'ಬೀಟ್‌ರೂಟ್' ಫೇಸ್‌ ಮಾಸ್ಕ್- ಇನ್ನಷ್ಟು ಸುಂದರವಾಗಿ ಕಾಣುವಿರಿ!

By: jaya subramanya
Subscribe to Boldsky

ಕತ್ತರಿಸಿದಾಗ ಒಸರುವ ಕೆಂಪು ಬಣ್ಣವನ್ನು ಇಷ್ಟಪಡದೇ ಹೆಚ್ಚಿನವರು ಬೀಟ್ರೂಟ್ ಪದಾರ್ಥಗಳನ್ನು ತಿನ್ನುವುದಕ್ಕೇ ಹೋಗುವುದಿಲ್ಲ. ಆದರೆ ಬೀಟ್ರೂಟ್ ಜ್ಯೂಸ್ ಅನ್ನು ಕುಡಿಯುವ ಮೂಲಕ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ವಿಶೇಷವಾಗಿ ಕರುಳುಗಳಲ್ಲಿನ ಕಲ್ಮಶಗಳನ್ನು ಹೊರಹಾಕುವುದು, ಜೀರ್ಣಕ್ರಿಯೆಯನ್ನು ಹೆಚ್ಚಿಸುವುದು ಇತ್ಯಾದಿ...

ಆದರೆ ಈ ರಸಕ್ಕೆ ಮುಖದ ಸೌಂದರ್ಯವನ್ನೂ ಹೆಚ್ಚಿಸುವ ಗುಣವಿದೆ ಎಂದು ಹೆಚ್ಚಿನವರಿಗೆ ಗೊತ್ತಿಲ್ಲ. ಮುಖದ ಸೂಕ್ಷ್ಮ ರಂಧ್ರಗಳನ್ನು ಕಿರಿದಾಗಿಸುವುದು, ಚರ್ಮಕ್ಕೆ ಆರ್ದ್ರತೆಯನ್ನು ನೀಡುವ ಮೂಲಕ ಕಾಂತಿಯನ್ನು ಹೆಚ್ಚಿಸುವುದು ಮೊದಲಾದವುಗಳ ಮೂಲಕ ಮುಖದ ಸೂಕ್ಷ್ಮ ಚರ್ಮಕ್ಕೆ ಹೆಚ್ಚಿನ ಆರೈಕೆಯನ್ನು ನೀಡುತ್ತದೆ. ಚಮತ್ಕಾರಿಕ ಬೀಟ್‌ರೂಟ್‌ನಲ್ಲಿ ಅಡಗಿದೆ ಸೌಂದರ್ಯದ ಗುಟ್ಟು

ಹೌದು ಬೀಟ್ರೂಟ್ ರಸವನ್ನು ಬಳಸಿ ತಯಾರಿಸಿದ ಮುಖಲೇಪವನ್ನು ಹಚ್ಚಿಕೊಳ್ಳುವ ಮೂಲಕ ಹಲವು ವಿಧದಲ್ಲಿ ತ್ವಚೆಗೆ ಪ್ರಯೋಜನವನ್ನು ಪಡೆಯಬಹುದು. ವಿಶೇಷವಾಗಿ ಬಳಲಿದ ತ್ವಚೆಗೆ ತಕ್ಷಣವೇ ಆರೈಕೆ ನೀಡಿ ಮೊದಲಿನಂತಾಗಿಸಲು ಹಾಗೂ ಚರ್ಮದ ತೊಂದರೆಗಳಿಂದ ಮುಕ್ತಿ ಪಡೆಯಲು ಈ ಮುಖಲೇಪ ಉತ್ತಮವಾಗಿದೆ. ಬನ್ನಿ, ಕಳೆಗುಂದಿದ ತ್ವಚೆಯ ಆರೈಕೆಗೆ ಬೀಟ್ರೂಟ್ ಬಳಸಿ ತಯಾರಿಸಬಹುದಾದ ವಿವಿಧ ಮುಖಲೇಪಗಳ ಬಗ್ಗೆ ಅರಿಯೋಣ....

ಬೀಟ್‌ರೂಟ್ ಮತ್ತು ಬಾದಾಮಿ ಎಣ್ಣೆ ಮಾಸ್ಕ್

ಬೀಟ್‌ರೂಟ್ ಮತ್ತು ಬಾದಾಮಿ ಎಣ್ಣೆ ಮಾಸ್ಕ್

ಬೀಟ್‌ರೂಟ್‌ನ ಕೆಲವು ತುಂಡುಗಳನ್ನು ತೆಗೆದುಕೊಂಡು ಇದನ್ನು ಚೆನ್ನಾಗಿ ಅರೆದು ಪೇಸ್ಟ್‌ನಂತೆ ಮಾಡಿಕೊಳ್ಳಿ. ಇದಕ್ಕೆ 3-4 ಚಮಚ ಬಾದಾಮಿ ಎಣ್ಣೆಯನ್ನು ಸೇರಿಸಿ ಅಂತೆಯೇ 1-2 ಚಮಚ ಆಲೀವ್ ಎಣ್ಣೆಯನ್ನು ಮಿಶ್ರಮಾಡಿ. ಎಲ್ಲಾ ಮಿಶ್ರಣವನ್ನು ಮಿಕ್ಸ್ ಮಾಡಿ ಮತ್ತು ಇದರಿಂದ ನಿಮ್ಮ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ. ಈ ಬೀಟ್‌ರೂಟ್ ಮತ್ತು ಬಾದಾಮಿ ಎಣ್ಣೆ ಮಾಸ್ಕ್ ನಿಮ್ಮ ತ್ವಚೆಯನ್ನು ಹೊಳಪುಳ್ಳದ್ದಾಗಿ ಮಾಡುತ್ತದೆ.

ಬೀಟ್‌ರೂಟ್ ಮತ್ತು ಮುಲ್ತಾನಿ ಮಿಟ್ಟಿ

ಬೀಟ್‌ರೂಟ್ ಮತ್ತು ಮುಲ್ತಾನಿ ಮಿಟ್ಟಿ

ಬೀಟ್‌ರೂಟ್‌ ಅನ್ನು ಅರೆದುಕೊಂಡು ಇದಕ್ಕೆ 2 ಚಮಚ ಮುಲ್ತಾನಿ ಮಿಟ್ಟಿಯನ್ನು ಸೇರಿಸಿ. ಒಂದು ಚಮಚ ಲಿಂಬೆ ರಸವನ್ನು ಬೆರೆಸಿ ಇದರಿಂದ ಹೊಳಪು ಬರುತ್ತದೆ. ಎರಡೂ ಸಾಮಾಗ್ರಿಗಳನ್ನು ಮಿಶ್ರ ಮಾಡಿಕೊಂಡು ಇದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷಗಳ ಕಾಲ ಕಾಯಿರಿ ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಈ ಎರಡೂ ಮಿಶ್ರಣಗಳು ಮುಖದಲ್ಲಿರುವ ಮೊಡವೆಯನ್ನು ಹೋಗಲಾಡಿಸಿ ತ್ವಚೆಯನ್ನು ಆಕರ್ಷಕವಾಗಿ ಮಾಡುತ್ತದೆ.

ಬೀಟ್‌ರೂಟ್ ಮತ್ತು ಮೊಸರಿನ ಫೇಸ್ ಮಾಸ್ಕ್

ಬೀಟ್‌ರೂಟ್ ಮತ್ತು ಮೊಸರಿನ ಫೇಸ್ ಮಾಸ್ಕ್

ತ್ವಚೆಯು ವಯಸ್ಸಾದಂತೆ ಕಾಣುವುದನ್ನು ತಡೆಯಲು ಈ ಮಾಸ್ಕ್ ಸಹಕಾರಿಯಾಗಿದ್ದು ನಿಮ್ಮ ಕಳೆಗುಂದಿದ ಮುಖವನ್ನು ಹೊಳೆಯುವಂತೆ ಮಾಡುವುದು ಖಂಡಿತ. ಬೀಟ್‌ರೂಟ್ ಪೇಸ್ಟ್ ತಯಾರಿಸಿ ಇದಕ್ಕೆ 1/2 ಕಪ್ ಯೋಗರ್ಟ್ ಮಿಶ್ರ ಮಾಡಿ. ಇದಕ್ಕೆ ಚಿಟಿಕೆಯಷ್ಟು ಅರಶಿನ ಸೇರಿಸಿ ಮತ್ತು ಎಲ್ಲವನ್ನೂ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ನಿಮ್ಮ ಮುಖಕ್ಕೆ ಈ ಪೇಸ್ಟ್ ಹರಡಿಸಿ ಮತ್ತು ಸ್ವಲ್ಪ ಕಾಲಗಳ ಕಾಲ ಮಸಾಜ್ ಮಾಡಿಕೊಳ್ಳಿ.10 ನಿಮಷಗಳ ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ಬೀಟ್‌ರೂಟ್ ಮತ್ತು ಕಿತ್ತಳೆ ಜ್ಯೂಸ್ ಮಾಸ್ಕ್

ಬೀಟ್‌ರೂಟ್ ಮತ್ತು ಕಿತ್ತಳೆ ಜ್ಯೂಸ್ ಮಾಸ್ಕ್

ಬೀಟ್‌ರೂಟ್ ರಸವನ್ನು ಕಿತ್ತಳೆ ಜ್ಯೂಸ್‌ನೊಂದಿಗೆ ಮಿಶ್ರ ಮಾಡಿಕೊಳ್ಳಿ ನಿಮ್ಮ ಮುಖಕ್ಕೆ ಇದನ್ನು ಹಚ್ಚಿಕೊಳ್ಳಿ. ಇದು ನೈಸರ್ಗಿಕ ಸನ್‌ಸ್ಕ್ರೀನ್‌ನಂತೆ ಕಾರ್ಯನಿರ್ವಹಿಸುತ್ತಿದ್ದು, ಹಾನಿಕಾರಕ ಯುವಿ ಕಿರಣಗಳಿಂದ ನಿಮ್ಮ ತ್ವಚೆಯನ್ನು ರಕ್ಷಿಸಲಿದೆ. ಐರನ್ ಅಂಶಗಳು ಇದರಲ್ಲಿ ಹೆಚ್ಚಾಗಿದ್ದು, ತ್ವಚೆಗೆ ಉಂಟಾಗುವ ಹಾನಿಯಿಂದ ಬೀಟ್‌ರೂಟ್ ರಕ್ಷಿಸಲಿದೆ.

ಬೀಟ್‌ರೂಟ್ ಮತ್ತು ಲಿಂಬೆ ಫೇಸ್‌ ಮಾಸ್ಕ್

ಬೀಟ್‌ರೂಟ್ ಮತ್ತು ಲಿಂಬೆ ಫೇಸ್‌ ಮಾಸ್ಕ್

ಎರಡು ಚಮಚಗಳಷ್ಟು ಬೀಟ್‌ರೂಟ್ ರಸವನ್ನು ತೆಗೆದುಕೊಂಡು ಇದಕ್ಕೆ ಎರಡು ಚಮಚ ಲಿಂಬೆ ರಸವನ್ನು ಸೇರಿಸಿ. ನಿಮಗೆ ಬೇಕಿದ್ದರೆ ಎರಡು ಚಮಚಗಳಷ್ಟು ರೋಸ್ ವಾಟರ್ ಅನ್ನು ಮಿಶ್ರ ಮಾಡಿಕೊಳ್ಳಿ. ಈಗ ಎಲ್ಲವನ್ನೂ ಮಿಶ್ರ ಮಾಡಿಕೊಂಡು ನಿಮ್ಮ ಮುಖಕ್ಕೆ ಇದನ್ನು ಹಚ್ಚಿಕೊಳ್ಳಿ.ಮುಖದಲ್ಲಿರುವ ಗಾಢ ಪಿಗ್ಮೆಂಟೇಶನ್ ನಿವಾರಿಸಲು ಲಿಂಬೆ ಸಹಕಾರಿ ಎಂದೆನಿಸಿದ್ದು, ಬೀಟ್‌ರೂಟ್‌ನಿಂದ ನೀವು ತ್ವಚೆಯ ಹೊಳಪನ್ನು ಪಡೆದುಕೊಳ್ಳಬಹುದು. ರೋಸ್‌ವಾಟರ್ ಬಳಸುವುದು ನಿಮ್ಮ ತ್ವಚೆಯನ್ನು ಹೊಳಪುಳ್ಳದ್ದಾಗಿ ಮಾಡಲಿದ್ದು ಮೃದುವಾದ ಅನುಭವವನ್ನು ನಿಮಗೆ ನೀಡಲಿದೆ.

ಬೀಟ್‌ರೂಟ್ ಮತ್ತು ಕಡಲೆಹಿಟ್ಟು ಪ್ಯಾಕ್

ಬೀಟ್‌ರೂಟ್ ಮತ್ತು ಕಡಲೆಹಿಟ್ಟು ಪ್ಯಾಕ್

ಬೀಟ್‌ರೂಟ್ ಅರೆದುಕೊಂಡು ಅದನ್ನು ಕಡಲೆ ಹಿಟ್ಟಿನೊಂದಿಗೆ ಮಿಶ್ರ ಮಾಡಿ. ಇದಕ್ಕೆ ಒಂದು ಕಪ್ ಮಿಲ್ಕ್ ಕ್ರೀಂ ಸೇರಿಸಿ ಮತ್ತು ಒಂದು ಚಮಚದಷ್ಟು ಹುಡಿ ಮಾಡಿದ ಗುಲಾಬಿ ದಳಗಳನ್ನು ಸೇರಿಸಿ. ಎಲ್ಲವನ್ನೂ ಸೇರಿಸಿ ನುಣ್ಣನೆಯ ಪೇಸ್ಟ್ ತಯಾರಿಸಿ ನಂತರ ಇದನ್ನು ಹಚ್ಚಿಕೊಂಡು ಒಣಗಲು ಬಿಡಿ. ಸ್ವಲ್ಪ ಸಮಯಗಳ ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಈ ಫೇಸ್ ಪ್ಯಾಕ್ ನಿಮಗೆ ಹೊಳೆಯುವ ಆಕರ್ಷಕ ತ್ವಚೆಯನ್ನು ನೀಡಲಿದೆ.

ಬೀಟ್‌ರೂಟ್ ಮತ್ತು ಅರಿಶಿನ ಫೇಸ್ ಮಾಸ್ಕ್

ಬೀಟ್‌ರೂಟ್ ಮತ್ತು ಅರಿಶಿನ ಫೇಸ್ ಮಾಸ್ಕ್

ಬೀಟ್‌ರೂಟ್ ಮತ್ತು ಅರಿಶಿನದ ಫೇಸ್‌ ಮಾಸ್ಕ್ ನಿಮಗೆ ನೈಸರ್ಗಿಕ ಹೊಳಪನ್ನು ನೀಡಲು ಸಹಕಾರಿಯಾಗಿದೆ. ಈ ಪೇಸ್ಟ್‌ಗೆ ಹಾಲನ್ನು ಸೇರಿಸಿಕೊಂಡು ಇದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಬಹುದಾಗಿದೆ. ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಿರಿ. ಇದರಿಂದ ನಿಮ್ಮ ಮುಖ ಹೊಳೆಯುವುದ ಖಂಡಿತ ಮತ್ತು ಆಕರ್ಷಕಕಾರಿಯಾಗಿ ಕಾಣುವುದು ನಿಜ.

 
English summary

Beauty Benefits Of Beetroot Juice For Perfect Glowing Skin

Beet juice can be used in several face packs and masks, as it helps to rejuvenate your skin and give it a radiant glow. It has also been a perfect food for treating all kinds of skin problems easily.So, now let’s check the different beetroot face masks that you can use on distressed and dull skin.
Story first published: Thursday, February 23, 2017, 23:43 [IST]
Subscribe Newsletter