Related Articles
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ವಯಸ್ಸಾದವರಂತೆ ಕಾಣಿಸುತ್ತಿದ್ದೀರಿ ಎಂದಾದ್ರೆ, ಈ ತಪ್ಪುಗಳನ್ನು ಮಾಡುತ್ತಿದ್ದೀರಿ ಎಂದರ್ಥ!
ಹೆಣ್ಣಿಗೆ ಅಂದವೇ ಕೈಗನ್ನಡಿಯಾಗಿದೆ. ಹೆಣ್ಣು ಎಂಬ ಕಲ್ಪನೆ ನಮ್ಮ ಮನದಲ್ಲಿ ಮೂಡಿದೊಡನೆಯೇ ನಾವು ಆಕೆಯನ್ನು ಸುಂದರಿಯನ್ನಾಗಿ ಪರಿಗಣಿಸುತ್ತೇವೆ. ಅದಕ್ಕಾಗಿಯೇ ಆಕೆಯನ್ನು ಕವಿಗಳು ಸುಂದರವಾದ ಹೂವಿಗೆ ಹೋಲಿಸಿರುವುದು. ಹೆಣ್ಣಿಗೆ ಆಂತರ್ಯ ಸೌಂದರ್ಯ ಮುಖ್ಯವಾಗಿದ್ದರೂ ಕೆಲವೊಂದು ವಿಚಾರಗಳಲ್ಲಿ ಬಾಹ್ಯ ಸೌಂದರ್ಯಕ್ಕೂ ಪ್ರಾಮುಖ್ಯತೆಯನ್ನು ನೀಡಬೇಕಾಗುತ್ತದೆ. ತನ್ನನ್ನು ಪ್ರೇಮಿಸುವ ಪ್ರಿಯತಮ, ಪತಿ, ಸಖ ನಮ್ಮ ಅಂದಕ್ಕೂ ಹೆಚ್ಚಿನ ಗಮನವನ್ನು ನೀಡಬೇಕು ಎಂದು ಬಯಸುತ್ತಾರೆ. ಅಂತೆಯೇ ಪತಿ ಕೂಡ ತನ್ನ ಪತ್ನಿ ಸುಂದರವಾಗಿರಬೇಕು ಎಲ್ಲರಿಗಿಂತಲೂ ವಿಶೇಷವಾಗಿ ಕಾಣಬೇಕೆಂಬ ಬಯಕೆಯನ್ನು ಹೊಂದಿರುತ್ತಾರೆ.
ಆದರೆ ಒಮ್ಮೊಮ್ಮೆ ಹೆಣ್ಣಿಗೆ ಅತಿಯಾದ ಸೌಂದರ್ಯವನ್ನು ದೇವರು ನೀಡಿದ್ದರೆ ಇನ್ನು ಕೆಲವರಿಗೆ ಸರಿಸುಮಾರಾದ ಸೌಂದರ್ಯವನ್ನು ನೀಡಿರುತ್ತಾರೆ. ಅದಕ್ಕಾಗಿ ದೇವರನ್ನು ದೂಷಿಸದೆಯೇ ನಿಮ್ಮ ಸೌಂದರ್ಯವನ್ನು ಉತ್ತಮಗೊಳಿಸುವುದಕ್ಕಾಗಿ ಕೆಲವೊಂದು ಆರೈಕೆಗಳನ್ನು ನೀವು ಮಾಡಬೇಕಾಗುತ್ತದೆ. ಇತ್ತೀಚಿನ ಕಲುಷಿತ ವಾತಾವರಣವು ನಮ್ಮನ್ನು ಹದಿಹರೆಯದಲ್ಲಿಯೇ ಮುಪ್ಪಿಗೆ ದೂಡಿದಂತೆ ಮಾಡುತ್ತಿದೆ. ಇದಕ್ಕಾಗಿ ನೀವು ಕೆಲವೊಂದು ಸೌಂದರ್ಯ ಸಲಹೆಗಳನ್ನು ಪಾಲಿಸಿದಲ್ಲಿ ನಿಮ್ಮ ವಯಸ್ಸಾದಂತೆ ಕಾಣುವ ತ್ವಚೆಯ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದಾಗಿದೆ.
ತ್ವಚೆಯಲ್ಲಿ ವಯಸ್ಸಾದಂತೆ ಕಾಣಿಸಿಕೊಳ್ಳುವ ಅಂಶವೆಂದರೆ ಮುಖದಲ್ಲಿನ ಸುಕ್ಕು ಮತ್ತು ಕಣ್ಣಿನ ಸುತ್ತಲಿನ ಕಪ್ಪು ವರ್ತುಲಗಳು ಮೊದಲಾದವುಗಳು. ಈ ಅಂಶಗಳನ್ನು ನೀವು ದೂರಮಾಡಬೇಕು ಎಂದಾದಲ್ಲಿ ತ್ವಚೆಯನ್ನು ಕಾಪಾಡುವ ಕೆಲವೊಂದು ಮುತುವರ್ಜಿಗಳನ್ನು ನೀವು ಅನುಸರಿಸಬೇಕಾಗುತ್ತದೆ. ಅಂತೆಯೇ ನೀವು ತ್ವಚೆಯ ವಿಷಯದಲ್ಲಿ ಮಾಡುವ ಕೆಲವೊಂದು ತಪ್ಪು ಕ್ರಮಗಳು ಕೂಡ ನಿಮ್ಮ ತ್ವಚೆಯನ್ನು ಮುಪ್ಪಿನ ತ್ವಚೆಯನ್ನಾಗಿಸಿಬಿಡುತ್ತದೆ. ಇಂದಿನ ಲೇಖನದಲ್ಲಿ ಆ ತಪ್ಪುಗಳೇನು ಎಂಬುದನ್ನು ಕಂಡುಕೊಂಡು ಅದನ್ನು ಸರಿಪಡಿಸೋಣ....
ಸನ್‌ಸ್ಕ್ರೀನ್ ಬಳಸದೇ ಇರುವುದು
ತ್ವಚೆಯನ್ನು ವಯಸ್ಸಾದಂತೆ ಮಾಡುವಲ್ಲಿ ಪ್ರಮುಖ ಕಾರಣವಾಗಿರುವುದು ಸನ್‌ಸ್ಕ್ರೀನ್ ಬಳಕೆಯನ್ನು ಮಾಡದೇ ಇರುವುದಾಗಿದೆ. ಇದು ಬೇಗನೇ ತ್ವಚೆಯನ್ನು ಸುಕ್ಕುಗಟ್ಟಿಸುವಂತೆ ಮಾಡುತ್ತದೆ. ಯುವಿ ಕಿರಣಗಳಿಗೆ ನೀವು ಒಡ್ಡಿಕೊಳ್ಳುವುದು ನಿಮ್ಮ ತ್ವಚೆಯ ಮೇಲೆ ಹಾನಿಯನ್ನುಂಟು ಮಾಡಬಹುದು.
ಮೊಡವೆಯನ್ನು ಹಿಂಡುವುದು
ಮೊಡವೆಯನ್ನು ಹಿಂಡುವುದು ತ್ವಚೆಯ ಸಮಸ್ಯೆಗಳನ್ನು ಇನ್ನಷ್ಟು ಬಿಗಡಾಯಿಸಬಹುದು. ಇದು ನಿಮಗೆ ತಾತ್ಕಾಲಿಕ ನಿವಾರಣೆಯನ್ನು ನೀಡಿದರೂ ಇವುಗಳ ಕಲೆ ಮುಖದಲ್ಲಿ ಉಂಟಾಗಿ ಅಸಹ್ಯವನ್ನುಂಟು ಮಾಡಬಹುದು.
ನಿಮ್ಮ ಮೇಕಪ್ ತೆಗೆಯದೇ ಇರುವುದು
ಮಲಗುವ ಮುಂಚೆ ನಿಮ್ಮ ಯಾವುದೇ ಬಗೆಯ ಮೇಕಪ್ ಅನ್ನು ತೆಗೆಯುವುದನ್ನು ಮರೆಯದರಿ. ಇದರಿಂದ ನಿಮ್ಮ ತ್ವಚೆಯ ಮೇಲೆ ಹಾನಿಯುಂಟಾಗುವುದು ಖಂಡಿತ. ಆದ್ದರಿಂದ ಮೇಕಪ್ ಅನ್ನು ತೆಗೆದು ನಂತರವಷ್ಟೇ ಮಲಗಲು ಹೋಗಿ.
ಸ್ವಚ್ಛಮಾಡುವುದರ ಕಡೆಗೆ ಆದ್ಯತೆ ನೀಡದೇ ಇರುವುದು
ನಿಮ್ಮ ಮುಖವನ್ನು ಸ್ವಚ್ಛಮಾಡುವುದು ತ್ವಚೆಯ ಆರೋಗ್ಯಕ್ಕೆ ಪ್ರಮುಖ ಕಾರಣವಾಗಿದೆ. ಆದ್ದರಿಂದ ಮುಖವನ್ನು ಕ್ಲೆನ್ಸಿಂಗ್ ಬಳಸಿ ಸ್ವಚ್ಛಮಾಡಿ. ಇದರಿಂದ ಮುಖದ ರಂಧ್ರಗಳು ಸ್ವಚ್ಛಗೊಳ್ಳುತ್ತದೆ.
ಬಿಸಿ ನೀರು ಮತ್ತು ತಣ್ಣೀರಿನ ಬಳಕೆ
ನಿಮ್ಮ ಮುಖಕ್ಕೆ ಬಿಸಿ ನೀರನ್ನು ಬಳಕೆ ಮಾಡುವುದು ತ್ವಚೆಯನ್ನು ಶುಷ್ಕವಾಗಿಸಬಹುದು. ಅಂತೆಯೇ ಹೆಚ್ಚು ತಣ್ಣನೆಯ ನೀರನ್ನು ಮುಖಕ್ಕೆ ಬಳಸುವುದು ರಂಧ್ರಗಳನ್ನು ತೆರೆಯುವಂತೆ ಮಾಡಿ ಹೊರಗಿನ ಗಾಳಿಯಲ್ಲಿರುವ ಕೊಳಕು ಅಂಶಗಳು ಇಲ್ಲಿ ಸಂಗ್ರಹವಾಗುವಂತೆ ಮಾಡಿ ತ್ವಚೆಗೆ ಹಾನಿಯನ್ನುಂಟು
ಮಾಡಬಹುದು.
ತ್ವಚೆಯ ಹೆಚ್ಚಿನ ಎಕ್ಸ್‌ಫೋಲಿಯೇಶನ್
ಮೃತಕೋಶವನ್ನು ಹೋಗಲಾಡಿಸಲು ಎಕ್ಸ್‌ಫೋಲಿಯೇಶನ್ ಮಾಡುವುದು ಅತ್ಯವಶ್ಯಕವಾಗಿದೆ. ಆದರೆ ಇದನ್ನು ಹೆಚ್ಚು ಮಾಡುವುದು ತ್ವಚೆಯಲ್ಲಿರುವ ನೈಸರ್ಗಿಕ ಎಣ್ಣೆಯನ್ನು ನಾಶಮಾಡಬಹುದು.ಇದರಿಂದ ನಿಮ್ಮ ತ್ವಚೆಗೆ ಹಾನಿಯನ್ನುಂಟಾಗುತ್ತದೆ.
ಹೆಚ್ಚಿನ ಮೇಕಪ್ ಬಳಕೆ
ತ್ವಚೆಯನ್ನು ಹದಿಹರೆಯದ ವಯಸ್ಸಿನವರಂತೆ ನಳನಳಿಸುವಂತೆ ಮಾಡಬೇಕೆಂದು ಹೆಚ್ಚಿನ ಮೇಕಪ್ ಬಳಕೆಯನ್ನು ಮಾಡದಿರಿ. ಇದರಲ್ಲಿರುವ ರಾಸಾಯನಿಕ ಅಂಶಗಳು ನಿಮ್ಮ ತ್ವಚೆಯ ಮೇಲೆ ಹಾನಿಯನ್ನುಂಟು ಮಾಡುವುದು ಖಂಡಿತ.
ತಪ್ಪಾದ ತ್ವಚೆಯ ಉತ್ಪನ್ನಗಳನ್ನು ಬಳಸುವುದು
ನಿಮ್ಮ ತ್ವಚೆಗೆ ಹೊಂದಿಕೊಳ್ಳುವ ಸೌಂದರ್ಯ ಉತ್ಪನ್ನಗಳನ್ನು ಬಳಸಿ. ಸೌಂದರ್ಯ ಉತ್ಪನ್ನಗಳನ್ನು ಬದಲಾಯಿಸಬೇಡಿ.ಇದರಿಂದ ನಿಮ್ಮ ತ್ವಚೆಗೆ ಹಾನಿಯುಂಟಾಗುತ್ತದೆ. ಅಂತೆಯೇ ವಯಸ್ಸಾಗುವಿಕೆಯನ್ನು ಬೇಗನೇ ಉಂಟುಮಾಡುತ್ತದೆ.
ರಾತ್ರಿ ಹೊತ್ತು ತ್ವಚೆಗೆ ಕ್ರೀಮ್ ಹಚ್ಚುವುದನ್ನು ತಪ್ಪಿಸುವುದು
ರಾತ್ರಿ ಸಮಯದಲ್ಲಿ ನಿಮ್ಮ ಮುಖವನ್ನು ಚೆನ್ನಾಗಿ ತೊಳೆದು ಮುಖಕ್ಕೆ ರಾತ್ರಿ ಕ್ರೀಮ್ ಬಳಸಿ. ಇದರಿಂದ ಮುಖದಲ್ಲಿರುವ ಕೊಳಕು ನಿವಾರಣೆಯಾಗುತ್ತದೆ ಮತ್ತು ತ್ವಚೆಗೆ ರಕ್ಷಣೆ ದೊರೆಯುತ್ತದೆ.
ನಿಮ್ಮ ಕಣ್ಣಿನ ಕೆಳಭಾಗವನ್ನು ನಿರ್ಲಕ್ಷಿಸುವುದು
ನಿಮ್ಮ ಕಣ್ಣಿನ ಕೆಳಭಾಗದಲ್ಲಿರುವ ತ್ವಚೆಯು ಮೃದು ಮತ್ತು ಕೋಮಲವಾಗಿರುತ್ತದೆ. ಈ ಭಾಗಕ್ಕೆ ನೀವು ಹೆಚ್ಚುವರಿ ಕಾಳಜಿಯನ್ನು ತೆಗೆದುಕೊಳ್ಳದೇ ಇದ್ದಲ್ಲಿ ಈ ಭಾಗದಲ್ಲಿ ನೆರಿಗೆ ಮತ್ತು ಕಪ್ಪು ವರ್ತುಲ ಉಂಟಾಗುತ್ತದೆ. ಮತ್ತು ಮುಪ್ಪಿನ ಸಂಕೇತವನ್ನು ಬಹುಬೇಗನೇ ತೋರಿಸುತ್ತದೆ.