For Quick Alerts
ALLOW NOTIFICATIONS  
For Daily Alerts

ತೆಂಗಿನಕಾಯಿ ಹಾಲಿನಿಂದ ಕೂದಲಿನ ಆರೈಕೆ

By Hemanth P
|

ಪ್ರತಿಯೊಬ್ಬ ಮಹಿಳೆಯ ಸೌಂದರ್ಯ ಅಡಗಿರುವುದು ಆಕೆಯ ಕೂದಲಿನಲ್ಲಿ. ಇದಕ್ಕಾಗಿಯೇ ಮಹಿಳೆಯರು ಹೊಳೆಯುವ ಹಾಗೂ ದಪ್ಪ ಕೂದಲನ್ನು ಬಯಸುತ್ತಾರೆ. ಆದರೆ ಇಂತಹ ಕೂದಲನ್ನು ಪಡೆಯುವುದು ಅಷ್ಟು ಸುಲಭವಲ್ಲ, ಕೂದಲಿನ ಆರೈಕೆ ಮಾಡುವ ಮಹಿಳೆಯರು ಸುಂದರ ಕೂದಲಿಗಾಗಿ ತುಂಬಾ ಮುಖ್ಯವಾಗಿರುವುದನ್ನು ಮಾಡಬೇಕಾಗುತ್ತದೆ. ಸುಂದರ ಹಾಗೂ ದಪ್ಪಗಿನ ಉದ್ದ ಕೂದಲಿಗೆ ಏನು ಮಾಡಬೇಕೆಂಬ ಬಗ್ಗೆ ನೀವು ಚಿಂತಿತರಾಗಿದ್ದರೆ ಇದಕ್ಕೆ ಪರಿಹಾರವಿದೆ. ನೈಸರ್ಗಿಕವಾಗಿ ಸಮೃದ್ಧ ಕೂದಲನ್ನು ಪಡೆಯಲು ನೈಸರ್ಗಿಕ ಮನೆಮದ್ದನ್ನು ಉಪಯೋಗಿಸಬೇಕು.

ನಿಮ್ಮ ಕೂದಲು ಒಣಗಿದಂತಾಗಿ ಉದುರಲು ಪ್ರಾರಂಭಿಸಿದರೆ ಏನು ಮಾಡುತ್ತೀರಿ? ಮಾರುಕಟ್ಟೆಯಲ್ಲಿ ಕೂದಲಿನ ಆರೈಕೆಗೆ ಸಿಗುವ ದುಬಾರಿ ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸಿ ಯಾವುದೇ ಫಲಿತಾಂಶ ಪಡೆಯದೆ ಕೈಚೆಲ್ಲಿ ಕುಳಿತಿರುತ್ತೀರಿ. ಇದರಿಂದ ನೈಸರ್ಗಿಕ ಚಿಕಿತ್ಸೆ ಒಳ್ಳೆಯ ಪರಿಹಾರ. ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮವೂ ಇರುವುದಿಲ್ಲ. ಇದು ನಿಮಗೆ ಒಳ್ಳೆಯ ಫಲಿತಾಂಶ ನೀಡಬಲ್ಲದು. ಕೆಲವೊಂದು ಪ್ರಾಕೃತಿಕ ವಸ್ತುಗಳು ಕೂದಲಿನ ಸಮಸ್ಯೆ ಪರಿಹರಿಸಿ ನೈಸರ್ಗಿಕ ರೀತಿಯಲ್ಲಿ ಮಹಿಳೆಯರಿಗೆ ಕೂದಲಿನ ಹೊಳಪು ತಂದುಕೊಡಬಲ್ಲದು.

ನೀವು ಕೂದಲನ್ನು ಬೆಳೆಸಲು ಮತ್ತು ಅದನ್ನು ನಿರ್ವಹಿಸಲು ಒಳ್ಳೆಯ ಮಾರ್ಗ ಹುಡುಕುತ್ತಿದ್ದರೆ ಆಗ ಖಂಡಿತವಾಗಿಯೂ ತೆಂಗಿನಕಾಯಿ ಹಾಲು ಒಳ್ಳೆಯ ನೈಸರ್ಗಿಕ ಮದ್ದು. ಇದು ನಿಮ್ಮ ಕೂದಲಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ. ಇದು ಮನೆಯಲ್ಲೇ ಸಿಗುವ ಅತ್ಯಂತ ಸುಲಭ ಚಿಕಿತ್ಸೆಯಾಗಿರುವ ಕಾರಣ ಯಾವುದೇ ಸಮಯದಲ್ಲೂ ಪ್ರಯತ್ನಿಸಿ ನೋಡಬಹುದು. ಕೂದಲಿನ ಆರೈಕೆಗೆ ನೀವು ತೆಂಗಿನಕಾಯಿ ಹಾಲನ್ನು ಬಳಸಲು ಕಾರಣ ಮತ್ತು ಉಪಯೋಗಗಳನ್ನು ನೀಡಲಾಗಿದೆ.

coconut milk for hair care

ತೆಂಗಿನಕಾಯಿ ಹಾಲಿನಲ್ಲಿ ಯಾವ ಅಂಶಗಳಿವೆ?
ತೆಂಗಿನಕಾಯಿ ಹಾಲಿನಲ್ಲಿ ಪ್ರೋಟೀನ್ ಮತ್ತು ಕೊಬ್ಬಿನಾಂಶ ಸಮೃದ್ಧವಾಗಿದೆ. ಇದರಲ್ಲಿ ಕಬ್ಬಿಣ ಮತ್ತು ಮ್ಯಾಂಗನೀಸ್ ಅಂಶವಿದೆ. ಇದು ನಿಮ್ಮ ಕೂದಲಿನ ಬೆಳವಣಿಗೆಗೆ ಅತ್ಯುತ್ತಮ ಉತ್ಪನ್ನ. ತೆಂಗಿನಕಾಯಿ ಹಾಲಿನಿಂದ ಹಲವಾರು ರೀತಿಯ ಉಪಯೋಗಗಳಿವೆ ಮತ್ತು ಇದರಲ್ಲಿ ಒಂದು ಕೂದಲಿನ ಬೆಳವಣಿಗೆ. ಇದರಲ್ಲಿರುವ ಹೆಚ್ಚಿನ ಪೋಷಕಾಂಶಗಳಿಂದಾಗಿ ಇದು ಕೂದಲಿಗೆ ಬಹು ಉಪಯೋಗಿ. ಆರೋಗ್ಯಕರ ಕೂದಲಿನ ಬೆಳವಣಿಗೆಗೆ ಬೇಕಾಗುವ ಕೂದಲು ಉದುರುವ ಸಮಸ್ಯೆಯನ್ನು ಇದು ನಿವಾರಿಸುತ್ತದೆ. ತೆಂಗಿನಕಾಯಿ ಹಾಲಿನಿಂದ ನಿಮ್ಮ ಕೂದಲು ಸಮೃದ್ಧ ಮತ್ತು ಹೊಳೆಯುವಂತಾಗುತ್ತದೆ.

ತೆಂಗಿನಕಾಯಿ ಹಾಲಿನ ಪ್ರೋಟೀನ್ ಚಿಕಿತ್ಸೆ
ಯಾವಾಗಲೂ ಒಮ್ಮೆ ನಿಮ್ಮ ಕೂದಲಿಗೆ ಪ್ರೋಟೀನ್ ಚಿಕಿತ್ಸೆ ನೀಡುವುದರಿಂದ ಅದು ಕೂದಲಿನ ಬೆಳವಣಿಗೆಗೆ ನೆರವಾಗಬಹುದು. ಪ್ರೋಟೀನ್ ಚಿಕಿತ್ಸೆಯು ಕೂದಲಿನ ಬುಡದವರೆಗೆ ಹೋಗಿ ಅದು ಬೆಳೆಯುವಂತೆ ನೋಡಿಕೊಳ್ಳುತ್ತದೆ. ಕೂದಲು ಒಡೆಯುವುದನ್ನು ತಡೆಯಲು ಪ್ರೋಟೀನ್ ಚಿಕಿತ್ಸೆ ಅತ್ಯಗತ್ಯ. ತಿಂಗಳಿಗೆ ಒಮ್ಮೆ ಪ್ರೋಟೀನ್ ಚಿಕಿತ್ಸೆ ಮಾಡುವುದರಿಂದ ನಿಮ್ಮ ಕೂದಲು ಪೋಷಕಾಂಶವನ್ನು ಪಡೆಯುತ್ತದೆ. ಬ್ಯೂಟಿ ಪಾರ್ಲರ್ ಗೆ ಹೋಗಿ ನಿಮ್ಮ ಕೂದಲಿಗೆ ಪ್ರೋಟೀನ್ ಚಿಕಿತ್ಸೆ ನೀಡುವ ವೆಚ್ಚ ಮತ್ತು ನೋವಿನ ಬಗ್ಗೆ ಚಿಂತಿಸುತ್ತಿದ್ದರೆ ಇದನ್ನು ಪ್ರಯತ್ನಿಸಿ.

ತೆಂಗಿನಕಾಯಿ ಹಾಲಿನಲ್ಲಿ ಅಸಂಖ್ಯಾತ ಉಪಯೋಗಗಳೀವೆ ಮತ್ತು ಇದನ್ನು ಪ್ರೋಟೀನ್ ಚಿಕಿತ್ಸೆಯಾಗಿ ಉಪಯೋಗಿಸಿದರೆ ಅಚ್ಚರಿ ಪಡೆಬೇಕಾಗಿಲ್ಲ. ತೆಂಗಿನಕಾಯಿ ಹಾಲಿನ ಲಾಭ ಪಡೆಯಬೇಕಿದ್ದರೆ ನೀವು ಇದನ್ನು ಪ್ರಯತ್ನಿಸಿ ಮತ್ತು ನಿಮ್ಮ ಕೂದಲು ಸುಂದರವಾಗುವುದನ್ನು ನೋಡಿ. ಕೆಳಗಿನ ಚಿಕಿತ್ಸೆಯನ್ನು ಬರೆದುಕೊಂಡು ತೆಂಗಿನಕಾಯಿ ಹಾಲಿನ ಲಾಭ ಪಡೆಯಿರಿ.

ಪ್ರೋಟೀನ್ ಚಿಕಿತ್ಸೆಗೆ ಬೇಕಾಗುವ ಸಾಮಗ್ರಿಗಳು
*ತೆಂಗಿನಕಾಯಿ ಹಾಲು
*ಮೊಟ್ಟೆ
*ಎಕ್ಸ್ ಟ್ರಾ ವರ್ಜಿನ್ ಆಲಿವ್ ತೈಲ
*ಆರ್ಗನ್ ತೈಲ
*ತೆಂಗಿನ ಎಣ್ಣೆ

ಏನು ಮಾಡಬೇಕು?
ಎಲ್ಲವನ್ನು ಸಮಪ್ರಮಾಣದಲ್ಲಿ ಸೇರಿಸಿ ಮಿಶ್ರಣ ಮಾಡಿ. ಕೂದಲನ್ನು ಎರಡು ಭಾಗವಾಗಿ ಮಾಡಿ ವೃತ್ತಾಕಾರದ ಚಾಲನೆಯಲ್ಲಿ ಇದನ್ನು ಹಚ್ಚಿರಿ. ಇದರಿಂದ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ. ರಕ್ತ ಪರಿಚಲನೆ ಉತ್ತಮಗೊಳ್ಳುವುದರಿಂದ ಕೂದಲಿನ ಬೆಳವಣಿಗೆ ಉತ್ತಮವಾಗುತ್ತದೆ.

ತೆಂಗಿನಕಾಯಿ ಹಾಲು ತುಂಬಾ ಪರಿಶುದ್ಧ ಮತ್ತು ಇದಕ್ಕೆ ಯಾವುದೇ ಕಲಬೆರಕೆ ಆಗಿರುವುದಿಲ್ಲ. ಇದನ್ನು ನೀವು ಮನೆಯಲ್ಲಿಯೇ ತಯಾರಿಸಿ. ಒಣಗಿದ ತೆಂಗಿನಕಾಯಿಯಿಂದ ಹಾಲನ್ನು ತೆಗೆಯಬೇಕು. ನಿಮ್ಮ ಕೂದಲಿಗೆ ನೇರವಾಗಿ ತೆಂಗಿನಕಾಯಿ ಹಾಲನ್ನು ಹಚ್ಚಬಹುದು. ಇದರಿಂದ ಕೂಡ ನಿಮ್ಮ ಕೂದಲಿನ ಬೆಳವಣಿಗೆಯಾಗುತ್ತದೆ. ಮಹಿಳೆಯ ಕೂದಲಿನ ಆರೈಕೆಯಲ್ಲಿ ತೆಂಗಿನಕಾಯಿ ಹಾಲು ಪ್ರಮುಖ ಪಾತ್ರ ವಹಿಸುತ್ತದೆ. ಮಹಿಳೆಯರಿಗೆ ಮನೆಯಲ್ಲಿಯೇ ಕೂದಲಿನ ಆರೈಕೆ ಮಾಡಬಹುದು. ಇದಕ್ಕೆ ಬ್ಯೂಟಿ ಪಾರ್ಲರ್ ಗೆ ಓಡಿ ಹಣ ವ್ಯಯ ಮಾಡುವ ಅತ್ಯವಾದರೂ ಏನಿದೆ? ತೆಂಗಿನಕಾಯಿ ಹಾಲಿನ ಕೆಲವೊಂದು ಸರಳ ಪ್ಯಾಕ್ ಗಳನ್ನು ಪ್ರಯತ್ನಿಸಿ ಮತ್ತು ತೆಂಗಿನಕಾಯಿ ಹಾಲಿನ ಎಲ್ಲಾ ಲಾಭಗಳನ್ನು ಪಡೆಯಿರಿ.

English summary

coconut milk for hair care

Every woman desires a lustrous and thick hair! Her hair indeed defines her beauty! When this is true, getting a thick and long hair doesn't come easy. Hair care women are something important to get a beautiful hair.
Story first published: Monday, December 9, 2013, 13:15 [IST]
X
Desktop Bottom Promotion