ತ್ವಚೆಯ ಅಂದ-ಚಂದಕ್ಕೆ ಮನೆಯಂಗಳದ 'ತುಳಸಿ'

By: manu
Subscribe to Boldsky

ತುಳಸಿ ಗಿಡದ ಬಗ್ಗೆ ಹಿಂದೂ ಪುರಾಣಗಳಲ್ಲಿ ಹಲವಾರು ರೀತಿಯ ಕಥೆಗಳು ಇವೆ. ತುಳಸಿ ಗಿಡದಲ್ಲಿ ಮುಕ್ಕೋಟಿ ದೇವರು ನೆಲೆಸಿರುತ್ತಾರೆ ಎನ್ನುವ ನಂಬಿಕೆಯಿದೆ. ತುಳಸಿ ಗಿಡ ಹಿಂದೂಗಳಿಗೆ ತುಂಬಾ ಪೂಜ್ಯನೀಯ. ಅದೇ ತುಳಸಿ ಹಲವಾರು ರೀತಿಯ ಔಷಧೀಯ ಗುಣಗಳನ್ನು ಹೊಂದಿರುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಬಹುಪಯೋಗಿ ಔಷಧಗಳ ಸಂಜೀವಿನಿ 'ತುಳಸಿ'

ಸಾವಿರಾರು ವರ್ಷಗಳಿಂದಲೂ ಭಾರತೀಯ ಆಯುರ್ವೇದದಲ್ಲಿ ತುಳಸಿ ಗಿಡವನ್ನು ಔಷಧಿಗಳಲ್ಲಿ ಬಳಸುತ್ತಾ ಬರಲಾಗಿದೆ. ತುಳಸಿಯಿಂದ ಆರೋಗ್ಯಕ್ಕೆ ಹಲವಾರು ಲಾಭಗಳು ಇವೆ ಎನ್ನುವ ಬಗ್ಗೆ ಬೋಲ್ಡ್ ಸ್ಕೈ ಹೇಳಿದೆ. ಚರ್ಮಕ್ಕೆ ತುಳಸಿಯಿಂದ ಯಾವ ಲಾಭಗಳು ಸಿಗಲಿದೆ ಎಂದು ನಿಮಗೆ ತಿಳಿಸಲು ಈ ಲೇಖನ.  ಆರೋಗ್ಯ ರಕ್ಷಕ- ತುಳಸಿ ಎಲೆಯ ವೈಶಿಷ್ಟ್ಯ ಒಂದೇ, ಎರಡೇ?

ವಿಟಮಿನ್, ಪ್ರೋಟೀನ್ ಮತ್ತು ಹಲವಾರು ರೀತಿಯ ಪೋಷಕಾಂಶಗಳನ್ನು ಒಳಗೊಂಡಿರುವ ತುಳಸಿಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಕೂಡ ಸಮೃದ್ಧವಾಗಿದೆ. ಇದರಿಂದ ಮೊಡವೆ ಹಾಗೂ ಇನ್ನಿತರ ಚರ್ಮದ ಸಮಸ್ಯೆಗಳು ಮಾಯವಾಗಿ ಕಾಂತಿಯುತ ಚರ್ಮವು ನಿಮ್ಮದಾಗುವುದು. ತುಳಸಿಯಿಂದ ಯಾವೆಲ್ಲಾ ಲಾಭಗಳು ಆಗಲಿದೆ ಎಂದು ಓದುತ್ತಾ ಸಾಗಿ....  

ಮೊಡವೆಗಳ ನಿವಾರಣೆಗೆ

ಮೊಡವೆಗಳ ನಿವಾರಣೆಗೆ

ಮುಖದಲ್ಲಿ ದೊಡ್ಡ ಸಮಸ್ಯೆಯನ್ನು ಉಂಟು ಮಾಡುವಂತಹ ಮೊಡವೆಗಳನ್ನು ನಿವಾರಿಸಲು ತುಳಸಿ ಒಳ್ಳೆಯ ಔಷಧಿ. ತುಳಸಿಯಲ್ಲಿರುವ ಉರಿಯೂತ ಶಮನಕಾರಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣವು ಮೊಡವೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇದು ನೈಸರ್ಗಿಕವಾಗಿ ಚರ್ಮವನ್ನು ಶುದ್ಧೀಕರಿಸುವ ಕಾರಣದಿಂದಾಗಿ ಧೂಳು ಹಾಗೂ ಕಲ್ಮಷಗಳು ದೂರವಾಗುವುದು.

ಸ್ವಲ್ಪ ತುಳಸಿ ಎಲೆಗಳು ಸಾಕು!

ಸ್ವಲ್ಪ ತುಳಸಿ ಎಲೆಗಳು ಸಾಕು!

ಸ್ವಲ್ಪ ತುಳಸಿ ಎಲೆಗಳನ್ನು ತೆಗೆದುಕೊಂಡು ಅದನ್ನು ಜಜ್ಜಿಕೊಂಡು ರಸ ತೆಗೆಯಿರಿ. ಅದಕ್ಕೆ ಸ್ವಲ್ಪ ಅರಿಶಿನ ಹಾಕಿ. ಸರಿಯಾಗಿ ಮಿಶ್ರಣ ಮಾಡಿಕೊಂಡ ಬಳಿಕ ಈ ಮಾಸ್ಕ್ ನ್ನು ಮುಖಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಬಿಟ್ಟು ನೀರಿನಿಂದ ತೊಳೆಯಿರಿ.

ಆರೋಗ್ಯಕರ ತ್ವಚೆಗೆ

ಆರೋಗ್ಯಕರ ತ್ವಚೆಗೆ

ತುಳಸಿ ಎಲೆಗಳಲ್ಲಿ ಹೆಚ್ಚಿನ ಮಟ್ಟದ ಆ್ಯಂಟಿ ಆಕ್ಸಿಡೆಂಟ್ ಇರುತ್ತದೆ. ಇದು ಆರೋಗ್ಯಕರ ಹಾಗೂ ಕಾಂತಿಯುತ ಚರ್ಮವನ್ನು ನೀಡುವುದು. ಸ್ವಲ್ಪ ತುಳಸಿ ಎಲೆಯ ರಸ ತೆಗೆದು ಅದಕ್ಕೆ ಒಂದು ಚಮಚ ಗ್ಲಿಸರಿನ್ ಹಾಕಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿಕೊಂಡು ಪ್ರತೀದಿನವು ಇದರಿಂದ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ. ದಿನದಲ್ಲಿ ಎರಡರಿಂದ ಮೂರು ಸಲ ಹೀಗೆ ಮಾಡಿದರೆ ಸುಂದರ ತ್ವಚೆಯು ನಿಮ್ಮದಾಗುವುದು.

ಕಲೆಗಳು ಮಾಯ!

ಕಲೆಗಳು ಮಾಯ!

ಮುಖದಲ್ಲಿ ಯಾವುದೇ ರೀತಿಯ ಕಲೆಗಳು ಇದ್ದರೆ ಅದನ್ನು ನಿವಾರಣೆ ಮಾಡುವಲ್ಲಿ ತುಳಸಿಯು ಪ್ರಮುಖ ಪಾತ್ರ ವಹಿಸುತ್ತದೆ. ಮುಖದಲ್ಲಿ ಮೊಡವೆಗಳ ಕಲೆಗಳು ಇದ್ದರೆ ತುಳಸಿ ಎಲೆಗಳಿಂದ ಇದನ್ನು ತೆಗೆದುಹಾಕಬಹುದು. ಸ್ವಲ್ಪ ತುಳಸಿ ಎಲೆಗಳನ್ನು ತೆಗೆದುಕೊಂಡು ಅದನ್ನು ದಪ್ಪಗಿನ ಪೇಸ್ಟ್ ಮಾಡಿಕೊಳ್ಳಿ.

ಕಲೆಗಳು ಮಾಯ!

ಕಲೆಗಳು ಮಾಯ!

ಇದಕ್ಕೆ ಒಂದು ಚಮಚ ಜೇನುತುಪ್ಪಮತ್ತು ಒಂದು ಚಮಚ ಲಿಂಬೆರಸ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಈ ಮಾಸ್ಕ್ ಅನ್ನು ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು ನೀರಿನಿಂದ ತೊಳೆಯಿರಿ.

ಚರ್ಮದ ಸೋಂಕು ನಿವಾರಣೆ

ಚರ್ಮದ ಸೋಂಕು ನಿವಾರಣೆ

ತುಳಸಿಯಲ್ಲಿ ಇರುವಂತಹ ಬ್ಯಾಕ್ಟೀರಿಯ ವಿರೋಧಿ ಅಂಶಗಳು ಚರ್ಮಕ್ಕೆ ಉಂಟಾಗುವಂತಹ ಯಾವುದೇ ರೀತಿಯ ಸೋಂಕನ್ನು ನಿವಾರಣೆ ಮಾಡುತ್ತದೆ. ಚರ್ಮದಲ್ಲಿ ಉಂಟಾಗುವ ತುರಿಕಚ್ಚಿಯನ್ನು ಇದು ಬೇಗನೆ ನಿವಾರನೆ ಮಾಡುತ್ತದೆ.

ತುಳಸಿ ಎಲೆಗಳ ಪೇಸ್ಟ್

ತುಳಸಿ ಎಲೆಗಳ ಪೇಸ್ಟ್

ಸ್ವಲ್ಪ ತುಳಸಿ ಎಲೆಗಳನ್ನು ಸರಿಯಾಗಿ ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಅರ್ಧಕಪ್ ಮೊಸರು ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಸ್ವಲ್ಪ ಸಮಯ ಬಿಟ್ಟು ಇದನ್ನು ತೊಳೆಯಿರಿ. ಈ ಮದ್ದು ಚರ್ಮದ ಸೋಂಕನ್ನು ನಿವಾರಣೆ ಮಾಡಿ ಹಾನಿಯನ್ನು ತಪ್ಪಿಸುವುದು.

 
English summary

Beauty Benefits Of Using Basil For Skin

Basil, also known as Tulsi, is one of the sacred plants used in India. Tulsi has been used in India for more than 1000 years and so are the seeds. While we all know the benefits of basil for health, it is important to know the benefits of basil for skin as well
Subscribe Newsletter