ಮುಖದ ಕಾಂತಿಗೆ ಪಪ್ಪಾಯ-ಜೇನುತುಪ್ಪದ ಫೇಸ್ ಪ್ಯಾಕ್

By: Hemanth
Subscribe to Boldsky

ಸೌಂದರ್ಯವನ್ನು ಹೊಗಳುವವರೇ ಹೆಚ್ಚು. ಇಂತಹ ಸೌಂದರ್ಯವನ್ನು ಪಡೆಯಲು ಹಲವಾರು ರೀತಿಯ ಕಸರತ್ತುಗಳನ್ನು ಮಾಡಬೇಕಾಗುತ್ತದೆ. ಸೌಂದರ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಬೇಕಾದರೆ ಮನೆಯಲ್ಲೇ ತಯಾರಿಸುವಂತಹ ಕೆಲವೊಂದು ಸೌಂದರ್ಯವರ್ಧಕಗಳು ತುಂಬಾ ಒಳ್ಳೆಯದು.

ಅದರಲ್ಲೂ ಹಣ್ಣುಗಳಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಹಾಗೂ ವಿಟಮಿನ್ ಗಳು ಲಭ್ಯವಿರುತ್ತದೆ. ಇದರಿಂದ ದೇಹದ ಆರೋಗ್ಯ ಮಾತ್ರವಲ್ಲದೆ ತ್ವಚೆಯ ಆರೋಗ್ಯವನ್ನು ಕಾಪಾಡಬಹುದು. ಹಣ್ಣುಗಳಲ್ಲಿ ಎಲ್ಲಾ ಋತುವಿನಲ್ಲೂ ಲಭ್ಯವಿರುವಂತಹ ಪಪ್ಪಾಯಿಯಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಲಭ್ಯವಿದೆ. 

ಪಪ್ಪಾಯಿ ಹಣ್ಣಿನ ಫೇಸ್ ಪ್ಯಾಕ್-ಸ್ಟೆಪ್ ಬೈ ಸ್ಟೆಪ್ ಟಿಪ್ಸ್

ಇದರೊಂದಿಗೆ ಜೇನುತುಪ್ಪವನ್ನು ಬೆರೆಸಿಕೊಂಡು ಮಾಡುವಂತಹ ಚರ್ಮದ ಮಾಸ್ಕ್‌ಗಳು ತುಂಬಾ ಪ್ರಯೋಜನಕಾರಿ. ಪಪ್ಪಾಯಿ ಮತ್ತು ಜೇನುತುಪ್ಪದ ಮಾಸ್ಕ್ ಮಾಡಿಕೊಂಡರೆ ಅದರಿಂದ ಯಾವ ರೀತಿಯ ಲಾಭಗಳು ಸಿಗಲಿದೆ ಎಂದು ತಿಳಿಯಿರಿ. ಚರ್ಮದ ಆರೈಕೆಯಲ್ಲಿ ಪಪ್ಪಾಯಿಯನ್ನು ನಿಯಮಿತವಾಗಿ ಬಳಸಿಕೊಳ್ಳಬಹುದು....

ಪಪ್ಪಾಯ-ಜೇನುತುಪ್ಪದ ಫೇಸ್ ಪ್ಯಾಕ್

ಪಪ್ಪಾಯ-ಜೇನುತುಪ್ಪದ ಫೇಸ್ ಪ್ಯಾಕ್

ಪಪ್ಪಾಯಿಯಲ್ಲಿ ವಿದ್ಯುದ್ವಿಚ್ಛೇದಗಳು ಮತ್ತು ನೀರಿನಾಂಶವು ಸಮೃದ್ಧವಾಗಿದೆ. ಇದು ಚರ್ಮಕ್ಕೆ ತೇವಾಂಶವನ್ನು ನೀಡುವುದು ಮಾತ್ರವಲ್ಲದೆ ಚರ್ಮದಲ್ಲಿನ ಪಿಎಚ್ ಮಟ್ಟವನ್ನು ಕಾಪಾಡುತ್ತದೆ. ಇದು ಚರ್ಮವನ್ನು ಫ್ರೀ ರ್ಯಾಡಿಕಲ್ ನಿಂದ ಕಾಪಾಡುತ್ತದೆ. ಪಪ್ಪಾಯಿ ಮತ್ತು ತೆಂಗಿನ ನೀರನ್ನು ಮಿಶ್ರಣ ಮಾಡಿಕೊಳ್ಳಿ ಮತ್ತು ಇದನ್ನು ಚರ್ಮಕ್ಕೆ ಬಳಸಿಕೊಳ್ಳಿ.

ವಯಸ್ಸಾಗುವ ಲಕ್ಷಣಗಳನ್ನು ತಡೆಯುವುದು

ವಯಸ್ಸಾಗುವ ಲಕ್ಷಣಗಳನ್ನು ತಡೆಯುವುದು

ಪಪ್ಪಾಯಿಯಲ್ಲಿ ಪದರ ಕಿತ್ತುಹಾಕುವ ಅಂಶಗಳು ಸಾಕಷ್ಟಿದೆ. ಇದರಲ್ಲಿ ಅಲ್ಪಾ ಹೈಡ್ರೊಕ್ಸೈಲ್ ಆಮ್ಲವಿದೆ. ಇದು ಸತ್ತ ಚರ್ಮವನ್ನು ತೆಗೆದುಹಾಕಿ. ಚರ್ಮದಲ್ಲಿ ಮೊಡವೆಗಳು, ನೆರಿಗೆ ಮೂಡುದಂತೆ ನೋಡಿಕೊಳ್ಳುತ್ತದೆ. ಪಪ್ಪಾಯಿಯ ತಿರುಳು ಮತ್ತು ಮೊಸರನ್ನು ಜತೆಯಾಗಿ ಮಿಶ್ರಣ ಮಾಡಿಕೊಂಡು ಮುಖಕ್ಕೆ ಸರಿಯಾಗಿ ಮಸಾಜ್ ಮಾಡಿಕೊಳ್ಳಿ. ಒಂದೇ ದಿಕ್ಕಿನಲ್ಲಿ ಮಸಾಜ್ ಮಾಡಿ.

ಮೊಡವೆ ನಿವಾರಣೆ

ಮೊಡವೆ ನಿವಾರಣೆ

ಪಪ್ಪಾಯಿಯಲ್ಲಿ ಪ್ರೊಟೆಲ್ಯಟಿಕ್ ಕಿಣ್ವ ಪಪೈನ್ ಲಭ್ಯವಿದೆ. ಇದು ಮೊಡವೆ ಮತ್ತು ಬೊಕ್ಕೆಗಳನ್ನು ನಿವಾರಣೆ ಮಾಡುತ್ತದೆ. ಇದರಲ್ಲಿ ಬ್ಯಾಕ್ಟೀರಿಯಾವನ್ನು ಬ್ಲೀಚ್ ಮಾಡುವ ಗುಣಗಳೂ ಇವೆ ಮತ್ತು ಬ್ಯಾಕ್ಟೀರಿಯಾಗಳ ಚಟುವಟಿಕೆಗಳನ್ನು ನಿಲ್ಲಿಸುವಂತಹ ಸಾಮರ್ಥ್ಯವಿದೆ. ಮುಖದಲ್ಲಿನ ಕಲೆಗಳನ್ನು ನಿವಾರಣೆ ಮಾಡಲು ಹಸಿ ಪಪ್ಪಾಯಿಯ ಜ್ಯೂಸ್ ಬಳಸಿಕೊಳ್ಳಿ.

ಚರ್ಮದ ಕಲೆ ನಿವಾರಣೆ

ಚರ್ಮದ ಕಲೆ ನಿವಾರಣೆ

ಸೂರ್ಯನ ಬಿಸಿಲಿನಿಂದಾಗಿ ಚರ್ಮದಲ್ಲಿ ಕಲೆಗಳು ಮೂಡುವುದು ಸಾಮಾನ್ಯವಾಗಿದೆ. ಇದನ್ನು ನಿವಾರಣೆ ಮಾಡಲು ಪಪ್ಪಾಯಿ ಜ್ಯೂಸ್ ಮತ್ತು ಜೇನುತುಪ್ಪ ಬೆರೆಸಿಕೊಳ್ಳಿ. ಕಲೆಗಳನ್ನು ನಿವಾರಣೆ ಮಾಡಿ ಚರ್ಮದ ಬಣ್ಣವನ್ನು ಹೆಚ್ಚಿಸಿ.

ಬೇಡವಾದ ಕೂದಲು ತೆಗೆಯುವುದು

ಬೇಡವಾದ ಕೂದಲು ತೆಗೆಯುವುದು

ಮುಖದಲ್ಲಿ ಕೆಲವು ಸಲ ಬೇಡವಾದ ಕೂದಲು ಮೂಡುತ್ತಾ ಇರುತ್ತದೆ. ಬ್ಯೂಟಿಪಾರ್ಲರ್ ಗೆ ಎಷ್ಟು ಸಲ ಹೋದರೂ ಅದರಿಂದ ಯಾವುದೇ ಪ್ರಯೋಜವಾಗದೆ ಇರುವಾಗ ಪಪ್ಪಾಯಿ, ಜೇನುತುಪ್ಪ ಮತ್ತು ಮುಲ್ತಾನಿ ಮಿಟ್ಟಿಯ ಮಾಸ್ಕ್ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ವಾರದಲ್ಲಿ ಮೂರು ಸಲ ಹೀಗೆ ಮಾಡಿದರೆ ಬೇಡವಾದ ಕೂದಲು ಹೋಗುವುದು.

ಸೌಂದರ್ಯ ಕೆಡಿಸುವ ಮುಖದ ಮೇಲಿನ ಕೂದಲು! ಚಿಂತೆ ಬಿಡಿ...

ಜೇನುತುಪ್ಪವನ್ನು ಬಳಸುವ ಐದು ಅದ್ಭುತ ಲಾಭಗಳು

ಜೇನುತುಪ್ಪವನ್ನು ಬಳಸುವ ಐದು ಅದ್ಭುತ ಲಾಭಗಳು

ಜೇನುತುಪ್ಪದಲ್ಲಿ ಇರುವಂತಹ ಮಾಯಿಶ್ಚರೈಸ್ ನೀಡುವಂತಹ ಗುಣವು ಜೇನುತುಪ್ಪವನ್ನು ಚರ್ಮದ ಹೆಚ್ಚಿನ ಎಲ್ಲಾ ಮಾಸ್ಕ್ ಗಳಲ್ಲಿ ಬಳಸುವಂತೆ ಮಾಡಿದೆ. ಯಾವುದೇ ರಾಸಾಯನಿಕಗಳು ಇದರಲ್ಲಿ ಇಲ್ಲದೆ ಇರುವ ಕಾರಣದಿಂದಾಗಿ ಇದು ತುಂಬಾ ಪರಿಣಾಮಕಾರಿ ಮತ್ತು ಯಾವುದೇ ಅಡ್ಡ ಪರಿಣಾಮ ಉಂಟು ಮಾಡುವುದಿಲ್ಲ.

ಹಚ್ಚಿರಿ ಜೇನು ಹನಿಯ ಲೇಪ... ದೂರವಾಗಲಿ ಬೇಸಿಗೆಯ ತಾಪ...

ಚರ್ಮದ ರಂಧ್ರಗಳನ್ನು ಸ್ವಚ್ಛಗೊಳಿಸುವುದು

ಚರ್ಮದ ರಂಧ್ರಗಳನ್ನು ಸ್ವಚ್ಛಗೊಳಿಸುವುದು

ಜೇನುತುಪ್ಪವು ಚರ್ಮದ ರಂಧ್ರದೊಳಗೆ ಸಾಗಿ ಅದರಲ್ಲಿರುವ ಕಲ್ಮಶವನ್ನು ತೆಗೆದುಹಾಕುವುದು. ಇದು ರಂಧ್ರಗಳನ್ನು ಮುಚ್ಚಿ ಧೂಳು ಮತ್ತು ಇತರ ಕಲ್ಮಷಗಳು ಅದರಲ್ಲಿ ನೆಲೆಯಾಗುವುದನ್ನು ತಡೆಯುವುದು.

ಸಂಪೂರ್ಣ ದೇಹವನ್ನು ಸ್ವಚ್ಛಗೊಳಿಸುವುದು

ಸಂಪೂರ್ಣ ದೇಹವನ್ನು ಸ್ವಚ್ಛಗೊಳಿಸುವುದು

ಒಂದು ಲೋಟ ಬಿಸಿ ನೀರಿಗೆ ಎರಡು ಚಮಚ ಜೇನುತುಪ್ಪವನ್ನು ಬೆರೆಸಿಕೊಳ್ಳಿ. ಈ ನೀರನ್ನು ನೀವು ಸ್ನಾನ ಮಾಡುವಂತಹ ನೀರಿಗೆ ಹಾಕಿ. ಇದು ಸ್ನಾಯುಗಳಿಗೆ ಆರಾಮವನ್ನು ನೀಡಿ ದೇಹದಲ್ಲಿ ರಕ್ತ ಪರಿಚಲನೆಯನ್ನು ಉತ್ತೇಜಿಸುವುದು ಮತ್ತು ಹೆಚ್ಚಿಸುವುದು. ಈ ರೀತಿ ಮಾಡುವಾಗ ತಲೆಗೆ ಸ್ನಾನ ಮಾಡಿಕೊಳ್ಳಬೇಡಿ.

ಹೊರಪೊರೆಗೆ ತೇವಾಂಶ ನೀಡುವುದು

ಹೊರಪೊರೆಗೆ ತೇವಾಂಶ ನೀಡುವುದು

ಉಗುರುಗಳಿಗೆ ನೈಲ್ ಪಾಲಿಷ್ ಹಾಕಿಕೊಂಡ ಬಳಿಕ ಅದನ್ನು ತೆಗೆದಾಗ ಹೊರಪೊರೆಗೆ ಹಾನಿಯಾಗುವುದು. ಉಗುರುಗಳಿಗೆ ಮೊಶ್ಚಿರೈಸರ್ ನೀಡುವುದು ಅಗತ್ಯವಾಗಿದೆ. ಇದರಿಂದ ಉಗುರುಗಳಿಗೆ ಮೊಶ್ಚಿರೈಸರ್ ನೀಡುವುದು ಅಗತ್ಯವಾಗಿದೆ. ಒಂದು ಚಮಚ ಜೇನುತುಪ್ಪಕ್ಕೆ ¼ ಚಮಚ ಆ್ಯಪಲ್ ಸೀಡರ್ ವಿನೇಗರ್ ಮತ್ತು ಒಂದು ಚಮಚ ತೆಂಗಿನ ಎಣ್ಣೆ ಹಾಕಿಕೊಳ್ಳಿ. ಇದನ್ನು ಉಗುರಿನ ಹೊರಪೊರೆಗೆ ಹಚ್ಚಿ. ಉಗುರು ಬೆಚ್ಚಗಿನ ನೀರಿನಿಂದ ಕೈ ತೊಳೆಯಿರಿ.

English summary

Benefits Of Using Papaya And Honey On Skin

Papaya is a fleshy tropical fruit dubbed as the "Fruit of Angels" by Christopher Columbus. It has a very smooth texture, like a sweet butter. Being an orange coloured fruit, it is rich in vitamin A, carotenoids, vitamin E and vitamin K. It is rich in soluble fibre and therefore helps in all your beauty purposes. Another perfect ingredient to be used on skin is honey. It is a magical ingredient. It is not possible for humans to make it. It is made by honey bees by collecting nectars from millions of flowers from around the world.
Subscribe Newsletter