ತ್ವಚೆಯ ಕಪ್ಪು ಕಲೆಗಳ ನಿವಾರಣೆಗೆ ಪ್ರಾಕೃತಿಕ ಪರಿಹಾರ

By: Jaya subramanya
Subscribe to Boldsky

ಹೆಚ್ಚಿನ ಮಹಿಳೆಯರು ತಮ್ಮ ಸೌಂದರ್ಯದ ಬಗ್ಗೆ ಹೆಚ್ಚಿನ ಅಸ್ಥೆಯನ್ನು ವಹಿಸಿರುತ್ತಾರೆ. ಮುಖದಲ್ಲಿ ಮೂಡುವ ಸಣ್ಣ ಗುಳ್ಳೆ ಕೂಡ ಅವರನ್ನು ಇನ್ನಷ್ಟು ಚಿಂತೆಗೆ ತಳ್ಳುತ್ತದೆ. ಅಲ್ಲದೆ ಸಾಧ್ಯವಾದಷ್ಟು ಇದಕ್ಕೆ ವಿಶೇಷ ಕಾಳಜಿ ವಹಿಸಿ ಬ್ಯೂಟಿಪಾರ್ಲರ್‌ಗೆ ಹೋಗಿ ಬೇಕಾದ ಚಿಕಿತ್ಸೆಯನ್ನು ಮಾಡಿಕೊಳ್ಳುತ್ತಾರೆ. ಆದರೆ ನಿಮ್ಮ ಮುಖದ ಕಾಳಜಿಯನ್ನು ನೀವು ಹೆಚ್ಚಿನ ಖರ್ಚು ಮಾಡದೆಯೇ ಮನೆಯಲ್ಲಿಯೇ ದೊರೆಯುವ ಸೌಂದರ್ಯ ಪರಿಕರಗಳಿಂದ ಮಾಡಿಕೊಳ್ಳಬಹುದು ಎಂಬ ಕಿವಿಮಾತನ್ನು ನಾವು ಇಲ್ಲಿ ನೀಡುತ್ತಿದ್ದೇವೆ.

ನಿಮ್ಮ ಮುಖದಲ್ಲಿ ನಿಮ್ಮ ಸೌಂದರ್ಯವನ್ನು ಹಾಳುಗೆಡಹುವ ಯಾವುದೇ ಅಂಶಗಳಾಗಿರಬಹುದು ಉದಾಹರಣೆಗೆ, ಮೊಡವೆ, ಗುಳ್ಳೆಗಳು, ಡಾರ್ಕ್ ಸ್ಪಾಟ್‌ಗಳು ಅಥವಾ ಕಪ್ಪು ಕಲೆಗಳನ್ನೆಲ್ಲಾ ನೀವು ನೈಸರ್ಗಿಕವಾಗಿ ನಿವಾರಣೆ ಮಾಡಿಕೊಳ್ಳಬಹುದಾಗಿದೆ. ನಮ್ಮ ಇಂದಿನ ಲೇಖನದಲ್ಲಿ ಇಂತಹುದೇ ಕೆಲವೊಂದು ನೈಸರ್ಗಿಕ ಉತ್ಪನ್ನಗಳ ವಿವರಗಳನ್ನು ನಾವು ನೀಡುತ್ತಿದ್ದೇವೆ. ನೀವು ನಿತ್ಯವು ಉಪಯೋಗಿಸುವ ಹಣ್ಣು ತರಕಾರಿಗಳು ನಿಮ್ಮ ತ್ವಚೆಯ ಮೇಲೆ ಜಾದೂವನ್ನೇ ಮಾಡಲಿವೆ. ಹಾಗಿದ್ದರೆ ಈ ನೈಸರ್ಗಿಕ ಉತ್ಪನ್ನಗಳನ್ನು ಬಳಸಿಕೊಂಡು ಕಪ್ಪು ಕಲೆಗಳನ್ನು ನಿವಾರಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ...

ಮುಖದ ಕಲೆ ಹೋಗಲಾಡಿಸಬೇಕೆ? ಈ ರೀತಿ ಮಾಡಿ

ಇಂತಹ ಗಾಢ ವರ್ತುಲಗಳು ನಿಮ್ಮ ಮುಖವನ್ನು ಆವರಿಸಿಕೊಳ್ಳುವುದು ಕಲುಷಿತ ವಾತಾವರಣ, ಧೂಳು, ವಯಸ್ಸಾಗುವಿಕೆ, ಹೆಚ್ಚು ರಾಸಾಯನಿಕ ಪ್ರಸಾಧನಗಳ ಬಳಕೆ ಮೊದಲಾದ ಕಾರಣಗಳಿಂದ ಆಗಿದೆ. ಹಾಗಿದ್ದರೆ ಇಂತಹ ಕಪ್ಪು ವರ್ತುಲಗಳು ಇಲ್ಲವೇ ಡಾರ್ಕ್ ಸ್ಪಾಟ್‌ಗಳನ್ನು ನಿವಾರಿಸಿಕೊಳ್ಳುವುದು ಹೇಗೆ ಎಂಬುದನ್ನು ಅರಿಯೋಣ....

ಪಪ್ಪಾಯ

ಪಪ್ಪಾಯ

*ಪಪ್ಪಾಯದ ತಿರುಳನ್ನು ತೆಗೆದುಕೊಳ್ಳಿ

*ಹಾನಿಯಾಗಿರುವ ಸ್ಥಳಕ್ಕೆ ಇದನ್ನು ಹಚ್ಚಿಕೊಳ್ಳಿ

*30 ನಿಮಿಷಗಳ ಕಾಲ ಹಾಗೆಯೇ ಬಿಡಿ

*ನಿತ್ಯವೂ ಈ ವಿಧಾನವನ್ನು ಅನುಸರಿಸಿ

ಮಜ್ಜಿಗೆ

ಮಜ್ಜಿಗೆ

*ತಂಪಾದ ಮಜ್ಜಿಗೆಯನ್ನು ಬಳಸಿಕೊಂಡು ಡಾರ್ಕ್ ಸ್ಪಾಟ್‌ ಇರುವ ಕಡೆ ಹಚ್ಚಿ

*ಇದು 15 ನಿಮಿಷ ಹಾಗೆಯೇ ಇರಲಿ

*ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

*ದಿನಕ್ಕೊಮ್ಮೆ ಈ ವಿಧಾನವನ್ನು ಬಳಸಿಕೊಂಡು ಡಾರ್ಕ್ ಸ್ಪಾಟ್‌ನಿಂದ ರಕ್ಷಣೆ ಪಡೆದುಕೊಳ್ಳಿ

ಟೊಮೇಟೊ ಪಲ್ಪ್

ಟೊಮೇಟೊ ಪಲ್ಪ್

*ಟೊಮೇಟೋದಿಂದ ಪಲ್ಪ್ ಹೊರತೆಗೆಯಿರಿ

*ಕಪ್ಪು ಕಲೆ ಇರುವ ಕಡೆ ಹಚ್ಚಿ

*15 ನಿಮಿಷ ಇದನ್ನು ಹಾಗೆಯೇ ಬಿಡಿ

*ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

*ನಿತ್ಯವೂ ಈ ವಿಧಾನವನ್ನು ಬಳಸಿಕೊಂಡು ಡಾರ್ಕ್ ಸ್ಪಾಟ್‌ನಿಂದ ಮುಕ್ತಿ ಪಡೆಯಿರಿ

ಲಿಂಬೆ ರಸ

ಲಿಂಬೆ ರಸ

ಲಿಂಬೆ ರಸವನ್ನು ಡಾರ್ಕ್ ಸ್ಪಾಟ್ ಇರುವ ಕಡೆ ಹಚ್ಚಿಕೊಳ್ಳಿ

10-15 ನಿಮಿಷಗಳ ಕಾಲ ಹಾಗೆಯೇ ಬಿಡಿ

ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ

ನಿತ್ಯವೂ ಈ ವಿಧಾನವನ್ನು ಮುಖಕ್ಕೆ ಮಾಡುವುದರಿಂದ ಡಾರ್ಕ್ ಸ್ಪಾಟ್ ಅನ್ನು ನಿವಾರಿಸಿಕೊಳ್ಳಬಹುದು.

ಇನ್ನೊಂದು ಟ್ರಿಕ್ಸ್ ಇದೆ ನೋಡಿ..

ಉಪಯೋಗಿಸುವ ವಿಧಾನ ಒಂದು ಚಮಚ ಬ್ರೌನ್ ಶುಗರ್ ಅನ್ನು ಮೊಟ್ಟೆಯ ಬಿಳಿಯ ಅಂಶದೊಂದಿಗೆ ಬೆರೆಸಿಕೊಳ್ಳಿ. ಈ ಮಿಶ್ರಣಕ್ಕೆ ಒಂದು ಚಮಚ ಲಿಂಬೆ

ರಸವನ್ನು ಬೆರೆಸಿ ಚೆನ್ನಾಗಿ ಕಲಸಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ವೃತ್ತಾಕಾರದಲ್ಲಿ 10 ನಿಮಿಷಗಳ ಕಾಲ ನಯವಾಗಿ ತಿಕ್ಕಿ. ನಂತರ ತಿಳಿನೀರಿನಿಂದ

ಮುಖವನ್ನು ಸ್ವಚ್ಛಗೊಳಿಸಿ.

ವಿಟಮಿನ್ ಇ ಆಯಿಲ್

ವಿಟಮಿನ್ ಇ ಆಯಿಲ್

ವಿಟಮಿನ್ ಇ ಕ್ಯಾಪ್ಸುಲ್‌ನಿಂದ ಎಣ್ಣೆಯನ್ನು ಹೊರತೆಗೆಯಿರಿ

ಕಪ್ಪು ಕಲೆ ಸುತ್ತ ಇದನ್ನು ಹಚ್ಚಿಕೊಳ್ಳಿ ಮತ್ತು 15 ನಿಮಿಷ ಕಾಯಿರಿ

ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

ಡಾರ್ಕ್ ಸ್ಪಾಟ್‌ನಿಂದ ಮುಕ್ತಿ ಪಡೆದುಕೊಳ್ಳಲು ದಿನಕ್ಕೊಮ್ಮೆ ಈ ವಿಧಾನವನ್ನು ಅನುಸರಿಸಿ

ಆಲೂಗಡ್ಡೆ

ಆಲೂಗಡ್ಡೆ

ಆಲೂಗಡ್ಡೆಯಲ್ಲಿ ಬಿ-ಕಾಂಪ್ಲೆಕ್ಸ್ ವಿಟಮಿನ್ ಸತ್ವ, ಪೊಟಾಷಿಯಮ್, ಮೆಗ್ನೀಷಿಯಮ್, ಜಿಂಕ್ ಮತ್ತು ಫಾಸ್ಫರಸ್ ಸತ್ವಗಳು ಹೇರಳವಾಗಿದ್ದು ಇದು ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸಿ ಬಣ್ಣವನ್ನು ಅಂದಗೊಳಿಸುವ ಗುಣ ಹೊಂದಿದೆ. ವಿಟಮಿನ್-ಬಿ-ಕಾಂಪ್ಲೆಕ್ಸ್ ಭಾಗವಾದ ನಿಯಾಸಿನ್ ಅಮೈಡ್ ನಿಂದ ಜೀವಕೋಶಗಳು ನವೀಕರಣಗೊಳ್ಳಲು ಹೆಚ್ಚು ನೆರವಾಗುತ್ತದೆ.

ಉಪಯೋಗಿಸುವ ವಿಧಾನ

ಆಲೂಗಡ್ಡೆಯ ಹೋಳುಗಳನ್ನು ಮುಖದ ಮೇಲೆ ವೃತ್ತಾಕಾರದಲ್ಲಿ 10 ನಿಮಿಷಗಳ ಕಾಲ ನಯವಾಗಿ ತಿಕ್ಕಿ. ಆಲೂಗಡ್ಡೆಯ ಹೋಳುಗಳು ಒಣಗಿದಲ್ಲಿ ಮತ್ತೊಂದು ತಾಜಾ ಹೋಳನ್ನು ಬಳಸಿ.

ಮೊಸರು

ಮೊಸರು

ಒಂದು ಕಪ್‌ನಲ್ಲಿ ಒಂದು ದೊಡ್ಡಚಮಚ ಓಟ್ಸ್ ಪುಡಿ, ಎರಡು ದೊಡ್ಡಚಮಚ ಲಿಂಬೆರಸ ಮತ್ತು ಒಂದು ದೊಡ್ಡಚಮಚ ಮೊಸರು ಹಾಕಿ ಚೆನ್ನಾಗಿ ಕಲಕಿ. ಈ ಮಿಶ್ರಣವನ್ನು ಈಗತಾನೇ ತೊಳೆದು ಒರೆಸಿದ ಚರ್ಮದ ಮೇಲೆ ದಪ್ಪನಾಗಿ ಹಚ್ಚಿ. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲ ಚರ್ಮದ ಕಪ್ಪುಬಣ್ಣಕ್ಕೆ ಕಾರಣವಾದ ವರ್ಣದ್ರವ್ಯಗಳನ್ನು ತಿಳಿಗೊಳಿಸುವ ಗುಣ ಹೊಂದಿರುವ ಕಾರಣ ಮುಖದ ಮೇಲಿರುವ ಕಲೆಗಳನ್ನು ನಿವಾರಿಸಲು ನೆರವಾಗುತ್ತದೆ. ಸುಮಾರು ಹತ್ತರಿಂದ ಇಪ್ಪತ್ತು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ದಿನದಲ್ಲೊಂದು ಬಾರಿ, ರಾತ್ರಿ ಮಲಗುವ ಮುನ್ನ ಪಾಲಿಸಿ. ಸುಮಾರು ನಾಲ್ಕರಿಂದ ಆರು ವಾರಗಳಲ್ಲಿ ಉತ್ತಮವಾದ ಫಲಿತಾಂಶ ಕಂಡುಬರುತ್ತದೆ.

ಕಿತ್ತಳೆ ಹಣ್ಣು

ಕಿತ್ತಳೆ ಹಣ್ಣು

ಕಿತ್ತಳೆಯಲ್ಲಿ ಉತ್ತಮ ಪ್ರಮಾಣದಲ್ಲಿರುವ ವಿಟಮಿನ್ ಸಿ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜೊತೆಗೇ ಮುಖದ ಮತ್ತು ಕುತ್ತಿಗೆಯ ಕಲೆಗಳನ್ನು ನಿವಾರಿಸಲೂ ಶಕ್ತವಾಗಿದೆ. ದಿನಕ್ಕೊಂದು ಲೋಟ ಕಿತ್ತಳೆ ರಸವನ್ನು ಕುಡಿಯುವ ಜೊತೆಗೇ ಕಿತ್ತಳೆಯ ಸಿಪ್ಪೆಯನ್ನು ಹಿಸುಕಿದರೆ ಚಿಮ್ಮುವ ದ್ರವವನ್ನು ಕಲೆಗಳ ಮೇಲೆ ಬೀಳುವಂತೆ ಮಾಡುವ ಮೂಲಕ ಅಥವಾ ಕಿತ್ತಳೆಸಿಪ್ಪೆಯ ಮೇಲ್ಭಾಗವನ್ನು ಕೆರೆದು ತೆಗೆದು ಮಿಕ್ಸಿಯಲ್ಲಿ ಅರೆದು ಮುಖಲೇಪದಂತೆ ಹಚ್ಚಿಕೊಳ್ಳುವ ಮೂಲಕವೂ ಉತ್ತಮ ಫಲಿತಾಂಶ ಕಂಡುಬರುತ್ತದೆ. ಈ ವಿಧಾನವನ್ನೂ ದಿನಕ್ಕೊಂದು ಬಾರಿ ಅನುಸರಿಸಬಹುದು.

ಹಾಲು

ಹಾಲು

ಹಸಿಹಾಲನ್ನು ನೆನೆಸಿದ ಹತ್ತಿಯಲ್ಲಿ ಅದ್ದಿ ಕಲೆಗಳ ಮೇಲೆ ಇರುವಂತೆ ಸುಮಾರು ಹತ್ತರಿಂದ ಹದಿನೈದು ನಿಮಿಷಗಳ ಇಡಿ. ಹಾಲಿನಲ್ಲಿರುವ ಲ್ಯಾಕ್ಟಿಕ್ ಆಮ್ಲ ಕಲೆಗಳನ್ನು ನಿವಾರಿಸಲು ನೆರವಾಗುತ್ತದೆ.ಈ ವಿಧಾನ ವಯಸ್ಸಿನ ಕಾರಣದಿಂದ ಮೂಡುವ ಕಲೆಗಳಿಗೆ ಉತ್ತಮವಾಗಿದೆ. ಪ್ರತಿದಿನ ರಾತ್ರಿ ಈ ವಿಧಾನವನ್ನು ಅನುಸರಿಸುತ್ತಾ ಬಂದರೆ ಸುಮಾರು ಆರು ವಾರಗಳಲ್ಲಿ ಉತ್ತಮ ಫಲ ಕಂಡುಬರುತ್ತದೆ.

English summary

best-natural-ingredients-to-fade-away-dark-spots

We've simplified things for you by curating a list of 100% natural ingredients that are considered to be best for dealing with stubborn dark spots on your skin. The key components present in all these home remedies can make the dark spots on your skin a thing of the past. Just include them in your beauty routine to lighten the appearance of dark spots. Take a look at them here:
Story first published: Friday, October 27, 2017, 13:45 [IST]
Subscribe Newsletter