ಚಳಿಗಾಲದಲ್ಲಿ ಕಾಡುವ ಚರ್ಮದ ಸಮಸ್ಯೆಗಳಿಗೆ ಅದ್ಭುತ ಪರಿಹಾರಗಳು

Posted By: Lekhaka
Subscribe to Boldsky

ದೇಹದ ಸೌಂದರ್ಯವು ನಮ್ಮ ಆರೋಗ್ಯವನ್ನು ಹೇಗೆ ಅವಲಂಬಿಸಿರುತ್ತದೆಯಾ ಅದೇ ರೀತಿಯ ಬಾಹ್ಯ ಹವಾಮಾನವು ಚರ್ಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು. ಅದರಲ್ಲೂ ಚಳಿಗಾಲದಲ್ಲಿ ಚರ್ಮದ ಆರೈಕೆ ಬಗ್ಗೆ ಹೆಚ್ಚಿನ ಸಮಯ ನೀಡಬೇಕು. ಚಳಿಗಾಲದಲ್ಲಿ ಶೀತ ವಾತಾವರಣದಿಂದಾಗಿ ಚರ್ಮವು ತೇವಾಂಶ ಕಳೆದುಕೊಂಡು ಒಣಗುವುದು, ತುರಿಕೆ ಹಾಗೂ ಚರ್ಮವು ಎದ್ದು ಬರುವುದು. ಇದರಿಂದ ಚರ್ಮವು ನಿಸ್ತೇಜವಾಗುವುದು. ಒಣ ಚರ್ಮವು ಪುರುಷರು ಹಾಗೂ ಮಹಿಳೆಯರ ಮೇಲೆ ಪರಿಣಾಮ ಬೀರುವುದು.

ಚಳಿಗಾಲದಲ್ಲಿ ಚರ್ಮದ ಆರೈಕೆಗೆ ಸೂಕ್ತ ಮನೆಮದ್ದುಗಳು

ಆದರಲ್ಲೂ ಚರ್ಮದಲ್ಲಿ ನೈಸರ್ಗಿಕ ತೈಲದ ಪ್ರಮಾಣ ಕಡಿಮೆ ಇರುವಂತಹ ವಯಸ್ಸಾದವರಲ್ಲಿ ಇದು ಹೆಚ್ಚಾಗಿರುವುದು. ವರ್ಷದ ಇತರ ಸಮಯದಲ್ಲಿ ಆರೋಗ್ಯಕರ ಚರ್ಮ ಹೊಂದಿರುವವರಿಗೆ ಕೂಡ ಚಳಿಗಾಲದಲ್ಲಿ ಚರ್ಮದ ರದ್ದುಗಳ ಸಮಸ್ಯೆ ಕಾಣಿಸಿಕೊಳ್ಳುವುದು. ಈ ಸಮಸ್ಯೆಯು ಸಾಮಾನ್ಯ ಮತ್ತು ಪ್ರತೀ ವರ್ಷ ಚಳಿಗಾಲದ ವೇಳೆ ಇದು ಮರುಕಳಿಸುತ್ತಾ ಇರುವುದು. ಚಳಿಗಾಲದ ರದ್ದುಗಳ ಸಮಸ್ಯೆಯ ಲಕ್ಷಣಗಳು ಏನು?  ಚಳಿಗಾಲದ ರದ್ದುಗಳ ಸಮಸ್ಯೆಯನ್ನು ಈ ಕೆಳಗೆ ನೀಡಲಾಗಿದೆ... 

ಚಳಿಗಾಲದ ರದ್ದುಗಳ ಸಮಸ್ಯೆಯ ಲಕ್ಷಣಗಳು ಏನು?

ಚಳಿಗಾಲದ ರದ್ದುಗಳ ಸಮಸ್ಯೆಯ ಲಕ್ಷಣಗಳು ಏನು?

ಚಳಿಗಾಲದ ರದ್ದುಗಳ ಸಮಸ್ಯೆಯನ್ನು ಈ ಕೆಳಗೆ ನೀಡಲಾಗಿದೆ.

ಊತ

ತುರಿಕೆ

ಕೆಂಪಾಗುವುದು

ಬೊಕ್ಕೆಗಳು

ಚಳಿಗಾಲದ ರದ್ದುಗಳು ನಿಮ್ಮ ಕೈ, ಕಾಲು ಮತ್ತು ಭುಜದಲ್ಲಿ ಕಾಣಿಸಿಕೊಳ್ಳಬಹುದು. ಕೆಲವೊಂದು ಸಂದರ್ಭದಲ್ಲಿ ಇದು ಸಂಪೂರ್ಣದಲ್ಲಿ ದೇಹದಲ್ಲಿ ಕಾಣಿಸಬಹುದು. ಸರಿಯಾದ ಆರೈಕೆ ಮತ್ತು ಚಿಕಿತ್ಸೆ ಮಾಡದೆ ಇದ್ದರೆ ರದ್ದುಗಳು ಸಂಪೂರ್ಣ ಚಳಿಗಾಲ ಪೂರ್ತಿ ಹಾಗೆ ಉಳಿದುಕೊಳ್ಳುವುದು. ಇದನ್ನು ಯಾರು ಇಷ್ಟಪಡಲ್ಲ. ಇದರ ಬದಲಿಗೆ ಕೆಲವೊಂದು ನೈಸರ್ಗಿಕ ಮನೆಮದ್ದುಗಳನ್ನು ಬಳಸಿಕೊಂಡರೆ ಅದರಿಂದ ಚರ್ಮವು ಆರೋಗ್ಯಕರ ಹಾಗೂ ತೇವಾಂಶದಿಂದ ಕೂಡಿರುವುದು. ಈ ಮನೆಮದ್ದುಗಳು ಯಾವುದು ಎಂದು ತಿಳಿದುಕೊಳ್ಳಿ.

 ಅವಕಾಡೋ, ಪಪ್ಪಾಯಿ ಮತ್ತು ಬಾಳೆಹಣ್ಣಿನ ಪೇಸ್ಟ್

ಅವಕಾಡೋ, ಪಪ್ಪಾಯಿ ಮತ್ತು ಬಾಳೆಹಣ್ಣಿನ ಪೇಸ್ಟ್

ಪಪ್ಪಾಯಿಯಲ್ಲಿರುವಂತಹ ಅಧಿಕ ನೀರಿನಾಂಶವು ಚರ್ಮವನ್ನು ತುಂಬಾ ನಯ, ಮೃಧು ಹಾಗೂ ತೇವಾಂಶದಿಂದ ಇಡುವುದು.ಅವಕಾಡೋ ಮತ್ತು ಬಾಳೆಹಣ್ಣಿನಲ್ಲಿ ವಿಟಮಿನ್ ಇ ಮತ್ತು ಪೊಟಾಶಿಯಂ ಅತ್ಯಧಿಕವಾಗಿದೆ. ಇದರಿಂದ ಚರ್ಮದಲ್ಲಿ ಮೊಶ್ಚಿರೈಸರ್ ನ್ನು ಉಳಿಸಿಕೊಳ್ಳಬಹುದು.

ಬಳಸುವುದು ಹೇಗೆ?

ಬಾಳೆಹಣ್ಣಿನ ಸಿಪ್ಪೆ ತೆಗೆದು ಅದನ್ನು ಅವಕಾಡೋ ಮತ್ತು ಪಪ್ಪಾಯಿ ತಿರುಳಿನ ಜತೆ ಸೇರಿಸಿ. ಇದನ್ನು ಒಳ್ಳೆಯ ಪೇಸ್ಟ್ ಮಾಡಿಕೊಳ್ಳಿ.

ಪೇಸ್ಟ್ ನ್ನು ಸಂಪೂರ್ಣ ಮುಖಕ್ಕೆ ಹಚ್ಚಿಕೊಳ್ಳಿ.

ಮುಖದ ಮೇಲೆ ಸುಮಾರು 15 ನಿಮಿಷ ಕಾಲ ಇದನ್ನು ಹಾಗೆ ಬಿಡಿ.

ನೀರಿನಿಂದ ಮುಖ ತೊಳೆಯಿರಿ.

ಒಳ್ಳೆಯ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಸಲ ಇದನ್ನು ಬ

ಸೌತೆಕಾಯಿ

ಸೌತೆಕಾಯಿ

ಸೌತೆಕಾಯಿಯಲ್ಲಿ ಹೆಚ್ಚಿನ ಮಟ್ಟದ ನೀರಿನಾಂಶ ಇರುವುದು ಮಾತ್ರವಲ್ಲದೆ ಇದರಲ್ಲಿ ಹಲವಾರು ರೀತಿಯ ಪೋಷಕಾಂಶ ಗುಣಗಳಿವೆ. ದೇಹಕ್ಕೆ ತೇವಾಂಶ ನೀಡುವ ಗುಣ ಮತ್ತು ಪ್ರಮುಖ ಪೋಷಕಾಂಶಗಳು ಇದರಲ್ಲಿದೆ. ಇದರಲ್ಲಿರುವ ತಂಪುಕಾರಿ ಮತ್ತು ಶಮನಕಾರಿ ಗುಣವು ತುರಿಕೆ, ಉರಿಯೂತ ಮತ್ತು ಊತ ಕಡಿಮೆ ಮಾಡುವುದು.

ಬಳಸುವ ವಿಧಾನ

ಒಂದು ಸೌತೆಕಾಯಿ ತೆಗೆದುಕೊಳ್ಳಿ.

ಇದರ ಸಿಪ್ಪೆ ತೆಗೆದು ಪೇಸ್ಟ್ ಮಾಡಿಕೊಳ್ಳಿ.

ಇದನ್ನು ಮುಖಕ್ಕೆ ಹಚ್ಚಿಕೊಂಡು 30 ನಿಮಿಷ ಕಾಲ ಹಾಗೆ ಬಿಡಿ.

ನೀರಿನಿಂದ ತೊಳೆಯಿರಿ.

ಬಾಧಿತ ಜಾಗಕ್ಕೆ ಸೌತೆಕಾಯಿಯ ಸಣ್ಣ ತುಂಡುಗಳನ್ನು ಉಜ್ಜಬಹುದು. ಇದರಿಂದ ಕಿರಿಕಿರಿ ಕಡಿಮೆಯಾಗುವುದು.

ಎಣ್ಣೆಗಳು

ಎಣ್ಣೆಗಳು

ಎಣ್ಣೆಯು ಚರ್ಮವನ್ನು ರಕ್ಷಿಸಲು ನೆರವಾಗುವುದು ಮತ್ತು ನೈಸರ್ಗಿಕ ಮೊಶ್ಚಿರೈಸರ್ ಅಗಿ ಕೆಲಸ ಮಾಡುವುದು.

ಬಳಕೆ ಹೇಗೆ?

ತೆಂಗಿನೆಣ್ಣೆ, ಬಾದಾಮಿ ಎಣ್ಣೆ ಅಥವಾ ಆಲಿವ್ ಎಣ್ಣೆಯನ್ನು ಚರ್ಮಕ್ಕೆ ಮೊಶ್ಚಿರೈಸ್ ಮಾಡಲು ಬಳಸಬಹುದು.

ಸ್ನಾನದ ಬಳಿಕ ಸ್ವಲ್ಪ ಎಣ್ಣೆ ತೆಗೆದುಕೊಂಡು ಮಸಾಜ್ ಮಾಡಿ. ನಿಮ್ಮ ದೇಹಕ್ಕೆ ಬೇಕಾದಷ್ಟು ಎಣ್ಣೆ ಬಳಸಿ.

ದೇಹಕ್ಕೆ ಹಚ್ಚಿಕೊಳ್ಳುವ ಮೊದಲು ಎಣ್ಣೆ ಬಿಸಿ ಮಾಡಬಹುದು.

ಓಟ್ ಮೀಲ್

ಓಟ್ ಮೀಲ್

ಓಟ್ ಮೀಲ್ ನಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ ಮತ್ತು ಇದು ಚರ್ಮದಲ್ಲಿ ಮಾಯಿಶ್ಚರೈಸರ್ ಕಾಯ್ದುಕೊಳ್ಳಲು ನೆರವಾಗುವುದು. ಇದು ಸತ್ತ ಚರ್ಮವನ್ನು ಕಿತ್ತುಹಾಕುವುದು.

ಬಳಸುವ ವಿಧಾನ

ಒಂದು ಕಪ್ ನಷ್ಟು ಓಟ್ ಮೀಲ್ ನ್ನು ಮಿಕ್ಸಿಗೆ ಹಾಕಿಕೊಂಡು ಹುಡಿ ಮಾಡಿ.

ಈ ಹುಡಿಗೆ ನೀರು ಹಾಕಿಕೊಂಡು ಪೇಸ್ಟ್ ಮಾಡಿ.

ಬಾಧಿತ ಜಾಗಕ್ಕೆ ಈ ಪೇಸ್ಟ್ ಹಚ್ಚಿಕೊಳ್ಳಿ.

ಸ್ವಚ್ಛ ಬಟ್ಟೆಯಿಂದ ಪೇಸ್ಟ್ ಹಚ್ಚಿದ ಜಾಗ ಮುಚ್ಚಿ 30 ನಿಮಿಷ ಕಾಲ ಹಾಗೆ ಬಿಡಿ.

ನೀರಿನಿಂದ ತೊಳೆಯಿರಿ.

ಚರ್ಮದ ಕಿರಿಕಿರಿ ಮತ್ತು ತುರಿಕೆ ಕಡಿಮೆ ಮಾಡಲು ಪ್ರತಿನಿತ್ಯ ಇದನ್ನು ಬಳಸಿ. ಚಳಿಗಾಲದ ರದ್ದುಗಳು ಇದರಿಂದ ಕಡಿಮೆಯಾಗುವುದು.

ಹಾಲಿನ ಕೆನೆ

ಹಾಲಿನ ಕೆನೆ

ಹಾಲಿನ ಕೆನೆಯಲ್ಲಿ ಲ್ಯಾಕ್ಟಿಕ್ ಆಮ್ಲವಿದೆ. ಇದು ಚರ್ಮವನ್ನು ಬಿಳಿಗೊಳಿಸುವುದು. ಇದು ಚರ್ಮಕ್ಕೆ ತೇವಾಂಶ ನೀಡಿ ಚರ್ಮವು ತುಂಬಾ ನಯ ಹಾಗೂ ಕಾಂತಿಯಿಂದ ಹೊಳೆಯುವಂತೆ ಮಾಡುವುದು.

ಬಳಸುವ ವಿಧಾನ

ಒಂದು ಸಣ್ಣ ಪಾತ್ರೆಯಲ್ಲಿ ಒಂದು ಕಪ್ ಹಾಲಿನ ಕೆನೆ ಮತ್ತು ಹಿಚುಕಿದ ಬಾಳೆಹಣ್ಣು ಹಾಕಿ.

ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

ಇದನ್ನು ಮುಖಕ್ಕೆ ಹಚ್ಚಿಕೊಂಡು 30 ನಿಮಿಷ ಕಾಲ ಹಾಗೆ ಬಿಡಿ.

ನೀರಿನಿಂದ ಮುಖ ತೊಳೆಯಿರಿ.

ಜೇನುತುಪ್ಪ

ಜೇನುತುಪ್ಪ

ಜೇನುತುಪ್ಪವು ನೈಸರ್ಗಿಕ ಮೊಶ್ಚಿರೈಸರ್ ಆಗಿದೆ. ಇದರಲ್ಲಿ ಇರುವಂತಹ ಸೂಕ್ಷ್ಮಾಣುಜೀವಿ ವಿರೋಧಿ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳು ಹಾನಿಗೊಳಗಾಗಿರುವ ಚರ್ಮದ ಕೋಶಗಳನ್ನು ಸರಿಪಡಿಸಿ ಚರ್ಮದಲ್ಲಿ ಮಾಯಿಶ್ಚರೈಸರ್ ಅನ್ನು ತರುವುದು.

ಬಳಸುವ ವಿಧಾನ

2-3 ಚಮಚ ಜೇನುತುಪ್ಪ ಬಿಸಿ ಮಾಡಿ.

ಬಾಧಿತ ಪ್ರದೇಶಕ್ಕೆ ಇದನ್ನು ಹಚ್ಚಿ.

15-20 ನಿಮಿಷ ಹಾಗೆ ಬಿಡಿ ಮತ್ತು ಬಳಿಕ ನೀರಿನಿಂದ ತೊಳೆಯಿರಿ.

ಒಣ ಹಣ್ಣುಗಳು

ಒಣ ಹಣ್ಣುಗಳು

ಬಾದಾಮಿ, ಗೋಡಂಬಿ ಮತ್ತು ಒಣದ್ರಾಕ್ಷಿಯು ಚರ್ಮದಲ್ಲಿ ಮೊಶ್ಚಿರೈಸ್ ಉಂಟು ಮಾಡಿ ಒಣಚರ್ಮವನ್ನು ನಿವಾರಣೆ ಮಾಡುವುದು.

ಇದನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಚರ್ಮದಲ್ಲಿನ ತೇವಾಂಶ ಚಳಿಗಾಲದಲ್ಲಿ ಹಾಗೆ ಉಳಿಯುವುದು.

ಚಳಿಗಾಲದ ರದ್ದು ಬರದಂತೆ ತಡೆಯುವ ಮಾರ್ಗಗಳು

ಬಿಸಿ ನೀರಿನ ಸ್ನಾನ ಮಾಡಬೇಡಿ ಮತ್ತು ಸುಗಂಧವಿರುವ ಸಾಬೂನು ಬಳಸಬೇಡಿ.

ಹತ್ತಿ ಬಟ್ಟೆಗಳನ್ನು ಧರಿಸಿ. ಇದು ಚರ್ಮವು ಅತಿಯಾಗಿ ಬಿಸಿಯಾಗುವುದನ್ನು ತಡೆಯುವುದು ಮತ್ತು ಕಿರಿಕಿರಿ ತಪ್ಪಿಸುವುದು.

ಚಳಿಗಾಲದಲ್ಲಿ ಹೊರಗಡೆ ಹೋಗುವಾಗ ಕೈಗೆ ಕೈಗವಚ ಧರಿಸಲು ಮೆರೆಯಬೇಡಿ.

ಕೆಲವೊಂದು ಚಳಿಗಾಲದ ರದ್ದುಗಳು ಸಾಮಾನ್ಯವಾಗಿರುವುದು ಮತ್ತು ಮೇಲೆ ಹೇಳಿದಂತಹ ಮನೆಮದ್ದಿನಿಂದ ನಿವಾರಣೆ ಆಗಬಹುದು. ಗಂಭೀರವಾಗಿದ್ದರೆ ಆಗ ವೈದ್ಯರ ಸಲಹೆ ಪಡೆಯುವುದು ಅತೀ ಅಗತ್ಯವಾಗಿದೆ.

English summary

Amazing Tips To Get Rid Of Winter Rashes

Dry skin tends to affect both men and women equally, but older individuals are more prone to it. This is because the amount of natural skin oils and lubricants tends to diminish. Dry skin often leads to a winter rash, an area of irritated skin. People who have healthy skin for the rest of the year may develop winter rashes during the cold season. This condition is common and tends to occur year after year.
Please Wait while comments are loading...
Subscribe Newsletter