ಕೂದಲು ಮತ್ತು ತ್ವಚೆಯ ಅಂದಕ್ಕಾಗಿ ಎಳನೀರಿನ ಥೆರಪಿ

By: Jaya subramanya
Subscribe to Boldsky

ಸೌಂದರ್ಯವೆಂಬುದು ಯಾರಿಗೆ ಬೇಡ ಹೇಳಿ. 60 ರ ಹರೆಯ ಇಳಿವಯಸ್ಸಿನಲ್ಲಿ ಕೂಡ ತಾವು ಹರೆಯವರಾಗಿ ಕಾಣಬೇಕೆಂಬ ಹಂಬಲ ಇದ್ದೇ ಇರುತ್ತದೆ. ಅದಾಗ್ಯೂ ಕೆಲವರು ತಮ್ಮ ಇಳಿಹರೆಯದಲ್ಲೂ ಅದ್ಭುತ ಸೌಂದರ್ಯವನ್ನು ಪಡೆದುಕೊಂಡಿದ್ದಾರೆ. ಕೂದಲು ಬಿಳಿಯಾಗದೆ ತ್ವಚೆ ನೆರಿಗೆ ಕಟ್ಟದೆ ಇಂದಿಗೂ ಅವರು ಅರೋಗ್ಯಕರವಾಗಿ ನಳನಳಿಸುತ್ತಿದ್ದಾರೆ. ಇಂತಹ ವ್ಯಕ್ತಿಗಳು ನಿಮಗೆ ಹಳ್ಳಿ ಕಡೆಗಳಲ್ಲಿ ಸಿಕ್ಕೇ ಸಿಗುತ್ತಾರೆ. ಇವರ ಅರೋಗ್ಯ ಎಂತಹ ಹದಿಹರೆಯದವರನ್ನು ನಾಚಿಸುವಂತಿರುತ್ತದೆ ಮತ್ತು ತಮ್ಮ ದೈಹಿಕ ಸ್ವಾಸ್ಥ್ಯವನ್ನು ಕಾಪಾಡಿಕೊಂಡಿರುತ್ತಾರೆ.

ಇಂದಿನ ಪಟ್ಟಣದ ವಾಸ ನಮ್ಮನ್ನು ಮುಪ್ಪು ಬರುವ ಮುನ್ನವೇ ವಯಸ್ಸಾದವರಂತೆ ಮಾಡಿಬಿಡುತ್ತದೆ. ಇಲ್ಲಿನ ಜೀವನ ಶೈಲಿಯಿಂದ ನಾವು ರೋಗಗಳಿಗೆ ದಾಸರಾಗುತ್ತಿದ್ದೇವೆ. ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ನಮ್ಮಲ್ಲಿ ಸಮಯ ಇಲ್ಲದೇ ಇರುವುದೇ ಇದರ ಹಿಂದಿರುವ ಕಾರಣವಾಗಿದೆ. ಅದಾಗ್ಯೂ ನಮ್ಮ ಬಳಿ ಇನ್ನಷ್ಟು ಸಮಯಗಳಿದ್ದು ನಮ್ಮ ಆರೋಗ್ಯಕ್ಕಾಗಿ ಕೊಂಚ ಸಮಯವನ್ನು ನಾವು ವಿನಿಯೋಗಿಸಲೇಬೇಕಾಗಿದೆ. ಇಂದಿನ ಲೇಖನದಲ್ಲಿ ಇಂತಹುದೇ ಸರಳ ಸಲಹೆಯ ಬಗ್ಗೆ ನಾವು ಮಾಹಿತಿಯನ್ನು ನೀಡುತ್ತಿದ್ದು ಎಳನೀರಿನಿಂದ ಅಥವಾ ಎಳೆ ನೀರಿನಿಂದ ನಿಮ್ಮ ತ್ವಚೆ ಮತ್ತು ಕೂದಲನ್ನು ಹೇಗೆ ನಳನಳಿಸುವಂತೆ ಮಾಡುವುದು ಎಂಬುದರ ವಿವರ ಇಲ್ಲಿದೆ.

ಸತತ 15 ದಿನ ಎಳೆನೀರು ಕುಡಿಯಿರಿ-ಆರೋಗ್ಯ ಪಡೆಯಿರಿ

ಹೌದು ಎಳನೀರಿನಲ್ಲಿರುವ ಸೌಂದರ್ಯವರ್ಧಕಗಳು ನಿಮ್ಮ ತ್ವಚೆ ಮತ್ತು ಕೂದಲಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಇದರಲ್ಲಿ ಒಮೇಗಾ 3 ಫ್ಯಾಟಿ ಆಸಿಡ್ ಇದ್ದು ವಿಟಮಿನ್ ಸಿ, ಎಂಜೀಮ್ಸ್, ಅಮಿನೊ ಆಸಿಡ್‌ಗಳನ್ನು ಹೊಂದಿದೆ. ಹಾಗಿದ್ದರೆ ನಿಮ್ಮ ಸೌಂದರ್ಯದಲ್ಲಿ ಇದನ್ನು ಹೇಗೆ ಬಳಸಬಹುದು ಎಂಬುದನ್ನು ನೋಡೋಣ..... 

ಎಳನೀರು ಫೇಸ್ ಮಾಸ್ಕ್

ಎಳನೀರು ಫೇಸ್ ಮಾಸ್ಕ್

ಇದರಿಂದ ಮಾಸ್ಕ್ ತಯಾರಿಸಿಕೊಂಡು ಎಳನೀರನ್ನು ಮುಖಕ್ಕೆ ಬಳಸಿಕೊಳ್ಳಬಹುದು. ಅರಶಿನ, ಶ್ರೀಗಂಧ ಹುಡಿ ಮತ್ತು ಎಳನೀರು ಇದಕ್ಕೆ ಬೇಕಾಗಿರುವ ಸಾಮಾಗ್ರಿಗಳು. ಎಲ್ಲವನ್ನೂ ಒಂದೊಂದು ಚಮಚದಷ್ಟು ಎಳನೀರಿಗೆ ಸೇರಿಸಿಕೊಳ್ಳಿ. ನಂತರ ಇದನ್ನು ಪೇಸ್ಟ್‌ನಂತೆ ಮಾಡಿ. ನಿಮ್ಮ ಮುಖ, ಕತ್ತಿಗೆ ಇದನ್ನು ಹಚ್ಚಿಕೊಂಡು 20 ನಿಮಿಷ ಹಾಗೆಯೇ ಬಿಡಿ. ಮೊದಲಿಗೆ ಎಳನೀರಿನಿಂದ ಮುಖ ತೊಳೆದುಕೊಂಡು ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.

ಎಳನೀರು ಫೇಸ್ ಪ್ಯಾಕ್

ಎಳನೀರು ಫೇಸ್ ಪ್ಯಾಕ್

ಇದರಿಂದ ಮಾಸ್ಕ್ ತಯಾರಿಸಿಕೊಂಡು ಎಳನೀರನ್ನು ಮುಖಕ್ಕೆ ಬಳಸಿಕೊಳ್ಳಬಹುದು. ಅರಶಿನ, ಶ್ರೀಗಂಧ ಹುಡಿ ಮತ್ತು ಎಳನೀರು ಇದಕ್ಕೆ ಬೇಕಾಗಿರುವ ಸಾಮಾಗ್ರಿಗಳು. ಎಲ್ಲವನ್ನೂ ಒಂದೊಂದು ಚಮಚದಷ್ಟು ಎಳನೀರಿಗೆ ಸೇರಿಸಿಕೊಳ್ಳಿ. ನಂತರ ಇದನ್ನು ಪೇಸ್ಟ್‌ನಂತೆ ಮಾಡಿ. ನಿಮ್ಮ ಮುಖ, ಕತ್ತಿಗೆ ಇದನ್ನು ಹಚ್ಚಿಕೊಂಡು 20 ನಿಮಿಷ ಹಾಗೆಯೇ ಬಿಡಿ. ಮೊದಲಿಗೆ ಎಳನೀರಿನಿಂದ ಮುಖ ತೊಳೆದುಕೊಂಡು ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.

ಎಳನೀರು ಫೇಸ್ ವಾಶ್

ಎಳನೀರು ಫೇಸ್ ವಾಶ್

ಫೇಸ್ ಮಾಸ್ಕ್, ಪ್ಯಾಕ್ ತಯಾರಿಸಿಕೊಳ್ಳುವುದು ಕೊಂಚ ದೀರ್ಘ ಪ್ರಕ್ರಿಯೆಯಾಗಿದೆ. ಆದ್ದರಿಂದ ಎಳನೀರಿನಲ್ಲಿಯೇ ನೀವು ನೇರವಾಗಿ ಮುಖವನ್ನು ತೊಳೆದುಕೊಳ್ಳಬಹುದಾಗಿದೆ. ದಿನಕ್ಕೆ ಮೂರು ಬಾರಿ ಎಳನೀರು ಬಳಸಿಕೊಂಡು ಮುಖ ತೊಳೆದುಕೊಳ್ಳಿ. ಬೆಳಗ್ಗೆ ಮತ್ತು ಸಂಜೆ ಈ ಕ್ರಿಯೆಯನ್ನು ಅಭ್ಯಸಿಸಿ. ನೀರಿನ ಬದಲಿಗೆ ಮುಖ ತೊಳೆಯಲು ಎಳನೀರು ಬಳಸಿ.

ಎಳನೀರಿನ ಬಳಕೆ ನಿಮ್ಮ ಕೂದಲಿಗೆ

ಎಳನೀರಿನ ಬಳಕೆ ನಿಮ್ಮ ಕೂದಲಿಗೆ

ನಿಮ್ಮ ಕೂದಲಿಗೆ ಎಳನೀರನ್ನು ಬಳಸಲು ಅದನ್ನು ಬರಿಯ ನೀರಿನಿಂದ ತೊಳೆಯುವುದು ಪರಿಣಾಮಕಾರಿಯಾಗಿರುವುದಿಲ್ಲ. ಎಳನೀರನ್ನು ನಿಮ್ಮ ದೈನಂದಿನ ಕೂದಲಿಗೆ ಹಚ್ಚಿಕೊಳ್ಳುವ ಎಣ್ಣೆಯೊಂದಿಗೆ ಮಿಶ್ರ ಮಾಡಿಕೊಳ್ಳಿ. ನಿಮ್ಮ ಬೆರಳುಗಳನ್ನು ಬಳಸಿಕೊಂಡು ತಲೆಬುರುಡೆಗೆ ಮಸಾಜ್ ಮಾಡಿ. ಇದು ತಲೆಬುರುಡೆಯನ್ನು ಸ್ವಾಸ್ಥ್ಯವಾಗಿಸಿ ತಲೆಹೊಟ್ಟು, ತುರಿಕೆಯನ್ನು ನಿವಾರಿಸಲಿದೆ. ಕೂದಲುದುರುವ ಸಮಸ್ಯೆಗೂ ಇದು ಪರಿಹಾರವನ್ನು ನೀಡಲಿದೆ. ವಾರದಲ್ಲಿ ಮೂರು ಬಾರಿ ಎಳನೀರನ್ನು ನಿಮ್ಮ ಕೂದಲಿಗೆ ಬಳಸಿಕೊಳ್ಳಿ.

English summary

Benefits Of Using tender Coconut Water For Skin And Haircare

Exactly like coconut oil and milk, coconut water is advantageous when applied on the skin and hair. In fact, using coconut water on the skin and hair is one of the traditional practises happening in the country for a long time now. Any man and woman can start using coconut water on the hair and body and over time they will surely see wonderful results.
Subscribe Newsletter