For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್: ಹುಣಸೆ ಹಣ್ಣಿನ ಪೇಸ್ಟ್ ಹಚ್ಚಿ ಮುಖ ಇನ್ನಷ್ಟು ಅಂದಗೊಳಿಸಿ!

By Manu
|

ಹುಣಸೆ ಹಣ್ಣು ಎಂದರೆ ಸಾಮಾನ್ಯವಾಗಿ ಸಾರು ಹಾಗೂ ಇನ್ನಿತರ ಅಡುಗೆ ತಯಾರಿಸಲು ಬಳಸುತ್ತಾರೆ, ಎನ್ನುವ ವಿಚಾರ ಸಾಮಾನ್ಯವಾಗಿ ಎಲ್ಲರಿಗೂ ತಿಳಿದ ವಿಚಾರವೆ. ಆದರೆ ಹುಣಸೆ ಹಣ್ಣಿನಿಂದ ತ್ವಚೆಯ ಚಿಕಿತ್ಸೆಯನ್ನು ಮಾಡಬಹುದು ಎನ್ನುವುದು ಅನೇಕರು ತಿಳಿದಿಲ್ಲ. ಹುಣಸೆ ಹಣ್ಣು ರುಚಿಯಲ್ಲಿ ಹುಳಿಯಾಗಿದ್ದರೂ ತ್ವಚೆಯ ಆರೈಕೆಯಲ್ಲಿ ಉತ್ತಮ ಫಲಿತಾಂಶವನ್ನು ನೀಡುತ್ತದೆ. ಒಂದು ವಾರ ಹುಣಸೆ ಹಣ್ಣನ್ನು ಬಳಸಿದರೆ ತ್ವಚೆಯಲ್ಲಿ ಉಂಟಾಗುವ ವ್ಯತ್ಯಾಸವನ್ನು ನೀವು ಗುರುತಿಸಬಹುದು.

ತ್ವಚೆಯ ಮೇಲೆ ಹುಣಸೆ ಹಣ್ಣಿನ ರಸವನ್ನು ನೇರವಾಗಿ ಬಳಸುವುದರ ಬದಲಿಗೆ ಹುಣಸೆ ಹಣ್ಣು ಆಧಾರಿತವಾದ ಫೇಸ್ ಪ್ಯಾಕ್ ಬಳಸಿದರೆ ಉತ್ತಮ ಪರಿಣಾಮ ಬೀರುವುದು. ಇವುಗಳ ತಯಾರಿಗೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಆದರೆ ಉತ್ತಮ ಫಲಿತಾಂಶ ದಿರ್ಘಕಾಲದವರೆಗೆ ಉಳಿದುಕೊಳ್ಳುತ್ತದೆ. ಈ ವಿಚಾರವಾಗಿ ನಿಮಗೂ ಕುತೂಹಲ ಹೆಚ್ಚಾದರೆ ನಾವಿಲ್ಲಿ ನೀಡಿರುವ ವಿವಿಧ ಬಗೆಯ ಫೇಸ್ ಪ್ಯಾಕ್‍ಗಳ ಬಗ್ಗೆ ತಿಳಿದುಕೊಳ್ಳಿ...

ಮುಖದ ಕಾಂತಿಗೆ ಹುಣಸೆ ಲೇಪನ

ತ್ವಚೆಯ ಹೊಳಪಿಗೆ

ತ್ವಚೆಯ ಹೊಳಪಿಗೆ

ಸಲಕರಣೆಗಳು:

-ಹುಣಸೆ ಹಣ್ಣು

-ಬಿಸಿ ನೀರು

-ಅರಿಶಿನ ಪುಡಿ

ವಿಧಾನ:

1. ಎರಡು ಹುಣಸೆ ಹಣ್ಣನ್ನು ಬಿಸಿ ನೀರಿನಲ್ಲಿ 15 ನಿಮಿಷಗಳ ಕಾಲ ನೆನೆಯಿಡಿ.

2. ಹುಣಸೆ ಹಣ್ಣಿನ ತಿರುಳನ್ನು (ಒಂದು ಚಮಚದಷ್ಟು) ತೆಗೆಯಿರಿ.

3. ಒಂದು ಸಣ್ಣ ಚಿಟಕಿಯಷ್ಟು ಅರಿಶಿನ ಪುಡಿಯನ್ನು ಹುಣಸೆ ತಿರುಳಿಗೆ ಸೇರಿಸಿ. ಚೆನ್ನಾಗಿ ಮಿಶ್ರಗೊಳಿಸಿ.

4. ನಂತರ ಮುಖಕ್ಕೆ ಅನ್ವಯಿಸಿ.

5. ಅರ್ಧ ಗಂಟೆಯ ಬಳಿಕ ಮುಖವನ್ನು ತೊಳೆಯಿರಿ.

ಸ್ಕ್ರಬ್ಬರ್ ರೀತಿಯಲ್ಲಿ ಹುಣಸೆ ಹಣ್ಣು:

ಸ್ಕ್ರಬ್ಬರ್ ರೀತಿಯಲ್ಲಿ ಹುಣಸೆ ಹಣ್ಣು:

ಸಲಕರಣೆ:

ಹುಣಸೆ ಹಣ್ಣು

ಬಿಸಿ ನೀರು

ಮೊಸರು

ಕಲ್ಲುಪ್ಪು

ವಿಧಾನ:

1. ಎರಡು ಹುಣಸೆ ಹಣ್ಣನ್ನು ಬಿಸಿ ನೀರಿನಲ್ಲಿ 15 ನಿಮಿಷಗಳ ಕಾಲ ನೆನೆಯಿಡಿ.

2. ಹುಣಸೆ ಹಣ್ಣಿನ ತಿರುಳನ್ನು (ಒಂದು ಚಮಚದಷ್ಟು) ತೆಗೆಯಿರಿ.

3. ಅರ್ಧ ಟೇಬಲ್ ಚಮಚ ಮೊಸರಿಗೆ ಒಂದು ಚಮಚ ಹುಣಸೆ ತಿರುಳನ್ನು ಸೇರಿಸಿ, ಮಿಶ್ರಗೊಳಿಸಿ.

4. ಒಂದು ಚಿಟಕಿ ಕಲ್ಲುಪ್ಪನ್ನು ಮೊಸರು ಮತ್ತು ಹುಣಸೆ ಮಿಶ್ರಣಕ್ಕೆ ಸೇರಿಸಿ.

5. ತ್ವಚೆಯ ಮೇಲೆ ಈ ಮಿಶ್ರಣವನ್ನು ಅನ್ವಯಿಸಿ 10 ನಿಮಿಷಗಳಕಾಲ ಮಸಾಜ್ ಮಾಡಿ.

6. ನಂತರ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಿರಿ.

7. ಮೊಸರು ಅಲರ್ಜಿ ಇರುವವರು ಮೊಸರಿಗೆ ಬದಲು ಕಚ್ಚಾ ಹಾಲನ್ನು ಬಳಸಬಹುದು.

ಮೊಡವೆ ಪೀಡಿತ ತ್ವಚೆಗೆ

ಮೊಡವೆ ಪೀಡಿತ ತ್ವಚೆಗೆ

ಸಲಕರಣೆಗಳು:

ಹುಣಸೆ ಹಣ್ಣು

ಬಿಸಿ ನೀರು

ನಿಂಬೆ ರಸ

ಸಕ್ಕರೆ

ಅಡುಗೆ ಸೋಡಾ

ವಿಧಾನ:

1. 3-5 ಹುಣಸೆ ಹಣ್ಣನ್ನು ಬಿಸಿ ನೀರಿನಲ್ಲಿ 15 ನಿಮಿಷ ನೆನೆಯಿಟ್ಟು, ನಂತರ ತಿರುಳನ್ನು ತೆಗೆದುಕೊಳ್ಳಿ.

2. ಎರಡು ಟೇಬಲ್ ಚಮಚ ಹುಣಸೆ ತಿರುಳಿಗೆ ಅರ್ಧ ಟೀ ಚಮಚ ನಿಂಬೆ ರಸ ಮತ್ತು ಅಡುಗೆ ಸೋಡಾವನ್ನು ಬೆರೆಸಿ.

3. ಹುಣಸೆ ತಿರುಳಿಗೆ ಒಂದು ಚಮಚ ಸಕ್ಕರೆಯನ್ನು ಸೇರಿಸಿ, ಮಿಶ್ರಗೊಳಿಸಿ.

4. ಮೊಡವೆಯ ಹತ್ತಿರ ಹಚ್ಚಿಕೊಳ್ಳಿ. ಆದರೆ ಮೊಡವೆಗಳಿಗಲ್ಲ.

5. 15-20 ನಿಮಿಷದ ಬಳಿಕ ತಣ್ಣೀರಿನಲ್ಲಿ ತೊಳೆಯಿರಿ.

6. ಮೊಡವೆ ಪೀಡಿತ ತ್ವಚೆಗೆ ಈ ಫೇಸ್ ಪ್ಯಾಕ್‍ಅನ್ನು ವಾರದಲ್ಲಿ ಮೂರು ಬಾರಿ ಬಳಸಬಹುದು.

ಸ್ಕಿನ್ ಟೋನರ್ ಆಗಿ ಹುಣಸೆ ಹಣ್ಣಿನ ಕಾರ್ಯ

ಸ್ಕಿನ್ ಟೋನರ್ ಆಗಿ ಹುಣಸೆ ಹಣ್ಣಿನ ಕಾರ್ಯ

ಸಲಕರಣೆ:

ಹುಣಸೆ ಹಣ್ಣು

ನೀರು

ಲೆವೆಂಡರ್ ಎಸೆನ್ಸಿಯಲ್ ಎಣ್ಣೆ

ವಿಧಾನ:

1. ಅರ್ಧ ಕೆ.ಜಿ ಹುಣಸೆ ಹಣ್ಣಿಗೆ ಪಾತ್ರೆಯ ತುಂಬ ನೀರನ್ನು ಸೇರಿಸಿ ಒಂದು ಗಂಟೆಗಳ ಕಾಲ ಬೇಯಿಸಿ. ಕೊನೆಯಲ್ಲಿ ನೀರಿನ ಬಣ್ಣವು ಬದಲಾವಣೆ ಹೊಂದಿರಬೇಕು.

2. ತಣಿಯಲು ಸ್ವಲ್ಪ ಸಮಯ ಬಿಟ್ಟು, ನಂತರ ಹುಣಸೆ ಹಣ್ಣನ್ನು ನೀರಿನಿಂದ ಬೇರ್ಪಡಿಸಿ.

3. ತಣ್ಣಗಾದ ಹುಣಸೆ ಹಣ್ಣಿನ ರಸಕ್ಕೆ ಲ್ಯಾವೆಂಡರ್ ಎಸೆನ್ಸಿಯಲ್ ಎಣ್ಣೆಯ 5-8 ಹನಿಯನ್ನು ಸಿಂಪಡಿಸಿ, ಮಿಶ್ರಗೊಳಿಸಿ.

4. ಹುಣಸೆ ಹಣ್ಣಿನ ತ್ವಚೆಯ ಟೋನರ್‍ಅನ್ನು ಒಂದು ವಾರಗಳ ಕಾಲ ಶೇಖರಿಸಿ ಇಡಬಹುದು.

5. ಹುಣಸೆ ಹಣ್ಣಿನ ಟೋನರ್‍ಅನ್ನು ನಿತ್ಯವೂ ತ್ವಚೆಗೆ ಅನ್ವಯಿಸಬಹುದು.

6. ಲ್ಯಾವೆಂಡರ್ ಎಣ್ಣೆಯ ಬದಲಿಗೆ ಚಹಾ ಮರದ ಎಣ್ಣೆಯನ್ನು ಬಳಸಬಹುದು.

ತ್ವಚೆಯ ತಕ್ಷಣದ ಹೊಳಪಿಗೆ

ತ್ವಚೆಯ ತಕ್ಷಣದ ಹೊಳಪಿಗೆ

ಸಲಕರಣೆಗಳು

ಹುಣಸೆ ಹಣ್ಣು

ಮುಲ್ತಾನಿ ಮಿಟ್ಟಿ/ಮಣ್ಣು

ಶ್ರೀಗಂಧದ ಪುಡಿ

ಮೊಸರು/ಹಾಲು

ಗುಲಾಬಿ ನೀರು

ವಿಧಾನ:

1. 10 ಹುಣಸೆ ಹಣ್ಣನ್ನು ಬಿಸಿ ನೀರಿನಲ್ಲಿ 15 ನಿಮಿಷಗಳ ಕಾಲ ನೆನೆಯಿಡಿ.

2. 3 ಟೇಬಲ್ ಚಮಚದಷ್ಟು ಹುಣಸೆ ಹಣ್ಣಿನ ತಿರುಳನ್ನು ತೆಗೆದುಕೊಳ್ಳಿ.

3. ಹುಣಸೆ ಹಣ್ಣಿನ ತಿರುಳಿಗೆ ಒಂದು ಟೀ ಚಮಚ ಕಚ್ಚಾ ಹಾಲು ಅಥವಾ ಮೊಸರನ್ನು ಸೇರಿಸಿ, ಮಿಶ್ರಗೊಳಿಸಿ.

4. ನಂತರ ಒಂದು ಟೀ ಚಮಚ ಮುಲ್ತಾನಿ ಮಣ್ಣು, ಶ್ರೀಗಂಧದ ಪುಡಿಯನ್ನು ಸೇರಿಸಿ.

5. ಪುಡಿಗಳನ್ನು ಸೇರಿಸಿದಾಗ ಹುಣಸೆ ಪೇಸ್ಟ್ ತುಂಬಾ ದಪ್ಪಗಾಗುತ್ತದೆ. ಆಗ ನಿಧಾನಕ್ಕೆ ಫೇಸ್ ಪ್ಯಾಕ್‍ನ ಸ್ಥಿರತೆಯಲ್ಲಿಟ್ಟುಕೊಳ್ಳಲು 5-10 ಹನಿ ಗುಲಾಬಿ ನೀರನ್ನು ಸೇರಿಸಿ. ಅದು ತ್ವಚೆಯ ಮೇಲೆ ಯಾವುದೆ ಹಾನಿ ಉಂಟಾಗದಂತೆ ತಡೆಯುತ್ತದೆ.

6. ತ್ವಚೆಯ ಮೇಲೆ ಮಿಶ್ರಣವನ್ನು ಅನ್ವಯಿಸಿ.

7. 45 ನಿಮಿಷಗಳ ನಂತರ ತಣ್ಣೀರಿನಲ್ಲಿ ಮುಖವನ್ನು ತೊಳೆಯಿರಿ.

English summary

Apply Tamarind On Your Skin And See These Changes

Tamarind is beneficial for your skin and the best part is, you don't have to consume it to enjoy its benefits. The taste of tamarind is not really appealing and thus applying it on the skin is a better option. Use tamarind once in a week in your skincare routine and you will see the difference.
X
Desktop Bottom Promotion