ತಕ್ಷಣದಲ್ಲಿ ಸೌಂದರ್ಯವನ್ನು ಹೆಚ್ಚಿಸುವ ಸುಲಭ ಸೌಂದರ್ಯ ಸಲಹೆ ಇಲ್ಲಿದೆ...

By Divya Pandith
Subscribe to Boldsky

ರಾತ್ರಿ ಮಲಗುವ ಮುನ್ನ ಸೂಕ್ತ ರೀತಿಯಲ್ಲಿ ತ್ವಚೆಯ ಆರೈಕೆ ಮಾಡದಿದ್ದರೆ ಅಥವಾ ಸೂಕ್ತ ಅವಧಿಯ ತನಕ ನಿದ್ರೆ ಆಗದಿದ್ದಾಗ ಮುಂಜಾನೆ ನಮ್ಮ ಮುಖ ಹೆಚ್ಚು ಆಯಾಸ ಗೊಂಡಿರುವಂತೆ ಕಾಣುತ್ತದೆ. ತ್ವಚೆಯಲ್ಲೂ ಯಾವುದೇ ಆಕರ್ಷಣೆಯಿಲ್ಲದೆ ಮಂಕಾದ ಕಳೆ ತೋರುತ್ತದೆ. ಅಂತಹ ಸಂದರ್ಭದಲ್ಲಿ ನೀರನ್ನು ಕುಡಿಯುವುದು, ತಾಜಾ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದರಿಂದ ಮುಖದಲ್ಲಿ ಚೈತನ್ಯ ಹಾಗೂ ಹೊಸ ಹೊಳಪನ್ನು ಪಡೆಯಬಹುದು. ಕೆಲವು ವ್ಯಾಯಾಮಗಳ ಮೂಲಕವೂ ನಮ್ಮ ದೇಹ ಹಾಗೂ ಮುಖದ ಚೈತನ್ಯವನ್ನು ಹೆಚ್ಚಿಸಬಹುದು.

ತ್ವಚೆಯ ಆಳದಿಂದ ಕಾಂತಿಯನ್ನು ಪಡೆದಾಗ ಚರ್ಮವು ಹೆಚ್ಚು ಆರೋಗ್ಯ ಹಾಗೂ ಆಕರ್ಷಣೆಯಿಂದ ಕೂಡಿರುತ್ತದೆ. ಈ ಬಗೆಯ ನೈಸರ್ಗಿಕ ಕಾರಣದಿಂದ ಚರ್ಮದ ಆರೋಗ್ಯ ಕಾಪಾಡಲು ನಾವು ಅನೇಕ ಬಾರಿ ಎಡವುತ್ತೇವೆ. ಹಾಗಾಗಿ ಚರ್ಮದ ಕುರಿತು ನಾವೆಷ್ಟೇ ಆರೈಕೆ ಅಥವಾ ಕಾಳಜಿ ಮಾಡಿದರೂ ತ್ವಚೆಯು ಮಂಕಾಗಿ, ಜೀವವಿಲ್ಲದ ಕಳೆಯನ್ನು ಹೊಂದಿರುತ್ತದೆ. ದಣಿದಂತಿರುವ ತ್ವಚೆಗೆ ತಕ್ಷಣವೇ ಮರುಜೀವ ತುಂಬಿ, ಪ್ರಕಾಶಮಾನವಾಗಿ ಕಾಣುವಂತೆ ಮಾಡಲು ವಿಭಿನ್ನವಾದ ಸೌಂದರ್ಯ ಆರೈಕೆಯ ಬಗೆಯನ್ನು ಅರಿಯಬೇಕಾದ ಅಗತ್ಯವಿದೆ ಎನ್ನುವ ಭಾವ ಉಂಟಾಗುವುದು.

ಸೌಂದರ್ಯ ಹಾಗೂ ತ್ವಚೆಯ ಆರೋಗ್ಯವೂ ಉತ್ತಮವಾಗಿರಲು ಅಥವಾ ಸದಾ ತಾಜಾ ತನದಿಂದ ಕೂಡಿರುವಂತೆ ಕಾಣಲು ಕೇವಲ ಮೇಕಪ್ ಮಾಡುವುದರಿಂದ ಮಾತ್ರ ಸಾಧ್ಯವಿಲ್ಲ. ಬದಲಿಗೆ ನಮ್ಮ ದಿನಚರಿಯ ಕ್ರಮದಲ್ಲಿ ಹಾಗೂ ಹವ್ಯಾಸದಲ್ಲಿ ಬದಲಾವಣೆಯನ್ನು ಕಂಡುಕೊಳ್ಳಬೇಕು. ನಿತ್ಯವೂ ತಡರಾತ್ರಿಯವರೆಗೆ ಇರುವುದನ್ನು ತಪ್ಪಿಸಬೇಕು. ಧೂಮಪಾನ ಹಾಗೂ ಕುಡಿತದಿಂದ ದೂರವಿರಬೇಕು. ವ್ಯಾಯಾಮ ಮಾಡುವುದು ಅಥವಾ ದೇಹವನ್ನು ಸ್ವಲ್ಪ ಮಟ್ಟಿಗಾದರೂ ದಂಡಿಸಬೇಕು. ಆದಷ್ಟು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದರ ಮೂಲಕ ಸೌಂದರ್ಯದ ಕಾಳಜಿಯನ್ನು ಮಾಡಬಹುದು.

ಮುಖದ ಸೌಂದರ್ಯ ಹೆಚ್ಚಿಸಬೇಕೇ? ಇಲ್ಲಿದೆ ನೋಡಿ 15 ಬ್ಯೂಟಿ ಟಿಪ್ಸ್

ಉತ್ತಮ ಹವ್ಯಾಸ ಹಾಗೂ ಆರೋಗ್ಯಕರ ಜೀವನಶೈಲಿಯ ಅಳವಡಿಕೆಯಾದರೆ ತ್ವಚೆಯಲ್ಲಾಗುವ ಬದಲಾವಣೆ ಅಥವಾ ಆಯಾಸಗೊಂಡ ಕಳೆಗೆ ತ್ವರಿತವಾಗಿ ಜೀವ ಬರುವುದು. ದಣಿದ ತ್ವಚೆಗೆ ಸೂಕ್ತ ರೀತಿಯ ಆರೈಕೆ ಮಾಡುವುದರಿಂದ ಬಹುಬೇಗ ತಾಜಾತನದ ತ್ವಚೆಯನ್ನು ಪಡೆಯಬಹುದು. ಅದು ಹೇಗೆ? ಅದಕ್ಕಾಗಿ ಯಾವೆಲ್ಲಾ ಕ್ರಮವನ್ನು ಕೈಗೊಳ್ಳಬೇಕು ಎನ್ನುವ ಸಂಪೂರ್ಣವಾದ ವಿವರಣೆ ಲೇಖನದ ಮುಂದಿನ ಭಾಗದಲ್ಲಿದೆ...

ತೆಳುವಾಗಿ ಬ್ಲಷ್ ಮಾಡಿ

ತೆಳುವಾಗಿ ಬ್ಲಷ್ ಮಾಡಿ

ನಿಮ್ಮ ಮುಖ ಮತ್ತು ತ್ವಚೆ ದಣಿದ ನೋಟವನ್ನು ಹೊಂದಿದ್ದರೆ, ನಿಮ್ಮ ಕೆನ್ನೆಯ ಭಾಗದಲ್ಲಿ ಸ್ವಲ್ಪ ರೋಸಿ ಕ್ರೀಮ್ (ಗುಲಾಬಿ ಬಣ್ಣ)ಅನ್ನು ತೆಳುವಾಗಿ ಬ್ಲಷ್ ಮಾಡಿಕೊಳ್ಳಬೇಕು. ಇದರಿಂದ ನಿಮ್ಮ ನೋಟ ಹಾಗೂ ತ್ವಚೆಯ ಮಟ್ಟವು ಹೆಚ್ಚು ತಾಜಾತನದಿಂದ ಇರುವಂತೆ ಕಾಣುತ್ತದೆ. ಮುಖದಲ್ಲಿ ಹೊಸ ಚೈತನ್ಯ ಹಾಗೂ ತ್ವಚೆಯು ಹೆಚ್ಚು ಆರೋಗ್ಯ ಪೂರ್ಣದಿಂದ ಕೂಡಿರುವಂತೆ ಕಾಣುತ್ತದೆ. ದಣಿದ ಕಣ್ಣುಗಳಿಂದಲೂ ಮುಖವು ಆಯಾಸದ ಕಳೆಯನ್ನು ತೋರ್ಪಡಿಸುವ ಸಾಧ್ಯತೆ ಇರುತ್ತದೆ ಎನ್ನುವುದನ್ನು ಮರೆಯಬಾರದು.

ಕಣ್ಣ ರೆಪ್ಪೆಗಳಿಗೆ ಆರೈಕೆ

ಕಣ್ಣ ರೆಪ್ಪೆಗಳಿಗೆ ಆರೈಕೆ

ಮುಖದ ಸೌಂದರ್ಯ ಹೆಚ್ಚಿಸುವುದು ಹಾಗೂ ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡುವಲ್ಲಿ ಕಣ್ಣಿನ ರೆಪ್ಪೆಗಳು ಪ್ರಮುಖ ಪಾತ್ರವಹಿಸುತ್ತವೆ. ಕಣ್ಣು ಮುಚ್ಚುವುದು ಮತ್ತು ತೆರೆಯುವ ಪ್ರಕ್ರಿಯೆಯಿಂದ ಕಣ್ಣು ಹೆಚ್ಚು ಆಕರ್ಷಣೆಗೆ ಒಳಪಡಿಸುವುದು. ಹಾಗಾಗಿ ಕಣ್ ರೆಪ್ಪೆಗಳಿಗೆ ಕರ್ಲಿಂಗ್ ಮತ್ತು ಮಸ್ಕರಗಳನ್ನು ಅನ್ವಯಿಸಬೇಕು. ಆಗ ಕಣ್ಣಿನ ಆಕಾರವು ಮುಖದಲ್ಲಿ ಎದ್ದು ತೋರುತ್ತದೆ. ಜೊತೆಗೆ ಮುಖದ ಸೌಂದರ್ಯ ಇಮ್ಮಡಿಗೊಳ್ಳುತ್ತದೆ.

ಕನ್ಸೀಲರ್ ಅನ್ವಯಿಸಿ

ಕನ್ಸೀಲರ್ ಅನ್ವಯಿಸಿ

ಕಣ್ಣಿನ ಕೆಳಗೆ ಕನ್ಸೀಲರ್ ಅನ್ನು ಲೇಪಿಸಿ. ಇಡೀ ಮುಖಕ್ಕೆ ಇದನ್ನು ಹಚ್ಚುವುದು ಬೇಡ. ಇದನ್ನು ಸ್ವಲ್ಪ ಹಚ್ಚಿಕೊಂಡರೆ ಸಾಕು, ಇದು ಇಡೀ ಮುಖಕ್ಕೆ ತಾಜಾತನವನ್ನು ನೀಡುತ್ತದೆ. ಇದು ನಿಮ್ಮ ಕಣ್ಣುಗಳ ಕೆಳಗೆ ಇರುವ ತ್ವಚೆಯ ಬಣ್ಣವನ್ನು ಸಮಗೊಳಿಸುತ್ತದೆ. ಇದರಿಂದ ನಿಮ್ಮ ಕಣ್ಣುಗಳು ದೊಡ್ಡದಾಗಿ ಕಾಣುವುದರ ಜೊತೆಗೆ, ನಿಮಗೆ ತಾಜಾ ತ್ವಚೆಯನ್ನು ನೀಡುತ್ತದೆ. ಜೊತೆಗೆ ನಿಮ್ಮ ಮುಖ ನಿದ್ದೆಗಣ್ಣಿನ ಮುಖದಂತೆ ಕಾಣುವುದಿಲ್ಲ.

ಸ್ವಚ್ಛಗೊಳಿಸಿ

ಸ್ವಚ್ಛಗೊಳಿಸಿ

ಮುಖ ಅಥವಾ ತ್ವಚೆ ಹೆಚ್ಚು ಆರೋಗ್ಯಕರವಾಗಿರಬೇಕೆಂದರೆ ಅದು ಸ್ವಚ್ಛತೆಯಿಂದ ಕೂಡಿರಬೇಕು. ಅದೇ ತ್ವಚೆಯ ಪ್ರಾಥಮಿಕ ಆರೋಗ್ಯದ ಲಕ್ಷಣ. ಮೊದಲು ತಣ್ಣನೆಯ ನೀರಿನಿಂದ ಮುಖವನ್ನು ತೊಳೆಯಿರಿ. ನಂತರ ಮೃದುವಾದ ಸ್ಕ್ರಬ್ಬರ್‌ನಿಂದ ನಾಜೂಕಾಗಿ ತಿಕ್ಕಿ/ಮಸಾಜ್ ಮಾಡಿ. ಸ್ಕ್ರಬ್ಬರ್‌ಗಾಗಿ ನೀವು ಓಟ್ಸ್‌ಗಳನ್ನು ಬಳಸಬಹುದು. ಇದು ನೈಸರ್ಗಿಕವಾಗಿ ಉತ್ತಮ ಮಸಾಜ್ ಮಾಡಲು ಅನುಕೂಲವಾಗುವುದು. ಇದರಿಂದ ತ್ವಚೆಯ ಮೇಲಿರುವ ಸತ್ತ ಕೋಶಗಳು ನಿರ್ಮೂಲಗೊಂಡು, ಮೈಬಣ್ಣವು ಸಹ ಹೆಚ್ಚು ಹೊಳಪಿನಿಂದ ಕೂಡಿರುತ್ತವೆ.

ಐಸ್ ಕ್ಯೂಬ್ಸ್ ಬಳಸಿ

ಐಸ್ ಕ್ಯೂಬ್ಸ್ ಬಳಸಿ

ಐಸ್ ಕ್ಯೂಬ್ ತುಂಡುಗಳನ್ನು ತೆಗೆದುಕೊಂಡು ಕಣ್ಣನ್ನು ಮುಚ್ಚಿ ಅದರ ಮೇಲೆ 5 ನಿಮಿಷಗಳಕಾಲ ಇರಿಸಿ. ಇದು ನಿಮ್ಮ ದಣಿದ ಕಣ್ಣುಗಳ ಊತವನ್ನು ಕಡಿಮೆ ಮಾಡಿ ತಂಪಾದ ಅನುಭವವನ್ನು ನೀಡುತ್ತದೆ. ನಿಮ್ಮ ಮುಖದ ಯಾವುದೇ ಭಾಗದಲ್ಲಿ ಸೆಳೆತ ಅಥವಾ ನೋವುಗಳಿದ್ದರೆ ಐಸ್ ಕ್ಯೂಬ್‍ಗಳಿಂದ ಮಸಾಜ್ ಮಾಡಬಹುದು. ಇದು ಉತ್ತಮ ಪರಿಹಾರವನ್ನು ನೀಡುತ್ತದೆ. ಜೊತೆಗೆ ತಾಜಾ ಅನುಭವ ಉಂಟಾಗುವುದು.

ಫ್ರಿಜ್‍ನಲ್ಲಿ ಐ ಕ್ರೀಮ್ ಅನ್ನು ಇರಿಸಿ

ಫ್ರಿಜ್‍ನಲ್ಲಿ ಐ ಕ್ರೀಮ್ ಅನ್ನು ಇರಿಸಿ

ಫ್ರಿಜ್‍ನಲ್ಲಿ ಐ ಕ್ರೀಮ್ ಅಥವಾ ಸೆರಮ್‍ಅನ್ನು ಇರಿಸಿ ತಂಪುಗೊಳಿಸಿ. ಮುಂಜಾನೆ ನೀವು ಎದ್ದನಂತರ ಕಣ್ಣುಗಳ ಅಡಿಯ ಭಾಗದಲ್ಲಿ ಫ್ರಿಜ್‍ನಲ್ಲಿಟ್ಟು ತಂಪಾದ ಐ ಕ್ರೀಮ್‍ಅನ್ನು ಅನ್ವಯಿಸಿ. ಇದು ನಿಮ್ಮ ಕಣ್ಣಿನ ಕೆಳಭಾಗದ ಚರ್ಮವನ್ನು ಬಿಗಿತ ಗೊಳಿಸುತ್ತದೆ. ಅಲ್ಲದೆ ಉರಿ ಊತ ಮತ್ತು ಸೆಳೆತವನ್ನು ಶಮನಗೊಳಿಸುತ್ತದೆ. ಅಲ್ಲದೆ ದಿನವಿಡೀ ಕಣ್ಣಿಗೆ ಉಂಟಾಗುವ ಸಮಸ್ಯೆಗಳಿಂದ ದೂರ ಇಡಬಹುದು.

ಕಣ್ಣುಗಳನ್ನು ಮಸಾಜ್ ಮಾಡಿ

ಕಣ್ಣುಗಳನ್ನು ಮಸಾಜ್ ಮಾಡಿ

ಐ ಕ್ರೀಮ್‍ನ್ನು ಕಣ್ಣಿನ ಮೇಲ್ಭಾಗದಲ್ಲಿ ಮತ್ತು ಕೆಳಭಾಗದಲ್ಲಿ ಅನ್ವಯಿಸುವಾಗ ನಿಧಾನವಾಗಿ ಮಸಾಜ್ ಮಾಡಿ. ಇದು ಕಣ್ಣಿನ ಮೇಲ್ಭಾಗ ಮತ್ತು ಕೆಳಭಾಗದೆಲ್ಲೆಡೆಯೂ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಕಣ್ಣಿನ ಭಾಗದಲ್ಲಿ ಊದಿಕೊಳ್ಳುವುದನ್ನು ಸಹ ಇದು ಕಡಿಮೆಮಾಡುತ್ತದೆ. ಕಣ್ಣಿನ ಆರೋಗ್ಯವನ್ನು ಹೆಚ್ಚಿಸಿ ತಾಜಾತನದ ನೋಟವನ್ನು ಪಡೆಯಲು ಇದೊಂದು ಉತ್ತಮ ಪ್ರಕ್ರಿಯೆ ಎಂದು ಹೇಳಬಹುದು. ಹೀಗೆ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಂಡರೆ ಮುಖದಲ್ಲಿ ಕಾಣಿಸಿಕೊಳ್ಳುವ ಆಯಾಸದ ಕಳೆಯನ್ನು ಬಹುಬೇಗ ನಿವಾರಿಸಬಹುದು.

For Quick Alerts
ALLOW NOTIFICATIONS
For Daily Alerts

    English summary

    Beauty Tips to Brighten Your Tired Face

    We all can look tired in the morning mostly when we have not slept well or do not follow a proper beauty and health routine before bedtime. To get a natural glow, we need to keep ourselves hydrated by drinking water and eating fresh fruits or veggies. Read on the article to know how to look amazing in the morning when you have a tired look.
    Story first published: Tuesday, October 31, 2017, 10:31 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more