ಟು

ಕಡಲೆ ಹಿಟ್ಟು

ವೈಟ್‌ಹೆಡ್ಸ್‌ ಅನ್ನು ನಿವಾರಣೆ ಮಾಡಿ ತ್ವಚೆಯನ್ನು ಎಕ್ಸ್‌ಪೋಲಿಯೇಟ್ ಮಾಡುವಲ್ಲಿ ಕಡಲೆಹಿಟ್ಟು ಅತ್ಯುತ್ತಮ ಎಂದೆನಿಸಿದೆ. ಕಡಲೆಹಿಟ್ಟನ್ನು ಹಾಲಿನೊಂದಿಗೆ ಮಿಶ್ರ ಮಾಡಿಕೊಳ್ಳಿ ಮತ್ತು ಮುಖಕ್ಕೆ ಸ್ಕ್ರಬ್‌ನಂತೆ ಇದನ್ನು ಬಳಸಿಕೊಳ್ಳಿ. ಇದು ಸಂಪೂರ್ಣ ಮುಖದಿಂದ ಮೃತಕೋಶಗಳನ್ನು ನಿವಾರಿಸಲಿದ್ದು ರಂಧ್ರಗಳನ್ನು ಮುಕ್ತವಾಗಿಸಲಿದೆ. ಇದರಿಂದ ವೈಟ್‌ಹೆಡ್ಸ್ ಉಂಟಾಗಲಾರದು.

 
English summary

Best Tips & Home Remedies For Whiteheads

Whiteheads are more deeply embedded in the skin and form under the surface of the skin. People who have an oily skin are more prone to having both blackheads and whiteheads. Sometimes, even hormonal and genetic factors are to be blamed. But whiteheads can be sorted out with these home remedies quite easily. Have a look at these home remedies for whiteheads.
Story first published: Friday, January 27, 2017, 23:25 [IST]
Please Wait while comments are loading...
Subscribe Newsletter