For Quick Alerts
ALLOW NOTIFICATIONS  
For Daily Alerts

ಚಮತ್ಕಾರಿಕ ಬೀಟ್‌ರೂಟ್‌ನಲ್ಲಿ ಅಡಗಿದೆ ಸೌಂದರ್ಯದ ಗುಟ್ಟು

|

ಬೀಟ್‌ರೂಟ್‌ನಲ್ಲಿ ಸಮೃದ್ಧವಾದ ಪೋಷಕಾಂಶಗಳು ಇರುತ್ತವೆ. ಆದ್ದರಿಂದ ಇದನ್ನು ಸಾಮಾನ್ಯವಾಗಿ ಸಲಾಡ್ ಮತ್ತು ಇತರೆ ಖಾದ್ಯಗಳ ತಯಾರಿಕೆಗೆ ಇದನ್ನು ಬಳಸುತ್ತಾರೆ. ಆದರೆ ಈ ಬೀಟ್‌ರೂಟ್‍ಗಳನ್ನು ಸ್ಕಿನ್ ಕೇರ್‌ಗಾಗಿ ಸಹ ಬಳಸುತ್ತಾರೆ ಎಂಬುದು ನಿಮಗೆ ಗೊತ್ತೇ? ಬೀಟ್‌ರೂಟ್‌ನಿಂದ ತ್ವಚೆಯ ರಕ್ಷಣೆಯನ್ನು ಮಾಡಿಕೊಳ್ಳುವುದು ನಿಮಗೆ ಅತ್ಯಂತ ಅಗ್ಗವಾದ ಮಾರ್ಗವಾಗಿರುತ್ತದೆ.

ಮೊದಲಿಗೆ ಇದೊಂದು ಸ್ವಾಭಾವಿಕವಾದ ಪದಾರ್ಥವಾಗಿದೆ ಮತ್ತು ಇದು ನಿಮ್ಮ ತ್ವಚೆಗೆ ಸುರಕ್ಷಿತವು ಸಹ ಹೌದು. ಜೊತೆಗೆ ಇದನ್ನು ಬಹಳಷ್ಟು ಫೇಸ್‌ಪ್ಯಾಕ್‌ಗಳಲ್ಲಿ ಸಹ ಬಳಸಲಾಗುತ್ತದೆ. ತ್ವಚೆಗೆ ಹೊಳಪನ್ನು ನೀಡುವ ಸಾಮರ್ಥ್ಯ ಇದಕ್ಕೆ ಇರುವುದೇ ಇದರ ಮುಖ್ಯ ಕಾರಣ ಎಂದು ಹೇಳಬಹುದು. ಇದರಲ್ಲಿ ಅಂತೋ-ಸಿಯಾನಿನ್ಸ್ ಎಂಬ ಅಂಶ ಸಮೃದ್ಧವಾಗಿರುತ್ತದೆ. ಆದ್ದರಿಂದಲೇ ಇದು ಕೂದಲಿಗೆ ಮತ್ತು ತ್ವಚೆಗೆ ಉತ್ತಮ ಎಂದು ಹೇಳಲಾಗುತ್ತದೆ.

ತ್ವಚೆಯ ಬಣ್ಣವನ್ನು ಸುಧಾರಿಸುವಲ್ಲಿ ಇದರ ಕೊಡುಗೆ ಅಪಾರ, ಇದನ್ನು ಬಳಸಿದರೆ ನಿಮ್ಮ ತ್ವಚೆ ಯೌವನದಿಂದ ತುಂಬಿ ತುಳುತ್ತದೆ. ಜೊತೆಗೆ ಇದು ಒಣ ತ್ವಚೆಯನ್ನು ನಿವಾರಿಸುತ್ತದೆ ಮತ್ತು ಉರಿಬಾವನ್ನು ಸಹ. ಇದೆಲ್ಲ ಕಾರಣದಿಂದ ಬೀಟ್‌ರೂಟ್‌ಗೆ ನಾವು ಧನ್ಯವಾದಗಳನ್ನು ತಿಳಿಸಲೆ ಬೇಕು. ಕೆಂಪು ಕೆಂಪಾದ ಗಡ್ಡೆ ಬೀಟ್‌ರೂಟ್‌ನ ವೈಶಿಷ್ಟ್ಯವೇನು?

Skin Care With Beetroot

ಇದನ್ನು ಬಳಸಿ ಕೆಲವರು ಮೊಡವೆಗಳಿಂದ ಸಹ ಪಾರಾಗುತ್ತಾರೆ. ಜೊತೆಗೆ ತ್ವಚೆಯ ಮೇಲಿನ ಕಲೆಗಳನ್ನು ಹೋಗಲಾಡಿಸಿಕೊಳ್ಳುವ ಸಲುವಾಗಿ ಬಳಸುತ್ತಾರೆ. ಇನ್ನು ಕೆಲವರ ಪ್ರಕಾರ ಇದು ತಲೆಹೊಟ್ಟನ್ನು ಸಹ ನಿವಾರಿಸುತ್ತದೆಯಂತೆ. ಬನ್ನಿ ಇಂದು ನಾವು ತ್ವಚೆಗೆ ಬೀಟ್‌ರೂಟ್ ಹೇಗೆ ಸಹಕರಿಸುತ್ತದೆ ಎಂಬುದನ್ನು ನೋಡೋಣ...

ಹೊಳೆಯುವ ತ್ವಚೆ
ಬೀಟ್‌ರೂಟ್ ರಸವನ್ನು ನೀವು ತ್ವಚೆಯ ರಕ್ಷಣೆಗೆ ಬಳಸಬಹುದು. ಇದಕ್ಕಾಗಿ ಬೀಟ್‍ರೂಟನ್ನು ರುಬ್ಬಿ ರಸವನ್ನು ಪಡೆಯಿರಿ. ಇದಕ್ಕೆ ಸ್ವಲ್ಪ ಕೆನೆಯನ್ನು ಬೆರೆಸಿ, ಇವೆರಡನ್ನು ಚೆನ್ನಾಗಿ ಬೆರೆಸಿಕೊಳ್ಳಿ. ನಂತರ ಅದನ್ನು ಮುಖಕ್ಕೆ ಲೇಪಿಸಿ. ಇದು ಒಣಗಿದ ನಂತರ ಮುಖವನ್ನು ತಣ್ಣೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಇದರಿಂದ ನಿಮ್ಮ ಮುಖವು ತಾಜಾ ಆಗಿ ಮತ್ತು ಸ್ವಚ್ಛವಾಗಿ ಕಾಣುತ್ತದೆ.

ಟೋನರ್
ಬೀಟ್‌ರೂಟ್ ಅನ್ನು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ. ಇದರ ಜೊತೆಗೆ ಎಲೆಕೋಸನ್ನು ಕತ್ತರಿಸಿಕೊಳ್ಳಿ. ಇವುಗಳನ್ನೆಲ್ಲವನ್ನು ಬ್ಲೆಂಡರ್‌ನಲ್ಲಿ ಹಾಕಿ ರುಬ್ಬಿಕೊಳ್ಳಿ, ಇದಕ್ಕೆ ಸ್ವಲ್ಪ ನೀರನ್ನು ಹಾಕಿ. ಇದರ ಜೊತೆಗೆ ಐಸ್-ಕ್ಯೂಬ್‌ಗಳನ್ನು ಹಾಕಿ ಕ್ರೀಮ್ ರೀತಿ ಮಾಡಿಕೊಳ್ಳಿ. ಇದನ್ನು ನಿಮ್ಮ ಮುಖಕ್ಕೆ ಹಾಕಿದಾಗ ತಾಜಾತನ ಮತ್ತು ಆಹ್ಲಾದಕತೆಯು ಬರುತ್ತದೆ. ಯಾವಾಗ ನಿಮ್ಮ ತ್ವಚೆಗೆ ತಾಜಾತನದ ಅವಶ್ಯಕತೆಯಿದ್ದಾಗ, ನಿಮ್ಮ ಮುಖಕ್ಕೆ ಐಸ್‌ಕ್ಯೂಬ್ ಬಳಸಿ. ಬೀಟ್‌ರೂಟ್ ಬಳಸಿ, ನಿಮ್ಮ ಮುಖಕ್ಕೆ ಹೊಳಪನ್ನು ಬರಿಸಿಕೊಳ್ಳಿ.

ಪೋಷಣೆ
ಬೀಟ್‌ರೂಟ್ ಮೂಲಕ ತ್ವಚೆಯನ್ನು ಆರೈಕೆ ಮಾಡಿಕೊಳ್ಳುವುದು ಹೇಗೆ? ಬೀಟ್‌ರೂಟ್ ನಿಮ್ಮ ತ್ವಚೆಯ ಒಳಭಾಗದಿಂದ ಸಹ ಆರೈಕೆ ಮಾಡುತ್ತದೆ. ಅಧ್ಯಯನಗಳ ಪ್ರಕಾರ ಬೀಟ್‌ರೂಟ್ ರಕ್ತವನ್ನು ಸಹ ಶುದ್ಧಿಗೊಳಿಸುತ್ತದೆಯಂತೆ. ಕ್ಯಾರಟ್ ಜ್ಯೂಸ್ ಜೊತೆಗೆ ಬೆರೆಸಿಕೊಂಡು ಪ್ರತಿ ದಿನ ಸೇವಿಸಿ. ನಿಮ್ಮ ದೇಹದಲ್ಲಿ ಚೈತನ್ಯ ಇಲ್ಲದಿರುವಾಗ ಇದನ್ನು ಸೇವಿಸಿ, ಇದರಿಂದ ನಿಮ್ಮ ದೇಹ ಮತ್ತು ತ್ವಚೆ ಎರಡಕ್ಕೂ ಚೈತನ್ಯ ದೊರೆಯುತ್ತದೆ. ಅಪ್ಸರೆಯಂತಹ ಸೌಂದರ್ಯಕ್ಕಾಗಿ ಹೆಸರುಬೇಳೆಯೆಂಬ ಸಿದ್ಧೌಷಧ

ಕೂದಲು
ನಿಮಗೆ ಗೊತ್ತೆ ಕೂದಲಿನ ಸಮಸ್ಯೆಯಿರುವವರು ಬೀಟ್‌ರೂಟ್ ಬಳಸುತ್ತಾರೆ ಎಂದು? ಮೆಹಂದಿಯ ಪುಡಿಯ ಜೊತೆಗೆ ಬೀಟ್‌ರೂಟ್ ರಸವನ್ನು ಬೆರೆಸಿ ಲೇಪಿಸಿ. ಎಲ್ಲೆಲ್ಲಿ ನಿಮ್ಮ ಕೂದಲಿನ ಸಮಸ್ಯೆಯಿದೆಯೋ, ಆ ಭಾಗಕ್ಕೆ ಮಾತ್ರ ಲೇಪಿಸಿ, ಸ್ವಲ್ಪ ಸಮಯ ಬಿಡಿ. ನಂತರ ಸ್ನಾನ ಮಾಡಿ.

English summary

Skin Care With Beetroot

Beetroots are rich in nutrients and that is why we tend to use them in our salads and other dishes. But do you know the fact that beetroots are good for skincare too? Well, skin care with beetroot is also inexpensive. So, let us discuss about skin care with beetroot.
X
Desktop Bottom Promotion