ಐಸ್ ಫೇಶಿಯಲ್ ಮಾಡಿ... ಮುಖದಲ್ಲಾಗುವ ಬದಲಾವಣೆ ನೋಡಿ...

By: Divya Pandith
Subscribe to Boldsky

ನಿತ್ಯವೂ ಒಂದಲ್ಲಾ ಒಂದು ವಿಶೇಷ ಬಗೆಯ ಸೌಂದರ್ಯ ವರ್ಧಕಗಳು ಹಾಗೂ ಆರೈಕೆಯ ಹೊಸ ಉತ್ಪನ್ನಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಲೇ ಇರುತ್ತದೆ. ಅವುಗಳ ಬಳಕೆಯಿಂದ ನಮ್ಮ ಚರ್ಮವು ಬಹು ಬೇಗ ಮಂಕಾಗುವುದು ಎನ್ನುವ ಅರಿವು ನಮಗಿರುವುದಿಲ್ಲ. ಚರ್ಮವು ಮಂಕಾದಾಗ ಮತ್ತೆ ಪುನಃ ರಾಸಾಯನಿಕ ಯುಕ್ತ ಉತ್ಪನ್ನಗಳಿಂದಲೇ ಆರೈಕೆ ನಡೆಸುತ್ತೇವೆ. ಆದರೂ ನಮ್ಮ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.

ಮನೆಯಲ್ಲಿಯೇ ಯಾವುದೇ ರಾಸಾಯನಿಕ ಉತ್ಪನ್ನಗಳ ಬಳಕೆಯಿಲ್ಲದೆ, ಸುಲಭವಾಗಿ ತ್ವಚೆಯ ಆರೈಕೆ ಮಾಡುವ ವಿಧಾನವೆಂದರೆ ಐಸ್ ಫೇಶಿಯಲ್. ಹೌದು, ಕೇವಲ ಐಸ್/ಮಂಜುಗಡ್ಡೆಯಿಂದಲೇ ನಮ್ಮ ತ್ವಚೆಯ ಆರೋಗ್ಯವನ್ನು ಕಾಪಾಡಬಹುದು. ಐಸ್ ಅನೇಕ ಬಗೆ ಆರೋಗ್ಯದ ಆರೈಕೆಯಲ್ಲಿ ಸಹಾಯ ಮಾಡುತ್ತದೆ. ಬಹಳ ಅಗ್ಗದ ವಸ್ತುವಾದರೂ ಸಮೃದ್ಧವಾದ ಆರೈಕೆ ಮಾಡುವ ವಿಧಾನವನ್ನು ಒಳಗೊಂಡಿದೆ.

Ice Facial

ಚರ್ಮದ ಉರಿಯೂತವನ್ನು ಕಡಿಮೆ ಮಾಡುವುದು, ಚರ್ಮದ ಮೇಲಿರುವ ರಂಧ್ರವನ್ನು ಮುಚ್ಚುವುದು, ಮೊಡವೆಗಳನ್ನು ನಿಯಂತ್ರಿಸುವುದು ಸೇರಿದಂತೆ ಅನೇಕ ಬಗೆಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ನಿಮಗೂ ಐಸ್ ಫೇಶಿಯಲ್ ಮೊರೆ ಹೋಗಬೇಕು...ಅದರ ವಿಧಿ-ವಿಧಾನಗಳು ಹೇಗೆ ಎನ್ನುವುದನ್ನು ತಿಳಿದುಕೊಳ್ಳಬೇಕೆನ್ನುವ ಹಂಬಲವಿದ್ದರೆ ಬೋಲ್ಡ್ ಸ್ಕೈ ಈ ಮುಂದೆ ನೀಡಿರುವ ಐಸ್ ಫೇಶಿಯಲ್ ಆರೈಕೆಯ ವಿವರಣೆಯನ್ನು ತಿಳಿಯಿರಿ...

ಕುತ್ತಿಗೆಯ ಈ ಭಾಗದ ಮೇಲೆ ಐಸ್‌ ಕ್ಯೂಬ್‌ ಇಟ್ಟರೆ ಆರು ಲಾಭಗಳಿವೆ!

ಬೇಕಾಗುವ ಸಾಮಾಗ್ರಿ

ಖಾಲಿ ಇರುವ ಐಸ್ ಟ್ರೇ

ಒಂದಿಷ್ಟು ಟೂಥ್‌ಪಿಕ್ಸ್

ಒಂದು ಚಮಚ ತಾಜಾ ಅಲೋವೆರಾ ಜೆಲ್

ಒಂದು ವಿಟಮಿನ್ ಇ ಮಾತ್ರೆ

ಸ್ವಲ್ಪ ನೀರು

ice

ಮಾಡುವ ವಿಧಾನ

1. ನೀರು ಮತ್ತು ಅಲೋವೆರಾ ಜೆಲ್‍ಅನ್ನು ಚೆನ್ನಾಗಿ ಮಿಶ್ರಗೊಳಿಸಿ.

2. ವಿಟಮಿನ್ ಇ ಮಾತ್ರೆಯ ರಸವನ್ನು ಮಿಶ್ರಣಕ್ಕೆ ಸೇರಿಸಿ, ಐಸ್ ಟ್ರೇಗೆ ಸುರಿಯಿರಿ.

3. ಟೋತ್ಪಿಕ್ಸ್ ಇರಿಸಿ ಗಟ್ಟಿಯಾಗಲು ಇರಿಸಿ.

4. ಬೇಕೆನಿಸಿದಾಗ ಐಸ್‍ಅನ್ನು ತೆಗೆದು ಮುಖದ ಮೇಲೆ ಮಸಾಜ್ ಅಥವಾ ಫೇಶಿಯಲ್‍ಆಗಿ ಬಳಸಬಹುದು.

ಈ ಐಸ್ ಫೇಶಿಯಲ್ ಅತ್ಯಂತ ಉಪಕಾರಿಯಾದದ್ದು. ಇದರಿಂದ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು. ಅದರಲ್ಲಿ ಕೆಲವು ಉಪಯೋಗಗಳನ್ನು ನಾವಿಲ್ಲಿ ತಿಳಿಸಿದ್ದೇವೆ. 

Ice Facial

ಚರ್ಮದ ಊತವನ್ನು ಕಡಿಮೆ ಮಾಡುತ್ತದೆ

ಅನೇಕ ಸಮಯದಲ್ಲಿ ಮಹಿಳೆಯರಿಗೆ ಸೂಕ್ತ ನಿದ್ರೆ ಇಲ್ಲದೆ ಮುಖದಲ್ಲಿ ಊತಗಳು ಕಾಣಿಸಿಕೊಳ್ಳುತ್ತವೆ. ಅಂತಹ ಸಮಯದಲ್ಲಿ ಈ ಐಸ್ ಆರೈಕೆಯನ್ನು ಮಾಡಬೇಕು. ಅದರಲ್ಲೂ ಕಣ್ಣಿನ ಕೆಳಭಾಗದಲ್ಲಿ ಊದಿಕೊಳ್ಳುವುದನ್ನು ತಡೆಯಲು ಹಾಗೂ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ರಾತ್ರಿ ಸ್ನೇಹಿತರೊಂದಿಗೆ ಹೆಚ್ಚು ಸಮಯ ಪಾರ್ಟಿ, ಸಂಭಾಷಣೆಯಲ್ಲಿ ಕಳೆದಾಗ ನಿದ್ರೆ ಇಲ್ಲದೆ ಉಂಟಾಗುವ ಉರಿಯೂತಗಳನ್ನು ನಿವಾರಿಸಲು ಸಹಾಯ ಮಾಡುವುದು.

ಸೂರ್ಯನ ಕಿರಣದ ಕಲೆ

ಸೂರ್ಯನ ಕಿರಣದಲ್ಲಿ ಹೆಚ್ಚು ಸಮಯ ಕಳೆದಾಗ ಚರ್ಮವು ಸುಡುವುದು ಅಥವಾ ಕಪ್ಪು ಕಲೆ ಉಂಟಾಗುವುದು ಸಾಮಾನ್ಯ. ಇಂತಹ ಪರಿಣಾಮವನ್ನು ತೊಡೆದುಹಾಕಲು ಐಸ್ ಆರೈಕೆ ಮಾಡಿದರೆ ಬಹುಬೇಗ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು.

facial

ಉತ್ತಮ ಸೌಂದರ್ಯವರ್ಧಕ

ಐಸ್ ಫೇಶಿಯಲ್ ಅಥವಾ ಮಸಾಜ್ ಮಾಡಿಕೊಳ್ಳುವುದರಿಂದ ಮುಖವು ತಾಜಾ ಹಾಗೂ ಆಕರ್ಷಕವಾಗಿ ಕಾಣುತ್ತದೆ. ಅಲ್ಲದೆ ಮೇಕಪ್‍ಗಳಿಗಿಂತಲೂ ಅಧಿಕ ಸಮಯದವರೆಗೆ ನಿಮ್ಮನ್ನು ಸೌಂದರ್ಯದಿಂದ ಕೂಡಿರುವಂತೆ ಮಾಡುತ್ತದೆ.

ಸುಕ್ಕುಗಳನ್ನು ತಡೆಗಟ್ಟುತ್ತದೆ

ಐಸ್ ಆರೈಕೆಯು ಚರ್ಮದ ಬಿಗಿತವನ್ನು ಹೆಚ್ಚಿಸುತ್ತದೆ. ಜೊತೆಗೆ ಸುಕ್ಕುಗಳನ್ನು ತಡೆಗಟ್ಟುತ್ತದೆ. ಐಸ್ ಫೇಶಿಯಲ್‍ಅನ್ನು ನಿಯಮಿತವಾಗಿ ಅನ್ವಯಿಸಿದರೆ ಯೌವನದಿಂದ ಕೂಡಿರುವಂತೆ ಕಾಣುತ್ತೇವೆ.

Ice

ಮೊಡವೆಗಳನ್ನು ನಿವಾರಿಸುತ್ತದೆ

ಐಸ್ ಫೇಶಿಯಲ್ ಅಥವಾ ಮಸಾಜ್ ಮಾಡುವುದರಿಂದ ಚರ್ಮದಲ್ಲಿರುವ ರಂಧ್ರಗಳು ಕಡಿಮೆಯಾಗುತ್ತವೆ ಅಥವಾ ತಗ್ಗುತ್ತವೆ. ಕೊಳೆ ಹಾಗೂ ತೈಲಾಂಶವು ರಂಧ್ರದಲ್ಲಿ ಶೇಖರಗೊಳ್ಳುವುದನ್ನು ತಡೆಯುವುದು. ಇದರಿಂದ ಮೊಡವೆಯು ನಿವಾರಣೆಯಾಗುವುದು. ಮೊಡವೆಯನ್ನು ಉಂಟು ಮಾಡುವ ಬ್ಯಾಕ್ಟೀರಿಯಾಗಳನ್ನು ಇದು ಕಡಿಮೆಗೊಳಿಸುತ್ತದೆ.

English summary

Benefits Of Ice Facial

If you are on a look-out for a quick fix to all these problems- worry not!! The solution? Well, it's Ice Facial again. Ice is the cheapest possible ingredient with a plethora of beauty benefits. This humble cube of plain water does wonders to your skin. It reduces inflammation due to hair removal procedures like threading and waxing. It soothes the skin from a tan. It shrinks the pores and reduces the chances of an acne. Here Is An Easy Method To Do An Ice Facial At Home...
Subscribe Newsletter