ಚೀನಾ ಸುಂದರಿಯರ 'ಸೌಂದರ್ಯದ' ಸೀಕ್ರೆಟ್‌ನ ಗುಟ್ಟು-ರಟ್ಟು...

Posted By: Hemanth
Subscribe to Boldsky

ಏಷ್ಯಾದ ಹೆಚ್ಚಿನ ರಾಷ್ಟ್ರಗಳಲ್ಲಿ ಹವಾಮಾನವು ಒಂದೇ ರೀತಿಯಾಗಿದ್ದರೂ ಇಲ್ಲಿ ವಾಸಿಸುವ ಜನರ ದೇಹವು ಒಬ್ಬೊಬ್ಬರದ್ದು ಒಂದೊಂದು ರೀತಿಯಲ್ಲಿರುತ್ತದೆ. ಜನರ ದೇಹವನ್ನು ನೋಡಿ ಅವರು ಈ ದೇಶದವರು ಎಂದು ಹೇಳಬಹುದು. ಅದರಲ್ಲೂ ಚೀನಾದವರನ್ನು ಬೇಗನೆ ಗುರುತಿಸಬಹುದು. ಚೀನಾದವರು ತಮ್ಮ ದೇಹ ಹಾಗೂ ಸೌಂದರ್ಯವನ್ನು ಚೆನ್ನಾಗಿ ಕಾಪಾಡಿಕೊಂಡಿರುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಲ್ಲಿನ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವವರು ಎನ್ನಲಾಗಿದೆ.

ಯಾಕೆಂದರೆ ಚೀನಾದಲ್ಲಿ ಬೊಜ್ಜು ದೇಹದ ಮಹಿಳೆಯರನ್ನು ಕಾಣುವುದು ತುಂಬಾ ಕಡಿಮೆ. ಸಪೂರ ದೇಹ, ಬಿಳಿ ಮೈ ಹಾಗೂ ಒಳ್ಳೆಯ ಸೌಂದರ್ಯ ಹೊಂದಿರುವ ಚೀನಾದ ಮಹಿಳೆಯರ ಸೌಂದರ್ಯದ ಹಿಂದೆ ಕೆಲವೊಂದು ರಹಸ್ಯಗಳು ಅಡಗಿಕೊಂಡಿದೆ. ಸಾವಿರಾರು ವರ್ಷಗಳಿಂದ ಚೀನಾದ ಮಹಿಳೆಯರು ತಮ್ಮ ಸೌಂದರ್ಯದ ಬಗ್ಗೆ ಒಳ್ಳೆಯ ಕಾಳಜಿ ವಹಿಸಿಕೊಂಡಿದ್ದಾರೆ. 

ಯಾರೇ ಕೂಗಾಡಲಿ, ಚೀನಾದ ಜನರು ಇರುವುದೇ ಹೀಗೆ!

ಇದನ್ನು ಈಗಲೂ ಅವರು ಮುಂದುವರಿಸಿಕೊಂಡು ಹೋಗುತ್ತಾ ಇದ್ದಾರೆ. ಭಾರತ ಹಾಗೂ ಚೀನಾದ ಹವಾಮಾನವು ಒಂದೇ ರೀತಿಯದ್ದಾಗಿರುವ ಕಾರಣ ಇಲ್ಲಿ ಸಾಮಾನ್ಯವಾಗಿ ಬೆಳೆ ಹಾಗೂ ಗಿಡಗಳು ಒಂದೇ ಆಗಿರುತ್ತದೆ. ಕೂದಲಿನಿಂದ ಹಿಡಿದು ತ್ವಚೆಯ ತನಕ ಪ್ರತಿಯೊಂದು ಸೌಂದರ್ಯ ರಹಸ್ಯಗಳು ಚೀನಾದ ಮಹಿಳೆಯರಲ್ಲಿದೆ. ಚೀನಾದ ಮಹಿಳೆಯರು ಬಳಸುವಂತಹ ಕೆಲವೊಂದು ಸೌಂದರ್ಯ ಸಲಹೆಗಳನ್ನು ಬಳಸಿಕೊಳ್ಳುವುದು ಹೇಗೆ ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ. ಇದನ್ನು ತಿಳಿದು ಫಲಿತಾಂಶ ಪಡೆಯಿರಿ...

ಚರ್ಮಕ್ಕೆ ಟೋನರ್

ಚರ್ಮಕ್ಕೆ ಟೋನರ್

ಚರ್ಮಕ್ಕೆ ಟೋನರ್ ಆಗಿ ಚೀನಾದ ಮಹಿಳೆಯರು ಯಾವಾಗಲೂ ಅಡುಗೆ ಮನೆಯಲ್ಲಿ ಸಿಗುವಂತಹ ಅಕ್ಕಿ ಬಳಸುತ್ತಾರೆ. ನೀವು ಕೂಡ ಅಕ್ಕಿ ನೀರನ್ನು ಚರ್ಮದ ಟೋನರ್ ಆಗಿ ಬಳಸಿಕೊಳ್ಳಬಹುದು.

ಅಕ್ಕಿ ನೀರಿಗೆ ಬೇಕಾಗುವ ಸಾಮಗ್ರಿಗಳು

ಅಕ್ಕಿ ನೀರಿಗೆ ಬೇಕಾಗುವ ಸಾಮಗ್ರಿಗಳು

*ಪಾಲಿಷ್ ಮಾಡದೆ ಇರುವ ಒಂದು ಸಣ್ಣ ಪಾತ್ರೆ ಅಕ್ಕಿ ಮತ್ತು ಒಂದು ದೊಡ್ಡ ಕಪ್ ನೀರು.

*ಅಕ್ಕಿ ಸಂಪೂರ್ಣವಾಗಿ ನೀರಿನ ಒಳಗೆ ಇರುವಂತೆ ಅದನ್ನು ರಾತ್ರಿ ನೀರಿನಲ್ಲಿ ಹಾಕಿ ನೆನೆಸಿ.

*ಮರುದಿನ ಈ ಮಿಶ್ರಣವನ್ನು ಕಲಸಿಕೊಂಡು ತೆಗೆದಾಗ ನಿಮಗೆ ಬಿಳಿಯ ನೀರು ಕಂಡುಬರುವುದು.

*ಈ ನೀರನ್ನು ಸೋಸಿಕೊಂಡಾಗ ಸಿಗುವಂತಹ ಬಿಳಿಯ ನೀರು ತ್ವಚೆಗೆ ಕಾಂತಿ ನೀಡುವಂತಹ ಕೆಲಸ ಮಾಡುವುದು. ಚೀನಾದ ಮಹಿಳೆಯರು ಇದನ್ನೇ ಮಾಡುತ್ತಾರೆ.

ಚರ್ಮದ ಬಿಳಿಯಾಗಲು: ಪುದೀನಾ ಎಲೆಯ ಪೇಸ್ಟ್

ಚರ್ಮದ ಬಿಳಿಯಾಗಲು: ಪುದೀನಾ ಎಲೆಯ ಪೇಸ್ಟ್

ಈ ಪೇಸ್ಟ್ ಮಾಡಿಕೊಳ್ಳಲು ತಾಜಾ ಪುದೀನಾ ಎಲೆಗಳನ್ನು ಬಳಸಿಕೊಳ್ಳಬೇಕು. ಇದನ್ನು ತಯಾರಿಸಿದ ತಕ್ಷಣ ಬಳಸಿಕೊಳ್ಳಬೇಕು. ಫ್ರಿಡ್ಜ್ ನಲ್ಲಿ ಇಡಬಾರದು. ಪುದೀನಾ ಎಲೆಯ ಪೇಸ್ಟ್ ಮಾಡಿ ಒಂದು ಸಲಕ್ಕೆ ಬಳಸಿಕೊಳ್ಳಿ. ಮರುದಿನ ಮತ್ತೆ ತಾಜಾ ಪುದೀನಾ ಎಲೆಗಳನ್ನು ಬಳಸಿ.

ತಯಾಸುವ ವಿಧಾನ

*1 ಕಟ್ಟು ಪುದೀನಾ ಎಲೆಗಳು

*ಒಂದು ಸಣ್ಣ ಪಾತ್ರೆಯಲ್ಲಿ ನೀರು ಹಾಕಿಕೊಂಡು ಅದಕ್ಕೆ ಪುದೀನಾ ಎಲೆಗಳನ್ನು ಹಾಕಿ ಎರಡನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ.

*ಮೊದಲ ಸಲ ಇದು ತುಂಬಾ ಕಡು ಬಣ್ಣವಾಗಿ ಕಾಣಿಸಿಕೊಳ್ಳಬಹುದು. ಆದರೆ ಸ್ವಲ್ಪ ನೀರು ಹಾಕಿದರೆ ಮತ್ತೆ ತೆಳುವಾಗುವುದು. ಇದರಿಂದ ತೆಳುವಾದ ಪುದೀನಾ ಪೇಸ್ಟ್ ಮಾಡಬಹುದು.

*ಇದನ್ನು ದೇಹಕ್ಕೆ ಸಂಪೂರ್ಣವಾಗಿ ಹಚ್ಚಿಕೊಳ್ಳಿ. ಒಣಗಿದ ಬಳಿಕ ಪುದೀನಾ ನೀರಿನಿಂದ ತೊಳೆಯಿರಿ.

ವಯಸ್ಸಾಗುವ ಲಕ್ಷಣ ತಡೆಯಲು: ಬಾದಾಮಿ ಹಾಲು

ವಯಸ್ಸಾಗುವ ಲಕ್ಷಣ ತಡೆಯಲು: ಬಾದಾಮಿ ಹಾಲು

ಬೇಕಾಗುವ ಸಾಮಗ್ರಿಗಳು

ಒಂದು ಸಣ್ಣ ಪಾತ್ರೆಯಲ್ಲಿ ಬಾದಾಮಿ ಹಾಲು

1 ಚಮಚ ಜೇನುತುಪ್ಪ

ಒಂದು ಚಮಚ ಅರಶಿನ

*ಬಾದಾಮಿ ಹಾಲು, ಜೇನುತುಪ್ಪ ಮತ್ತು ಅರಶಿನ ಹುಡಿಯನ್ನು ಮಿಶ್ರಣ ಮಾಡಿಕೊಳ್ಳಿ. ಪೇಸ್ಟ್ ತುಂಬಾ ಒಣವಾಗಿದೆಯೆಂದು ಅನಿಸಿದರೆ ಮತ್ತಷ್ಟು ಬಾದಾಮಿ ಹಾಲು ಹಾಕಿ.

*ಹೆಚ್ಚು ನೀರಾಗಿದ್ದರೆ ಜೇನುತುಪ್ಪ ಹಾಕಿ. ಅರಶಿನ ಹೆಚ್ಚು ಹಾಕಬೇಡಿ. ಯಾಕೆಂದರೆ ಚರ್ಮವು ಹಳದಿಯಾಗಿ ಕಾಣಿಸಬಹುದು.

*ಬಾದಾಮಿ ಹಾಲಿನ ಈ ಫೇಸ್ ಪ್ಯಾಕ್ ನ್ನು ಮುಖಕ್ಕೆ ಸಂಪೂರ್ಣವಾಗಿ ಹಚ್ಚಿಕೊಳ್ಳಿ. ಒಣಗಿದ ಬಳಿಕ ನೀರಿನಿಂದ ತೊಳೆಯಿರಿ. ನಿಯಮಿತವಾಗಿ ಬಳಸಿದರೆ ಫಲಿತಾಂಶ ಸಿಗುವುದು.

ಬಾದಾಮಿ-ಹಾಲಿನ ಫೇಸ್ ಪ್ಯಾಕ್, ಕಡಿಮೆ ಖರ್ಚು ಅಧಿಕ ಲಾಭ!

ಫೇಶಿಯಲ್: ಮೊಟ್ಟೆಯ ಬಿಳಿಭಾಗ

ಫೇಶಿಯಲ್: ಮೊಟ್ಟೆಯ ಬಿಳಿಭಾಗ

ಫೇಶಿಯಲ್ ವಿಚಾರಕ್ಕೆ ಬಂದರೆ ಚೀನಾದ ಮಹಿಳೆಯರು ಮೊಟ್ಟೆಯ ಬಿಳಿ ಲೋಳೆಯನ್ನು ಬಳಸುತ್ತಾರೆ. ಸ್ವಲ್ಪ ಸಮಯ ನಿಮ್ಮಲ್ಲಿದ್ದರೆ ಆಗ ಮೊಟ್ಟೆಯ ಬಿಳಿ ಲೋಳೆಯ ಫೇಶಿಯಲ್ ಅನ್ನು ಸುಲಭವಾಗಿ ತಯಾರಿಸಬಹುದು.

ಫೇಶಿಯಲ್: ಮೊಟ್ಟೆಯ ಬಿಳಿಭಾಗ

ಫೇಶಿಯಲ್: ಮೊಟ್ಟೆಯ ಬಿಳಿಭಾಗ

2 ಮೊಟ್ಟೆಯ ಬಿಳಿ ಲೋಳೆ( ಕೇವಲ ಮುಖಕ್ಕೆ)

2 ಹನಿ ಸಾರಭೂತ ತೈಲ

*ಮೊಟ್ಟೆ ಮತ್ತು ಲೋಳೆಯನ್ನು ಬೇರೆ ಮಾಡಿ. ಮೊಟ್ಟೆಯ ಬಿಳಿ ಲೋಳೆಯನ್ನು ಒಂದು ಸಣ್ಣ ಪಾತ್ರೆಗೆ ಹಾಕಿಕೊಂಡು ಕಲಿಸಿಕೊಳ್ಳಿ. ಇದಕ್ಕೆ ಎರಡು ಚಮಚ ಸಾರಭೂತ ತೈಲ ಸೇರಿಸಿಕೊಳ್ಳಿ. ಯಾಕೆಂದರೆ ಮೊಟ್ಟೆಯ ವಾಸನೆ ಕೆಲವರಿಗೆ ಆಗಿಬರುವುದಿಲ್ಲ. *ಮೊಟ್ಟೆಯ ಬಿಳಿ ಲೋಳೆಯು ದಪ್ಪ ಆಗುವ ತನಕ ಅದನ್ನು ಕಲಸಿಕೊಳ್ಳಿ.

*ಮುಖ ಹಾಗೂ ಕುತ್ತಿಗೆ ಭಾಗಕ್ಕೆ ಮೊಟ್ಟೆಯ ಲೋಳೆಯನ್ನು ಮಸಾಜ್ ಮಾಡಿ.

*15 ನಿಮಿಷ ಕಾಲ ಹಾಗೆ ಬಿಡಿ. ಫೇಸ್ ವಾಶ್ ಹಾಕಿಕೊಂಡು ತಂಪಾದ ನೀರಿನಿಂದ ಮುಖ ತೊಳೆಯಿರಿ. ಅಕ್ಕಿ ನೀರಿನ ಟೋನರ್ ಅನ್ನು ಬಳಸಿಕೊಳ್ಳಬಹುದು(ನೀವು ತಯಾರಿಸಿದ್ದರೆ)

ಹಸಿರು ಟೀ

ಹಸಿರು ಟೀ

ಹಸಿರು ಟೀ ನಮಗೆ ಹೊಸದಾಗಿರಬಹುದು. ಆದರೆ ಚೀನೀಯರು ನೂರಾರು ವರ್ಷಗಳಿಂದ ಇದನ್ನು ಬಳಸುತ್ತಾ ಬಂದಿದ್ದಾರೆ. ಇದರಲ್ಲಿ ಉತ್ತಮ ಪ್ರಮಾಣದಲ್ಲಿರುವ ಆಂಟಿ ಆಕ್ಸಿಡೆಂಟುಗಳು ಚರ್ಮದ ಸೆಳೆತವನ್ನು ಹೆಚ್ಚಿಸಲು ನೆರವಾಗುತ್ತದೆ. ಪರಿಣಾಮವಾಗಿ ಚರ್ಮದ ನೆರಿಗೆ ಮೂಡುವುದು ತಡವಾಗಿ ವೃದ್ಧಾಪ್ಯವನ್ನು ದೂರಾಗಿಸಬಹುದು.

ಮಸಾಜ್

ಮಸಾಜ್

ನಿಯಮಿತವಾಗಿ ಮೈಗೆ ಮತ್ತು ಮುಖಕ್ಕೆ ವೃತ್ತಿಪರರಿಂದ ಮಸಾಜ್ ಸೇವೆ ಪಡೆದುಕೊಳ್ಳುವ ಮೂಲಕ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ ಹಾಗೂ ಚರ್ಮದ ಸೆಳೆತವೂ ಹೆಚ್ಚುತ್ತದೆ. ಚೀನಾದ ಮಹಿಳೆಯರು ಸೌಂದರ್ಯ ವೃದ್ಧಿಗಾಗಿ ಮಸಾಜ್ ಅನ್ನು ಒಂದು ವೇಳಾಪಟ್ಟಿಯಂತೆ ಅನುಸರಿಸುತ್ತಾ ಬರುವ ಮೂಲಕ ತಾರುಣ್ಯವನ್ನು ಕಾಪಾಡಿಕೊಳ್ಳುತ್ತಾರೆ.

ಅರಿಶಿನ ಪುಡಿ

ಅರಿಶಿನ ಪುಡಿ

ಅರಿಶಿನ ಪುಡಿ ಕೇವಲ ಭಾರತದಲ್ಲಿ ಮಾತ್ರವಲ್ಲ, ಚೀನಾದಲ್ಲಿಯೂ ಬಹಳಷ್ಟು ಪ್ರಸಿದ್ಧಿ ಪಡೆದಿದೆ. ಚರ್ಮದ ಬಣ್ಣ ಬೆಳಗಲು, ಕಲೆಗಳನ್ನು ನಿವಾರಿಸಲು ಮತ್ತು ವಿಶೇಷವಾಗಿ ಸತ್ತ ಜೀವಕೋಶಗಳನ್ನು ನಿವಾರಿಸಲು, ತನ್ಮೂಲಕ ಚರ್ಮದ ಬಣ್ಣ ಗೌರವರ್ಣಕ್ಕೆ ತಿರುಗಲು ಅರಿಸಿನವನ್ನು ಅರೆದು ತಯಾರಿಸಿದ ಲೇಪನವನ್ನು ಅವರು ಬಳಸುತ್ತಾರೆ.

ಬ್ಲ್ಯಾಕ್ ಹೆಡ್ ಸಮಸ್ಯೆಯೇ? ಚೀನೀಯರ ಚಿಕಿತ್ಸೆ ಪ್ರಯತ್ನಿಸಿ!

For Quick Alerts
ALLOW NOTIFICATIONS
For Daily Alerts

    English summary

    Beauty Tips From China For You To Try

    Beauty secrets of Chinese women exist since centuries and are being continued by the present generations as well. The two reasons why these primitive Chinese beauty tips have earned global fame are - each of the Chinese beauty treatments definitely work and two, to do these the ingredients and the methodology are simple.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more