ಮುಖದ ಅಂದ-ಚೆಂದ ಹೆಚ್ಚಿಸುವ ಅರಿಶಿನ-ಅಲೋವೆರಾ ಫೇಸ್ ಪ್ಯಾಕ್‍

Posted By: Divya
Subscribe to Boldsky

ಪುರಾತನ ಕಾಲದಿಂದಲೂ ಅರಿಶಿನ ಮತ್ತು ಅಲೋವೆರಾವನ್ನು ಸೌಂದರ್ಯ ಚಿಕಿತ್ಸಾ ಉತ್ಪನ್ನ ಎಂದು ಪರಿಗಣಿಸಲಾಗಿದೆ. ಹಸಿರು ಕಳ್ಳಿ ಸಸ್ಯದಂತಹ ಅಲೋವೆರಾ ತ್ವಚೆಯ ಸೌಂದರ್ಯವನ್ನು ಹೆಚ್ಚಿಸಿ, ಕೂದಲಿನ ಸಮಸ್ಯೆಗೆ ಚಿಕಿತ್ಸೆಯನ್ನು ನೀಡುತ್ತದೆ. ಇದನ್ನು ಪ್ರಬಲವಾದ ಔಷಧೀಯ ಗುಣವನ್ನು ಹೊಂದಿರುವ ಸಸ್ಯ ಎಂದು ಗುರುತಿಸಲಾಗಿದೆ.

ಅರಿಶಿನವು ಸಮೃದ್ಧವಾದ ಜೀವಸತ್ವ, ಖನಿಜಗಳು ಮತ್ತು ಫೈಟೋನ್ಯೂಟ್ರಿಯೆಂಟ್‍ಗಳನ್ನು ಒಳಗೊಂಡಿದೆ. ಇವು ತ್ವಚೆಯ ಮೇಲಿರುವ ಪಿಗ್ಮೆಂಟೇಷನ್, ಗುಳ್ಳೆಗಳು, ಮೊಡವೆ ಮತ್ತು ಚರ್ಮದ ಸೋಂಕುಗಳನ್ನು ನಿವಾರಿಸುತ್ತವೆ. ಉತ್ತಮ ಔಷಧೀಯ ಗುಣವನ್ನು ಹೊಂದಿರುವ ಈ ಎರಡು ವಸ್ತುಗಳ ಮಿಶ್ರಣದಿಂದ ತ್ವಚೆಯ ಪೋಷಣೆಯನ್ನು ಮಾಡಬಹುದು. 

ಮೊಡವೆಯ ಹುಟ್ಟಡಗಿಸುವ-ಅರಿಶಿನದ ಫೇಸ್ ಪ್ಯಾಕ್

ಅಷ್ಟೇ ಅಲ್ಲದೆ ಈ ಎರಡು ಉತ್ಪನ್ನಗಳು ಗಾಯಗಳು ಮತ್ತು ಚರ್ಮದ ಸೋಂಕಿಗೆ ಉತ್ತಮವಾದ ಚಿಕಿತ್ಸೆ ನೀಡುವವು. ಅರಿಶಿನ ಮತ್ತು ಅಲೋವೆರಾ ಮಿಶ್ರಣದ ಲೇಪವನ್ನು ಮುಖಕ್ಕೆ ಅನ್ವಯಿಸಿಕೊಳ್ಳುವುದರಿಂದ ಮುಖದ ಮೇಲಿರುವ ಸತ್ತ ಚರ್ಮ ಹಾಗೂ ಬೇಡದ ಕೂದಲನ್ನು ತೆಗೆಯುವುದು. ಅಲ್ಲದೆ ನಂಜಿನಿಂದ ಉಂಟಾಗುವ ಗುಳ್ಳೆಗಳು ಮತ್ತು ಮೊಡವೆಗಳು ನಿವಾರಣೆಹೊಂದುವವು. ಇವೆರಡು ಮಿಶ್ರಣದ ಬಳಕೆಯಿಂದ ಅನೇಕ ಉಪಯೋಗಗಳನ್ನು ಪಡೆಯಬಹುದು. ಅವು ಯಾವದು ಎಂಬುದರ ವಿವರ ಇಲ್ಲಿದೆ... 

ವಯಸ್ಸಾದಂತೆ ಕಾಣದು

ವಯಸ್ಸಾದಂತೆ ಕಾಣದು

ಮುಖ, ಕುತ್ತಿಗೆ ಮತ್ತು ಕೈಗಳ ಮೇಲೆ ವಯಸ್ಸಾದ ಚಿಹ್ನೆಯನ್ನು ಬಹಳ ಬೇಗ ಗುರುತಿಸಬಹುದು. ಇದು ನಾವು ಸೇವಿಸುವ ಕಳಪೆ ಆಹಾರ, ಎಣ್ಣೆ ಪದಾರ್ಥಗಳ ಸೇವನೆ ಹಾಗೂ ಅಸಮರ್ಪಕವಾದ ದೈಹಿಕ ವ್ಯಾಯಾಮಗಳಿಂದಲೂ ಉಂಟಾಗಬಹುದು. ಇದಕ್ಕಾಗಿ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಬದಲಿಗೆ ಒಂದು ಚಮಚ ಅಕ್ಕಿ ಹಿಟ್ಟು, ಒಂದು ಚಮಚ ಅಲೋವೆರಾ ಜೆಲ್, ಒಂದು ಚಮಚ ತೆಂಗಿನ ಹಾಲು ಮತ್ತು ಸ್ವಲ್ಪ ಅರಿಶಿನ ಬೆರೆಸಿ, ಒಂದು ಮಿಶ್ರಣ ತಯಾರಿಸಿಕೊಳ್ಳಬೇಕು. ಈ ಮಿಶ್ರಣವನ್ನು ನಿತ್ಯವೂ ಮುಖಕ್ಕೆ ಹಚ್ಚಿ, 20 ನಿಮಿಷ ಆರಲು ಬಿಡಬೇಕು. ಆಗ ತ್ವಚೆಯು ಸುಕ್ಕುಗಟ್ಟುವುದು ಮತ್ತು ಸೋಂಕಿಗೆ ಒಳಗಾಗುವುದನ್ನು ತಡೆಯಬಹುದು

ಎಸ್ಜಿಮಾಕ್ಕೆ ಔಷಧಿ

ಎಸ್ಜಿಮಾಕ್ಕೆ ಔಷಧಿ

ಇದು ಸಾಮಾನ್ಯವಾಗಿ ರೋಗಿಯ ವಯಸ್ಸನ್ನು ಅವಲಂಭಿಸಿರುತ್ತದೆ. ಮಕ್ಕಳಿಗೆ ಮುಖ, ಕಿವಿ, ಕತ್ತು, ಮೊಣಕೈ, ತೋಳುಗಳು, ಮಣಿಕಟ್ಟು ಮತ್ತು ಕಣ್ಣಿನ ಸುತ್ತಲಿನ ಚರ್ಮಗಳ ಮೇಲೆ ಕಾಣಿಸಿಕೊಳ್ಳುತ್ತದೆ. ವಿಪರೀತ ಬೆವರಿನಿಂದ ಈ ಸಮಸ್ಯೆ ಉಂಟಾಗುವುದು. ಇದಕ್ಕೆ ಪರಿಹಾರದ ಔಷಧಿಯೆಂದರೆ, 1 ಚಮಚ ಅರಿಶಿನ ಪುಡಿ, 1 ಚಮಚ ಅಲೋವೆರಾ ಜೆಲ್ ಅಥವಾ ತೆಂಗಿನ ಎಣ್ಣೆಯನ್ನು ಬೆರೆಸಿ ಒಂದು ಮಿಶ್ರಣ ತಯಾರಿಸಿಕೊಳ್ಳಬೇಕು. ಈ ಮಿಶ್ರಣವನ್ನು ಪೀಡಿತ ಜಾಗಕ್ಕೆ ಹಚ್ಚಿ, 30 ನಿಮಿಷದ ಬಳಿಕ ತಣ್ಣೀರಿನಲ್ಲಿ ತೊಳೆಯಬೇಕು.

ಮೈ ಬಣ್ಣದ ಸಮಸ್ಯೆ

ಮೈ ಬಣ್ಣದ ಸಮಸ್ಯೆ

2 ಚಮಚ ಅಲೋವೆರಾ ಜೆಲ್, 1 ಚಮಚ ಅರಿಶಿನ ಪುಡಿ, 1 ಚಮಚ ಹಾಲು, 1 ಚಮಚ ಜೇನುತುಪ್ಪ ಮತ್ತು 2-3 ಹನಿ ಗುಲಾಬಿ ನೀರು. ಇವುಗಳ ಮಿಶ್ರಣವನ್ನು ಸೂರ್ಯನಿಂದ ಸುಟ್ಟ ಕಲೆಗಳ ಜಾಗ, ಮುಖ ಮತ್ತು ಕತ್ತಿಗೆ ಅನ್ವಯಿಸಿ, 15 ನಿಮಿಷದ ಬಳಿಕ ತೊಳೆಯಬೇಕು. ಆಗ ಕಳೆದುಕೊಂಡ ಮೈ ಬಣ್ಣ ಮರಳಿ ಬರುವುದು.

ತ್ವಚೆಯ ಆರೋಗ್ಯಕ್ಕೆ ಅರಿಶಿನದ ಮೊರೆ ಹೋಗಬೇಕು

ಮೃದುವಾದ ತ್ವಚೆಗೆ

ಮೃದುವಾದ ತ್ವಚೆಗೆ

1 ಚಮಚ ಅಲೋವೆರಾ ಜೆಲ್, 1 ಚಮಚ ಅರಿಶಿನ, 1 ಚಮಚ ಮೊಸರು ಮತ್ತು 1 ಚಮಚ ಸೌತೆಕಾಯಿ ರಸ. ಇವುಗಳ ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ 15-20 ನಿಮಿಷಗಳ ಕಾಲ ಬಿಡಬೇಕು. ನಂತರ ತಣ್ಣೀರಿನಲ್ಲಿ ತೊಳೆಯಬೇಕು. ಹೀಗೆ ಮಾಡುವುದರಿಂದ ಶುಷ್ಕ ಮತ್ತು ಒರಟು ಚರ್ಮವು ಮೃದುವಾಗುವುದು.

ಬಹುಪಯೋಗಿ ಲೋಳೆಸರದ ಲಾಭಗಳು ಒಂದೇ, ಎರಡೇ?

ಹಾರ್ಮೋನ್ ವ್ಯತಾಸದ ಕಲೆ

ಹಾರ್ಮೋನ್ ವ್ಯತಾಸದ ಕಲೆ

2 ಚಮಚ ಅಲೋವೆರಾ ಜೆಲ್, 1 ಚಮಚ ಮುಲ್ತಾನಿ ಮಿಟ್ಟಿ ಮತ್ತು ಸ್ವಲ್ಪ ಅರಿಶಿನ. ಇವುಗಳ ಮಿಶ್ರಣವನ್ನು ಮುಖಕ್ಕೆ ಬಳಿದುಕೊಳ್ಳುವುದರಿಂದ ಹಾರ್ಮೋನ್ ವ್ಯತ್ಯಾಸದಿಂದ ಉಂಟಾಗುವ ಪಾತರಗಿತ್ತಿ ಕಲೆ(ಪಿಗ್ಮೆಂಟೇಷನ್) ಮತ್ತು ಉರಿಯೂತಗಳನ್ನು ಕಡಿಮೆ ಮಾಡಬಹುದು.

For Quick Alerts
ALLOW NOTIFICATIONS
For Daily Alerts

    English summary

    Beauty Benefits Of Turmeric And Aloe Vera

    Using aloe vera and turmeric together can help to fight acne, pimples, rosacea and sunburns. Aloe vera and turmeric are useful in treating wounds and minor skin infections. It helps to removes dead skin as well as blackheads. So let's find out some of the benefits of using a turmeric and aloe vera face mask on the skin.
    Story first published: Saturday, June 3, 2017, 8:29 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more