ಬ್ಯೂಟಿ ಟಿಪ್ಸ್: ಎಣ್ಣೆಯುಕ್ತ ತ್ವಚೆಗೆ ಆಯುರ್ವೇದ ಚಿಕಿತ್ಸೆ...

By: manu
Subscribe to Boldsky

ಭೂಮಿ ಮೇಲಿರುವ ಪ್ರತಿಯೊಬ್ಬರ ತ್ವಚೆಯು ಒಂದೇ ರೀತಿಯಾಗಿರುವುದಿಲ್ಲ. ವಾಸಿಸುವ ಹವಾಮಾನ, ದೇಹದ ರಚನೆ ಇತ್ಯಾದಿಗಳು ಇದರಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಅದರಲ್ಲೂ ನಮ್ಮ ಚರ್ಮವು ದೇಹದ ಆರೋಗ್ಯವನ್ನು ಸೂಚಿಸುತ್ತದೆ ಎಂದು ನಂಬಲಾಗಿದೆ. ಚರ್ಮದಲ್ಲಿ ಕೆಲವೊಂದು ವಿಧಗಳಿವೆ. ಸೂಕ್ಷ್ಮ, ಒಣ ಹಾಗೂ ಎಣ್ಣೆಯಂಶವಿರುವ ತ್ವಚೆ ಎಂದು ಇದನ್ನು ವಿಂಗಡಿಸಬಹುದು. ಈ ಮೂರು ರೀತಿಯ ಚರ್ಮಕ್ಕೂ ಅದರದ್ದೇ ಆಗಿರುವಂತಹ ಸಮಸ್ಯೆಗಳು ಇರುತ್ತದೆ. ಎಣ್ಣೆ ಚರ್ಮದ ಸಮಸ್ಯೆಯೇ? 'ಹಣ್ಣುಗಳ ಸ್ಕ್ರಬ್‌' ಪ್ರಯತ್ನಿಸಿ...

ಎಣ್ಣೆಯಂಶವಿರುವ ಚರ್ಮವು ಮುಖದಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳುತ್ತದೆ. ಆದರೆ ಇದು ಬೇಡದೆ ಇರುವಂತಹ ಮುಖದ ಕಾಂತಿ ನೀಡುತ್ತದೆ. ಇದರಿಂದ ಮುಖದಲ್ಲಿ ಎಣ್ಣೆಯಂಶವು ಎದ್ದು ಕಾಣುತ್ತದೆ. ಎಣ್ಣೆಯಂಶವಿರುವ ಚರ್ಮದವರಿಗೆ ಮೇಕಪ್ ಮಾಡಿಕೊಳ್ಳುವುದು ಕಷ್ಟದ ಕೆಲಸ.  ಎಣ್ಣೆ ತ್ವಚೆಗೆ ಅತ್ಯುತ್ತಮವಾದ ಮಾಯಿಶ್ಚರೈಸರ್

ಯಾಕೆಂದರೆ ಮೇಕಪ್ ಮಾಡಿದಂತಹ ಕೆಲವೇ ಸಮಯದಲ್ಲಿ ಇದು ಕಿತ್ತುಹೋಗುತ್ತದೆ. ಎಣ್ಣೆಯಂಶವಿರುವ ಚರ್ಮಕ್ಕಾಗಿ ಹಲವಾರು ಕ್ರೀಮ್‌ಗಳನ್ನು ಪ್ರಯತ್ನಿಸಿ ಜೇಬು ಖಾಲಿ ಮಾಡಿಕೊಂಡಿರಬಹುದು. ಎಣ್ಣೆಯಂಶವಿರುವ ಚರ್ಮಕ್ಕೆ ಆಯುರ್ವೇದದಲ್ಲಿ ಕೆಲವೊಂದು ಚಿಕಿತ್ಸೆಗಳು ಇವೆ. ಇದನ್ನು ಬಳಸಿದರೆ ಎಣ್ಣೆಯಂಶವಿರುವ ಚರ್ಮದ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಇದು ಹೇಗೆಂದು ತಿಳಿಯಲು ಮುಂದಕ್ಕೆ ಓದಿಕೊಳ್ಳಿ....

ಮೊಸರು ಮತ್ತು ಅರಿಶಿನ ಮಾಸ್ಕ್

ಮೊಸರು ಮತ್ತು ಅರಿಶಿನ ಮಾಸ್ಕ್

ಮೊಸರಿನಲ್ಲಿ ಬ್ಲೀಚಿಂಗ್ ಗುಣಗಳು ಇರುವ ಕಾರಣದಿಂದ ಇದು ಚರ್ಮದ ಬಣ್ಣವನ್ನು ಹೆಚ್ಚಿಸುವುದು ಮತ್ತು ಮುಖದಲ್ಲಿ ಎಣ್ಣೆ ಜಮೆಯಾಗದಂತೆ ನೋಡಿಕೊಳ್ಳುವುದು. ಮೊಸರು ಮತ್ತು ಅರಿಶಿನವನ್ನು ನಿಯಮಿತವಾಗಿ ಬಳಸುವುದರಿಂದ ಎಣ್ಣೆಯಂಶವಿರುವ ಮುಖಕ್ಕೆ ಪರಿಹಾರ ನೀಡಿ ಚರ್ಮವನ್ನು ತೇವಾಂಶದಿಂದ ಇಡುವುದು. ಅರ್ಧಕಪ್ ಮೊಸರನ್ನು ತೆಗೆದುಕೊಳ್ಳಿ. ಇದಕ್ಕೆ ಒಂದು ಚಮಚ ನಿಂಬೆರಸ, ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಮಚ ಅರಿಶಿನ ಹಾಕಿ. ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಬಿಟ್ಟು ನೀರಿನಿಂದ ತೊಳೆಯಿರಿ.

ಪಪ್ಪಾಯಿ ಜ್ಯೂಸ್

ಪಪ್ಪಾಯಿ ಜ್ಯೂಸ್

ತ್ವಚೆಯಲ್ಲಿರುವ ಹೆಚ್ಚಿನ ಎಣ್ಣೆಯಂಶವನ್ನು ತೆಗೆಯಲು ಪಪ್ಪಾಯಿ ಜ್ಯೂಸ್ ಅತ್ಯುತ್ತಮ ಆಯುರ್ವೇದ ಔಷಧಿಯಾಗಿದೆ. ಇದು ಚರ್ಮದ ರಂಧ್ರಗಳನ್ನು ಸ್ವಚ್ಛಗೊಳಿಸಿ ಚರ್ಮವನ್ನು ಆಳವಾಗಿ ಶುದ್ಧೀಕರಿಸುವುದು. ಪಪ್ಪಾಯಿಯು ಎಣ್ಣೆಯಂಶವನ್ನು ತೆಗೆಯುವುದು ಮಾತ್ರವಲ್ಲದೆ ಚರ್ಮವನ್ನು ಪದರಪದರವಾಗಿ ಆಳವಾಗಿ ಶುದ್ಧೀಕರಿಸುವುದು. ಪಪ್ಪಾಯಿ ತೆಗೆದುಕೊಂಡು ಅದರ ಜ್ಯೂಸ್ ತೆಗೆಯಿರಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ಬಳಿಕ ನೀರಿನಿಂದ ಮುಖವನ್ನು ತೊಳೆಯಿರಿ. ಪಪ್ಪಾಯಿಯಿಂದ ಮುಖಕ್ಕೆ ಮಸಾಜ್ ಮಾಡಿ ಬಳಿಕ ನೀರಿನಿಂದ ತೊಳೆಯಿರಿ.

ತುಳಸಿಯ ಫೇಸ್ ಮಾಸ್ಕ್

ತುಳಸಿಯ ಫೇಸ್ ಮಾಸ್ಕ್

ತುಳಸಿಯು ಎಣ್ಣೆಯಂಶವಿರುವ ಚರ್ಮಕ್ಕೆ ಒಳ್ಳೆಯದು ಮಾತ್ರವಲ್ಲದೆ ಇದು ಚರ್ಮದಲ್ಲಿನ ಎಲ್ಲಾ ರೀತಿಯ ಮೊಡವೆ ಹಾಗೂ ಬೊಕ್ಕೆಗಳನ್ನು ನಿವಾರಣೆ ಮಾಡುವುದು. ತುಳಸಿಯಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣಗಳು ಚರ್ಮವನ್ನು ಸುರಕ್ಷಿತ ಮತ್ತು ಆರೋಗ್ಯವಾಗಿಡುವುದು.

ಸ್ವಲ್ಪ ತುಳಸಿ ಎಲೆಗಳನ್ನು ತೆಗೆದುಕೊಳ್ಳಿ

ಸ್ವಲ್ಪ ತುಳಸಿ ಎಲೆಗಳನ್ನು ತೆಗೆದುಕೊಳ್ಳಿ

ಸ್ವಲ್ಪ ತುಳಸಿ ಎಲೆಗಳನ್ನು ತೆಗೆದುಕೊಳ್ಳಿ ಮತ್ತು ಅದನ್ನು ನೀರಿನಿಂದ ತೊಳೆಯಿರಿ. ಇದನ್ನು ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಒಂದು ಚಿಟಿಕೆ ಅರಶಿನ ಮತ್ತು ಒಂದು ಚಮಚ ಲಿಂಬೆ ರಸ ಹಾಕಿ ಮಿಶ್ರಣ ಮಾಡಿಕೊಳ್ಳಿ. ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಬಿಟ್ಟು ನೀರಿನಿಂದ ತೊಳೆಯಿರಿ. ತ್ವಚೆಯ ಅಂದ-ಚಂದಕ್ಕೆ ಮನೆಯಂಗಳದ 'ತುಳಸಿ'

ಹಾಲು, ಲಿಂಬೆ ರಸ ಮತ್ತು ಜೇನುತುಪ್ಪ

ಹಾಲು, ಲಿಂಬೆ ರಸ ಮತ್ತು ಜೇನುತುಪ್ಪ

ಹಾಲು, ಲಿಂಬೆ ರಸ ಮತ್ತು ಜೇನುತುಪ್ಪ ಈ ಎಲ್ಲವೂ ನಿಮ್ಮ ಮುಖದ ಮೇಲೆ ಅದ್ಭುತವಾಗಿ ಕೆಲಸ ಮಾಡಲಿದೆ ಮತ್ತು ಕಾಂತಿಯನ್ನು ಹೆಚ್ಚಿಸಲಿದೆ. ಒಂದು ಚಮಚ ಹಾಲು ಮತ್ತು ಒಂದು ಚಮಚ ಲಿಂಬೆರಸವನ್ನು ಬೆರೆಸಿಕೊಳ್ಳಿ. ಇದಕ್ಕೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಿಕೊಳ್ಳಿ. ಇದು ಮಾಯಿಶ್ಚರೈಸರ್ ನಂತೆ ಕೆಲಸ ಮಾಡುತ್ತದೆ. ಇದನ್ನು ನಿಯಮಿತವಾಗಿ ಬಳಸುವುದರಿಂದ ಕಾಂತಿಯುತ ತ್ವಚೆಯು ನಿಮ್ಮದಾಗುವುದರಲ್ಲಿ ಸಂಶಯವಿಲ್ಲ.

ಆಲೂಗಡ್ಡೆ

ಆಲೂಗಡ್ಡೆ

ಆಲೂಗಡ್ಡೆಯನ್ನು ಕೇವಲ ಅಡುಗೆಯಲ್ಲಿ ಮಾತ್ರ ಬಳಸುವುದಲ್ಲ. ಇದರಲ್ಲಿ ಇರುವಂತಹ ಬ್ಲೀಚಿಂಗ್ ಅಂಶವು ಮುಖದ ಬಣ್ಣವನ್ನು ಹೆಚ್ಚು ಮಾಡಿ ಕಾಂತಿ ನೀಡುವುದು. ಒಂದು ಆಲೂಗಡ್ಡೆ ತೆಗೆದುಕೊಂಡು ಅದನ್ನು ಹುಡಿ ಮಾಡಿ ಇದರ ರಸ ಅಥವಾ ತಿರುಳನ್ನು ಮುಖದ ಮೇಲೆ ಹಚ್ಚಿಕೊಳ್ಳಿ. ಪರಿಣಾಮಕಾರಿ ಫಲಿತಾಂಶ ಬೇಕೆಂದರೆ ನಿಯಮಿತವಾಗಿ ಬಳಸಿ.ಆಲೂಗಡ್ಡೆ ಫೇಸ್ ಪ್ಯಾಕ್-ಬರೀ ಒಂದೇ ತಿಂಗಳಲ್ಲಿ ರಿಸಲ್ಟ್!

 
English summary

Best Ayurvedic Tips To Treat Oily Skin

There are certain Ayurvedic tips, with the help of which you could reduce the oiliness on face. People with oily skin often find it difficult to apply makeup on the skin, as it gets washed away soon. People who have dry or normal skin may also experience excess oil on the face, as it may be due to excessive heat around.
Subscribe Newsletter