For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿ ತಯಾರಿಸಿದ ತೆಂಗಿನ ಹಾಲು-ಉಪಯೋಗ ಹಲವು...

By Arshad
|

ಪ್ರತಿ ಹೆಣ್ಣಿಗೂ ತಾನು ಸೌಂದರ್ಯವತಿಯಾಗಿರಬೇಕು ಅನ್ನೋ ಆಸೆ ಇದ್ದೇ ಇರುತ್ತೆ. ಹಾಗಾಗಿ ಆಕೆ ಇನ್ನಿಲ್ಲದ ಕಸರತ್ತು ಮಾಡ್ತಲೇ ಇರ್ತಾಳೆ. ಆದ್ರೆ ತನ್ನ ಕಣ್ಣೆದುರೇ ಇರುವ ಕೆಲವು ಪದಾರ್ಥಗಳನ್ನು ಬಳಸಿಕೊಳ್ಳುವಲ್ಲಿ ವಿಫಲರಾಗಿ ಬಿಡ್ತಾರೆ. ಹಾಗಾಗಿ ನಿಮ್ಮ ವಿಫಲತೆಯನ್ನು ದೂರ ಮಾಡಿ ನಿಮ್ಮ ಸೌಂದರ್ಯ ಹೆಚ್ಚಿಸುವ ಕೆಲ್ಸಕ್ಕೆ ನಾವು ಕೂಡ ಕೈ ಜೋಡಿಸ್ತಾ ಇದ್ದೇವೆ...ಅದಕ್ಕಾಗಿ ಕೆಲವು ಸಿಂಪಲ್ ಸಲಹೆ ಸೂತ್ರಗಳು ಇಲ್ಲಿವೆ. ಅದ್ರಲ್ಲೂ ಪ್ರಮುಖವಾಗಿ ನಾವೀಗ ತಿಳಿಸ್ತಾ ಇರೋದು ತೆಂಗಿನ ಹಾಲಿನ ವಿಶೇಷ ಸತ್ವ ಮತ್ತು ಅವುಗಳಿಂದ ತಯಾರಿಸಿಕೊಳ್ಳಬಹುದಾದ ಸೌಂದರ್ಯವರ್ಧಕಗಳ ಬಗ್ಗೆ.. ತೆಂಗಿನಕಾಯಿ ಹಾಲಿನಿಂದ ಕೂದಲಿನ ಆರೈಕೆ

ತ್ವಚೆಯ ಸೌಂದರ್ಯ ವೃದ್ಧಿಗೆ- ನಿಸರ್ಗದ ಎಳನೀರು!

ಚರ್ಮದ ಆರೈಕೆಗೆ ತೆಂಗಿನ ಹಾಲಿದ್ದರೆ ಸಾಕು, ಬೇರಾವ ಅನಾರೋಗ್ಯಕರ ರಾಸಾಯನಿಕ ಆಧಾರಿತ ಪ್ರಸಾಧನವೇ ಬೇಡ. ತೆಂಗಿನ ಹಾಲು ಇಂದು ಮಾರುಕಟ್ಟೆಯಲ್ಲಿ ದೊರಕುತ್ತದಾದರೂ ಇದರಲ್ಲಿರುವ ಸಂರಕ್ಷಕಗಳು ಇದರ ಗುಣವನ್ನು ಕೊಂಚ ಕಳಪೆಯಾಗಿಸುತ್ತವೆ. ಆದ್ದರಿಂದ ಮನೆಯಲ್ಲಿಯೇ ತಯಾರಿಸಿಕೊಳ್ಳುವುದು ತುಂಬಾ ಉತ್ತಮ....

ತೆಂಗಿನ ಹಾಲು ತಯಾರಿಸುವ ವಿಧಾನ

ತೆಂಗಿನ ಹಾಲು ತಯಾರಿಸುವ ವಿಧಾನ

ಇದಕ್ಕಾಗಿ ಒಂದು ತೆಂಗಿನ ತುರಿಯನ್ನು ಕೊಂಚ ನೀರಿನೊಂದಿಗೆ ಒಂದು ಪಾತ್ರೆಯಲ್ಲಿ ಹಾಕಿ ಸುಮಾರು ಮೂವತ್ತು ನಿಮಿಷಗಳವರೆಗೆ ಚಿಕ್ಕ ಉರಿಯಲ್ಲಿ ಕುದಿಸಿ. ಬಳಿಕ ಉರಿ ಆರಿಸಿ ತಣಿಯಲು ಬಿಡಿ. ನಂತರ ತೆಳುವಾದ ಬಟ್ಟೆಯಲ್ಲಿ ಇದನ್ನು ಹಾಕಿ ಬಟ್ಟೆಯನ್ನು ತಿರುಚುತ್ತಾ ಹಾಲನ್ನು ಹಿಂಡಿಕೊಳ್ಳಿ. ಹಿಂಡಿದ ಬಳಿಕವೂ ಕೆಲವಾರು ಬಾರಿ ಕೊಂಚ ಕೊಂಚವೇ ನೀರು ಬೆರೆಸುತ್ತಾ ಹಾಲನ್ನು ಹಿಂಡಿ. ಹಾಲಿನ ಬಣ್ಣ ತಿಳಿಯಾಗಲು ತೊಡಗುವಾಗ ಹಿಂಡಿಯನ್ನು ವರ್ಜಿಸಿ. ಈ ನೀರೇ ತೆಂಗಿನ ಹಾಲು.,,,

ತೆಂಗಿನ ಹಾಲು ಸವಂದರ್ಯ ವಿಯದಲ್ಲಿ ಎತ್ತಿದ ಕೈ

ತೆಂಗಿನ ಹಾಲು ಸವಂದರ್ಯ ವಿಯದಲ್ಲಿ ಎತ್ತಿದ ಕೈ

ಈ ಹಾಲನ್ನು ಸೇವಿಸಲೂ,ಸೌಂದರ್ಯಪ್ರಸಾಧನವಾಗಿಯೂ, ಸುಟ್ಟ ಗಾಯಕ್ಕೆ ಶಮನ ನೀಡಲೂ ಬಳಸಬಹುದು. ಇದರೊಂದಿಗೆ ಇತರ ಸಾಮಾಗ್ರಿಗಳನ್ನು ಬೆರೆಸುವ ಮೂಲಕ, ಉದಾಹರಣೆಗೆ ಜೇನು, ಗಂಧದ ಪುಡಿ, ಮುಲ್ತಾನಿ ಮಿಟ್ಟಿ, ಇತ್ಯಾದಿಗಳನ್ನು ಬೆರೆಸುವ ಮೂಲಕ ವಿವಿಧ ರೀತಿಯ ಮುಖಲೇಪಗಳನ್ನು ತಯಾರಿಸಿ ವಿವಿಧ ಬಗೆಯ ಚರ್ಮದ ಆರೈಕೆಯನ್ನು ಪಡೆಯಬಹುದು. ಬನ್ನಿ, ಈ ಹಾಲಿನ ಗುಣಗಳನ್ನು ಈಗ ನೋಡೋಣ...

 ಚರ್ಮದ ಕಾಂತಿ ಹೆಚ್ಚಿಸಲು

ಚರ್ಮದ ಕಾಂತಿ ಹೆಚ್ಚಿಸಲು

ಮೂರು ದೊಡ್ಡ ಚಮಚ ತೆಂಗಿನ ಹಾಲು, ಒಂದು ಚಿಟಿಕೆ ಕಸ್ತೂರಿ, ಒಂದು ದೊಡ್ಡ ಚಮಚ ಜೇನು ಮತ್ತು ಒಂದು ದೊಡ್ಡ ಚಮಚ ಗಂಧದ ಪುಡಿ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಲೇಪವನ್ನು ಈಗತಾನೇ ತಣ್ಣೀರಿನಿಂದ ತೊಳೆದುಕೊಂಡ ಮುಖಕ್ಕೆ ಹಚ್ಚಿ ಹದಿನೈದು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಂಡರೆ ತಕ್ಷಣವೇ ಚರ್ಮದ ಕಾಂತಿ ಹೆಚ್ಚುತ್ತದೆ.

ನೆರಿಗೆಗಳನ್ನು ನಿವಾರಿಸಲು

ನೆರಿಗೆಗಳನ್ನು ನಿವಾರಿಸಲು

ವೃದ್ಧಾಪ್ಯದ ಚಿಹ್ನೆಗಳಾದ ನೆರಿಗೆ, ಸೂಕ್ಷ್ಮ ಗೆರೆಗಳು, ಚುಕ್ಕೆಗಳು ಮೊದಲಾದವನ್ನು ನಿವಾರಿಸಲು ತೆಂಗಿನ ಹಾಲು ಅತ್ಯುತ್ತಮವಾಗಿದೆ. ಇದರಲ್ಲಿ ಹೇರಳವಾಗಿರುವ ವಿಟಮಿನ್ ಸಿ ಮತ್ತು ಇ ತ್ವಚೆಗೆ ಅಗತ್ಯವಾದ ಆರ್ದ್ರತೆಯನ್ನು ಒದಗಿಸಿ ಚರ್ಮದ ಸೆಳೆತವನ್ನು ಹೆಚ್ಚಿಸುತ್ತದೆ. ಇದರಿಂದ ವೃದ್ಧಾಪ್ಯದ ಚಿಹ್ನೆಗಳು ಇಲ್ಲವಾಗುತ್ತವೆ.

ಮೇಕಪ್ ನಿವಾರಣೆಗೆ

ಮೇಕಪ್ ನಿವಾರಣೆಗೆ

ಮೇಕಪ್ ನಿವಾರಣೆಗೆ ತೆಂಗಿನ ಹಾಲು ಅತ್ಯುತ್ತಮವಾದ ನೈಸರ್ಗಿಕ ಸಾಧನವಾಗಿದೆ. ಇದು ಮೇಕಪ್ ನ ಕಣಗಳನ್ನು ಬುಡದಿಂದ ನಿವಾರಿಸುವುದರ ಜೊತೆಗೇ ಚರ್ಮಕ್ಕೆ ಅಗತ್ಯವಾದ ಆರ್ದ್ರತೆಯನ್ನೂ ನೀಡುತ್ತದೆ. ಇದಕ್ಕಾಗಿ ಒಂದು ದೊಡ್ಡ ಚಮಚ ತೆಂಗಿನ ಹಾಲು ಮತ್ತು ಒಂದು ಚಿಕ್ಕ ಚಮಚ ಆಲಿವ್ ಎಣ್ಣೆ ಬೆರೆಸಿ ಈ ದ್ರವದಲ್ಲಿ ಹತ್ತಿಯುಂಡೆಯನ್ನು ಬೆರೆಸಿ ಕೊಂಚವೇ ಒತ್ತಡದಿಂದ ಒರೆಸಿಕೊಳ್ಳುವ ಮೂಲಕ ಮೇಕಪ್ ನಿವಾರಿಸಲು ಸಾಧ್ಯ.

ಬಿಸಿಲಿಗೆ ಕಪ್ಪಾಗಿದ್ದ ಚರ್ಮವನ್ನು ಸಹಜವರ್ಣಕ್ಕೆ ತರಲು

ಬಿಸಿಲಿಗೆ ಕಪ್ಪಾಗಿದ್ದ ಚರ್ಮವನ್ನು ಸಹಜವರ್ಣಕ್ಕೆ ತರಲು

ಬಿಸಿಲಿನ ಝಳದಿಂದ ಜರ್ಝರಿತ ಚರ್ಮಕ್ಕೂ ತೆಂಗಿನ ಹಾಲಿನ ಆರೈಕೆ ಸೂಕ್ತವಾಗಿದೆ. ಇದಕ್ಕಾಗಿ ಬಿಸಿಲಿಗೆ ಒಡ್ಡಿದ್ದ ಚರ್ಮದ ಎಲ್ಲಾ ಭಾಗಗಳಿಗೂ ರಾತ್ರಿ ಮಲಗುವ ಮುನ್ನ ಮೊದಲು ತಣ್ಣೀರಿನಿಂದ ತೊಳೆದು ತೆಂಗಿನ ಹಾಲಿನಲ್ಲಿ ಮುಳುಗಿಸಿದ ಹತ್ತಿಯುಂಡೆಯನ್ನು ಒರೆಸಿಕೊಳ್ಳಿ. ಬೆಳಿಗ್ಗೆದ್ದ ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಚರ್ಮ ಕಪ್ಪಗಾಗದೇ ಇರಲು ಹಾಗೂ ಬಿಸಿಲಿನ ಕಾರಣ ಘಾಸಿಗೊಂಡಿದ್ದ ಹಾಗೂ ಕೆಂಪಗಾಗಿದ್ದುದು ಎಲ್ಲವೂ ಸರಿಯಾಗುತ್ತವೆ.

ಸನ್ ಬರ್ನ್ ಸಮಸ್ಯೆಗೆ ಹೇಳಿ ಮಾಡಿಸಿದ್ದು

ಸನ್ ಬರ್ನ್ ಸಮಸ್ಯೆಗೆ ಹೇಳಿ ಮಾಡಿಸಿದ್ದು

ತೆಂಗಿನ ಹಾಲು ಒಂದು ಪಾರ್ಟ್ ನಷ್ಟು ತೆಂಗಿನ ಹಾಲಿಗೆ , ಅದರ ಅರ್ಧದಷ್ಟು ಗುಲಾಬಿ ರಸವನ್ನು ಸೇರಿಸಿ. ಒಂದು ಬಾಟಲ್ ನಲ್ಲಿ ಈ ಮಿಶ್ರಣವನ್ನು ಹಾಕಿ ಪ್ರಿಡ್ಜ್ ನಲ್ಲಿಡಿ. ಯಾವಾಗ ಉರಿ ಉರಿ ಬಿಸಿಲಿನಿಂದ ಬಳಲಿ ಬೆಂಡಾಗಿ ಬರ್ತೀರೋ ಆಗ ಈ ಮಿಶ್ರಣವನ್ನು ಸ್ಪ್ರೇ ಮಾಡ್ಕೊಳ್ಳಿ. ಕೇವಲ ಮುಖಕ್ಕೆ ಮಾತ್ರವಲ್ಲ, ಕೈಗಳಿಗೆ ಮತ್ತು ಕುತ್ತಿಗೆಯ ಭಾಗದಲ್ಲಿ ಆಗುವ ಸನ್ ಬರ್ನ್ ಸಮಸ್ಯೆಗೂ ಕೂಡ ಇದು ಪರಿಹಾರ ನೀಡಲಿದೆ. ಟ್ರೈ ಮಾಡಿ ನೋಡಿ.

English summary

Amazing Beauty Uses Of Coconut Milk

Coconut milk can be used to for many beauty purposes. It makes your skin soft and will brighten up your complexion. There will be no need of any chemical skin care product after you start using coconut milk on your skin.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more