For Quick Alerts
ALLOW NOTIFICATIONS  
For Daily Alerts

ಮುಖದ ತ್ವಚೆಯ ರಕ್ಷಣೆಗೆ ವೆನಿಲ್ಲಾದ ಸ್ಕ್ರಬ್!

By Anuradha Yogesh
|

ಮುಖದ ಸೌಂದರ್ಯ ವೃದ್ಧಿಸಲು ಮಹಿಳೆಯರು ಒಂದಲ್ಲ,ಎರಡಲ್ಲ ಹಲವಾರು ಸಾಧನಗಳ ಬಳಕೆ ಮಾಡುತ್ತಾರೆ. ಈಗೀಗ ಸಮಯ ಮತ್ತು ಸಹನೆಯ ಅಭಾವದಿಂದ ಕೂಡಲೇ ಬ್ಯೂಟಿ ಪಾರ್ಲರ್‌ಗೆ ಹೋಗಿ ಅಲ್ಲಿರುವ ಪರಿಚಾರಕಿಯರಿಗೆ ತಮ್ಮ ತ್ವಚೆಯ ಜವಾಬ್ದಾರಿ ವಹಿಸಿ ತಣ್ಣಗೆ ಕುಳಿತುಬಿಡುತ್ತಾರೆ. ಬ್ಯೂಟಿ ಪಾರ್ಲರ್‌ಗೆ ಹೋಗಿ ಫೇಶಿಯಲ್ ಮಾಡಿಸಿಕೊಳ್ಳೋದು ರಗಳೆ ಕೆಲಸ, ಒಂದೋ ಅಲ್ಲಿ ಗಂಟೆ ಗಟ್ಟಲೆ ಕಾಯಬೇಕು ಇಲ್ಲವೇ, ಅವರ ಸಮಯಕ್ಕೆ ಸರಿಯಾಗಿ ನಾವು ಹೋಗಬೇಕು ಎಂದೆಲ್ಲ ನಿಮಗೆ ಅನಿಸುತ್ತಿದ್ದರೆ, ಯಾಕೆ ಬೇಸರ ಮಾಡಿಕೊಳ್ಳುತ್ತೀರಿ ಹೇಳಿ?

ಮನೆಯಲ್ಲೇ ಮಾಡಬಹುದಾದ ಹಲವಾರು ವಿಧಾನಗಳು ನಿಮಗಾಗಿ ಕಾದಿವೆ. ಸ್ವಲ್ಪವೇ ಸ್ವಲ್ಪ ಬಿಡುವು ಮಾಡಿಕೊಂಡು, ನಿಮ್ಮ ಚರ್ಮ ಯಾವ ಮಾದರಿಯದ್ದು ಎಂದು ತಿಳಿದುಕೊಂಡು ಚರ್ಮಕ್ಕೆ ಹೊಂದುವಂಥ ಸ್ಕ್ರಬ್‌ಅನ್ನು ನೀವು ಮನೆಯಲ್ಲೇ ಮಾಡಿಕೊಳ್ಳಬಹುದು. ವೆನಿಲ್ಲಾ ಎಕ್ಸ್‌ಟ್ರಾಕ್ಟ್‌‌ಅನ್ನು ಕೇಕ್, ಕಸ್ಟರ್ಡ್ ಅಥವಾ ಐಸ್ ಕ್ರೀಮ್ ಹೀಗೆ ಮುಂತಾದ ಡೆಸರ್ಟ್ಸ್‌ಅನ್ನು ತಯಾರಿಸುವಲ್ಲಿ ಬಳಸುವದರ ಬಗ್ಗೆಯಂತೂ ನಮಗೆ ತಿಳಿದೇ ಇದೆಯಲ್ಲವೇ? ಈ ವೆನಿಲ್ಲಾ ಪರಿಮಳವನ್ನು ಜಗತ್ತಿನಾದ್ಯಂತ ಎಲ್ಲರೂ ಇಷ್ಟಪಡುತ್ತಾರೆ. ಶತಮಾನಗಳಿಂದ ರುಚಿಕರವಾದ ಸಿಹಿಭಕ್ಷ್ಯಗಳ ಭಾಗವಾಗಿರುವ ಈ ಪರಿಮಳವನ್ನು ತ್ವಚೆಯ ಆರೈಕೆಯಲ್ಲೂ ಬಳಸಬಹುದೆಂದರೆ ಆಶ್ಚರ್ಯವಲ್ಲವೇ?

ತ್ವಚೆಯ ಕೋಮಲತೆಗೆ 'ಅರಿಶಿನ' ಫೇಸ್ ಸ್ಕ್ರಬ್

ಇದು ಸುಳ್ಳಲ್ಲ. ಆಂಟಿ-ಇನ್‌ಫ್ಲೇಮೇಟರಿ ಗುಣ ಹಾಗು ಉತ್ಕರ್ಷಣ ನಿರೋಧಕಗಳಿಂದ ಭರಿತವಾದ ಈ ಸಾರವು ತ್ವಚೆಗೂ ಅಷ್ಟೇ ಲಾಭದಾಯಕವಾಗಿದೆ.ಇತರ ನೈಸರ್ಗಿಕ ಅಂಶಗಳ ಸಂಯೋಜನೆಯಲ್ಲಿ ವೆನಿಲ್ಲಾವನ್ನು ಬಳಸಿದಾಗ, ಅದು ನಿಮ್ಮ ಚರ್ಮದ ಮೇಲೆ ನೈಸರ್ಗಿಕ ಹೊಳಪನ್ನು ನೀಡುತ್ತದೆ ಮತ್ತು ತ್ವಚೆಯು ಪ್ರಕಾಶಮಾನ ಮತ್ತು ತಾಜಾತನದಿಂದ ನಳನಳಿಸುವಂತೆ ಮಾಡುತ್ತದೆ. ಇಂದು ಬೋಲ್ಡ್‌ಸ್ಕೈ ನಲ್ಲಿ, ನೀವು ಸುಲಭವಾಗಿ ಮನೆಯಲ್ಲೇ ಮಾಡುವಂತಹ ಚರ್ಮಕ್ಕೆ-ಹೊಳಪು ತರುವ ವೆನಿಲಾ ಸ್ಕ್ರಬ್ ಪಟ್ಟಿಯನ್ನು ತಿಳಿಯಲು ಮುಂದೆ ಓದಿ ನೋಡಿ....

ರೆಸಿಪಿ #1

ರೆಸಿಪಿ #1

ಬೇಕಾದ ಸಾಮಾನುಗಳು

•½ ಟೀ ಚಮಚ ವೆನಿಲ್ಲಾ ಎಕ್ಸ್‌ಟ್ರಾಕ್ಟ್

•1 ಟೀ ಚಮಚ ಓಟ್‌ಮೀಲ್

•1 ಟೇಬಲ್‌ ಸ್ಪೂನ್ ರೋಸ್ ವಾಟರ್

ಬಳಸುವ ವಿಧಾನ

ಸ್ಕ್ರಬ್‌ನ ತಯಾರಿಕೆಗೆ ಮೇಲೆ ತಿಳಿಸಿದ ಸಾಮಾನುಗಳ ಸಮನಾದ ಸಂಪೂರ್ಣ ಮಿಶ್ರಣ ತಯಾರು ಮಾಡಿ.

ಈ ಮಿಶ್ರಣವನ್ನುನಿಮ್ಮ ಮುಖದ ತ್ವಚೆಗೆ ಅನ್ವಯಿಸಿಕೊಂಡು ಸ್ವಲ್ಪ ಸಮಯದವರೆಗೆ ಸೌಮ್ಯವಾಗಿ ಸ್ಕ್ರಬ್ ಮಾಡಿಕೊಳ್ಳಿ.

ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಚರ್ಮದ ಟೋನರನ್ನು ಅನ್ವಯಿಸುವದನ್ನು ಮಾತ್ರ ಮರೆಯಬೇಡಿ.

ರೆಸಿಪಿ #2

ರೆಸಿಪಿ #2

ಬೇಕಾದ ಸಾಮಾನುಗಳು

1/3 ಟೀ ಚಮಚ ಜಾಯಿಕಾಯಿ

½ ಟೀ ಚಮಚ ವೆನಿಲ್ಲಾ ಎಕ್ಸ್‌ಟ್ರಾಕ್ಟ್

ಬಳಸುವ ವಿಧಾನ

ಒಂದು ಬೌಲ್‌ನಲ್ಲಿ ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಕಲೆಸಿಕೊಳ್ಳಿ.

ನಿಮ್ಮ ಮುಖದ ತ್ವಚೆಗೆ ಅನ್ವಯಿಸಿಕೊಂಡು 5 ನಿಮಿಷಗಳವರೆಗೆ ಚೆನ್ನಾಗಿ ಸ್ಕ್ರಬ್ ಮಾಡಿಕೊಳ್ಳಿ.

ನಂತರ ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ.

ರೆಸಿಪಿ #3

ರೆಸಿಪಿ #3

ಬೇಕಾದ ಸಾಮಾನುಗಳು:

1 ಟೀ ಚಮಚ ಬ್ರೌನ್ ಶುಗರ್

1 ಟೀ ಚಮಚ ನಿಂಬೆ ರಸ

1 ಟೀ ಚಮಚ ವೆನಿಲ್ಲಾ ಎಕ್ಸ್‌ಟ್ರಾಕ್ಟ್

ಬಳಸುವ ವಿಧಾನ

ಮೇಲೆ ತಿಳಿಸಿದ ಸಾಮಾನುಗಳನ್ನು ಸರಿಯಾಗಿ ಮಿಶ್ರಣ ಮಾಡುವ ಮೂಲಕ ಈ ಸ್ಕ್ರಬ್ಅನ್ನು ತಯಾರಿಸಿಕೊಳ್ಳಿ

ಈ ಮಿಶ್ರಣವನ್ನು ಮುಖದ ತ್ವಚೆಯ ಮೇಲೆ ತೆಳುವಾದ ಪದರವಾಗಿ ಹಚ್ಚಿಕೊಳ್ಳಿ.

ಸ್ವಲ್ಪ ಸಮಯದ ನಂತರ ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ.

ರೆಸಿಪಿ #4

ರೆಸಿಪಿ #4

ಬೇಕಾದ ಸಾಮಾನುಗಳು

1 ಟೀ ಚಮಚ ವೆನಿಲ್ಲಾ ಎಕ್ಸ್‌ಟ್ರಾಕ್ಟ್

1 ಟೀಚಮಚ ಕಾಫಿ ಗ್ರೌಂಡ್ಸ್

1 ಟೇಬಲ್ ಸ್ಪೂನ್ ರೋಸ್ ವಾಟರ್

ಬಳಸುವ ವಿಧಾನ

ಎಲ್ಲ ಪದಾರ್ಥಗಳನ್ನು ಸೇರಿಸಿಕೊಳ್ಳಿ.

ನಿಮ್ಮ ಮುಖದ ಚರ್ಮವನ್ನು ಈ ಸ್ಕ್ರಬ್‌‌ಇಂದ ಸಂಪೂರ್ಣವಾಗಿ ಕವರ್ ಮಾಡಿಕೊಳ್ಳಿ.

ಚರ್ಮವನ್ನು ನಿಮ್ಮ ಬೆರಳಿನ ತುದಿಗಳಿಂದ 5 ನಿಮಿಷಗಳವರೆಗೆ ಸ್ಕ್ರಬ್ ಮಾಡಿಕೊಳ್ಳಿ.

ನಿಮ್ಮ ಮುಖವನ್ನು ಸೌಮ್ಯವಾದ ಫೇಸ್ ವಾಶ್ ಮತ್ತು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ರೆಸಿಪಿ #5

ರೆಸಿಪಿ #5

ಬೇಕಾದ ಸಾಮಾನುಗಳು

1 ಟೀ ಚಮಚ ವೆನಿಲ್ಲಾ ಎಕ್ಸ್‌ಟ್ರಾಕ್ಟ್

2 ಟೀ ಚಮಚಗಳಷ್ಟುಆಲಿವ್ ಆಯಿಲ್

1 ಟೀಚಮಚ ಕೊಕೊ ಪೌಡರ್

ಬಳಸುವ ವಿಧಾನ

ಎಲ್ಲಾ ಪದಾರ್ಥಗಳನ್ನು ಒಗ್ಗೂಡಿಸಿ ಸ್ವಲ್ಪ ಸಮಯದವರೆಗೆ ಬೆರೆಸಿ ಒಂದೇ ಸಮನಾದ ಪೇಸ್ಟ್ ತಯಾರಿಸಿಕೊಳ್ಳಿ.

ನಿಮ್ಮ ಮುಖದ ಚರ್ಮದ ಈ ಪೇಸ್ಟ್‌‌ನ್ನು ಅನ್ವಯಿಸಿಕೊಳ್ಳಿ ಹಾಗು 5 ನಿಮಿಷಗಳ ಕಾಲ ಅದನ್ನು ಬಿಡಿ.

ನಿಮ್ಮ ಬೆರಳಿನ ತುದಿಗಳಿಂದ ಚೆನ್ನಾಗಿ ಸ್ಕ್ರಬ್ ಮಾಡಿಕೊಳ್ಳಿ.

ನಿಮ್ಮ ಮುಖವನ್ನು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ.

ರೆಸಿಪಿ #6

ರೆಸಿಪಿ #6

ಬೇಕಾದ ಸಾಮಾನುಗಳು

2-3 ಬ್ಲೂ ಬೆರಿಹಣ್ಣುಗಳು

1 ಟೇಬಲ್ ಸ್ಪೂನ್ ತೆಂಗಿನ ಎಣ್ಣೆ

1 ಟೀಚಮಚ ವೆನಿಲ್ಲಾ ಎಕ್ಸ್‌ಟ್ರಾಕ್ಟ್

ಬಳಸುವ ವಿಧಾನ

ಗ್ಲಾಸ್ ಬೌಲ್ ತೆಗೆದುಕೊಳ್ಳಿ, ಅದರಲ್ಲಿ ಬೆರಿಹಣ್ಣುಗಳನ್ನು ಹಾಕಿ ಮತ್ತು ಅವುಗಳನ್ನು ಸಂಪೂರ್ಣವಾಗಿ ಕ್ರಶ್ ಮಾಡಿ.

ಇನ್ನುಳಿದ ಎರಡು ಪದಾರ್ಥಗಳನ್ನು ಹಣ್ಣಿನ ಪ್ಯೂರಿಗೆ ಬೆರೆಸಿಕೊಳ್ಳಿ.

ಇದನ್ನು ನಿಮ್ಮ ಮುಖದ ಮೇಲೆ ಅನ್ವಯಿಸಿ ಮತ್ತು ಒಂದೆರಡು ನಿಮಿಷಗಳ ಕಾಲ ನಿಧಾನವಾಗಿ ಸ್ಕ್ರಬ್ ಮಾಡಿ.

ನಂತರ ಬೆಚ್ಚಗಿನ ನೀರಿನಿಂದ ನಿಮ್ಮ ಮುಖವನ್ನು ತೊಳೆಯಿರಿ.

ರೆಸಿಪಿ #7

ರೆಸಿಪಿ #7

ಬೇಕಾದ ಸಾಮಾನುಗಳು:

½ ಟೀಚಮಚ ಕಡಲೆ ಹಿಟ್ಟು

1 ಟೀಚಮಚ ವೆನಿಲ್ಲಾ ಎಕ್ಸ್ಟ್ರಾಕ್ಟ್

2 ಟೀ ಚಮಚಗಳಷ್ಟು ಗ್ರೀನ್ ಟೀ

ಬಳಸುವ ವಿಧಾನ

ಬಳಸುವ ವಿಧಾನ

ಒಂದು ಬಟ್ಟಲಿನಲ್ಲಿ ಮೇಲೆ ತಿಳಿಸಿದ ಸಾಮಾನುಗಳನ್ನು ಸೇರಿಸಿ ಮತ್ತು ಅವುಗಳ ಸಮನಾದ ಮಿಶ್ರಣ ಮಾಡಿ.ಈ ಮಿಶ್ರಣವನ್ನು ನಿಮ್ಮ ಮುಖದ ತ್ವಚೆಗೆ ಅನ್ವಯಿಸಿಕೊಂಡು 5-10 ನಿಮಿಷಗಳ ಕಾಲ ನಿಧಾನವಾಗಿ ಸ್ಕ್ರಬ್ ಮಾಡಿ.ನಂತರ ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ. ಈ ಮೇಲಿನ ಎಲ್ಲ ವಿಧಾನಗಳ ನಂತರ ಮುಖವನ್ನು ರೋಸ್ ವಾಟರ್ನಿಂದ ತೊಳೆದುಕೊಳ್ಳಿ, ಆಗ ಮುಖದ ತ್ವಚೆಗೆ ಹೊಳಪು ಬರುವದಲ್ಲದೆ, ತುಂಬಾ ಫ್ರೆಶ್ ಎನಿಸುವದು. ಈ ಸ್ಕ್ರಬ್‌ಗಳಿಂದ ನಿಮ್ಮ ಮುಖದ ತ್ವಚೆಯು ಯೌವ್ವನ ಹಾಗು ಫ್ರೆಶ್‌ನೆಸ್‌ನಿಂದ ಕಂಗೊಳಿಸುವದರಲ್ಲಿ ಸಂಶಯವೇ ಇಲ್ಲ !

English summary

All-natural Vanilla Face Scrubs To Brighten And Refresh Your Skin

Everyone knows that vanilla is a popular flavor use in cakes, however, very few people are aware of the fact that this ingredient is packed with skin-nourishing features that can treat a myriad of unpleasant conditions. A powerhouse of anti-inflammatory properties and antioxidants, vanilla can boost your skin’s overall health and appearance. Often used for soothing irritated skin, this skin care ingredient can also help you achieve a brighter complexion. Especially, when vanilla is used in combination with other natural ingredients in the form of a facial scrub, it can impart a natural glow on your skin and make it appear bright and fresh. Today at Boldsky, we’ve brought together a list of such skin-brightening vanilla scrubs that you can easily make at home.
X
Desktop Bottom Promotion