For Quick Alerts
ALLOW NOTIFICATIONS  
For Daily Alerts

  ಸೌಂದರ್ಯದ ರಕ್ಷಣಾ ಕವಚ-ಹಳ್ಳಿಗಾಡಿನ 'ಲೋಳೆಸರ

  By Arshad
  |

  ಲೋಳೆಸರದ ರಸ (ಅಲೋವೆರಾ) ಅಂಟಂಟಾಗಿದ್ದರೂ ಇದರ ಗುಣಗಳನ್ನು ಅರಿತವರಿಗೆ ಇದೊಂದು ತೊಂದರೆ ಎಂದೇ ಅನ್ನಿಸುವುದಿಲ್ಲ. ವಿಶೇಷವಾಗಿ ಸುಟ್ಟ ಗಾಯ ಮತ್ತು ಚಿಕ್ಕಪುಟ್ಟು ಗಾಯಗಳಿಗೆ ಇದರ ರಸವನ್ನು ಹಚ್ಚಿದರೆ ತಕ್ಷಣ ಉಪಶಮನ ದೊರಕುತ್ತದೆ. ಆದರೆ ಇದರ ಸಾಮರ್ಥ್ಯ ಇದಕ್ಕೂ ತುಂಬಾ ಹೆಚ್ಚಿದೆ.  ಮಲಬದ್ಧತೆಗೆ ಸಮಸ್ಯೆಗೆ ಮನೆಮದ್ದು-ಲೋಳೆಸರ

  ವಿಶೇಷವಾಗಿ ಸೌಂದರ್ಯವರ್ಧಕವಾಗಿ ಲೋಳೆಸರ ಮಹತ್ವದ ಪಾತ್ರ ವಹಿಸುತ್ತದೆ. ಬನ್ನಿ, ಇದನ್ನು ವಿವಿಧ ಸೌಂದರ್ಯವರ್ಧಕಗಳಾಗಿ ಹೇಗೆ ಬಳಸಬಹುದು ಎಂಬುದನ್ನು ಇಂದು ನೋಡೋಣ....  

  ತ್ವಚೆಯ ಎಲ್ಲಾ ಸಮಸ್ಯೆಗೂ ರಾಮಬಾಣ

  ತ್ವಚೆಯ ಎಲ್ಲಾ ಸಮಸ್ಯೆಗೂ ರಾಮಬಾಣ

  ಲೋಳೆಸರ ಅಂಟಾದ ದ್ರವವಾದ ಕಾರಣ ಇದನ್ನು ಕೊಂಚ ನೀರು ಬೆರೆಸಿ ಕೆಲವು ಇತರ ಪೋಷಕಾಂಶಗಳನ್ನು ಬೆರೆಸಿ ಬಳಸುವುದರಿಂದ ಇದರ ಬಳಕೆಯ ವ್ಯಾಪ್ತಿಯನ್ನು ಹೆಚ್ಚಿಸಬಹುದು. ಮೊಡವೆಗಳು,ಸುಟ್ಟ ಗಾಯ, ಗೀರುಗಳು, ಒಣಗಿದ ಚರ್ಮ, ಕಳೆಗುಂದಿದ ಚರ್ಮ, ನೆರಿಗೆಗಳು ಮೊದಲಾದವುಗಳಿಗೆ ಲೋಳೆಸರ ಉತ್ತಮ ಪರಿಹಾರವಾಗಿದೆ. ಇದು ಅಗ್ಗವೂ, ಸುಲಭವಾಗಿ ಲಭ್ಯವಾಗುವಂತೆಯೂ ಇರುವ ಕಾರಣ ಇದನ್ನು ಬಳಸದೇ ಇರಲು ನಿಮಗೆ ಯಾವುದೇ ಕಾರಣ ಉಳಿಯುವುದಿಲ್ಲ.'ಅಲೋವೆರಾ'ದ ಫೇಸ್ ಪ್ಯಾಕ್-ಸೌಂದರ್ಯದ ಕೀಲಿಕೈ!

  ಲೋಳೆಸರದ ಗಿಡ

  ಲೋಳೆಸರದ ಗಿಡ

  ಲೋಳೆಸರದ ಗಿಡದ ಎಲೆಗಳು ತುಂಬಾ ದಪ್ಪನಾಗಿದ್ದು ನೀರಿನಿಂದ ಕೂಡಿರುತ್ತದೆ. ಇದನ್ನು ಕೋಡು ಎಂದು ಕರೆಯಬಹುದು. ಕೋಡನ್ನು ಮುರಿದರೆ ಒಸರುವ ರಸ ಅಂಟಾಗಿದ್ದು ಇದನ್ನು aloe latex ಎಂದು ಕರೆಯುತ್ತಾರೆ. ಇದರ ಗುಣಗಳ ಕಾರಣದಿಂದಲೇ ಇದನ್ನು ಅಮರತ್ವದ ಗಿಡ ಎಂಬ ವಿಶೇಷಣವನ್ನೂ ನೀಡಲಾಗುತ್ತದೆ. ಈ ವಿಶೇಷಣ ಸಿಗಬೇಕಾದರೆ ಇದರ ಗುಣಗಳು ನಿಜಕ್ಕೂ ಮಹತ್ವದ್ದೇ ಇರಬೇಕಲ್ಲವೇ? ಮುಂದೆ ಓದಿ.... ಲೋಳೆಸರ ಎಂಬ ಬಹುಮೂಲ್ಯ ಸಸ್ಯ ಸಂಜೀವಿನಿ

  ವೃದ್ಧಾಪ್ಯವನ್ನು ದೂರಗೊಳಿಸಲು

  ವೃದ್ಧಾಪ್ಯವನ್ನು ದೂರಗೊಳಿಸಲು

  ವೃದ್ಧಾಪ್ಯ ಹತ್ತಿರಾಗುತ್ತಿರುವ ಪ್ರಥಮ ಚಿಹ್ನೆ ಎಂದರೆ ಮುಖದ ಚರ್ಮದಲ್ಲಿ ನೆರಿಗೆಗಳು ಮೂಡುವುದು. ಇದಕ್ಕೆ ಚರ್ಮದಲ್ಲಿ ಆರ್ದ್ರತೆ ಕಡಿಮೆಯಾಗಿ ಸೆಳೆತ ಕಡಿಮೆಯಾಗುವುದು ಪ್ರಮುಖ ಕಾರಣ. ಆದ್ದರಿಂದ ಚರ್ಮ ಸದಾ ಆರ್ದ್ರತೆ ಪಡೆಯುತ್ತಿರಬೇಕು. ಈ ಕೊರತೆಯನ್ನು ಲೋಳೆಸರ ಸಮರ್ಥವಾಗಿ ಪೂರೈಸುತ್ತದೆ. ಅಲ್ಲದೇ ಈ ರಸ ಎಲ್ಲ ಬಗೆಯ ತ್ವಚೆಗಳಿಗೆ ಹೊಂದುವ ಕಾರಣ ಯಾರು ಬೇಕಾದರೂ ಇದನ್ನು ಉಪಯೋಗಿಸಬಹುದು.

  ಹೆರಿಗೆಯ ಸೆಳೆತದ ಗುರುತುಗಳನ್ನು ನಿವಾರಿಸಲು

  ಹೆರಿಗೆಯ ಸೆಳೆತದ ಗುರುತುಗಳನ್ನು ನಿವಾರಿಸಲು

  ಸೆಳೆತದ ಗುರುತುಗಳು ಹೆರಿಗೆಯ ಬಳಿಕ ಅನಿವಾರ್ಯ. ಇವು ಕಾಲಕಳೆದಂತೆ ತನ್ನಿಂತಾನೇ ಸಹಜವರ್ಣಕ್ಕೆ ಬರುತ್ತವೆ. ಆದರೆ ಪೂರ್ಣಪ್ರಮಾಣದಲ್ಲಿ ಸಹಜವರ್ಣ ಪಡೆಯಲು ವರ್ಷಗಳೇ ಬೇಕಾಗಬಹುದು. ಆದರೆ ಅಲ್ಲಿಯವರೆಗೆ ಈ ಗುರುತನ್ನು ಇತರರ ಎದುರು ಪ್ರದರ್ಶಿಸಲು ಮುಜುಗರವಾಗಬಹುದು. ಈ ಕ್ರಿಯೆಯನ್ನು ಚುರುಕುಗೊಳಿಸಿ ಸಹಜವರ್ಣ ಶೀಘ್ರವಾಗಿ ಬರಲು ಲೋಳೆಸರ ಮತ್ತು ವಿಟಮಿನ್ ಇ ಯುಕ್ತ ಎಣ್ಣೆಯನ್ನು ಬೆರೆಸಿ ನಿತ್ಯವೂ ಈ ಗುರುತುಗಳಿಗೆ ಹಚ್ಚುತ್ತಾ ಬಂದರೆ ಸಹಜವರ್ಣ ಪಡೆಯುವ ಸಮಯ ಶೀಘ್ರವಾಗಿ ಆಗಮಿಸುತ್ತದೆ.

  ಮೊಡವೆಗಳಿಗೆ

  ಮೊಡವೆಗಳಿಗೆ

  ಪ್ರತಿದಿನ ಎದ್ದಾಗ ಹೊಸ ಮೊಡವೆ ಮೂಡುವ ಚರ್ಮದವರಿಗೆ ಲೋಳೆಸರ ಅತ್ಯುತ್ತಮ ಆಯ್ಕೆಯಾಗಿದೆ. ಲೋಳೆಸರ ಚರ್ಮದ ಸೂಕ್ಷ್ಮರಂಧ್ರದಲ್ಲಿ ಇಳಿದು ಚರ್ಮದಾಳದ ಸೋಂಕು ಮತ್ತು ಉರಿಯೂತಗಳನ್ನು ನಿವಾರಿಸಿ ಮೊಡವೆಗಳಾಗದಂತೆ ತಡೆಯುತ್ತದೆ. ಅಲ್ಲದೇ ಚರ್ಮದ ಉರಿಯನ್ನು ತಗ್ಗಿಸಿ ಕಾಂತಿಯನ್ನು ಹೆಚ್ಚಿಸುತ್ತದೆ.ಮೊಡವೆ ಸಮಸ್ಯೆಗೆ ಅಂಗೈಯಲ್ಲಿಯೇ ಇದೆ ಪರಿಹಾರ!

  ತಲೆಹೊಟ್ಟು ನಿವಾರಿಸಲು

  ತಲೆಹೊಟ್ಟು ನಿವಾರಿಸಲು

  ತಲೆಹೊಟ್ಟಿನಲ್ಲಿ ಎರಡು ವಿಧಗಳಿವೆ. ಮೊದಲನೆಯದು ಎಣ್ಣೆಚರ್ಮದವರ ತಲೆಹೊಟ್ಟಾಗಿದ್ದು ಇದು ಹೊರಚರ್ಮಕ್ಕೆ ಅಂಟಿಕೊಂಡೇ ಇದ್ದು ಸುಲಭವಾಗಿ ಪಕಳೆ ಏಳುವುದಿಲ್ಲ. ಇನ್ನೊಂದು ಒಣಚರ್ಮದವರ ತಲೆಹೊಟ್ಟಾಗಿದ್ದು ಇದು ಚಿಕ್ಕ ಚಿಕ್ಕ ಪಕಳೆಗಳಂತೆ ಏಳುತ್ತವೆ. ಆದರೆ ಲೋಳೆಸರ ಇವೆರಡು ಬಗೆಯ ತಲೆಹೊಟ್ಟು ನಿವಾರಿಸಲು ಸಮರ್ಥವಾಗಿದೆ.ತಲೆಹೊಟ್ಟಿನ ನಿವಾರಣೆಗೆ-ಬಹೂಪಯೋಗಿ 'ಲೋಳೆಸರ'

  ತಲೆಗೆ ಹೆಚ್ಚಿಕೊಂಡು ಗರಿಷ್ಠ ಒಂದು ಗಂಟೆಯವರೆಗೆ ಒಣಗಲು ಬಿಡಿ

  ತಲೆಗೆ ಹೆಚ್ಚಿಕೊಂಡು ಗರಿಷ್ಠ ಒಂದು ಗಂಟೆಯವರೆಗೆ ಒಣಗಲು ಬಿಡಿ

  ಇದಕ್ಕಾಗಿ ಲೋಳೆಸರದ ಅಂಟುರಸವನ್ನು ನೇರವಾಗಿ, ಏನನ್ನೂ ಮಿಶ್ರಣ ಮಾಡದೇ ತಲೆಗೆ ಹೆಚ್ಚಿಕೊಂಡು ಗರಿಷ್ಠ ಒಂದು ಗಂಟೆಯವರೆಗೆ ಒಣಗಲು ಬಿಡಬೇಕು. ಬಳಿಕ ನಿಮ್ಮ ನಿತ್ಯದ ಕಂಡೀಶನರ್ ಬಳಸಿ ತಲೆ ತೊಳೆದುಕೊಳ್ಳಬೇಕು. ಕೆಲವೇ ದಿನಗಳಲ್ಲಿ ತಲೆಹೊಟ್ಟು ತಲೆಯಿಂದ ಮಾಯವಾಗಿರುವುದನ್ನು ನೋಡಿ ಚಕಿತರಾಗುತ್ತೀರಿ.

   

  English summary

  Beauty Treatments You Can Make With Aloe Vera Gel

  Aloe vera gel is derived from the aloe vera plant and it produces the gel and the sap, which is also known as aloe latex. Aloe vera is also known as the plant of immortality, so it must be something really powerful and effective. So, keep reading to find out about the beauty treatments you can do with aloe vera gel at home.
  Story first published: Friday, February 24, 2017, 23:31 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more