ಸೌಂದರ್ಯವರ್ಧನೆಯಲ್ಲಿ ನೀಲಗಿರಿ ಎಣ್ಣೆಯ ಮ್ಯಾಜಿಕ್ !

By: Anuradha Yogesh
Subscribe to Boldsky

ಸೌಂದರ್ಯವರ್ಧನೆಗಾಗಿ ಮಹಿಳೆಯರು ಅನುಸರಿಸದ ವಿಧಾನಗಳೇ ಇಲ್ಲ. ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳಿಗಿಂತ ನೈಸರ್ಗಿಕವಾಗ ದೊರೆಯುವ ಅನೇಕ ಸಾರಭೂತ(ಎಸ್ಸೆನ್ಷಿಯಲ್) ಎಣ್ಣೆಗಳ ಬಳಕೆಯಿಂದ ಸೌಂದರ್ಯ ವೃದ್ಧಿಸಿಕೊಳ್ಳುವದು ಬಹಳ ಸೇಫ್ ಅಲ್ಲವೆ? ಈ ಎಣ್ಣೆಗಳು ಅನೇಕ ಔಷಧಿಗಳ ತಯಾರಿಕೆಯಲ್ಲೂ ಕೂಡ ಬಳಸಲ್ಪಡುತ್ತವೆ. ಎಸ್ಸೆನ್ಷಿಯಲ್ ಎಣ್ಣೆಗಳ ಲಾಭಗಳ ಪಟ್ಟಿ ನೋಡಿ...

*ಆರೋಗ್ಯವರ್ಧನೆಯಲ್ಲಿ

*ಸೌಂದರ್ಯವರ್ಧನೆಯಲ್ಲಿ

*ತ್ವಚೆಯನ್ನು ಕಾಂತಿಯುತವಾಗಿ ಹೊಳೆಯುವಂತೆ ಮಾಡಲು.

*ಕೂದಲನ್ನು ಸೊಂಪಾಗಿ ಬೆಳೆಸಲು ಶಾಂಪೂಗಳಲ್ಲಿ

ಅರೋಮಾಥೆರಪಿಯಲ್ಲಿ

eucalyptus-oil

*ಇವುಗಳಿಗಿರುವ ಪ್ರತ್ಯೇಕ ಅಪರೂಪದ ಸುಗಂಧದಿಂದ ಸ್ಪೆಶಲ್ ಸಾಬೂನುಗಳ ತಯಾರಿಕೆಯಲ್ಲಿ

*ಅಷ್ಟೇ ಅಲ್ಲ, ನಮ್ಮ ಮೈ ಮತ್ತು ಮನಸ್ಸನ್ನು ಹಗುರಗೊಳಿಸುವ ಮಸಾಜ್‌ಗಳಲ್ಲಿ ಬಳಸಲಾಗುತ್ತದೆ.

ಎಸ್ಸೆನ್ಷಿಯಲ್ ಎಣ್ಣೆ ಎಂದ ಕೂಡಲೆ ನಮಗೆ ಮೊದಲಿಗೆ ನೆನಪಾಗುವದು ನೀಲಗಿರಿ ಎಣ್ಣೆಯಲ್ವಾ? ಇದು ಅತ್ಯಂತ ಪ್ರಭಾವಶಾಲಿ ಶೀತ ಉಪಶಮನಕಾರಿ. ಕಟ್ಟಿದ ಮೂಗು ಹಾಗು ಸೈನಸ್‌ಗಳಿಂದ ಕೂಡಲೆ ಪರಿಹಾರ ದೊರಕಿಸಿಕೊಡುತ್ತದೆ. ನೀಲಗಿರಿ ಎಲೆಗಳನ್ನು ಶುದ್ಧೀಕರಿಸಿ, ಸಂಸ್ಕರಿಸಿ ಎಣ್ಣೆಯನ್ನು ಪಡೆಯಲಾಗುತ್ತದೆ. ಎಣ್ಣೆಯ ಸುಗಂಧ ಬಹಳ ಹಿತಕಾರಿಯಾಗಿರುತ್ತದೆ. ಎಣ್ಣೆಯ ಬಾಟಲಿಯ ಮುಚ್ಚಳ ತೆಗೆದರೆ ಸಾಕು ಮನಸ್ಸಿಗೆ ಆಹ್ಲಾದವೆನಿಸುತ್ತದೆ. ಆರೋಗ್ಯ ಕಾಪಾಡುವದರಲ್ಲಿ ಹೇಗೆ ಪ್ರಭಾವಶಾಲಿಯಾಗಿದೆಯೋ, ಹಾಗೆಯೇ ಸೌಂದರ್ಯವೃದ್ಧಿಯಲ್ಲೂ ಕೂಡ ಬಳಸಬಹುದೆಂಬ ವಿಷಯ ನಿಮಗೆ ಗೊತ್ತಿದೆಯಾ? ಮುಂದೆ ಓದಿ ಹಾಗು ಸುಲಭದ ಕೈಗೆಟುಕುವ ದರದಲ್ಲಿ ಸೌಂದರ್ಯ ವೃದ್ಧಿಸಿಕೊಳ್ಳಿ.

salt

ಕ್ಲೆನ್ಸಿಂಗ್ ಏಜೆಂಟಾಗಿ

ಬೇಕಾದ ಸಾಮಗ್ರಿಗಳು:

*. ಒಂದು ಚಮಚ ನೀಲಗಿರಿ ಎಣ್ಣೆ

*. ಒಂದು ಚಮಚ ಎಪ್ಸಮ್ ಸಾಲ್ಟ್

ವಿಧಾನ:

* ಒಂದು ಚಮಚ ಎಪ್ಸಂ ಸಾಲ್ಟ್ ನ ಜೊತೆಗೆ ಒಂದು ಚಮಚ ನೀಲಗಿರಿ ಎಣ್ಣೆಯನ್ನು ಬೆರೆಸಿಕೊಳ್ಳಿ.

* ಚೆನ್ನಾಗಿ ಕಲೆಸಿಕೊಂಡು, ಮುಖದ ತ್ವಚೆಗೆ ನಿಧಾನವಾಗಿ ಮಸಾಜ್ ಮಾಡಿ.

* ಸೂಕ್ಷ್ಮ ತ್ವಚೆಯಾಗಿದ್ದರೆ ಅರ್ಧ ಚಮಚದಷ್ಟು ಮಾತ್ರ ಎಣ್ಣೆ ಬಳಸಿಕೊಳ್ಳಿ.

* ಈ ಮಿಶ್ರಣವು ಒಳ್ಳೆಯ ಎಕ್ಸ್‌ಫೋಲಿಯೇಟ್ ಆಗಿ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲ ತ್ವಚೆಯಲ್ಲಿರುವ ಧೂಳು, ಗಲೀಜನ್ನು ಸ್ವಚ್ಛಗೊಳಿಸಿ, ತ್ವಚೆಯ ರಂಧ್ರಗಳನ್ನು ತೆರೆದು ಚರ್ಮ ಚೆನ್ನಾಗಿ ಉಸಿರಾಡಲು ಅನುಕೂಲ ಮಾಡಿ ಕೊಡುತ್ತದೆ.

face bleaching

ಮೊಡವೆ ನಿವಾರಕವಾಗಿ

ಮೊಡವೆಗಳು ಮುಖದ ಅಂದವನ್ನೇ ಹಾಳುಗೆಡವುತ್ತವೆ. ಮಾರುಕಟ್ಟೆಯಲ್ಲಿ ಬೇಕಾದಷ್ಟು ಮೊಡವೆ ನಿವಾರಕಗಳಿದ್ದಾರೂ, ಅಷ್ಟೇನೂ ಪರಿಣಾಮಕಾರಿಯಾಗಿರುವದಿಲ್ಲ. ಹಚ್ಚಿ ಸ್ವಲ್ಪ ದಿನ ಬಿಟ್ಟಕೂಡಲೆ ಮತ್ತೆ ಕಾಣಿಸಿಕೊಳ್ಳುತ್ತವೆ. ಆದರೆ ನೀಲಗಿರಿ ಎಣ್ಣೆಯಲ್ಲಿರುವ ಆಂಟಿ-ಬ್ಯಾಕ್ಟೀರಿಯಲ್ ಮತ್ತು ಆಂಟಿ-ಮೈಕ್ರೊಬಾಯಿಲ್ ಗುಣ ಮೊಡವೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಹೋಗಲಾಡಿಸಿ ಸುಂದರವಾದ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಲು ಸಹಾಯ ಮಾಡುತ್ತದೆ. 

ಬೇಕಾದ ಸಾಮಗ್ರಿಗಳು

* ನೀಲಗಿರಿ ಎಣ್ಣೆ

* ಒಂದು ಮುಷ್ಟಿಯಷ್ಟು ಒಣಗಿದ ಬೇವಿನ ಎಲೆಗಳು

ವಿಧಾನ:

water

* ಒಣಗಿದ ಬೇವಿನ ಎಲೆಗಳನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಿ.

* ಪುಡಿಯನ್ನು ಒಂದು ಚಮಚದಷ್ಟು ನೀಲಗಿರಿ ಎಣ್ಣೆಯೊಂದಿಗೆ ಬೆರೆಸಿಕೊಳ್ಳಿ.

* ಬೇಕೆನಿಸಿದರೆ ಸ್ವಲ್ಪ ನೀರು ಬೆರೆಸಿಕೊಳ್ಳಿ.

* ನಂತರ ಮುಖಕ್ಕೆ ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ.

* 20 ರಿಂದ 30 ನಿಮಿಷಗಳ ನಂತರ ಸ್ವಚ್ಛವಾಗಿ ಮುಖವನ್ನು ತೊಳೆದುಕೊಳ್ಳಿ.

ವಾರಕ್ಕೆರಡು ಬಾರಿ ಈ ಮಸಾಜ ಮಾಡಿಕೊಂಡರೆ ಸಾಕು, ಮೊಡವೆಗಳು ಮಂಗಮಾಯ!

ಮಾಯಿಶ್ಚರೈಸರ್‌ ಆಗಿ

ಸ್ವಲ್ಪ ಚಳಿ ಬಿಟ್ಟರೂ ಸಾಕು ಅನೇಕರ ತ್ವಚೆ ತುಂಬ ಶುಷ್ಕವಾಗಿ ತುರಿಕೆ ಉಂಟಾಗುತ್ತದೆ. ಅನೇಕ ತರಹದ ಮಾಯಿಶ್ಚರೈಸರ್‌ಗಳು ಮಾರುಕಟ್ಟೆಯಲ್ಲಿ ದೊರೆತರೂ, ಕೆಲವರ ತ್ವಚೆಗೆ ಹೊಂದಾಣಿಕೆಯಾಗುವದಿಲ್ಲ. ಈ ನೈಸರ್ಗಿಕ ಮಾಯಿಶ್ಚರೈಸರ್ ಪ್ರಯತ್ನಿಸಿ ನೋಡಿ, ಆಶ್ಚರ್ಯಕರ ಒಳ್ಳೆಯ ಪರಿಣಾಮಗಳು ಕಂಡುಬರುತ್ತವೆ.

ಬೇಕಾದ ಸಾಮಗ್ರಿಗಳು

* ಒಂದು ಟೇಬಲ್ ಚಮಚದಷ್ಟು ಅವಕಾಡೋದ(ಬೆಣ್ಣೆ ಹಣ್ಣಿನ) ತಿರುಳು.

* ಒಂದು ಟೀ ಚಮಚದಷ್ಟು ನೀಲಗಿರಿ ಎಣ್ಣೆ.

ವಿಧಾನ:

* ಅವಕಾಡೋದ(ಬೆಣ್ಣೆ ಹಣ್ಣಿನ) ತಿರುಳು ಮತ್ತು ನೀಲಗಿರಿ ಎಣ್ಣೆಯನ್ನು ಚೆನ್ನಾಗಿ ಬೆರೆಸಿ ಒಂದೇ ಸಮನಾದ ಮಿಶ್ರಣವನ್ನು ತಯಾರಿಸಿಕೊಳ್ಳಿ.

* ಶುಷ್ಕವಾದ ತ್ವಚೆಗೆ ನಿಧಾನವಾಗಿ ಅನ್ವಯಿಸಿಕೊಳ್ಳಿ.

* ೧5 ನಿಮಿಷಗಳ ನಂತರ ತ್ವಚೆಯನ್ನು ಸ್ವಚ್ಛಗೊಳಿಸಿ. ಮಗುವಿನ ತರಹದ ಕೋಮಲ ತ್ವಚೆ ನಿಮ್ಮದಾಗುವದರಲ್ಲಿ ಸಂಶಯವೇ ಇಲ್ಲ.

ತ್ವಚೆಯನ್ನು ತಂಪಾಗಿಡಲು

ಈಗಿನ ಎಲ್ಲ ಬ್ಯುಟಿಶಿಯನ್ಸ್ ಹೇಳುವದೊಂದೇ ಮಾತು, ಸನ್‌ಸ್ಕ್ರೀನ್ ಲೋಶನ್ ಹಚ್ಚಿಕೊಳ್ಳದೆ ಹೊರಗಡೆ ಹೋಗಲೇ ಬೇಡಿಯೆಂದು. ನೀಲಗಿರಿ ಎಣ್ಣೆ ಬಹಳ ಉಪಯುಕ್ತಕಾರಿ ನ್ಯಾಚುರಲ್ ಸನ್‌ಸ್ಕ್ರೀನ್ ಲೋಶನ್ ಎಂದು ನಿಮಗೆ ಗೊತ್ತಿದೆಯಾ? ಬೇಸಿಗೆಯಲ್ಲಿ ಕೈಗೆ ಸಿಗುವಂತೆ ನೀಲಗಿರಿ ಎಣ್ಣೆಯನ್ನು ಹತ್ತಿರವೇ ಇಟ್ಟುಕೊಂಡಿರಿ. ಸನ್ ಬರ್ನ್ ಆಗಿದೆ ಎನಿಸಿದರೆ ಸಾಕು ಸ್ವಲ್ಪ ನೀಲಗಿರಿ ಎಣ್ಣೆಯ ಸ್ಪ್ರೇ ಮಾಡಿಕೊಂಡರೆ ಸಾಕು ಕೂಡಲೆ ತ್ವಚೆಯು ತಣ್ಣಗಾಗಿ ಯೂವಿ ಕಿರಣಗಳ ದುಷ್ಪರಿಣಾಮಗಳನ್ನು ತಡೆಯಬಹುದು. ನೀರಿನಲ್ಲಿ ಈಜುವದಕ್ಕೆ ಮುಂಚೆ ಎಣ್ಣೆಯನ್ನು ದೇಹಕ್ಕೆ ಅನ್ವಯಿಸಿಕೊಂಡರೆ ತ್ವಚೆಯ ರಕ್ಷಣೆ ಮಾಡಬಹುದು.

ಸ್ವಚ್ಛವಾದ ನೀರಿನ ಜೊತೆಗೆ ಒಂದು ಚಮಚ ನೀಲಗಿರಿ ಎಣ್ಣೆಯನ್ನು ಬೆರೆಸಿಕೊಳ್ಳಿ. ಮಿಶ್ರಣವನ್ನು ಒಂದು ಸ್ಪ್ರೇಯರಿನ ಬಾಟಲಿಯಲ್ಲಿ ಶೇಖರಿಸಿಟ್ಟುಕೊಳ್ಳಿ.ಈ ಬಾಟಲಿಯನ್ನು ಯಾವಾಗಲೂ ನಿಮ್ಮ ಬಳಿಯಿರುವ ಚೀಲದಲ್ಲಿಟ್ಟುಕೊಳ್ಳಿ. ಬಿಸಿಲಿನಲ್ಲಿ ಔಟಿಂಗ್ ಹೋಗಿ ಒಂದೇಸಲಕ್ಕೆ ತುಂಬ ಶಾಖದ ಅನುಭವವಾದರೆ, ತಕ್ಷಣವೇ ಈ ಸ್ಪ್ರೇ ಹಚ್ಚಿಕೊಳ್ಳಿ. ಯಾವದೇ ತರಹದ ರಾಶ್‌ಗಳು ಅಥವ ಬಿಸಿಲು ಗುಳ್ಳೆಗಳಿಂದ ಕೂಡಲೆ ಪರಿಹಾರ ದೊರೆಯುವದು.

face water

ಎಚ್ಚರಿಕೆಯ ಒಂದೆರಡು ಸಣ್ಣ ಕಿವಿಮಾತುಗಳು

* ನಿಮ್ಮ ತ್ವಚೆಗೆ ಎಷ್ಟು ಹೊಂದಾಣಿಕೆಯಾಗುವದೋ ಅಷ್ಟು ಮಾತ್ರ ನೀಲಗಿರಿ ಎಣ್ಣೆಯನ್ನು ಲೇಪಿಸಿಕೊಳ್ಳಬೇಕು. ಒಂದೆರಡು ಸಲ ನೀವು ಪ್ರಯೋಗಮಾಡಿ ನೋಡಿ ನಂತರ ಸೂಕ್ತ ಎನ್ನಿಸುವಷ್ಟು ಮಾತ್ರ ಲೇಪಿಸಿಕೊಳ್ಳಿ. ಹೆಚ್ಚು ಕಡಿಮೆಯಾದರೆ ಅಡ್ಡ ಪರಿಣಾಮಗಳಾಗುವ ಸಾಧ್ಯತೆಗಳಿರುತ್ತವೆ.

* ಈಗೀಗ ಪ್ರತಿಯೊಂದರಲ್ಲೂ ಕಲಬೆರಿಕೆ ಕಂಡುಬರುತ್ತದೆ. ಆದ್ದರಿಂದ ಒಳ್ಳೆಯ ಮೂಲಗಳಿಂದ ಮಾತ್ರ ನೀಲಗಿರಿ ಎಣ್ಣೆಯನ್ನು ಖರೀದಿಸಿ ಉಪಯೋಗಿಸಿಕೊಳ್ಳಿ. 

* ಕಾಲಿನ ತ್ವಚೆಗೆ ಅನ್ವಯಿಸಿಕೊಂಡು ಪರೀಕ್ಷಿಸಿದ ನಂತರವೇ, ಮುಖದ ತ್ವಚೆಗೆ ಅನ್ವಯಿಸಿಕೊಳ್ಳಿ.

English summary

Beauty Benefits of Eucalyptus Oil

Essential oils are extensively used in aromatherapy. They are also major components of organic shower gels and cleansing soaps. Each essential oil has a distinctive scent which soothes our body and mind. Some essential oils have medicinal benefits too, for example, Eucalyptus oil. It is well known for its many medicinal properties. It is anti-septic, anti-inflammatory and also used as a mosquito and insect repellent.
Subscribe Newsletter